ಇಂದೋರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಭಾನುವಾರ ಸಂಜೆ ಬುರ್ಹಾನ್‌ಪುರದಲ್ಲಿರುವ ಗುರುದ್ವಾರದ ದರ್ಶನಕ್ಕೆ ತೆರೆಳಿದರು.

ಅವರು ಶ್ರೀ ಗುರು ಗೋವಿಂದ ಸಿಂಹ ಮಹಾರಾಜರು ತಮ್ಮ ಸ್ವರ್ಣ ಕರಕಮಲದಿಂದ ಬರೆದ ಹಾಗು ಹಸ್ತಾಕ್ಷರವಿರುವ ಗುರು ಗ್ರಂಥ ಸಾಹಿಬ್‌ನ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಗುರು ಗ್ರಂಥ ಸಾಹಿಬ್ ಸಮಸ್ತ ಹಿಂದೂ ಸಮಾಜಕ್ಕೆ ಪ್ರೇರಣಾ ಕೇಂದ್ರವಾಗಿದೆ, ಅಂತಹ ಪ್ರೇರಣೆಯನ್ನು ನಾನೂ ಪಡೆದುಕೊಂಡು ಹೋಗುತ್ತಿದ್ದೇನೆ ಎಂದರು.

ಶ್ರೀ ಗುರು ದ್ವಾರ ಪ್ರಬಂಧನ ಕಮಿಟಿಯ ಅಧ್ಯಕ್ಷರು ಸರಸಂಘಚಾಲಕರಾದ ಮೋಹನ್ ಭಾಗವತ್ ಅವರನ್ನು ಸ್ವಾಗತಿಸಿದರು.ಅಲ್ಲಿ ಸುಮಾರು 40 ನಿಮಿಷಗಳ ಕಾಲ ಅಲ್ಲಿನ ಜ್ಞಾನಿಯವರೊಂದಿಗೆ ಚರ್ಚೆ ನಡೆಸಿದರು.ಅಲ್ಲದೆ ಶ್ರೀ ಗುರುದ್ವಾರದ ಇತಿಹಾಸ ಹಾಗೂ ಸಿಖ್ ಸಮಾಜದ ಒಂಭತ್ತನೆಯ ಗುರು ಶ್ರೀ ಗುರು ತೇಗಬಹಾದ್ದೂರ್‌ರವರ ಬಲಿದಾನದ ಕುರಿತು ಅರಿತುಕೊಂಡರು.

Leave a Reply

Your email address will not be published.

This site uses Akismet to reduce spam. Learn how your comment data is processed.