ನಾಗ್ಪುರ: ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತ ಕಾರ್ಯಕಾರಿಣಿ ಮತ್ತು ಪ್ರತಿನಿಧಿ ಮಂಡಳದ 2023ರ ಪ್ರಥಮ ಅರ್ಧವಾರ್ಷಿಕ ಬೈಠಕ್ ಜುಲೈ 21 ರಿಂದ 23 ಜುಲೈ 2023ರ ವರೆಗೆ ನಾಗಪುರದ ರೇಶಮ್ ಬಾಗ್ ನಲ್ಲಿ ನಡೆಯಲಿದೆ. ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಕ್ಕಾ ಮತ್ತು ಪ್ರಮುಖ ಕಾರ್ಯವಾಹಿಕಾ ಅನ್ನದಾನಂ ಸೀತಾ ಗಾಯತ್ರಿ ಭಾಗವಹಿಸುವರು.
ಬೈಠಕ್ ನಲ್ಲಿ ದೇಶದ 38 ಪ್ರಾಂತಗಳಿಂದ 370 ಪ್ರತಿನಿಧಿಗಳು ಉಪಸ್ಥಿತರಿರಲಿದ್ದು ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆ, ಕಾರ್ಯ ವಿಸ್ತಾರ ಹಾಗೂ ದೃಢೀಕರಣ ಯೋಜನೆಗಳನ್ನು ಕುರಿತು ಚರ್ಚೆ ನಡೆಯಲಿದೆ. ನಂತರ ವೈಚಾರಿಕ ವಿಮರ್ಶೆಯ ವಿಸ್ತರಣೆ ಮತ್ತು ಬಲವರ್ಧನೆಯ ಯೋಜನೆ ಕುರಿತು ಚರ್ಚೆ ನಡೆಯಲಿದೆ. ಬಳಿಕ ವೈಚಾರಿಕ ಚರ್ಚೆಗೆ ಹೆಚ್ಚಿನ ವೇಗ ನೀಡುವ ಕುರಿತು ಚಿಂತನೆ ನಡೆಯಲಿದೆ.
ಬೈಠಕ್ ನ ಪ್ರಾರಂಭದಲ್ಲಿ ದಿವಂಗತ ಗಣ್ಯಮಾನ್ಯರಿಗೆ, ಸೈನಿಕರಿಗೆ, ವಿಪತ್ತಿನಲ್ಲಿ ತೀರಿಕೊಂಡ ದೇಶದ ಬಂಧುಗಳಿಗೆ ಹಾಗೂ ಸಂಘಟನಎಯ ಕಾರ್ಯಕರ್ತರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಹಿಂದವಿ ಸ್ವರಾಜ್ಯ ಸ್ಥಾಪನೆಯ 350ನೇ ವರ್ಷಾಚರಣೆ ಅಂಗವಾಗಿ ಮಾತೃತ್ವದ ಆದರ್ಶ ವೀರಮಾತಾ ಜೀಜಾಬಾಯಿ ಅವರಿಗೆ ಗೀತ ಸುಮನಾಂಜಲಿಯ ಅರ್ಪಣೆಯ ಉದ್ದೇಶದಿಂದ ‘ಗೀತ ಜೀಜೌ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇದರೊಂದಿಗೆ ರಾಮಾಯಣ ಮತ್ತು ಮಹಾಭಾರತದಿಂದ ಆಯ್ದ ಕಥೆಗಳನ್ನು ಒಳಗೊಂಡ 75 ಬೋಧ ಕಥೆಗಳ ‘ಕಥಾಮೃತ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.