‘ಮೈಸೂರು ಮಲ್ಲಿಗೆ’ಅಂದರೆ ಕೆ. ಎಸ್. ನರಸಿಂಹಸ್ವಾಮಿ ನೆನಪಾಗುತ್ತಾರೆ. ಮೈಸೂರು ಮತ್ತು ಮಲ್ಲಿಗೆಯನ್ನೂ ಮೀರಿ ನೆನಪಿಗೆ ಬರುವಷ್ಟು ಅವರು ಕನ್ನಡ ಜನಮಾನಸದಲ್ಲಿ ವಿರಾಜಿತರು. ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅವಿಸ್ಮರಣೀಯ. ತಮ್ಮ ಕವನ ಹಾಗೂ ಪುಸ್ತಕಗಳ ಮೂಲಕ ಇಂದಿಗೂ ಪ್ರಸ್ತುತದಲ್ಲಿರುವ ಕೆ.ಎಸ್ ನರಸಿಂಹಸ್ವಾಮಿ ಅವರ ಪುಣ್ಯಸ್ಮರಣೆ ಇಂದು.


ಪರಿಚಯ
ಕೆ. ಎಸ್. ನರಸಿಂಹಸ್ವಾಮಿ ಜನವರಿ 26, 1915 ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದವರು. ತಂದೆ ಕಿಕ್ಕೇರಿ ಸುಬ್ಬರಾಯರು. ತಾಯಿ ಹೊಸ ಹೊಳಲು ನಾಗಮ್ಮನವರು. ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದುಕೊಂಡರು.


ವೃತ್ತಿ ಜೀವನ
1937ರಲ್ಲಿ ಸರ್ಕಾರಿ ನೌಕರಿ ಸೇರಿ ಮೈಸೂರು, ನಂಜನಗೂಡು, ಬೆಂಗಳೂರಿನಲ್ಲಿ ತಮ್ಮ ಸೇವಾವಧಿ ಮುಗಿಸಿ 1970ರಲ್ಲಿ ನೌಕರಿಯಿಂದ ನಿವೃತ್ತರಾದರು. ಜೀವನದ ಉದ್ದಕ್ಕೂ ಅನೇಕ ಸಮಸ್ಯೆಗಳನ್ನು ಎದುರಿಸಿದರೂ ಅದರ ಚೆಲುವನ್ನು ತೆರೆದು ತೋರುತ್ತಾ, ಜೀವನ ಮುಖಿಯಾದ ಕಾವ್ಯವನ್ನು ತಮ್ಮ ವೈಯಕ್ತಿಕ ಬದುಕಿನ ನೆಲೆಯಿಂದಲೇ ಕಟ್ಟಿಕೊಡುತ್ತಾ ಹೋದದ್ದುಇವರ ವೈಶಿಷ್ಟ್ಯ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್ ನರಸಿಂಹಸ್ವಾಮಿ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. “ಮಲ್ಲಿಗೆಯ ಮಾಲೆ” ಸಮಗ್ರ ಕವಿತೆಯ ಸಂಕಲನ. `ಸಂಜೆ ಹಾಡು’ ಕಾವ್ಯ ಹೊರಬಂದಿದೆ.


ಕವನ ಸಂಕಲನಗಳು: 1942 ರಲ್ಲಿ ಮೈಸೂರು ಮಲ್ಲಿಗೆ, ಅಂಗುರಾ, 1945 ರಲ್ಲಿ ಐರಾವತ, 1947 ರಲ್ಲಿ ದೀಪದ ಮಲ್ಲಿ, 1952 ರಲ್ಲಿ ಇರುವಂತಿಗೆ , 1958 ರಲ್ಲಿ ಶಿಲಾಲತೆ, 1976 ರಲ್ಲಿ ತೆರದ ಬಾಗಿಲು , 1983 ರಲ್ಲಿ ನವಪಲ್ಲವ , ಮಲ್ಲಿಗೆಯ ಮಾಲೆ , 1993 ರಲ್ಲಿ ದುಂಡು ಮಲ್ಲಿಗೆ , 1999 ರಲ್ಲಿ ನವಿಲಾ ದಾನಿ, 2000 ಸಂಜೆ ಹಾಡು, 2001 ರಲ್ಲಿ ಕೈಮರದ ನೆಲದಲ್ಲಿ, 2002 ರಲ್ಲಿ ಎದೆ ತುಂಬ ನಕ್ಷತ್ರ, 2003 ರಲ್ಲಿ ಮೌನದಲ್ಲಿ ಮಾತಾ ಹುಡುಕುತ, ಇಕ್ಕಳ ಕವನ ಸಂಕಲವನ್ನು ರಚಿಸಿದ್ದಾರೆ.


ಪ್ರಶಸ್ತಿ: ಕೆ.ಎಸ್ ನರಸಿಂಹಸ್ವಾಮಿ ಅವರಿಗೆ 1970ರಲ್ಲಿ ‘ಚಂದನ’ ಸಂಭಾವನ ಗ್ರಂಥ, ತೆರೆದ ಬಾಗಿಲು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ‘ದುಂಡು ಮಲ್ಲಿಗೆ’ ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಇವು ಇವರಿಗೆ ಸಂದ ಪ್ರಶಸ್ತಿಗಳು.


ಕೆ.ಎಸ್ ನರಸಿಂಹಸ್ವಾಮಿ ಅವರು ಡಿಸೆಂಬರ್ 27, 2003 ರಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.