ಒಂದು ಕಾಲದಲ್ಲಿ ಗುಬ್ಬಚ್ಚಿ ವಿಶ್ವದ ಅತ್ಯಂತ ಸಾಮಾನ್ಯವಾಗಿ ಕಂಗೊಳಿಸುತ್ತಿದ್ದ ಪಕ್ಷಿಯಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಪಕ್ಷಿಯು ಅಳಿವಿನಂಚಿಗೆ ಸರಿದಿದೆ. ದೇಶದಲ್ಲಿ ಗುಬ್ಬಚ್ಚಿ ಪಕ್ಷಿಗಳ ಸಂಖ್ಯೆ ತೀರಾ’ ಕಡಿಮೆಯಾಗಿದ್ದು ಅದಕ್ಕೆ ಕಾರಣಗಳೇನು ಎನ್ನುವುದು ಒಂದು ಸುದೀರ್ಘ ಚರ್ಚೆಗೆ ಎಡೆಮಾಡಿಕೊಡುತ್ತದೆ. ಹೀಗಾಗಿ ಗುಬ್ಬಚ್ಚಿ ಸಂರಕ್ಷಣೆಗಳ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ.
ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ಪ್ರಭೇದಗಳು ಮತ್ತು ಕ್ಷೀಣಿಸುತ್ತಿರುವ ಅದರ ಸಂಖ್ಯೆಯು ಬಹಳ ಕಾಳಜಿಯ ವಿಷಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುಬ್ಬಚ್ಚಿಗಳು ಮತ್ತು ಇತರ ಕಣ್ಮರೆಯಾಗುತ್ತಿರುವ ಪಕ್ಷಿಗಳ ಸಂರಕ್ಷಣೆಗಾಗಿ ಪ್ರತಿ ವರ್ಷ ಮಾರ್ಚ್ 20 ರಂದು ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಗುಬ್ಬಚ್ಚಿ ದಿನದ ಈ ವರ್ಷದ ಥೀಮ್ Sparrows: Give them a tweet-chance!” , “I Love Sparrows ” and “We Love Sparrows” ಎಂಬ ಅಂಶಗಳನ್ನು ಬಳಗೊಂಡಿದೆ.
ಇತಿಹಾಸ
ನೇಚರ್ ಫಾರೆವರ್ ಸೊಸೈಟಿ ಮತ್ತು ಇಕೋಸಿಸ್ ಆಕ್ಷನ್ ಫೌಂಡೇಶನ್ ಸಹಯೋಗದೊಂದಿಗೆ ಪ್ರತಿವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಮೊದಲು 2010 ರಲ್ಲಿ ಆಚರಿಸಲಾಯಿತು. ಗುಬ್ಬಚ್ಚಿಗಳ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ ಮೊಹಮ್ಮದ್ ದಿಲಾವರ್ ಅವರು ದಿ ನೇಚರ್ ಫಾರೆವರ್ ಸೊಸೈಟಿಯನ್ನು ಸ್ಥಾಪಿಸಿದರು.
ಗುಬ್ಬಚ್ಚಿಗಳು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಜಾತಿಗಳು ಮತ್ತು ಇತರ ಸಾಮಾನ್ಯ ಪಕ್ಷಿಗಳಿಗೆ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸಲು ಹೌಸ್ ಸ್ಪ್ಯಾರೋಗೆ ಒಂದು ದಿನವನ್ನು ನಿಗದಿಪಡಿಸಿದ್ದರು.
ಮಹತ್ವ
ಗುಬ್ಬಚ್ಚಿಗಳ ಸಂಖ್ಯೆಯಲ್ಲಿನ ಕ್ರಮೇಣ ಕುಸಿತ ಕಾಣುತ್ತಿರುವುದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ.ಜೀವವೈವಿಧ್ಯತೆ ಮತ್ತು ನಮ್ಮ ಪರಿಸರಕ್ಕೆ ಈ ಪಕ್ಷಿಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ದಿನ ಹೊಂದಿದೆ. ಅವುಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲು ವಿಶ್ವಾದಾದ್ಯಂತದ ಜನರು ಮತ್ತು ಸಂಸ್ಥೆಗಳನ್ನು ಪ್ರೇರೇಪಿಸುಲಾತ್ತದೆ. ಗುಬ್ಬಚ್ಚಿಗಳು, ವಿಶೇಷವಾಗಿ ಸಾಮಾನ್ಯ ಮನೆ ಗುಬ್ಬಚ್ಚಿ, ಸಾವಿರಾರು ವರ್ಷಗಳಿಂದ ಮನುಷ್ಯರ ಒಡನಾಡಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿದೆ.
ಈ ಕುಸಿತವು ನಮ್ಮ ಪರಿಸರದ ಅವನತಿ, ನಮ್ಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಅದರ ಸಂಭಾವ್ಯ ಪ್ರಭಾವದ ಎಚ್ಚರಿಕೆಯ ಸಂಕೇತವಾಗಿದೆ. ಮನೆ ಗುಬ್ಬಚ್ಚಿ ಮತ್ತು ಅದರ ಆವಾಸಸ್ಥಾನವನ್ನು ಸಂರಕ್ಷಿಸುವ ಮೂಲಕ, ಅವುಗಳ ಆವಾಸಸ್ಥಾನವನ್ನು ಹಂಚಿಕೊಳ್ಳುವ ಸಾಮಾನ್ಯ ಜೀವವೈವಿಧ್ಯವನ್ನು ಸಂರಕ್ಷಿಸಲು ನಾವು ಗಮನವಹಿಸಬೇಕಿದೆ.