ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಗಳಿಂದ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಈಗ ಅತೀ ಹೆಚ್ಚು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು ಬ್ರೈನ್‌ ಟ್ಯೂಮರ್‌. ಈ ಕಾಯಿಲೆ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ಭಯದ ಭೀತಿ ಕಾಡುತ್ತದೆ. ಅದೆಷ್ಟೋ ಜನರಿಗೆ ಬ್ರೈನ್‌ ಟ್ಯೂಮರ್‌ ಬಂತೆಂದರೆ ಜೀವನವೇ ಮುಗಿದು ಹೋಯಿತು ಅಂದುಕೊಂಡು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಬಿಡುತ್ತಾರೆ. ಜೀವಕೋಶಗಳು ಅಸಹಜ ವೇಗವಾಗಿ ಬೆಳೆಯುವಾಗ ಗೆಡ್ಡೆಗಳು ಸಂಭವಿಸಬಹುದು. ಕ್ಯಾನ್ಸರ್ ಗೆಡ್ಡೆಗಳಿಗೆ ತಕ್ಷಣ ಚಿಕಿತ್ಸೆ ನೀಡಬೇಕು. ಮೆದುಳಿನ ಗೆಡ್ಡೆಗಳು ಮೆದುಳಿನಲ್ಲಿ ಹುಟ್ಟಿಕೊಳ್ಳಬಹುದು ಅಥವಾ ದೇಹದ ಇತರ ಭಾಗಗಳಿಂದ ಮೆದುಳಿಗೆ ಹರಡಬಹುದು. ಹೀಗಾಗಿ ಈ ಕಾಯಿಲೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಪ್ರತಿ ವರ್ಷ ಜೂನ್‌ 8 ರಂದು ಬ್ರೈನ್ ಟ್ಯೂಮರ್ ದಿನವೆಂದು ಆಚರಿಸಲಾಗುತ್ತದೆ.

ಬ್ರೈನ್‌ ಟ್ಯೂಮರ್‌ ಎಂದರೇನು?
ಬ್ರೈನ್ ಟ್ಯೂಮರ್ ಮೆದುಳಿನಲ್ಲಿನ ಅಸಹಜ ಜೀವಕೋಶಗಳ ಸಮೂಹ . ಮೆದುಳಿನ ಭಾಗದಲ್ಲಿ ಕೆಲವರಿಗೆ ಗಡ್ಡೆ ಕಾಣಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೈನ್ ಟ್ಯೂಮರ್ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುವ ಮೆದುಳಿನ ಗೆಡ್ಡೆಯಾದ ಮೆನಿಂಜಿಯೋಮಾ ಮಂದಗತಿಯಲ್ಲಿ ಬೆಳೆಯುತ್ತದೆ. ಈ ರೋಗಲಕ್ಷಣಗಳು ಗೆಡ್ಡೆಗಳ ಗಾತ್ರ, ಅದು ಪರಿಣಾಮ ಬೀರುವ ಪ್ರದೇಶ ಮತ್ತು ಅದು ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಲಕ್ಷಣಗಳು
ತಲೆ ತಿರುಗುವಿಕೆ, ವಾಕರಿಕೆ, ಮರೆವು, ವಿಪರೀತ ತಲೆನೋವು, ಮೂರ್ಚೆ, ಮಾನಸಿಕ ಒತ್ತಡ, ದೇಹದ ಸಮತೋಲನದಲ್ಲಿ, ಏರುಪೇರು
ಕಣ್ಣಿನ ದೃಷ್ಟಿಯಲ್ಲಿ ಏರುಪೇರು.

ಕಾರಣವೇನು?
ಇದು ಗೆಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಯಿಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀರಾ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಂಶೋಧಕರು ಇದನ್ನು ಯಾವ ರೀತಿ ಉಂಟಾಗುತ್ತದೆ ಎಂಬ ಅಧ್ಯಯನ ಕೈಗೊಂಡ ನಂತರ ಅವರು ಬಹಿರಂಗ ಪಡಿಸಿದ ಒಂದು ಅಚ್ಚರಿಯ ವಿಷಯ ಎಂದರೆ ಮೆದುಳಿನ ಸಾಮಾನ್ಯ ಕೋಶಗಳಲ್ಲಿ DNA ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ.

ವಿಧಗಳು
ಮ್ಯಾಲಿಜ್ಞೆನ್ಟ್‌ ಬ್ರೈನ್‌ ಟ್ಯೂಮರ್‌, ಬೆನಿಗ್ನ್‌ ಬ್ರೈನ್‌ ಟ್ಯೂಮರ್‌, ಪ್ರೈಮರಿ ಬ್ರೈನ್‌ ಟ್ಯೂಮರ್‌, ಮೆಟಾಸ್ಟಾಟಿಕ್‌ ಟ್ಯೂಮರ್‌, ರೋಗ

ತಡೆಗಟ್ಟುವಿಕೆ
• ಧೂಮಪಾನ
• ಆಲ್ಕೊಹಾಲ್‌ ಸೇವನೆ
• ಅಡಿಕೆ ಸೇವನೆ ಬಿಡುವುದು
• ನಿಕಲ್‌ , ಕ್ಯಾಡ್ಮಿಯಮ್‌, ವಿನೈಲ್‌ ಕ್ಲೋರೈಡ್‌ , ರೇಡಾನ್‌ , ಬೆಂಜೀನ್‌ ಮುಂತಾದ ಕಾರ್ಸಿನೋಜೆನಿಕ್‌ ರಾಸಾಯನಿಕ ತಪ್ಪಿಸುವುದು.
• ಸೋಂಕುಗಳು, ಅಲರ್ಜಿಗಳಿಂದ ದೂರವಿರುವುದು
• ತಲೆಗೆ ಗಾಯ ಆಗದ ರೀತಿಯಲ್ಲಿ ಸುರಕ್ಷತಾ ಕ್ರಮವನ್ನು ತೆಗೆದುಕೊಳ್ಳುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.