ಪುಣೆ: “ವಿಕಸಿತ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕಾಗಿ ಉನ್ನತ ಶಿಕ್ಷಣದಲ್ಲಿ ಭಾರತೀಯ ದೃಷ್ಟಿಕೋನ ಮತ್ತು ಜ್ಞಾನ ಪರಂಪರೆಯನ್ನು ಅಳವಡಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಅತುಲ್ ಲಿಮಯೆ ಹಂಚಿಕೊಂಡರು.

ಪುಣೆಯ ಎಸ್.ಪಿ. ಕಾಲೇಜು ಆವರಣದಲ್ಲಿರುವ ಭೌ ಸಾಹೇಬ್ ಚಿಟಳೆ ಸಭಾಂಗಣದಲ್ಲಿ ಭಾರತೀಯ ಶಿಕ್ಷಣ ಮಂಡಲ (ಪಶ್ಚಿಮ ಮಹಾರಾಷ್ಟ್ರ ಪ್ರಾಂತ ಮತ್ತು ಪುಣೆ ಮಹಾನಗರ) ಆಯೋಜಿಸಿದ್ದ ನವೋನ್ಮೇಷ – ಅಧ್ಯಯನ ಮಂಡಲ ಸದಸ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಪುಣೆ ಹಾಗೂ ಸುತ್ತಮುತ್ತಲಿನ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಕಾಲೇಜುಗಳ ಅಭ್ಯಾಸ ಮಂಡಲಗಳ Board of Studiesನ 500ಕ್ಕೂ ಹೆಚ್ಚು ಸಂಯೋಜಕರು ಹಾಗೂ ಸದಸ್ಯರು ಈ ಬೃಹತ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಮುಖ ವಿಚಾರಗಳು

ಶಿಕ್ಷಣದ ವ್ಯಾಪಕ ಉದ್ದೇಶ
ಶಿಕ್ಷಣವೆಂಬುದು ಕೇವಲ ಪದವಿ ಅಥವಾ ಜೀವನೋಪಾಯಕ್ಕೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಗಳ ಸರ್ವಾಂಗೀಣ, ನೈತಿಕ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನದ ಸಾರ್ಥಕ ಮಾಧ್ಯಮವಾಗಬೇಕು. ಭಾರತೀಯ ಜ್ಞಾನ ಪರಂಪರೆಯ ಸೇರ್ಪಡೆ.

ಪಾಶ್ಚಿಮಾತ್ಯ ಶಿಕ್ಷಣ ಮಾದರಿಗಳನ್ನು ಕುರುಡಾಗಿ ಅನುಕರಿಸುವ ಬದಲು, ಭಾರತೀಯ ಸಮಾಜದ ಅಗತ್ಯಗಳು,ಮೌಲ್ಯಗಳು ಹಾಗೂ ಭವಿಷ್ಯದ ಸವಾಲುಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಬೇಕು.


ಅಭ್ಯಾಸ ಮಂಡಲಗಳ ಜವಾಬ್ದಾರಿ.
ಅಭ್ಯಾಸ ಮಂಡಲದ ಸದಸ್ಯರು ಕೇವಲ ಪಠ್ಯಕ್ರಮವನ್ನು ನಿರ್ಧರಿಸುವವರಲ್ಲ,ಬದಲಾಗಿ ಅವರು ದೇಶದ ಭವಿಷ್ಯದ ಪೀಳಿಗೆಯನ್ನು ರೂಪಿಸುವ ನಿರ್ಮಾತೃಗಳು.


‘ಆನಂದಶಾಲೆ’ ಎಂಬ ನಿರಂತರ ಉಪಕ್ರಮ.
‘ನವೋನ್ಮೇಷ’ ಎಂಬುದು ಕೇವಲ ಒಂದು ದಿನದ ಸಂವಾದ ಕಾರ್ಯಕ್ರಮವಲ್ಲ, ಇದೊಂದು ನಿರಂತರ ಪ್ರಕ್ರಿಯೆ. ಇದರ ಮುಂದಿನ ಹಂತವಾಗಿ, ಆಯ್ದ ಸದಸ್ಯರಿಗಾಗಿ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಬಿ. ಆರ್. ಶಂಕರಾನಂದ ಅವರ ಮಾರ್ಗದರ್ಶನದಲ್ಲಿ ‘ಆನಂದಶಾಲೆ’ ವಿಶೇಷ ತರಬೇತಿ ಉಪಕ್ರಮವನ್ನು ಆಯೋಜಿಸಲಾಗುವುದು.

ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಕಾರ್ಯಾಧ್ಯಕ್ಷ ಡಾ. ಸುಹಾಸ್ ಪಡ್ನೇಕರ್, ಮಹೇಶ್ ದಬಕ್, ಸಂಯೋಜಕ ಅಜಯ್ ಧಾಕ್ರಾಸ್, ಪಶ್ಚಿಮ ಮಹಾರಾಷ್ಟ್ರ ಪ್ರಾಂತ ಅಧ್ಯಕ್ಷ ಪ್ರೊ. ರವಿಕುಮಾರ್ ಚಿಟ್ನಿಸ್, ಸೇರಿದಂತೆ ಅನೇಕ ಹಿರಿಯ ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.