ಮಸೂದೆಯಿಂದ ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್
ಮೂಡುಬಿದಿರೆ: ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯು ತ್ಯಾಗ ಜೀವಿಗಳಾದ ಬಹುಸಂಖ್ಯಾತರ ವಿರುದ್ಧ ದೌರ್ಜನ್ಯವಾಗಿದೆ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಲ್ಲದ ಈ ಕಾನೂನು ಕರಾಳವಾಗಿದೆ. ಏಕತೆ ಮತ್ತು ಭಾವೈಕ್ಯತೆಯ ಹೆಸರಲ್ಲಿ ಜನರಲ್ಲಿ ಪ್ರತ್ಯೇಕತೆಯನ್ನು ನಿರ್ಮಿಸುವ ಹುನ್ನಾರ ಇದಾಗಿದೆ ಎಂದು ಯುವ ನ್ಯಾಯವಾದಿ ಎಂ.ಕೆ ಸುವೃತ್ ಕುಮಾರ್ ಎಚ್ಚರಿಸಿದರು. ಅವರು ಮೂಡುಬಿದಿರೆಯ ಹಿಂದೂ ಹಿತರಕ್ಷಣಾ ವೇದಿಕೆಯು ಕೋಮು ಹಿಂಸಾಚಾರ ತಡೆ ಕಾನೂನು ಜಾರಿ ವಿರುದ್ಧ ಬುಧವಾರ ಏರ್ಪಡಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮಲ್ಲಿ ಮತಾಂತರ,ಗೋಹತ್ಯೆ ಮಾಡುವವರಿಗೆ ಯಾವದೇ ಕಾನೂನು ಅನ್ವಯಿಸುವುದಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಪೋಟಾ ಕಾನೂನು ಮಾಡಿದ್ದನ್ನೂ ಈ ಕೇಂದ್ರ ಸರಕಾರ ಯಾವುದೋ ಸಮುದಾಯದ ಓಲೈಕೆಗಾಗಿ ರದ್ದು ಮಾಡುತ್ತದೆ. ಆದರೆ ಉದ್ದೇಶಿಸಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯು ಕೇಂದ್ರ ಸರಕಾರದ ಉತ್ಸಾಹದಿಂದ ಜಾರಿಗೆ ಬಂದರೆ ದೇಶದ ಜನತೆಯ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆ ಬರಲಿದೆ . ಈ ಬಗ್ಗೆ ಸಕಾಲದಲ್ಲಿ ಜನತೆ ಎಚ್ಚೆತ್ತು ಪ್ರತಿಭಟನೆಯ ಮೂಲಕ ಕೇಂದ್ರ ಸರಕಾರಕ್ಕೆ ಚಳಿ ಹುಟ್ಟಿಸಬೇಕಾಗಿದೆ ಎಂದವರು ನುಡಿದರು
ರಾಮ ಸೇತು ಒಡೆಯುವ ಯತ್ನ, ಕಂಚಿ ಶ್ರೀಗಳವರ ಬಂಧನ, ಲಕ್ಷ್ಮಣಾನಂದ ಸ್ವಾಮೀಜಿ ಹತ್ಯೆ, ಸಾದ್ವಿ ಪ್ರಜ್ಞಾ ಸಿಂಗ್ ಬಂಧನ,ಅಫ್ಜಲ್ ಗುರು,ಕಸಬ್ ಗೆ ಆರೈಕೆ, ಅಮೃತಾನಂದ ಮಯಿ ಟ್ರಸ್ಟ್ ಮೇಲೆ ದಾಳಿ, ಬಾಬಾ ರಾಮ್ ದೇವ್ ಮೇಲೆ ದೌರ್ಜನ್ಯ, ರವಿಶಂಕರ್ ಗುರೂಜಿ ಮೇಲೆ ಸಿಬಿಐ ತನಿಖೆಯ ದುಸ್ಸಾಹಸ ಮಾಡುವ ಕೇಂದ್ರಕ್ಕೆ ಮದರಸಗಳಲ್ಲಿನ ಭಯೋತ್ಪಾದನೆ,ಕ್ರೈಸ್ತ,ಮುಸಲ್ಮಾನ ಧಾರ್ಮಿಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಆಸಕ್ತಿ ಏಕಿಲ್ಲ ಎಂದ ಸುವೃತ್ ಈ ಮಸೂದೆ ಜಾರಿಯಾದರೆ ತಿರುಪತಿ ವಿರುದ್ಧ ಸಮರ ಸಾರಿದ ವೈಎಸ್ ಆರ್ ಗಾದ ಗತಿಯೇ ಮರುಕಳಿಸಲಿದೆ. ಹಿಂದೂಗಳಿ ಕೇಸರಿಯ ತ್ಯಾಗ ತೊರೆದು ಸಿಂಹದಂತೆ ಘರ್ಜಿಸಬೇಕಾದೀತು ಎಂದು ವಿವರಿಸಿದರು.
ಈ ಕಾನೂನು ಹಿಂದೂ ಜನರನ್ನು ದಮನ ಮಾಡಲೆಂದೇ ತಯಾರಿಸಲಾಗಿದೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ಗಾಗಿ ಓಲೈಸುವ ಕೆಲಸವನ್ನು ಮಾಡುವುದರ ಹಿಂದೂ ಪರ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಈ ಮಸೂದೆಯನ್ನು ಜಾರಿಗೆ ತರಲು ಸಲಹೆ ಕೊಟ್ಟವರಿಗೆ ದೇಶದ ಸಾಂಸ್ಕೃತಿಕ ಚೌಕಟ್ಟು ಹಾಗೂ ಕಾನೂನಿನ ಅರಿವು ಇದೆಯೇ ಎಂದು ಸೋನಿಯಾ ಗಾಂಧಿಯನ್ನು ಟೀಕಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕೇಮಾರು ಸಾಂಧೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ ನಮ್ಮಲ್ಲಿಂದು ಅಲ್ಪ ಸಂಖ್ಯಾತ ಆಯೋಗ ಇರುವಂತೆ ಬಹುಸಂಖ್ಯಾತ ಆಯೋಗವೂ ಜಾರಿಗೆ ಬರಲಿ . ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ ಎಂದ ಅವರು ಇಂತಹ ಪ್ರತಿಭಟನೆಗಳು , ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗಿರದೆ ನ್ಯಾಯ ಸಿಗುವವರೆಗೂ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಆರ್ಶೀವಚನ ನೀಡಿದ ಕರಿಂಜೆ ಸತ್ಯನಾರಾಯಣಪುರ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಈ ಕರಾಳ ಮಸೂದೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಹಿಂದೂಗಳ ವಿರುದ್ಧ ಕರಾಳ ಮಸೂದೆಯನ್ನು ಜಾರಿಗೊಳಿಸಿದ್ದಲ್ಲಿ ತ್ಯಾಗವನ್ನು ತ್ಯಜಿಸಿ ಸಿಂಹದಂತೆ ಘರ್ಜಿಸಬೇಕಾದೀತು. ಶಾಂತಿಯನ್ನು ಸಾರುವ ಬಿಳಿಯರು ಮತಾಂತರದ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಹಸಿರನ್ನು ಪ್ರತಿನಿಧಿಸುವವರು ಗೋ ಕಳ್ಳತನದ ಮೂಲಕ ಅನ್ಯಾಯವೆಸಗುತ್ತಿದ್ದರೂ ಅವರ ಮೇಲೆ ಯಾಕೆ ಕಾನೂನು ರಚನೆಯಾಗುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ಕೇಶವ ಹೆಗ್ಡೆ ಸ್ವಾಗತಿಸಿದರು. ಶ್ಯಾಮ ಹೆಗ್ಡೆ ವಂದಿಸಿದರು. ನಾಗರಾಜ ಒಂಟಿಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಮೊದಲಿಗೆ ಸಾವಿರಕಂಬದ ಬಸದಿಯಿಂದ ಬಸ್ಸು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.