Ravindra Puttur speaks at RSS Protest rally at Udupi

Udupi: Nov 16:

ಮಸೂದೆ ಹಿಂದುಗಳ ಪಾಲಿಗೆ ಬೆಂಕಿ: ರವೀಂದ್ರ ಪುತ್ತೂರು 

Ravindra Puttur speaks at RSS Protest rally at Udupi

ಉಡುಪಿ: ಚಳಿಗಾಲದ ಅಧಿವೇಶನದಲ್ಲಿ ಯುಪಿಎ ಸರ್ಕಾರ ಮಂಡಿಸಲಿರುವ ಮತೀಯ ಹಾಗೂ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆಯು ಹಿಂದುಗಳ ಪಾಲಿಗೆ ಬೆಂಕಿ ಇದ್ದ ಹಾಗೆ. ಅದನ್ನು ಈಗ ವಿರೋಧಿಸದಿದ್ದರೆ ಮುಂದೊಂದು ದಿನ ಆ ಬೆಂಕಿಯಲ್ಲಿ ಸುಡಲಿzವೆ. ದೇಶದ ಪ್ರತೊಯೊಂದು ಕಡೆಗಳಲ್ಲೂ ಹಿಂದುಗಳು ಜಾಗೃತವಾಗಿದ್ದಾರೆ. ದೇಶದ ಇಂಚು ಇಂಚುಗಳಲ್ಲೂ ಭಗವಾ ಧ್ವಜ ಹಾರಾಡುತ್ತಿದೆ. ಇದರಿಂದ ಬೆದರಿದ ಕೆಂಧ್ರ ಸರ್ಕಾರ ಹಿಂದೂಗಳ ದಮನಕ್ಕಾಗಿ ಅಲ್ಪ ಸಂಖ್ಯಾತರನ್ನು ಓಲೈಸುವ ಈ ಮಸೂದೆಯನ್ನು ಮುಂಡಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಗ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ನಡೆದ ಮತೀಯ ಹಾಗೂ ನಿರ್ದೇಶಿತ ಹಿಂಸಾಚಾರ ತಡೆ ಮಸೂದೆ ವಿರೋಧಿಸಿ ಸಾರ್ವಜನಿಕ ಸಭೆಯನ್ನುzಶಿಸಿ ಮಾತನಾಡಿದರು.

RSS protest at Udupi

ಭ್ರಷ್ಟಚಾರದ ಆರೋಪಗಳನ್ನು ತತ್ತರಿಸುತ್ತಿರುವ ಕೇಂದ್ರ ಸರ್ಕಾರ, ಮುಂಬರುವ ಚುನಾವಣೆಯಲ್ಲಿ ಗೆದ್ದು ಆಡಳಿತ ನಡೆಸುವ ದೃಷ್ಟಿಯಿಂದ ಮತೀಯ ಅಲ್ಪ ಸಂಖ್ಯಾತರನ್ನು ಮನವೊಲಿಸಿ, ಅವರ ಓಟುಗಳನ್ನು ಗಿಟ್ಟಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ಎರಡು ಗುಂಪುಗಳಾಗಿ ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕೋಮು ಹಿಂಸಾಚಾರವನ್ನು ಹುಟ್ಟು ಹಾಕುವವರು ಅಲ್ಪ ಸಂಖ್ಯಾತರು, ಹಿಂದುಗಳಲ್ಲ. ಹಿಂದುಗಳು ಹಿಂಸೆಯನ್ನು ಅನುಭವಿಸುವವರು. ೯ ಅಧ್ಯಾಯ, ೧೩೮ ವಿಧಿಗಳಿರುವ ಈ ಮಸೂದೆಯಲ್ಲಿ ಹಿಂದುಗಳ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಅಲ್ಪ ಸಂಖ್ಯಾತ ವ್ಯಕ್ತಿ ಮಾಡಿರುವ ಆರೋಪದಲ್ಲಿ ಹಿಂದುಗಳನ್ನು ಯಾವುದೇ ಆಧಾರವಿಲ್ಲದಿದ್ದರೂ ಬಂಧಿಸುವ ಅಧಿಕಾರ ಈ ಕಾನೂನಿನಲ್ಲಿದೆ. ಬಂಧಿತರಿಗೆ ಯಾವುದೇ ರೀತಿಯ ಜಾಮೀನಿಲ್ಲ. ಬಂಧಿತ ವ್ಯಕ್ತಿ ತಾನು ತಪ್ಪು ಮಾಡಿಲ್ಲ ಎಂದು ತಾನೇ ಸಾಬೀತು ಪಡಿಸುವವರೆಗೆ ಬಂಧನದಲ್ಲೇ ಇರಬೇಕಾಗುತ್ತದೆ. ಉzಶ ಪೂರ್ವಕವಾಗಿ ಕೋಮು ಹಿಂಸಾಚಾರವನ್ನು ಹುಟ್ಟು ಹಾಕುವ ಕಾನೂನು ಇದಾಗಿದೆ. ಅಲ್ಪ ಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಅನಾಮಧೇಯ ಕರೆ ಅಥವಾ ಅನಾಮಧೇಯ ಪತ್ರ ಬಂದರೂ ಈ ಬಗ್ಗೆ ಕಾನೂನು ಕ್ರಮ ಜರುಗಿಸಬಹುದಾಗಿದೆ.

ಬಂಧನಕ್ಕೊಳಗಾಗಿ ವ್ಯಕ್ತಿ ಯಾವುದೇ ಸಂಘಟನೆಯಲ್ಲಿ ಸಕ್ರಿಯನಾಗಿದ್ದರೆ ಆ ಸಂಘಟನೆಯ ಅಧಿಕಾರಿವರ್ಗದವರನ್ನೂ ಬಂಧಿಸುವ ಅಧಿಕಾರವೂ ಈ ಕಾನೂನಿನಲ್ಲಿದ್ದು, ಆ ಸಂಘಟನೆ ಕೇವಲ ರಾಷ್ಟ್ರೀ ಸ್ವಯಂಸೇವಕ ಸಂಘಟನೆಯಾಗಿರಬೇಕಿಲ್ಲ. ಹಾಗಾಗಿ ಇದು ಕೇವಲ ಆರ್‌ಎಸ್‌ಎಸ್‌ಗೆ ಮಾತ್ರ ಸಂಬಂಧಿಸಿದ ಕಾನೂನು ಅಲ್ಲ ಎಂದು ರವೀಂದ್ರ ಅವರು ಎಚ್ಚರಿಸಿದರು.

ಈ ಶಾಸನವನ್ನು ಜಾರಿಗೊಳಿಸಲು ೭ ಮಂದಿಯ ಸಮಿತಿಯೊಂದನ್ನು ರಚಿಸಲಾಗುತ್ತದೆ. ಈ ಸಮಿತಿಗೆ ಸಂವಿಧಾನಾತ್ಮಕ ಅಧಿಕಾರವಿರುವುದಿಲ್ಲ. ಪ್ರತೀ ವರ್ಷವೂ ಈ ಸಮಿತಿಗೆ ೭೫ ಲಕ್ಷ ರೂ. ನೀಡಲಾಗುತ್ತಿದೆ ಎಂದರು. ಈ ಶಾಸನದಲ್ಲಿ ಮೂರು ವಿಚಾರಗಳನ್ನು ಉಲ್ಲೇಖಿಸಲಾಗಿದೆ, ಭರತ ಜಾತ್ಯಾತೀತ ದೇಶ, ಮಾನವ ಅಧಿಕಾರ ಮತ್ತು ಸಾಮಾಜಿಕ ನ್ಯಾಯ ಎಂಬ ವಿಚಾರಗಳನ್ನು ಹೇಳಲಾಗಿದೆ. ಹಿಂದೂಗಳನ್ನು ಭಯೋತ್ಪಾದಕರು ಎಂದು ವ್ಯಾಖ್ಯಾನಿಸಿದ್ದು, ಹಿಂದೂಗಳು ಭಯೋತ್ಪಾದಕರಾದರೆ ಯಾರೂ ಇಲ್ಲಿರುತ್ತಿರುತ್ತಿರಲಿಲ್ಲ ಎಂದ ಅವರು, ಈ ಮಸೂದೆ ವನ್ ಪಾಯಿಂm ಅಜೆಂಡಾ.

ಬಂಧನಕ್ಕೆ ಹೆದರಿ ಓಡಿ ಹೋಗುವುದಿಲ್ಲ. ನಮ್ಮನ್ನು ವಿರೋಧಿಸಿ ಕಾನೂನು ಜಾರಿಗೆ ತಮದರೆ ನಾವು ಕೈಗೆ

ಬಳೆ ತೊಟ್ಟು ಕುಳಿತುಕೊಳ್ಳುವುದಿಲ್ಲ ಎಂದು ಕೇಂದ್ರವನ್ನು ಎಚ್ಚರಿಸಿದರು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ

ಬಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಶಂಭು ಶೆಟ್ಟಿ, ರಾಘವೇಂಧ್ರ ಆಚಾರ್ಯ, ತಾರನಾಥ ಕೋmನ್, ಪ್ರಫುಲ್ ಶೆಟ್ಟಿ, ಬಿ.ಎನ್. ಶಂಕರ ಪೂಜಾರಿ, ಹಿರಿಯಣ್ಣ ಟಿ., ಪ್ರಸಾದ್ ಕುತ್ಯಾರು, ಸುಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.