Mangalore January 12: Chief Minister of Karnataka, D V Sadananda Gouda today inaugurated 17th national level youth festival at Mangalore, the coastal town of Karnataka. In a spectacular ceremony held at Dr TMA Pai international Convention Centre, will continue for 6 more days, in which more than 4000 youth are participating, representing almost all states of India.
Union Minister Dr Veerappa Moily, Union Sports Minister Ajay Macken, Dr D Veerendra Heggade of Sri Dharmasthala Temple, State Govt ministers and seveal social leaders were present during the ceremony.
ಯುವಜನರ ಅಭಿವೃದ್ಧಿಗೆ ಕಾರ್ಯಪಡೆ: ಮುಖ್ಯಮಂತ್ರಿ
ಮಂಗಳೂರು, ಜ. 12: ಯುವಸಮುದಾಯಕ್ಕೆ ಪೂರಕ ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರ ಕಾರ್ಯಪಡೆಯೊಂದನ್ನು ರಚಿಸಲು ಚಿಂತಿಸಿದೆ ಎಂದು ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಆರಂಭವಾದ ಐದು ದಿನಗಳ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
೨೦೨೦ರ ವೇಳೆಗೆ ಕರ್ನಾಟಕದಲ್ಲಿ ಹೆಚ್ಚು ಅವಕಾಶಗಳು ತೆರೆದುಕೊಳ್ಳಲಿವೆ ಎಂದ ಅವರು ರಾಜ್ಯ ಅದಕ್ಕೆ ಪೂರಕವಾಗಿ ಯುವಕರಿಗೆ ಒತ್ತು ನೀಡುವ ಹಾಗೂ ಯುವ ಸಮುದಾಯಕ್ಕೆ ಹೆಚ್ಚು ಶಕ್ತಿ ನೀಡಲು ಸೂಕ್ತ ಕ್ರಮಕೈಗೊಳ್ಳಲಿದೆ ಎಂದರು.
ಇಂದು ಮಂಗಳೂರಿನಲ್ಲಿ ಒಂದು ವಿಶ್ವವೇ ನಿರ್ಮಾಣವಾದಂತಾಗಿದೆ ಎಂದ ಅವರು, ವಿವಿಧತೆಯಲ್ಲಿ ಏಕತೆಗೆ ಮಂಗಳೂರು ಸಾಕ್ಷಿಯಾಗಿದೆ. ೧೭ನೆ ರಾಷ್ಟ್ರೀಯ ಯುವಜನೋತ್ಸವವನ್ನು ಕರ್ನಾಟಕದಲ್ಲಿ ಆಯೋಜಿಸಲು ಅನುವು ಮಾಡಿಕೊಟ್ಟ ಪ್ರಧಾನಿ ಡಾ.ಮನಮೋಹನ್‌ಸಿಂಗ್, ಕೇಂದ್ರದ ಸಚಿವರಿಗೆ, ಅಧಿಕಾರಿ ವರ್ಗದವರಿಗೆ ಮುಖ್ಯಮಂತ್ರಿ ಅಭಿನಂದಿಸಿದರು.
ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಈಗಾಗಲೇ ಕರ್ನಾಟಕ ಯುವಕರನ್ನು ಆಕರ್ಷಿಸಿದೆ. ಕರ್ನಾಟಕದ ಕರಾವಳಿಯ ಹೆಸರಾಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ದೇಶದ ವಿವಿಧ ರಾಜ್ಯಗಳ ಯುವಕರು ವಿದ್ಯಾಭ್ಯಾಸ ಕೈಗೊಂಡಿದ್ದಾರೆ. ಈ ಮೂಲಕ ರಾಜ್ಯ ಏಕತೆಯ ಪ್ರತೀಕವಾಗಿದೆ ಎಂದರು.’
ರಾಜ್ಯ ಸರ್ಕಾರ ಕೃಷಿ, ನೀರಾವರಿ ಯೋಜನೆಗಳು, ಶಿಕ್ಷಣ ವ್ಯವಸ್ಥೆ, ಅರೋಗ್ಯಸೇವೆ, ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಜನತೆಗೆ ಉತ್ತಮ ಬದುಕು ಕಟ್ಟಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಅಲ್ಲದೆ ದೇಶ ಮುನ್ನಡೆಸಲು ಸನ್ನದ್ದರಾಗಿರುವ ರಾಜ್ಯದ ಯುವ ಸಮುದಾಯವನ್ನು ಗಮನದಲ್ಲಿಟ್ಟಕೊಂಡು ಎಲ್ಲರಿಗೂ ಉತ್ತಮ ಬದುಕು ಕೊಟ್ಟಿದೆ ಎಂದರು.
ದೇಶದ ಶೇ.೪೧ರಷ್ಟಿರುವ ಯುವಜನತೆ ದೇಶದ ಮುಂದಿನ ಭವಿಷ್ಯ ರೂಪಿಸುವವರಾಗಿದ್ದಾರೆ. ಇಂದು ಆರಂಭವಾದ ೧೭ನೇ ಯುವಜನೋತ್ಸವದ ಮೂಲಕ ಸ್ವಾಮಿ ವಿವೇಕನಂದರ ಕನಸನ್ನು ನನಸು ಮಾಡುವ ಮೂಲಕ ದೇಶಕಟ್ಟವ ಸಂಕಲ್ಪ ಮಾಡಿ ಉತ್ತಮ ಸಂದೇಶವನ್ನು ಕೊಂಡೊಯ್ಯಬೇಕಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಯುವಜನತೆಗೆ ಮತ್ತೆ ಇಂತಹ ಸುವರ್ಣಾವಕಾಶ ಸಿಗುವುದಿಲ್ಲ. ತಮ್ಮ ಯುವತನದಲ್ಲಿ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ರಾಷ್ಟ್ರೀಯತೆ, ಭ್ರಾತೃತ್ವವನ್ನು ಸಾರಬೇಕು. ಈ ಉತ್ಸಾಹ ಹೊಸನಾಡು ಕಟ್ಟುವ ಕೆಲಸಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಬೇಕು ಎಂದು ಮುಖ್ಯಮಂತ್ರಿ ಶ್ರೀ ಸದಾನಂದಗೌಡ ಕರೆ ನೀಡಿದರು.
ಗೌರವ ಅತಿಥಿಯಾಗಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರಹೆಗ್ಗಡೆ ಅವರು ಮಾತನಾಡಿ, ಸಾಧನೆಗೆ ಶ್ರಮ ಇರಬೇಕು, ಈ ನಿಟ್ಟಿನಲ್ಲಿ ಭರವಸೆ ಯುವಜನತೆ ದೇಶ ಕಟ್ಟುವ ಸಂಕಲ್ಪ ಮಾಡಲು ಇದು ಸಮಯ ಎಂದರು.
ಭಾರತದ ಯುವ ಸಮಾಜದ ಕಡೆ ವಿಶ್ವವೇ ನೋಡುತ್ತಿದೆ, ಈ ನಿರೀಕ್ಷೆ ಹುಸಿಯಾಗಬಾರದು. ದೇಶ ಮುನ್ನಡೆಸಲು ಯುವಜನತೆ ಸಂಕಲ್ಪ ಮಾಡಬೇಕು ಎಂದರು.
ದೇಶದ ಯುವ ಸಾಧಕರ ಕುರಿತ ಕಿರುಹುತ್ತಿಗೆ ಬಿಡುಗಡೆ ಮಾಡಿದ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಡಾ.ಎಂ.ವೀರಪ್ಪಮೋಯ್ಲಿ, ಯುವಕರೇ ದೇಶದ ಭವಿಷ್ಯ, ದೇಶದ ಪುನಃನಿರ್ಮಾಣದ ಕಾರ್ಯ ದೇಶದ ಯುವಶಕ್ತಿ ಕೈಜೊಡಿಸಬೇಕು ಎಂದರು.
ಶಾಂತಿ, ಅಹಿಂಸೆ, ಸತ್ಯ ಈ ದೇಶದ ಶಕ್ತಿ. ಈ ಮಾರ್ಗದಲ್ಲಿ ದೇಶದ ಅಭಿವೃದ್ಧಿ ಕ್ರಾಂತಿಗೆ ಯುವಕರು ನಾಂದಿಯಾಡಬೇಕು ಎಂದರು.
ಕೇಂದ್ರ ಯುವಜನಸೇವಾ ಮತ್ತು ಕ್ರೀಡಾ ಸಚಿವ ಶ್ರೀ ಅಜಯ್ ಮಖೇನ್ ಮಾತನಾಡಿ, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ಯುವಜನತೆಯ ದೇಶವಾಗಿದೆ. ಇಂದಿನ ಯುವಜನತೆಯೇ ದೇಶದ ನಾಳೆಯ ನಾಯಕರು. ಈ ಹಿನ್ನೆಲೆಯಲ್ಲಿ ದೇಶ ಯುವಶಕ್ತಿಗೆ ಹೆಚ್ಚಿನ ಒತ್ತು ನೀಡಿದೆ ಎಂದರು.
ಪ್ರತಿ ರಾಷ್ಟ್ರೀಯ ಯುವಜನೋತ್ಸವದಲ್ಲೂ ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದು, ೨೦೧೦-೧೧ ನೇ ಸಾಲನ್ನು ಅಂತಾರಾಷ್ಟ್ರೀಯ ಯುವ ವರ್ಷ ಎಂದು ಆಚರಿಸಲಾಗಿದ್ದು ೨೮ ವೈಯಕ್ತಿಕ ಪ್ರಶಸ್ತಿಗಳು ಹಾಗೂ ಎರಡು ಯುವ ಸಂಸ್ಥೆಗಳ ಪ್ರಶಸ್ತಿ ಸೇರಿದಂತೆ ಪ್ರಶಸ್ತಿಗಳ ಸಂಖ್ಯೆಯನ್ನು ೨೫ರಿಂದ ೩೦ಕ್ಕೆ ಹೆಚ್ಚಿಸಲಾಗಿದೆ ಎಂದರು.
ಇಂದಿನ ಯುವಜನೋತ್ಸವ ರಾಷ್ಟ್ರಕ್ಕೆ ಏಕತೆ ಮತ್ತು ಶಾಂತಿಯ ಸಂದೇಶವನ್ನು ಕೊಂಡೊಯ್ಯಲಿ ಎಂದು ಅವರು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜೆ.ಕೃಷ್ಣ ಪಾಲೇಮಾರ್, ಸಚಿವರಾದ ಡಾ.ವಿ.ಎಸ್.ಆಚಾರ್ಯ, ವಿಧಾನಸಭೆ ಉಪ ಸಭಾಧ್ಯಕ್ಷ ಶ್ರೀ ಯೋಗೇಶಭಟ್, ಸಂಸದರಾದ ನಳಿನ್‌ಕುಮಾರ್‌ಕಟೀಲ್ ಕರಾವಳಿಯ ಎಲ್ಲ ಶಾಸಕರು, ಮುಖಂಡರು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು