ಗ್ವಾಲಿಯರ್ , ಮಾರ್ಚ್ ೮: ಪ್ರತಿವರ್ಷವೂ ನಡೆಯುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಈ ವರ್ಷ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ನಗರದಲ್ಲಿ ನಡೆಯುತ್ತಿದೆ. ಮಾರ್ಚ್ ೮,೯,೧೦ರಂದು ನಡೆಯುವ ಸಭೆಯಲ್ಲಿ ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿ, ಅಖಿಲ ಭಾರತೀಯ ಪದಾಧಿಕಾರಿಗಳು, ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಕಾರ್ಯಕರ್ತರು, ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಪ್ರತಿನಿಧಿಗಳು, ವಿಶೇಷ ಅಹ್ವಾನಿತ ಸದಸ್ಯರು ಸೇರಿದಂತೆ ಪ್ರಾಂತ, ಕ್ಷೇತ್ರಮಟ್ಟದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.
ಇಂದಿನ ಬೆಳಗ್ಗಿನ ಪ್ರತಿವೇದನದಲ್ಲಿ ಆರೆಸ್ಸೆಸ್ ನ ಸರಕಾರ್ಯವಾಹರಾದ ಸುರೇಶ್ ಭೈಯ್ಯಾಜಿ ಜೋಶಿಯವರು ನಮ್ಮನ್ನಗಲಿದ ಮಾಜಿ ಕೇಂದ್ರ ಸಚಿವ ಶ್ರೀ ಅನಂತಕುಮಾರ್, ಮಾಜಿ ರೈಲು ಸಚಿವರಾದ ಸಿ ಕೆ ಜಾಫರ್ ಶರೀಫ್, ಸಿದ್ದಗಂಗಾ ಮಠದ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ, ರಾಮಕೃಷ್ಣಾಶ್ರಮದ ಪೂಜ್ಯ ಜಗದಾತ್ಮಾನಂದರು, ಮಾಜಿ ರಕ್ಷಣಾ ಸಚಿವರಾದ ಜಾರ್ಜ್ ಫರ್ನಾಂಡಿಸ್ ರನ್ನು ಸೇರಿದಂತೆ ನಮ್ಮನ್ನಗಲಿದ ಹಿರಿಯರನ್ನು ಸ್ಮರಿಸಲಾಯಿತು. ಗಡಿಯನ್ನು ಕಾಯುವ ಕೆಲಸದಲ್ಲಿ ನಿರತ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರು, ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಸದ್ಗತಿ ಕೋರಿದರು.
೨೦೧೮-೧೯ ರ ಸಾಲಿನಲ್ಲಿ ಜರುಗಿದ ಸಂಘ ಶಿಕ್ಷಾ ವರ್ಗ, ಪ್ರಾಥಮಿಕ ಶಿಕ್ಷಾ ವರ್ಗ, ಶಾಖೆಗಳ ಸಂಖ್ಯೆ ಹಾಗೂ ಅವು ಬೆಳೆದಿರುವ ಅಂಕಿ ಅಂಶಗಳನ್ನು ಪ್ರಕಟಿಸಲಾಯಿತು. ಅದರನ್ವಯ,
ಸಂಘ ಶಿಕ್ಷಾ ವರ್ಗಗಳ, ಪ್ರಾಥಮಿಕ ಶಿಕ್ಷಾ ವರ್ಗಗಳ ವರದಿ :
ಸಂಘ ಶಿಕ್ಷಾ ವರ್ಗ :
ಸಾಮಾನ್ಯ ವರ್ಗಗಳು |
ವಿಶೇಷ ವರ್ಗಗಳು |
|||
ಒಟ್ಟು ಸ್ಥಾನಗಳು | ಉಪಸ್ಥಿತರ ಸಂಖ್ಯೆ | ಒಟ್ಟು ಸ್ಥಾನಗಳು | ಉಪಸ್ಥಿತರ ಸಂಖ್ಯೆ | |
ಪ್ರಥಮ ವರ್ಷ | 9512 | 15639 | 1779 | 2490 |
ದ್ವಿತೀಯ ವರ್ಷ | 2673 | 3335 | 1504 | 2064 |
ತೃತೀಯ ವರ್ಷ | 646 | 703 |
ಪ್ರಾಥಮಿಕ ಶಿಕ್ಷಾ ವರ್ಗ
ಒಟ್ಟು ವರ್ಗಗಳು | ಶಾಖೆಗಳು | ಪ್ರತಿನಿಧಿತ್ವ ಸಂಖ್ಯೆ | |
2017-18 | 1180 | 27814 | 95318 |
2018-19 | 1255 | 29524 | 93744 |
ಕಾರ್ಯ ಸ್ಥಿತಿ
ಸ್ಥಾನಗಳು | ಶಾಖೆಗಳು | ಸಾಪ್ತಾಹಿಕ ಮಿಲನ್ | ಮಾಸಿಕ ಮಿಲನ್ | |
ಮಾರ್ಚ್-18 | 37190 | 58967 | 16405 | 7976 |
ಮಾರ್ಚ್-19 | 37011 | 59266 | 17229 | 8382 |