Bengaluru August 27, 2016: Two-day National Seminar organised by RSS inspired Akhil Bharatiya Sahitya Parishad held at Acharya Institutes, near Soladevanahalli Bengaluru on August 26 and 27, 2016.
On Friday morning August 26, the National seminar was inaugurated by Smt VS Shantha Bayi, Chief Secreatry of Karnataka Mahila Hindi Seva Samiti, Sri BM Reddy, President of JMJ Educational Institutes Bengaluru, Sri Premanath Reddy, Chairman of Acharya Institutes Bengaluru and Srimati Shalini Reddy, Director of Acharya Institutes Bengaluru.
On Saturday evening August 27, the valedictory ceremony held in which Dr Ajay Kumar Sing (rtd) DGP of Karnataka, Dr Gurunath Rao Vaidya, Professor in Acharya Institute of Graduate Studies Bengaluru, Dr Manohar Bharati, Poet and Writer of Mysuru Hindi Parishad, Dr Usha Srinivas, Professor of Hindi Acharya Institute of Graduate studies Bengaluru.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಷ್ಟ್ರೀಯ ಸಂಗೋಷ್ಠಿ
ಮಾತೃಭಾಷೆ, ರಾಜ್ಯಭಾಷೆ ಹಾಗೂ ರಾಷ್ಟ್ರಭಾಷೆಗೆ ಸಮಾನ ಗೌರವಕೊಡಬೇಕು: ಟಿ.ಎಸ್. ಶಾಂತಬಾಯಿ
ಬೆಂಗಳೂರು, ಆಗಸ್ಟ್ 27, 2016: ಮಾತೃಭಾಷೆ, ರಾಜ್ಯಭಾಷೆ ಹಾಗೂ ರಾಷ್ಟ್ರಭಾಷೆಗೆ ಪ್ರತಿಯೊಬ್ಬ ನಾಗರಿಕನೂ ಸಮಾನ ಗೌರವಕೊಡಬೇಕು ಎಂದು ಹಿಂದಿ ಭಾಷಾ ತಜ್ಞೆ ಶ್ರೀಮತಿ ಟಿ.ಎಸ್. ಶಾಂತಾಬಾಯಿ ಅವರು ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಂಸ್ಥೆಯು ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸಾಹಿತ್ಯಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಹಿಂದಿ ವಿದ್ಯಾರ್ಥಿಗಳಿಗೆ ಸಿಗುವ ತೊಂದರೆಗಳನ್ನು ನಿವಾರಿಸುವತ್ತ ಸರಕಾರ ಗಮನ ಹರಿಸಬೇಕು ಎಂದು ಟಿ.ಎಸ್. ಶಾಂತಾಬಾಯಿ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀರಾಮ ಪರಿಹರ್ ಅವರು, ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ. ಭಾರತದಲ್ಲಿರುವಷ್ಟು ವೈವಿಧ್ಯತೆ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ. ಇವೆಲ್ಲವನ್ನೂ ಒಟ್ಟುಗೂಡಿಸುವ ಶಕ್ತಿ ಭಾರತಕ್ಕಿದೆ. ನೈಜ ಭಾರತೀಯ ಸಂಸ್ಕೃತಿ, ಇಲ್ಲಿಯ ಮಠಾಧೀಶರು, ಜನರ ಭಾವನೆಗಳನ್ನು ಅರಿಯಬೇಕೆಂದರೆ ಜಾನಪದ ಸಾಹಿತ್ಯದ ಅಧ್ಯಯನ ಮಾಡಬೇಕು. ಇಲ್ಲಿ ಅನೇಕ ಸಂತರು ದಕ್ಷಿಣ ಭಾರತದ ಮೂಲಕ ಭಕ್ತಿಪಂಥದ ಸಂದೇಶವನ್ನು ಜಗತ್ತಿಗೆ ಸಾರಿದರು. ಲೋಕಕಥೆ, ಲೋಕಗೀತೆ, ಲೋಕಸಾಹಿತ್ಯದ ಮೂಲಕ ಜನಪದ ಸಾಹಿತ್ಯದ ಮೂಲಕ ಭಾರತದ ವಿರಾಟ್ ದರ್ಶನವಾಗುತ್ತದೆ ಎಂದು ಅವರು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್ ಮಿಶ್ರಾ ಅವರು ಅಖೀಲ ಭಾರತೀಯ ಸಾಹಿತ್ಯ ಪರಿಷತ್ನ ಕಾರ್ಯವಿಧಾನಗಳನ್ನು ವಿವರಿಸುತ್ತಾ ರಾಷ್ಟ್ರೀಯ ಸಾಹಿತ್ಯವನ್ನು ಬೆಳೆಸುವುದು ವಿವಿಧ ಭಾಷೆಗಳ ಸಾಹಿತ್ಯದ ಬೆಳವಣಿಗೆಗಳ ಮೂಲಕ ಏಕತೆಯನ್ನು ಮೂಡಿಸುವುದೇ ಪರಿಷತ್ನ ಉದ್ದೇಶವಾಗಿದೆ. ಬೇರೆಬೇರೆ ದೇಶಗಳಲ್ಲಿ ಕೂಡಾ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯ ಗುರುನಾಥರಾವ್ ವೈದ್ಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಧರ್ ಪರಾಶಕರ್, ಹಿಂದಿ ಪ್ರಾಧ್ಯಾಪಕಿ ಡಾ. ಉಷಾ ಶ್ರೀವಾಸ್ತವ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಪ್ರೊ. ದೊಡ್ಡರಂಗೇಗೌಡ ಉಪಸ್ಥಿತರಿದ್ದರು. ಎರಡು ದಿನಗಳ ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಷೆ, ನೆಲ, ಜಲ ನಾಡು, ನುಡಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಚರ್ಚೆ ಸಂವಾದಗಳು ನಡೆಯಿತು.
ಇಂದು ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಅಜಯ್ ಕುಮಾರ್ ಸಿಂಗ್, ಆಚಾರ್ಯ ಇನ್ಸ್ಟಿಟ್ಯೂಟ್ ಆಪ್ ಗ್ರಾಜುಯೇಟ್ ಸ್ಟಡೀಸ್ನ ಪ್ರಾಂಶುಪಾಲ ಡಾ. ಗುರುನಾಥ ರಾವ್ ವೈದ್ಯ, ಲೇಖಕ ಡಾ. ಮನೋಹರ್ ಭಾರತಿ, ಹಿಂದಿ ಪ್ರಾಧ್ಯಾಪಕಿ ಡಾ. ಉಷಾ ಶ್ರೀವಾಸ್ತವ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ದೊಡ್ಡರಂಗೇಗೌಡ ಉಪಸ್ಥಿತರಿದ್ದರು.