ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮ

ಬೆಂಗಳೂರು-Jan 21: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜನವರಿ 12 ರಿಂದ ದೇಶದ್ಯಂತ ಡ್ರಗ್ಸ್, ಮದ್ಯಪಾನ, ಧೂಮಪನ ಮತ್ತು ಪರಿಸರ ಮಾಲಿನ್ಯಗಳಿಂದ ಮುಕ್ತವಾದ  ಸ್ವಚ್ಚ ವ್ಯಕ್ತಿತ್ವ –  ಸ್ವಚ್ಚ ಕ್ಯಾಂಪಸ್ ಗಳ ಮೂಲಕ ಸ್ವಚ್ಚ  ಸಮಾಜ ನಿರ್ಮಾಣ ಮಾಡಲು ಜನಜಾಗೃತಿಯ ಅಭಿಯಾನವನ್ನು ಕೈಗೊಂಡಿದೆ. ಸ್ವಾಮಿ ವಿವೇಕನಂದರ ಜಯಂತಿ ಜನವರಿ 12 ರಿಂದ ಪ್ರಾರಂಭವಾದ ಅಭಿಯಾನವು ಮಹತ್ಮಗಾಂಧಿಜೀಯವರ ಪುಣ್ಯತಿಥಿ ಜನವರಿ 30 ರ ವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು ನಡೆಯಲಿವೆ.

DSC_0094 DSC_0099

ಈ ಪ್ರಯುಕ್ತ ದಿನಾಂಕ 21-01-2015 ರಂದು ನಶಾ ಮುಕ್ತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾದಲ್ಲಿ ಹಮ್ಮಿಕೋಳ್ಳಲಾಗಿತ್ತು.

ರ‍್ಯಾಲಿಯು ಮಲ್ಲೇಶ್ವರಂನ ೧೮ನೇ ಕ್ರಾಸ್ ಅಟದ ಮೈದಾನದಿಂದ  ಸುಮಾರು 4,೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು 1553ಅಡಿ ಉದ್ದದ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೂಂಡು – ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನಕ್ಕೆ ತಲುಪಿತು. ಅನಂತರ ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿಯನ್ನು ಸ್ವಿಕರಿಸಿದರು.

ಇಂದು ದೇಶದ ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ಸಿಗರೇಟು, ಬೀಡಿ, ಗಾಂಜಾ, ಅಫಿಮು, ಡ್ರಗ್ಸ್ ಮತ್ತು ಕುಡಿತ ಇವುಗಳು ಹೆಚ್ಚಾಗುತ್ತಿವೆ. ಶೇ ೫೦ ಗಿಂತ ಹೆಚ್ಚು ಯುವಕರು ಸಿಗರೇಟು ಸೇದುತ್ತಿದ್ದಾರೆ, ಶೇ ೩ ಗಿಂತ ಹೆಚ್ಚು ಯುವಕರು ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ೧೦ ಕೋಟಿಗಿಂತ ಹೆಚ್ಚು ಜನ ತಂಬಾಕು ಸೇವನೆಯಿಂದ ರೋಗಿಗಳಾಗಿದ್ದಾರೆ. ಪ್ರಂಪಚದಲ್ಲಿ ತಂಬಾಕು ಸೇವನೆ ಮಾಡುವುದ್ದರಲ್ಲಿ ಭಾರತಕ್ಕೆ ಮೋದಲನೆ ಸ್ಥಾನವಿದೆ. ಯುವಕರು, ವಿದ್ಯಾರ್ಥಿಗಳು ಸಿಗರೇಟು ಸೇದುವುದು ಹಾಗೂ ಕುಡಿಯೋದು ಪ್ಯಾಶನ್ ಎಣದು ತಿಳಿದದ್ದಾರೆ. ಅದ್ರೆ ಬಹಳಸ್ಟು ಯುವಕರು, ವಿದ್ಯಾರ್ಥಿಗಳಿಗೆ ಸಿಗರೇಟು ಸೇದುವುದು ಹಾಗೂ ಕುಡಿತದಿಂದ ಕ್ಯಾನ್ಸರ್, ಹೃದಯಘಾತ ಅಲ್ಸರ್, ಈ ತರ ಅನೇಕ ರೋಗಗಳು ಬರುವುದು ಅವರಿಗೆ ಗೊತ್ತಿರುವುದಿಲ್ಲ ಇದರಿಂದ ನಿಷಕ್ತಿ, ನಪುಂಸಕರಾಗುತ್ತಾರೆ. ಈ ಹಿನ್ನಲೆಯಲ್ಲಿ ಯುವಕರು, ವಿದ್ಯಾರ್ಥಿಗಳು ಕುಡಿತ, ಡ್ರಗ್ಸ್. ದೂಮಪಾನಗಳಿಂದ ಹೂರಬರಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟಾನ ಕಾರ್ಯದರ್ಶಿ ಎನ್ ರವಿಕುಮಾರ್ ರವರು ಸಹಸ್ರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಡಿದರು.

ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನದಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹಮ್ಮಿಕೂಳ್ಳಾಲಾಯಿತು. ಕಾರ್ಯಕ್ರಮದಲ್ಲಿ ಎಂ.ಇ.ಎಸ್, ಎಂ.ಎಲ್.ಎ, ಹಾಗೂ ಮಹಾರಾಣಿ ಲಕ್ಷ್ಮಿ ಅಮ್ಮಣಿ ಮಹಿಳಾ ವಿಶ್ವವಿದ್ಯಾಲಯಗಳ ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಎನ್ ರವಿಕುಮಾರ್ ಹಾಗೂ ಮಲ್ಲೇಶ್ವರಂನ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಯಣರವರು ಮಾತನಾಡಿದರು.  ನಂತರ ಪ್ರತಿಜ್ಞಾವಿಧಿಯನ್ನು ಮಲ್ಲೇಶ್ವರಂನ ಸರ್ಕಾರಿ ಪದವಿ ಕಾಲೇಜಿನ ಎನ್.ಸಿ.ಸಿ ಸಂಯೋಜಕ ಸ್ವಾಮಿನಾಥನ್ ರವರು  ನೆಡೆಸಿಕೊಟ್ಟರು.

ರ‍್ಯಾಲಿಯ ಉದ್ಗಾಟನೆಯನ್ನು ಮಲ್ಲೇಶ್ವರಂನ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಯಣರವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟಾನ ಕಾರ್ಯದರ್ಶಿ ಎನ್ ರವಿಕುಮಾರ್, ಮಲ್ಲೇಶ್ವರಂನ ವಲಯ ಅಧ್ಯಕ್ಷ ಪ್ರೋ.ಶ್ರೀಧರ್, ಬೆಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿಯಾದ ಶ್ರೀಯುತ ಸಂತೋಷ್ ರೆಡ್ಡಿಯವರು ಹಾಗೂ ಬೆಂಗಳೂರು ಮಹಾನಗರ ಕಾರ್ಯದರ್ಶಿ ಹರ್ಷ ನಾರಯಣರವರ ನೇತೃತ್ವದಲ್ಲಿ  ನೆರವೆರಿಸಲಾಯಿತ್ತು.

DSC_0107 IMG-20150121-WA0023

Leave a Reply

Your email address will not be published.

This site uses Akismet to reduce spam. Learn how your comment data is processed.