Tumakuru, Karnataka: “India has IIT, IIM, IISc and other reputed institutes. Govt is spending many crores annually for such talented students. But many students look for a job abroad. They should work in India and they have to utilise their talent for this nation” said Dr Maheshappa, Vice Chancellor of reputed Sir Vishweshwaraiah Technical Institute (VTU) was the chief guest.

He was delivering key note address at PRERANA, a unique event organised by Akhil Bharatiya Vidtarthi Parishat ABVP at Akshaya Institute of Technology in Tumakuru. Noted lawyer Suvrath Kumar, Dr Shivakumar, Dr MB Manjunath, Dr Krishna Murthy, Prof Shambhu Shastri, ABVP Tumakuru City Vice President Prof Irfan and many others were present.

001

ಪ್ರತಿಭಾವಂತರೆ ಭಾರತದತ್ತ ಮುಖ ಮಾಡಿ ಡಾ| ಮಹೇಶಪ್ಪ

ತುಮಕೂರು  March : ‘ಭಾರತ ಐಐಟಿ, ಐಐಎಮ್, ಐಐಎಸ್‌ಸಿಗಳ ಮೂಲಕ ಪ್ರತಿವರ್ಷ ನೂರಾರು ಕೋಟಿ ರೂ. ಪ್ರತಿಭಾವಂತರಿಗಾಗಿ ವ್ಯಯಿಸುತ್ತಿದೆ. ಆದರೆ ಆ ವಿದ್ಯಾರ್ಥಿಗಳು ವಿದೇಶದತ್ತ ದೃಷ್ಟಿ ಹರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೆ ಮಾಡದೆ ತಮ್ಮ ಪ್ರತಿಭೆಯನ್ನು ಭಾರತಕ್ಕೆ ಬಳಸಿಕೊಳ್ಳಬೇಕು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ| ಮಹೇಶಪ್ಪ ಕರೆ ನೀಡಿದರು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತುಮಕೂರಿನ ಅಕ್ಷಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ‘ಪ್ರೇರಣಾ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸ್ವಾಮಿ ವಿವೇಕಾನಂದರು ಈ ದೇಶದ ಯುವಕರಿಗೆ ಸ್ಪೂರ್ತಿ. ಅದೇ ರೀತಿ ಈ ದೇಶದ ಇಂಜನಿಯರುಗಳಿಗೆ ಸರ್. ಎಂ. ವಿಶ್ವೇಶ್ವರಯ್ಯನವರು ಆದರ್ಶ. ವಿಶ್ವೇಶ್ವರಯ್ಯನವರು ತಮ್ಮ ಅಪೂರ್ವವಾದ ಬುಧ್ದಿ ಶಕ್ತಿಯಿಂದ ಈ ರಾಜ್ಯದ ಅನೇಕ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ನೀಡಿದರು. ಅದೇ ರೀತಿ ನಮ್ಮ ಇಂದಿನ ಇಂಜನಿಯರಿಂಗ್ ವಿದ್ಯಾರ್ಥಿಗಳು ಮಾಡುವ ಪ್ರಾಜೆಕ್ಟ್‌ಗಳು ಸಮಾಜದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವಂತವುಗಳಾಗಬೇಕು. ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲಾ ಅನುಕೂಲಗಳನ್ನು ಬಳಸಿಕೊಂಡು ದೇಶಕ್ಕೆ ಕೊಡುಗೆಯಾಗಬಲ್ಲ ಪ್ರಾಜೆಕ್ಟ್‌ಗಳನ್ನು ಮಾಡುವಲ್ಲಿ ಪ್ರಯತ್ನಿಸಬೆಕು. ಈ ರೀತೀಯ ಪ್ರೇರಣೆ ನೀಡಲು ಅಭಾವಿಪ ’ಪ್ರೇರಣಾ’ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಂಡಿಸುವ ಪ್ರಭಂದಗಳು ಉತ್ತಮ ಪ್ರಾಜೆಕ್ಟ್ ಆಗಲಿ, ಪ್ರಾಜೆಕ್ಟಗಳು ಉತ್ತಮ ಪ್ರಾಡಕ್ಟ್ ಆಗಲಿ. ಆ ಪ್ರಾಡಕ್ಟಗಳು ದೇಶಕ್ಕೆ ಕೊಡುಗೆ ನೀಡಲಿ’ ಎಂದು ಅವರು ಆಶಿಸಿದರು.

002 003

’ರೈತರ ಕಣ್ಣೀರು ಒರೆಸುವ ವಿಜ್ಞಾನ ನಮಗೆ ಬೇಕಾಗಿದೆ’ – ಎಂ. ಕೆ. ಸುವೃತ್ ಕುಮಾರ್

ಈ ಸಂದರ್ಭದಲ್ಲಿ ವಿಶೇಷ ಭಾಷಣ ಮಾಡಿದ ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಬೆಂಗಳೂರಿನ ವಿದಿಗ್ಲೋಬ್ ಲೀಗಲ್ ಸರ್ವಿಸೆಸ್ ಇಂಟೆರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ಧೇಶಕರಾದ ಎಂ. ಕೆ ಸುವೃತ್‌ಕುಮಾರ್ ಮಾತನಾಡಿ ’ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಲಕ್ಷಾಂತರ ಇಂಜಿಯರುಗಳು ತಯಾರಾಗುತ್ತಿದ್ದಾರೆ. ಆದರೆ ನಮ್ಮ ರಾಜ್ಯ ಒಂದು ಮಾದರಿ ರಾಜ್ಯ ಆಗುವುದು ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಾದರಿ ರಾಜ್ಯವಾಗಿತ್ತು. ವಿಶ್ವೇಶ್ವರಯ್ಯನವರಿಗೆ ಜನ್ಮ ನೀಡಿದ್ದ ಕರ್ನಾಟಕ ಸ್ವಾತಂತ್ರ್ಯ ನಂತರವೂ ಮಾದರಿ ರಾಜ್ಯವಾಗಬೇಕಿತ್ತು. ಆದರೆ ನಮ್ಮ ರೈತರು ಇಂದಿಗೂ ಕಷ್ಟಪಡುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ. ರೈತರ ಕಣ್ಣೀರು ಒರೆಸುವ ಕೃಷಿ ಕ್ಷೇತೃಕ್ಕೆ ಕೊಡುಗೆ ನೀಡಬೇಕಾದ ವಿಜ್ಞಾನ ನಮಗಿಂದು ಬೇಕಾಗಿದೆ’ ಎಂದರು.

‘2ನೇ ವಿಶ್ವಯುದ್ಧದಲ್ಲಿ ದ್ವಂಸಗೊಂಡ ಜಪಾನ್, ಜರ್ಮನಿಗಳು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಸಾಧನೆಗಳನ್ನು ಮಾಡಿ ಬೆಳೆದು ನಿಂತಿದೆ. ೨ನೇ ವಿಶ್ವಯುದ್ಧದಲ್ಲಿ ನಿರ್ನಾಮಗೊಂಡಿದ್ದ ಸಿಂಗಾಪೂರ ಇಂದು ದಕ್ಷಿಣ ಏಷ್ಯಾದ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಚಿಕ್ಕ ದೇಶ ಹಾಂಗ್‌ಕಾಂಗ್ ಇಂದು ಏಷ್ಯಾ ಮತ್ತು ಆಷ್ಟ್ರೇಲಿಯ ನಡುವಿನ ಮಾರುಕಟ್ಟೆಯನ್ನು ನಿಯಂತ್ರಣ ಮಾಡುತ್ತಿದೆ. ೧೯೭೦ರ ನಂತರ ಅಸ್ತಿತ್ವಕ್ಕೆ ಬಂದ ಮಿಡಿಲಿಸ್ಟ್ ಭಾರತದ ಕಾರ್ಮಿಕ ಬಲವನ್ನು ಬಳಸಿಕೊಂಡೇ ಇಂದು ಬಹಳ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಭಾರತ ಮೊದಲನೇ ಪ್ರಯತ್ನದಲ್ಲೆ ಮಂಗಳನ ಕಕ್ಷೆಗೆ ಉಪಗ್ರಹ ಕಳುಹಿಸುವಲ್ಲಿ ಯಶಸ್ವೀಯಾಯಿತು, ಚಂದ್ರಯಾನದಲ್ಲಿ, ಕ್ಷಿಪಣಿ ತಂತ್ರಜ್ಞಾನದಲ್ಲಿ, ಡಿಆರ್‌ಡಿಒದ ಮೂಲಕ ಭಾರತ ಸಾಕಷ್ಟು ಸಾಧನೆಗಳನ್ನು ಮಾಡಿದೆಯಾದರೂ ಇದಕ್ಕೂ ಮಿಗಿಲಾದ ಸಾಧನೆ ಮಾಡಲು ನಮಗೆ ಸಾಧ್ಯವಾಗಿಲ್ಲ. ನಮ್ಮ ದಾರಿಯನ್ನು ನಾವು ಮರೆತಿರುವುದರ ಪರಿಣಾಮ ಹೀಗಾಗಿದೆ. ಚೀನಾ ಇಂದು ಚೈನೀಸ್ ಭಾಷೆಯಲ್ಲೆ ಉನ್ನತ ಶಿಕ್ಷಣ ನೀಡುತ್ತಿದೆ. ಆದ್ದರಿಂದ ಜಗತ್ತಿನ ಜನ ಚೀನಿ ತಂತ್ರಜ್ಞಾನ ತಿಳಿದುಕೊಳ್ಳಲು ಚೀನಿ ಭಾಷೆಯನ್ನು ಕಲಿಯುತ್ತಿದ್ದಾರೆ. ನಮ್ಮ ದೇಶದ ಕನ್ನಡ, ತೆಲಗು, ತಮಿಳು, ಹಿಂದಿಯಲ್ಲಿ ಯಾಕೆ ಉನ್ನತ ಶಿಕ್ಷಣ ಪಡೆಯುವುದು ಸಾಧ್ಯವಾಗುತ್ತಿಲ್ಲ. ಸಾವಿರಾರು ವರ್ಷಗಳ ಹಿಂದೆ ಪುಷ್ಪಕ ವಿಮಾನದ ಕಲ್ಪನೆ ಕೊಟ್ಟಿರುವ ದೇಶ ಭಾರತ. ದಕ್ಷಿಣದ ತುದಿಯ ಧನುಷ್ಕೋಟಿಯಿಂದ ಶ್ರೀಲಂಕಾದವರೆಗೆ ಸೇತುವೆಯನ್ನು ಸಾವಿರಾರು ವರ್ಷಗಳ ಹಿಂದೆ ಭಾರತ ನಿರ್ಮಿಸಿತ್ತು. ಈ ರೀತಿಯ ಉತ್ತಮ ಕಲ್ಪನೆಗಳನ್ನು ಅಧ್ಬುತವಾದ ಕೊಡುಗೆ ನೀಡಿದ ವಿಜ್ಞಾನ ನಮ್ಮದು. ಇಂದಿನ ತರಗತಿ ಕೊಠಡಿಗಳು ಉತ್ತಮ ಕಲ್ಪನೆಗಳನ್ನು ಮೂಡಿಸುವ ಕೇಂದ್ರಗಳಾಗಬೇಕು. ಆ ಕಲ್ಪನೆಗಳು ಜಗತ್ತಿಗೆ ಬೆಳಕನ್ನು ನೀಡಬೇಕು, ರೈತನ ಆತ್ಮಹತ್ಯೆಗೆ ಪರಿಹಾರ ನೀಡಬೇಕು, ಜಗತ್ತಿನ ಅನೇಕ ದೇಶಗಳ ತಂತ್ರಜ್ಞಾನ ಕ್ಷೇತ್ರಕ್ಕೆ ಸ್ಪರ್ಧೆ ನೀಡುವ ಉತ್ತಮ ಪ್ರಾಜೆಕ್ಟಗಳಾಗಬೇಕು. ನಮ್ಮ ದೇಶದ ಸಿ. ವಿ. ರಾಮನ್, ಡಾ| ಅಬ್ದುಲ್ ಕಲಾಂ, ಸರ್ .ಎಂ. ವಿಶ್ವೇಶ್ವರಯ್ಯ, ವಿಕ್ರಮ್ ಸಾರಬಾಯ್, ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ, ಧೀರು ಬಾಯಿ ಅಂಬಾನಿ, ನಂದನ್ ನೀಲಕಣಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ಸಾಧಕರು ಗ್ರಾಮೀಣ ಭಾಗದಿಂದ ಬಂದವರು. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಈ ಪ್ರಯತ್ನವನ್ನು ಮಾಡಬೇಕು’ ಎಂದು ಅವರು ಹೇಳಿದರು.

ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ತಾಂತ್ರಿಕ ಕಾಲೇಜಿನ ಅಧ್ಯಕ್ಷರಾದ ಡಾ| ಶಿವಕುಮಾರ್ ವಹಿಸಿದ್ದರು. ಅಭಾವಿಪದ ವಿವಿದ ಚಟುವಟಿಕೆಗಳ ಕುರಿತು ಅಭಾವಿಪ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ ಮಾತನಾಡಿದರು. ಪ್ರೇರಣಾ ಕಾರ್ಯಕ್ರಮದ ಕುರಿತು ಅಭಾವಿಪ ರಾಜ್ಯ ಸಹಕಾರ್ಯದರ್ಶಿ ಅಮರೇಶ್ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎಂ.ಬಿ ಮಂಜುನಾಥ್, ನಿರ್ಧೇಶಕರಾದ ಡಾ| ಕೃಷ್ಣಮೂರ್ತಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಅಭಾವಿಪ ನಗರ ಉಪಾಧ್ಯಕ್ಷರಾದ ಪ್ರೊ| ಇರ್ಫಾನ್ ಸ್ವಾಗತಿಸಿದರು. ಅಭಾವಿಪ ನಗರ ಅಧ್ಯಕ್ಷರಾದ ವೇಣುಗೋಪಾಲ ರೆಡ್ಡಿ ಮತ್ತು ನಗರ ಕಾರ್ಯದರ್ಶಿ ಕು. ಕಾವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನ ಅವಧಿಯ ನಂತರ ನಡೆದ ತಾಂತ್ರಿಕ ಪ್ರಬಂದ ಮಂಡನೆ ಸ್ಪರ್ಧೆಯು ((Technical Paper Presentation Competition) ) ೬ ವಿಭಾಗಗಳಲ್ಲಿ ಏಕಕಾಲದಲ್ಲಿ ನಡೆದವು. ಆಯ್ದ ೮೫ ಸ್ಪರ್ಧಿಗಳಿಗೆ ತಮ್ಮ ಪ್ರಬಂಧವನ್ನು ಮಂಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಪರ್ದೆಗಳ ತೀರ್ಮಾನಕಾರರಾಗಿ ತುಮಕೂರು, ರಾಮನಗರ, ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಯ ವಿವಿದ ಇಂಜಿನಿಯರಿಂಗ್ ಕಾಲೇಜುಗಳ ೨೦ಕ್ಕೂ ಹೆಚ್ಚು ಹಿರಿಯ ಉಪನ್ಯಾಸಕರುಗಳು, ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಸ್ಪರ್ಧೆಯ ನಂತರ ’ಭಾರತಕ್ಕೆ ವಿದೇಶಿ ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆಯೆ’ ಎನ್ನುವ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂವಾದವನ್ನು ಸಿದ್ದಗಂಗಾ ತಾಂತ್ರಿಕಾ ಮಹಾವಿದ್ಯಾಲಯದ ನ್ಯಾನೋ ಟೆಕ್ನಾಲಜಿ ವಿಭಾಗ ಮುಖ್ಯಸ್ಥರಾದ ಡಾ| ಶಂಭು ಶಾಸ್ತ್ರಿ ನಡೆಸಿಕೊಟ್ಟರು. ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪ್ರೊ| ರವೀಶ್ ಮತ್ತು ಅಕ್ಷಯ ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ| ಶಿವಮೂರ್ತಿ ಕೆ. ಎಸ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಭಾವಿಪ ಜಿಲ್ಲಾ ಸಂಚಾಲಕ್ ರವಿಕುಮಾರ್, ಜಿಲ್ಲಾ ಸಹ ಸಂಚಾಲಕ್ ತೇಜಮೂರ್ತಿ, ನಗರ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ವಿದ್ಯಾರ್ಥಿ ನಾಯಕರುಗಳಾದ ದಿನೇಶ್, ಸುನಿಲ್ ಕುಮಾರ, ಪ್ರವೀಣ್, ಮಾಲ, ದೇವರಾಜ್, ಮಲ್ಲಿಕಾರ್ಜುನ್, ಮಂಜುನಾಥ್, ಜನಾರ್ಧನ್ ಉಪಸ್ಥಿತರಿದ್ದರು. ೫ ಜಿಲ್ಲೆಗಳ ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಉಪನ್ಯಾಸಕರುಗಳು ಮತ್ತು ಸ್ಪರ್ಧಿಗಳು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.