ABVP Protest at Tumkur

ABVP Protest at Tumkur
ABVP Protest at Tumkur

ತುಮಕೂರು July 17: “ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ದಿನದಿಂದ ದಿನಕ್ಕೆ ರಾಜ್ಯದಲ್ಲಿ ಅನೇಕ ರೀತಿಯ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣ ಅಮಾನುಷವಾದ್ದು, ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು. 22 ವರ್ಷದ ಸ್ನಾತ್ತಕೋತ್ತರ ವಿದ್ಯಾರ್ಥಿನಿಯನ್ನು ತನ್ನ ಗೆಳೆಯನ ಸಮ್ಮುಖದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ನಾಸೀರ್ ಹೈದರ್ನನ್ನು ಗಲ್ಲಿಗೇರಿಸಬೇಕು. ಹಾಗೂ ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಬೇಕು ಹಾಗೂ ಅತ್ಯಾಚಾರದ ಬಗ್ಗೆ ದೂರು ಕೊಟ್ಟರೂ ಕೂಡ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಉದಾಸೀನ ತೋರಿದ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ನನ್ನು ಕೇವಲ ಅಮಾನತ್ತಿನಲ್ಲಿಡದೆ ಕರ್ತವ್ಯದಿಂದ ವಜಾಮಾಡಬೇಕು. ಬೆಂಗಳೂರಿನ ಘಟನೆ, ಉಡುಪಿ ಜಿಲ್ಲೆ ಶಿರೂರಿನ ಘಟನೆ, ಬಿಜಾಪೂರ ಜಿಲ್ಲೆಯಲ್ಲಿ ರೈತರ ಮೇಲೆ ಲಾಠಿಚಾರ್ಜ, ತುಮಕೂರಿನ ಜಿಲ್ಲೆಯ ಹತ್ಯಾಳು ಪ್ರಕರಣ ಇತ್ಯಾದಿಗಳು ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗಿರುವುದಕ್ಕೆ ಹಿಡಿದ ಕೈಗನ್ನಡಿ. ಕುಂದಾಪುರ ತಾಲೂಕಿನ ಶಿರೂರಿನಲ್ಲಿ ನಡೆದ ಘಟನೆಗೆ ಸಂಭಂದಿಸಿದಂತೆ ಸರಕಾರ ಪರಿಹಾರ ಘೋಷಿಸಿತೆ ವಿನಃ ಇನ್ನೂ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗದಿದ್ದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತದೆ. ತುಮಕೂರು ಜಿಲ್ಲೆಯ ಹತ್ಯಾಳು ಘಟನೆಗೆ ಸಂಭಂದಿಸಿದಂತೆ ಸರಿಯಾದ ತನಿಖೆಯು ನಡೆಯಲೆ ಇಲ್ಲ. ಮೃತ ರೈತನ ಕುಟುಂಬಕ್ಕೆ ಅತ್ಯಂತ ಕಡಿಮೆ ಮೊತ್ತದ ಪರಿಹಾರ ನೀಡಿದೆ. ರಾಜ್ಯದ್ಯಂತ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲಾಗದ ಗೃಹ ಸಚಿವರು ತಕ್ಷಣ ರಾಜಿನಾಮಿ ನೀಡಬೇಕು” ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ತುಮಕೂರಿನಲ್ಲಿ ಆಗ್ರಹಿಸಿದರು.

ಬೆಂಗಳೂರಿನ ಅತ್ಯಾಚಾರ ಘಟನೆಗೆ ಸಂಭಂದಿಸಿದಂತೆ ರಾಜ್ಯದ್ಯಂತ ಅಭಾವಿಪದಿಂದ ಪ್ರತಿಭಟನೆ ಕರೆ ನೀಡಲಾಗಿತ್ತು. ತುಮಕೂರು ನಗರದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
”ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಟ್ಟಿದೆ. ಆದ್ದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು” ಎಂಬುದಾಗಿ ನಗರ ಸಂಘಟನಾ ಕಾರ್ಯದರ್ಶಿ ನವೀನ್ ಹೇಳಿದರು
ನಗರ ಸಹಕಾರ್ಯದರ್ಶಿ ಕು. ಕಾವ್ಯ ಮಾತನಾಡಿ ಬೆಂಗಳೂರಿನ ಇನ್ನೊಂದು ಪ್ರಕರಣದಲ್ಲಿ ಮಾರತ್ಹಳ್ಳಿ ಬಳಿಯ ತೂಬರಹಳ್ಳಿ ಸಮೀಪದ ಖಾಸಗಿ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿನಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳಿಬ್ಬರು ದುಷ್ಕೃತ್ಯ ನಡೆಸಿದ ಘಟನೆ ಹಾಗೂ ಬೈಂದೂರಿನ ಆಲಂದೂರಿನ ರತ್ನಾ ಎಂಬ ಪಿಯುಸಿ ವಿದ್ಯಾರ್ಥಿನಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹದ್ದು, ಈ ರೀತಿಯ ಪ್ರಕರಣಗಳು ಸಂಭವಿಸಿದರೂ ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಗೃಹ ಸಚಿವರು ಕೊಡುತ್ತಿರುವ ಹಾರಿಕೆಯ ಆಶ್ವಾಸನೆ ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರು ಯಾರನ್ನು ರಕ್ಷಿಸಬೇಕು! ಎನ್ನುವಂತಾಗಿದೆ ಎಂದರು
ಟೌನ್ ಹಾಲ್ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ನಾಯಕರುಗಳಾದ ಕು. ಪವಿತ್ರ, ಕು. ಮೇಘನಾ, ಕು. ಅಶ್ವಿನಿ, ಕು. ಶಿಲ್ಪ, ಕು. ಮಹಾಲಕ್ಷ್ಮೀ, ಕು. ಭವ್ಯ, ಕು. ರಂಜಿತ, ಕು. ಕಾವ್ಯ ಮುಂತಾದವರು ವಹಿಸಿದ್ದರು.

DSC_0777 DSC_0789

Leave a Reply

Your email address will not be published.

This site uses Akismet to reduce spam. Learn how your comment data is processed.