ABVP Protest at Uppinangadi

Uppinangady Karnataka July 29: Hundreds of ABVP activists protested demanding to withdraw complaint against a student Ranjith, who was allegedly trapped in a fake complaint by a Muslim Girl.

ಉಪ್ಪಿನಂಗಡಿ  July 29: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ವಾರ ನಡೆದ ವಿದ್ಯಾರ್ಥಿ ಘರ್ಷಣೆಗೆ ಸಂಬಂಧಿಸಿ ನಿರಪರಾಧಿ ವಿದ್ಯಾರ್ಥಿಯ ಮೇಲೆ ಮೊಕದ್ದಮ್ಮೆ ಹೂಡಿರುವ ಪೊಲೀಸರ ಕ್ರಮವನ್ನು ಖಂಡಿಸಿ ಹಾಗೂ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿನಿಯರ ಮೇಲಾಗುತ್ತಿರುವ ನಿರಂತರ ಕಿರುಕುಳವನ್ನು ತಡೆಯಬೇಕು ಎಂಬ ಆಗ್ರಹದೊಂದಿಗೆ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಶ್ರಯದಲ್ಲಿ ಇಂದು ಉಪ್ಪಿನಂಗಡಿಯಲ್ಲಿ ಕಾಲೇಜ್‌ ಬಂದ್‌  ಮತ್ತು ಬೃಹತ್‌ ಪ್ರತಿಭಟನೆ ನಡೆಯಿತು.

ABVP Protest at Uppinangadi
ABVP Protest at Uppinangadi

ಸ್ವಯಂ ಪ್ರೇರಣೆಯಿಂದ ತರಗತಿ ಬಹಿಷ್ಕರಿಸಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಕಾಲೇಜಿನಿಂದ ಉಪ್ಪಿನಂಗಡಿ ನಾಡ ಕಛೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಆ ಬಳಿಕ ನಾಡ ಕಛೇರಿಯ ಬಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಬಿವಿಪಿಯ ರಾಜ್ಯ ಕಾರ್ಯದರ್ಶಿ ರಮೇಶ್‌ ಕೆ. ಅವರು ಮಾತನಾಡಿದರು. ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ರಂಜಿತ್‌ ಮೆಲಿನ ಮೊಕದ್ದಮ್ಮೆಯನ್ನು ವಾಪಸು ಪಡೆಯುವಂತೆ ಅಗ್ರಹಿಸಲಾಯಿತು.

2013_7$largeimg229_Jul_2013_143244713

ಇತ್ತೀಚಿನ ಕೆಲವು ದಿನಗಳಲ್ಲಿ ಕರಾವಳಿಯ ವಿವಿಧ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿ ಸಮುದಾಯದ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಂತೆ ಅವರು ಈ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು. ಸಹಾಯಕ ಕಮಿಷನರ್‌ ಎಚ್‌.ಪ್ರಸನ್ನ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

2013_7$advtcontent129_Jul_2013_143147063

ಪ್ರತಿಭಟನೆ ಮತ್ತು ಮನವಿ ಸಲ್ಲಿಕೆಯ ಸಂದರ್ಭಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಉಪ್ಪಿನಂಗಡಿ ನಗರಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಎಬಿವಿಪಿ ಬೈಠಕ್ ನಿರ್ಣಯ : ಇನ್ನು ಮುಂದಿನ ಎರಡು ದಿನಗಲ ಕಾಲ ಶಾಂತಿಯುತ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಪ್ರಕಾರವಾಗಿ ಮಂಗಳವಾರದಿಂದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೈಗೆ ಕಪ್ಪುಪಟ್ಟಿ ಧರಿಸಿ ತರಗತಿಗೆ ಹಾಜರಾಗಬೇಕೆಂಬ ನಿರ್ಣಯನ್ನು ಬಳಿಕ ನಡೆದ ಎಬಿವಿಪಿ ಬೈಠಕ್‌ನಲ್ಲಿ ಅಂಗೀಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

COURTESY: UDAYAVANI

http://www.udayavani.com/news/336609L15-%E0%B2%89%E0%B2%AA-%E0%B2%AA-%E0%B2%A8-%E0%B2%97%E0%B2%A1-%E0%B2%8E%E0%B2%AC-%E0%B2%B5-%E0%B2%AA-%E0%B2%AC-%E0%B2%B9%E0%B2%A4–%E0%B2%AA-%E0%B2%B0%E0%B2%A4-%E0%B2%AD%E0%B2%9F%E0%B2%A8.html

Leave a Reply

Your email address will not be published.

This site uses Akismet to reduce spam. Learn how your comment data is processed.