ತುಮಕೂರು: . ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನಗೆ ನೀಡಿರುವ ಜವಾಬ್ದಾರಿ ಹಾಗೂ ಪಾರದರ್ಶಕ ನ್ಯಾಯಯುತ ಕೌನ್ಸಲಿಂಗ್ ಮೂಲಕ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟು ಹಂಚಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೋಟಿ ಕೋಟಿ ಬೆಲೆ ಬಾಳುವ ಅತ್ಯಮೂಲ್ಯ ಸಕೋಟಾ ಸೀಟುಗಳನ್ನು ವಾಪಸ್ಸು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉಳಿಸುವ ಹಾಗೂ ಗೊಂದಲ ಅಸ್ಪಷ್ಟವಾಗಿ ಕೌನ್ಸಲಿಂಗ್ ನಡೆಸುತ್ತಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.
ಅಲ್ಲದೇ ಕೆಲವು ಪ್ರತಿಷ್ಠಿತ ಕಾಲೇಜುಗಳನ್ನು ವೆಬ್ಸೈಟ್ನಲ್ಲಿ ಆisಠಿಟಚಿಥಿ ಮಾಡದೇ ವಿದ್ಯಾರ್ಥಿಗಳಿಗೆ ಕಾಲೇಜು ಆಯ್ಕೆಯಲ್ಲಿ ಕಳೆದ ಬಾರಿ ಇದ್ದ ಹಲವು ಅವಕಾಶಗಳನ್ನು ಕಡಿಮೆಗೊಳಿಸಿರುವುದು. ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ ಹೆಚ್ಚುವರಿಯಾಗಿ ೨೦,೦೦೦ ರಿಂದ ೮೦,೦೦೦ ದವರೆಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರೂ ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮೌನವಹಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ.
ರಾತ್ರೋ ರಾತ್ರಿ ಮೆಡಿಕಲ್, ಡೆಂಟಲ್ ಪಿ.ಜಿ.ಸಿ.ಇ.ಟಿ – ನ್ಯಾಯಾಂಗ ತನಿಖೆಗೆ ಆಗ್ರಹ
ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಹಾಗೂ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಜೊತೆಗೂಡಿ ಮೆಡಿಕಲ್ ಹಾಗೂ ಡೆಂಟಲ್ ಪಿ.ಜಿ.ಸಿ.ಇ.ಟಿ.ಯನ್ನು ನಡೆಸಿತು. ಎರಡು ಸುತ್ತಿನ ಔಜಿಜಿಟiಟಿe ಅouಟಿseಟiಟಿg ನಂತರ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸೀಟು ಹಂಚಿಕೆಯ ಬಗ್ಗೆ ಅನುಮಾನ ಹಾಗೂ ಅಕ್ರಮ ನಡೆದಿರುವ ಬಗ್ಗೆ ದಾಖಲೆ ನೀಡಿ ಪ್ರಭಲ ವಿರೋಧ ವ್ಯಕ್ತಪಡಿಸಿತು. ಆದ್ದರಿಂದ ತಕ್ಷಣವೇ ಔಜಿಜಿಟiಟಿe ಕೌನ್ಸಿಲಿಂಗ್ನಲ್ಲಿ ಸೀಟು ಹಂಚಿಕೆಗೆ ಮುಂದಾದಾಗ ವಿದ್ಯಾರ್ಥಿಗಳಿಗೆ ಮ್ಯಾನೇಜಮೆಂಟ್ ಪರವಾಗಿ ಸೀಟುಗಳನ್ನು ಉಳಿಸುವ ಹುನ್ನಾರ ತಿಳಿದು ಕೌನ್ಸಿಲಿಂಗಗೆ ವಿರೋಧ ವ್ಯಕ್ತಪಡಿಸಿದಾಗ ೮.೦೦ ಗಂಟೆಗೆಳ ಕಾಲ ಕೌನ್ಸಿಲಿಂಗ್ ಸ್ಥಗಿತವಾಯಿತು. ನಂತರದಲ್ಲಿ ಕೌನ್ಸಿಲಿಂಗ್ನಲ್ಲಿ ರಾತ್ರೋ ರಾತ್ರಿ ಪೊಲೀಸ್ ಹಾಗೂ ಕೆಲವು ಹೊರಗಿನ ವ್ಯಕ್ತಿಗಳ ಬಿಗಿ ಭದ್ರತೆಯಲ್ಲಿ ಆಕ್ರಮವಾಗಿ ತನಗೆ ಬೇಕಾದವರಿಗೆ ಕೌನ್ಸಿಲಿಂಗ್ನ್ನು ರಾತ್ರಿ ೧೧.೩೦ ಗಂಟೆಯಿಂದ ೪.೩೦ ಗಂಟೆಯವರೆಗೆ Pಉಅಇಖಿ ಅouಟಿseಟiಟಿg ನಡೆಸಿರುವ ಬಗ್ಗೆ ನ್ಯಾಯಾಂಗ ತನಿಖೆಗೆ ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
Uಉಅಇಖಿ ಯಲ್ಲಿ ಎರಡು ಸುತ್ತಿನ ಕೌನ್ಸಲಿಂಗ್ ಮುಗಿದರೂ ಒಂದು ಮೆಡಿಕಲ್ ಸೀಟುಗಳು ಬಂದಿಲ್ಲ, ವೈದ್ಯಕೀಯ ಶಿಕ್ಷಣ ಸಚಿವರ ಬೇಜವಬ್ದಾರಿ ಉತ್ತರಕ್ಕೆ ಖಂಡನೆ.
ಎಂ.ಬಿ.ಬಿ.ಎಸ್, ಇಂಜಿನೀಯರಿಂಗ್, ಬಿ.ಎಸ್ಸಿ (ಅಗ್ರಿ), ವೆಟರ್ನರಿ ಹೀಗೆ ಸುಮಾರು ೧ ಲಕ್ಷಕ್ಕೂ ಹೆಚ್ಚಿನ ಸೀಟುಗಳನ್ನು ಯು.ಜಿ.ಸಿ.ಇ.ಟಿ ಯಲ್ಲಿ ಹಂಚಲಾಗುತ್ತಿದೆ. ಆದರೆ ಕಳೆದ ಬಾರಿಗಿಂತ ಸುಮಾರು ೧,೬೫೦ಕ್ಕೂ ಹೆಚ್ಚು ಮೆಡಿಕಲ್ (೩೦೦ಕ್ಕೂ ಹೆಚ್ಚು ಸರ್ಕಾರಿ ಕಾಲೇಜುಗಳ) ಸೀಟುಗಳು ಈವರೆಗೂ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಸೇರಿಲ್ಲ. ಸುಮಾರು ೧ ತಿಂಗಳಾದರೂ ಏಕೆ ಸೀಟುಗಳು ಬಂದಿಲ್ಲ ಎಂಬ ಪ್ರಶ್ನೆಗೆ ಸಚಿವ ಶರಣು ಪ್ರಕಾಶ್ ಪಾಟೀಲರ ಉತ್ತರ ೨೦೦೬ ವೃತ್ತಿ ಶಿಕ್ಷಣ ಕಾಯ್ದೆ!!!, ಅಲ್ಲದೇ ಈಗಾಗಲೇ ಸರ್ಕಾರಿ ಕೋಟಾದ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ೨೦ ಸಾವಿರದಿಂದ ೧ ಲಕ್ಷದವರೆಗೆ ಹೆಚ್ಚುವರಿ ಶುಲ್ಕ ವಸೂಲಿಯನ್ನು ಕಾಲೇಜುಗಳು ಮಾಡುತ್ತಿವೆ. ಕೆಲವು ಬಡ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಕಟ್ಟಲಾಗದೆ, ಸೀಟುಗಳನ್ನು ಹಿಂತಿರುಗಿರುವ ಬಗ್ಗೆ ಹಲವಾರು ಉದಾಹರಣೆಗಳಿವೆ. ಹೀಗೆ ಎಲ್ಲ ಸಮಸ್ಯೆಗೂ ಒಂದೇ ಉತ್ತರ ನೀಡುತ್ತಿರುವ ಬೇಜವಬ್ದಾರಿ ಸಚಿವರು ಒಮ್ಮೆಯಾದರೂ ಸಿ.ಇ.ಟಿ ಸೆಲ್ ಬಳಿ ಬಂದು ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸದಿರುವುದನ್ನು ಎ.ಬಿ.ವಿ.ಪಿ. ಖಂಡಿಸುತ್ತದೆ. ಈಗಾಗಲೇ ರಾಜ್ಯಾದ್ಯಂತ ಕೆ.ಇ.ಎ.ನಲ್ಲಿ ಸೀಟು ಬ್ಲಾಕಿಂಗ್ ನಡೆಯುತ್ತ್ತಿದೆ ಎಂದು ಅರೋಪಗಳಿದ್ದು, ವಿದ್ಯಾರ್ಥಿಗಳಿಗೆ ಔಠಿಣioಟಿ ಇಟಿಣಡಿಥಿ ಗೆ ೨ನೇ ಸುತ್ತಿನಲ್ಲಿ ಅವಕಾಶ ನೀಡದೆ ದಿಢೀರ್ ಕೌನ್ಸಲಿಂಗ್ ಮುಗಿಸಿದ್ದು, ಪ್ರತಿಷ್ಠಿತ ಕಾಲೇಜುಗಳ ಸೀಟುಗಳನ್ನು ಆisಠಿಟಚಿಥಿ ಮಾಡಲಾಗಿಲ್ಲ ಎಂಬುದರ ಬಗ್ಗೆ ಎರಡು ವರ್ಷಗಳಿಂದ ಎಬಿವಿಪಿ ಆರೋಪಿಸುತ್ತಾ ಬಂದಿದೆ. ಆದ್ದರಿಂದ ಎಲ್ಲಾ ಪ್ರಕ್ರಿಯೆಗಳನ್ನು ಔಟಿಟiಟಿe ಬದಲು ಔಜಿಜಿಟiಟಿe ಪ್ರಕ್ರಿಯೆಗಳ ಮೂಲಕ ಪಾರದರ್ಶಕವಾಗಿ ನಡೆಸಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.
ಆರ್ಯುವೇದಿಕ ಕೌನ್ಸಿಲಿಂಗ್ ವಿಳಂಬದಿಂದ ಖಾಸಗಿ ಕಾಲೇಜುಗಳಿಗೆ ಲಾಭ
ಪ್ರಸ್ತುತ Uಉಅಇಖಿ ಕೌನ್ಸಿಲಿಂಗ್ ಮುಗಿಯುವ ಅಂತದಲ್ಲಿದರೂ, ಆರ್ಯುವೇದಿಕ್ ಕೌನ್ಸಿಲಿಂಗ್ ದಿನಾಂಕ ನಿಗದಿಯಾಗದೇ ಇರುವುದರಿಂದ ಆರ್ಯುವೇದ ಪ್ರವೇಶ ಭಯಸುವ ವಿದ್ಯಾರ್ಥಿಗಳು ಪ್ರಸ್ತುತ ಪಡೆದಿರುವ ಸೀಟುಗಳನ್ನು ಹಿಂದಿರುಗಿಸುತ್ತಾರೆ. ಆದ್ದರಿಂದ ಪ್ರಸ್ತುತ ಪಡೆದಿರುವ ಅಮೂಲ್ಯವಾದ ಸೀಟುಗಳು ಇತರೆ ವಿದ್ಯಾರ್ಥಿಗಳಿಗೂ ದೊರೆಯದೇ ಬ್ಲಾಕ್ ಆಗಿರುತ್ತವೆ. ನಂತರದಲ್ಲಿ ನೇರವಾಗಿ ಮೆನೆಜ್ಮೆಂಟಗೆ ಲಭ್ಯವಾಗಿ ಕೋಟಿ ಕೋಟಿಗೆ ಮಾರಾಟವಾಗುತ್ತ್ತದೆ. ಆದ್ದರಿಂದ ಆರ್ಯುವೇದ ಕೌನ್ಸಿಲಿಂಗ್ ತಕ್ಷಣವೇ ಪ್ರಾರಂಭೀಸಬೇಕು ಎಂದು ಎ.ಬಿ.ವಿ.ಪಿ. ಆಗ್ರಹಿಸುತ್ತಿದೆ.
ಸಪ್ಲೆಮೆಂಟಿರಿ ಪಾಸಾದ ವಿದ್ಯಾರ್ಥಿಗಳಿಗೆ ಸರಕಾರಿ ಸೀಟುಗಳು ನೀಡಬೇಕು
Uಉಅಇಖಿ ಯಲ್ಲಿ ಉಳಿಯುವ ಸರ್ಕಾರಿ ಪಾಲಿನ ಸೀಟುಗಳನ್ನು ಸಪ್ಲೆಮೆಂಟಿರಿ ಪಾಸಾದ ವಿದ್ಯಾರ್ಥಿಗಳಿಗೆ ನೀಡಬೇಕು. ಕಳೆದ ಬಾರಿಯಂತೆ Uಉಅಇಖಿ ಯಲ್ಲಿ ಉಳಿಯುವ ಸಾವಿರಾರು ಅಮೂಲ್ಯವಾದ ಸೀಟುಗಳನ್ನು ಸಪ್ಲೆಮೆಂಟರಿ ವಿದ್ಯಾರ್ಥಿಗಳ ಫಲಿತಾಂಶವನ್ನು ತುರ್ತಾಗಿ ಪ್ರಕಟಿಸಿ ಕಳೆದ ಬಾರಿಯಂತೆ ಬಡ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತಾ, ಯಾವುದೇ ರೀತಿಯಿಂದಲೂ ಮ್ಯೆನೇಜ್ಮೆಂಟ್ಗಳಿಗೆ ಸರ್ಕಾರಿ ಸೀಟುಗಳನ್ನು ಹಿಂದಿರುಗಿಸಬಾರದೆಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ
ಬಿ.ಎಸ್ಸಿ.(ಅಗ್ರೀ), ವೆರ್ಟನರಿ(ಪಶು ವೈಧ್ಯ), ತೋಟಗಾರಿಕಾ ಸೀಟುಗಳನ್ನು ಹೆಚ್ಚಿಸಬೇಕು
ಕರ್ನಾಟಕದಲ್ಲಿ ಇತ್ತೀಚೆಗೆ ಇಂಜನೀಯರಿಂಗ್ ಗಿಂತಲೂ ಹೆಚ್ಚಿನ ಬೇಡಿಕೆ ಬಿ.ಎಸ್ಸಿ.(ಅಗ್ರೀ), ವೆಟನರಿ(ಪಶು ವೈಧ್ಯ), ತೋಟಗಾರಿಕೆ ಕೋರ್ಸಗಳಿಗೆ ಲಭ್ಯವಾಗಿದ್ದು. ಅಲ್ಲದೇ ಕರ್ನಾಟಕದಲ್ಲಿ ಈ ಕೋರ್ಸ್ಗಳು ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಲಭ್ಯವಿದ್ದು ಬಡ ವಿದ್ಯಾರ್ಥಿಗಳು ಹೆಚ್ಚಿನ ಹಣ ನೀಡಿ ಹೊರ ರಾಜ್ಯಗಳಿಗೆ ಹೋಗಲು ಕಷ್ಟವಾಗಿರುವುದರಿಂದ ಅಲ್ಲದೇ ವಿದ್ಯಾರ್ಥಿಗಳಿಂದ ಹೆಚ್ಚಿನ ಬೇಡಿಕೆಯಿರುವುದರಿಂದ ಕೂಡಲೇ ಸರ್ಕಾರ ಸೀಟುಗಳನ್ನು ಹೆಚ್ಚುಗೊಳಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಎ.ಬಿ.ವಿ.ಪಿ. ಆಗ್ರಹಿಸುತ್ತದೆ.
ರಾಷ್ಟ್ರದಲ್ಲಿಯೇ ಮಾದರಿ ಸಿ.ಇ.ಟಿ ಯನ್ನು ನಡೆಸುತ್ತಿದ್ದ ಕರ್ನಾಟಕ ಇಂದು ಹಲವು ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಗೊಂದಲ ಹಾಗೂ ವಂಚನೆಯನ್ನು ಮಾಡುತ್ತಿರುವದನ್ನು ಅಲ್ಲದೇ ರಾಜ್ಯ ಸರಕಾರ ಖಾಸಿಗಿಯವರೊಂದಿಗೆ ಒಳ ಒಪ್ಪಂದದ ರೀತಿಯಲ್ಲಿ ವರ್ತಿಸಿತ್ತಿರುವದನ್ನು ನಿಲ್ಲಿಸಿ ಬಡ ವಿದ್ಯಾರ್ಥಿಗಳ ಪರ ನಿಲ್ಲಲು ಈ ಕೆಳಗಿನ ಬೇಡಿಕೆಗಳೊಂದಿಗೆ ಎ.ಬಿ.ವಿ.ಪಿ. ಅಗ್ರಹಿಸುತ್ತದೆ.
ಬೇಡಿಕೆಗಳು:-
೧. ಅಕ್ರಮವಾಗಿ ರಾತ್ರೋರಾತ್ರಿ ಮೆಡಿಕಲ್ Pಉಅಇಖಿ ನಡೆಸಿರುವ ಹಾಗೂ ಖಾಸಗಿ ಕಾಲೇಜುಗಳಿಗೆ ಅತ್ಯಮೂಲ್ಯ ಸೀಟುಗಳನ್ನು ಹಿಂದಿರುಗಿಸಿರುವ ಬಗ್ಗೆ ಸಮಗ್ರ ತನಿಖೆಗೆ ಸರ್ಕಾರ ಮುಂದಾಗಬೇಕು.
೨. ಕಟ್ಟ ಕಡೆಯ ಅಂತಕ್ಕೆ ಕೌನ್ಸಿಲಿಂಗಗೆ ಬಂದರೂ ಸಹ ಕಳೆದ ಬಾರಿಗಿಂತ ಸುಮಾರು ೧೬೫೦ಕ್ಕೂ ಹೆಚ್ಚಿನ ಮೆಡಕಲ್ ಸೀಟುಗಳು ಪ್ರಕಿಯೆಯಲ್ಲಿ ಬಂದಿಲ್ಲ, ಆದ್ದರಿಂದ ಎಲ್ಲಾ ಮೆಡಿಕಲ್ ಸೀಟುಗಳನ್ನು ತಕ್ಷಣವೇ ಸಿ.ಇ.ಟಿ.ಯ ೧೭-೦೪-೨೦೧೪ ರ ಸುತ್ತಿನಲ್ಲಿ ಸೇರಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಔಠಿಣioಟಿ eಟಿಣಡಿಥಿ ಗೆ ಹೆಚ್ಚಿನ ಅವಕಾಶವನ್ನು ನೀಡಬೇಕು.
೩. ಎಲ್ಲಾ ಕೌನ್ಸಿಲಿಂಗ್ನಲ್ಲಿಯೂ ವಿದ್ಯಾರ್ಥಿಗಳ ಪರವಾದ oಜಿಜಿಟiಟಿe ಕೌನ್ಸಿಲಿಂಗ್ ನಡೆಸಬೇಕು.
೪. ಸರ್ಕಾರಿ ಕೋಟಾದ ಸೀಟು ಪಡೆದ ವಿದ್ಯಾರ್ಥಿಗಳಿಗೆ ಆಕ್ರಮವಾಗಿ ಹೆಚ್ಚುವರಿ ೨೦,೦೦೦ ರಿಂದ ೮೦,೦೦೦ ದವರೆಗೆ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
೫. ಆರ್ಯವೇದಿಕ್ ಕೌನ್ಸಿಲಿಂಗ್ಗನ್ನು ತಕ್ಷಣವೇ ಪ್ರಾರಂಭಿಸಿ ಖಾಸಗಿ ಕಾಲೇಜುಗಳಿಗೆ ಎಂ.ಬಿ.ಬಿ.ಎಸ್. ಸೀಟುಗಳ ಹಿಂದಿರುಗಿಸುವುದನ್ನು ತಡೆಗಟ್ಟಬೇಕು.
೬. ಕಳೆದ ಬಾರಿಯಂತೆ Uಉಅಇಖಿ ಉಳಿದ ಇಂಜಿನಿಯರಿಂಗ್ ಸೀಟುಗಳನ್ನು ಸಪ್ಲಿಮೆಂಟರಿ ಪರೀಕ್ಷೆ ಫಲಿತಾಂಶ ತುರ್ತಾಗಿ ನೀಡಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ನೀಡಬೇಕು.
ಶಿವಕುಮಾರ ಸ್ವಾಮೀ ವೃತ್ತದ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಸಹ ಕಾರ್ಯದರ್ಶಿ ಶ್ರೀ ಅಮರೇಶ್ ಮಾತನಾಡಿದರು. ನಗರ ಸಹ ಕಾರ್ಯದರ್ಶಿ ಕು. ಕಾವ್ಯ, ನಗರ ಸಂಘಟನಾ ಕಾರ್ಯದರ್ಶಿ ನವೀನ್, ವಿದ್ಯಾರ್ಥಿ ನಾಯಕರುಗಳಾದ ಮಂಜುನಾಥ, ರಂಗನಾಥ, ಚಿದಾನಂದ, ಗಿರೀಶ್, ಮನೋಹರ್ ಪವನ್ ಮೊದಲಾದವರು ನೇತೃತ್ವ ವಹಿಸಿದ್ದರು.
ವಂದನೆಗಳೊಂದಿಗೆ,
ರವಿಕುಮಾರ್ ಜಿಲ್ಲಾ ಸಂಚಾಲಕ್ ಅಭಾವಿಪ ತುಮಕೂರು