
ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ ರೇಶಮ್ ಬಾಗ್ ನ ಸ್ಮೃತಿಭವನದಲ್ಲಿ ಉದ್ಘಾಟನೆಗೊಂಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಖಿಲ ಭಾರತೀಯ ಪ್ರತಿನಿಧಿ ಸಭಾ – 2024ನ್ನು ಉದ್ಘಾಟಿಸಿದರು.

ಈ ವರ್ಷದ ಸಭೆಯನ್ನು ಮಾರ್ಚ್ 15-17 ರವರೆಗೆ ನಾಗ್ಪುರದ (ಮಹಾರಾಷ್ಟ್ರ) ರೇಶಿಮ್ ಬಾಗ್ ನ ಸ್ಮೃತಿಭವನದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ 45 ಪ್ರಾಂತಗಳಿಂದ 1500 ಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದಾರೆ.

