ಸಮಾಲ್ಖಾ: ಗ್ರಾಹಕ್ ಪಂಚಾಯತ್ ಇಡೀ ಆರ್ಥಿಕ ಜಗತ್ತಿನಲ್ಲಿ ಗ್ರಾಹಕರ ಹಿತ ಚಿಂತನೆ ಮಾಡುವ ಸಂಸ್ಥೆಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಹರಿಯಾಣ ರಾಜ್ಯದ ಪಾನಿಪತ್ ಜಿಲ್ಲೆಯ ಸಮಲ್ಖಾದಲ್ಲಿ ಸೆಪ್ಟೆಂಬರ್  09 ಹಾಗೂ 10 ರಂದು ಎರಡು ದಿನಗಳ ಕಾಲ ನಡೆದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನ ಸ್ವರ್ಣ ಜಯಂತಿ ವರ್ಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಕುಮಾರ್ ಮಿಶ್ರ ಅವರು ಗ್ರಾಹಕ ಪಂಚಾಯಿತ್ ನ ಶೋಷಣೆ ಮುಕ್ತ ಸಮಾಜದ ನಡೆಯನ್ನು ಅಭಿನಂದಿಸಿದರು. ಭಾರತದಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವಲ್ಲಿ ಕಾರಣೀಭೂತವಾಗಿರುವ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, 50 ವರ್ಷಗಳು ನಡೆದು ಬಂದ ಹಾದಿಯನ್ನು ಹಾಗೂ ರಾಷ್ಟ್ರಮಟ್ಟದ ಸಂಘಟನೆಯಾಗಿ ಸಮಾಜದಲ್ಲಿ ಗ್ರಾಹಕರಿಗೋಸ್ಕರ ಸೇವೆ ಸಲ್ಲಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತದಿಂದ ಪ್ರತಿ ಗ್ರಾಹಕನ ಹಕ್ಕುಗಳ ಕುರಿತು ತಿಳಿಸುವ ‘ಗ್ರಾಹಕನೇ ರಾಜ’ ಎಂಬ ಪುಸ್ತಕದ ಬಿಡುಗಡೆ ಮಾಡಲಾಯಿತು. ಕರ್ನಾಟಕದ ಹಲವು ಜಿಲ್ಲೆಗಳಿಂದ ಪದಾಧಿಕಾರಿ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನದ ಅವಧಿಯನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಣೆಯಾಗಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಪ್ರಮುಖರು ತಿಳಿಸಿದರು. ಕರ್ನಾಟಕ ಪ್ರಾಂತದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷ ನರಸಿಂಹ ನಕ್ಷತ್ರಿ ಯವರು ಪ್ರಾಂತ ಮಟ್ಟದ ABGP ಸ್ವರ್ಣ ಜಯಂತಿ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವಶಿಲ್ಪದಲ್ಲಿ ನಡೆಯಲಿದೆ ಎಂದು ತಿಳಿದ್ದಾರೆ.

ಗ್ರಾಹಕ ಶಕ್ತಿ ರಾಷ್ಟ್ರ ಶಕ್ತಿ ಯಾಗಿದ್ದು ಆನ್ ಲೈನ್ ನಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸದಸ್ಯತ್ವವನ್ನು ಪಡೆಯಲು ಈ ಕೆಳಗೆ ನೀಡಿದ ಲಿಂಕ್ ಒತ್ತಿ.
https://pages.razorpay.com/ABGPmembership

Leave a Reply

Your email address will not be published.

This site uses Akismet to reduce spam. Learn how your comment data is processed.