
ದತ್ತ ಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡುವಂತೆ ಮಾನ್ಯ ಹೈಕೋರ್ಟ್ ಆದೇಶವನ್ನು ಬಜರಂಗದಳ ಸ್ವಾಗತಿಸುತ್ತದೆ ಮತ್ತು ಶೀಘ್ರವಾಗಿ ಅರ್ಚಕರನ್ನು ನೇಮಕ ಮಾಡಬೇಕಾಗಿ ಸರ್ಕಾರಕ್ಕೆ ಆಗ್ರಹ ಮಾಡುತ್ತದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕರಾದ ಕೆ.ಆರ್. ಸುನಿಲ್ ತಿಳಿಸಿದ್ದಾರೆ
ಮಾನ್ಯ ಹೈಕೋರ್ಟ್ ಹಿಂದೂಗಳ ಬಹು ದಿನಗಳ ಬೇಡಿಕೆ ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಆದೇಶ ಹೊರಡಿಸಿರುವುದನ್ನು ಬಜರಂಗದಳ ಸ್ವಾಗತಿಸುತ್ತದೆ.ನಮ್ಮ ಹಿಂದೂ ದೇವರನ್ನು ಪೂಜೆ ಮಾಡಲು ಹಿಂದುಗಳಿಗೆ ಅವಕಾಶ ಇಲ್ಲದಂತಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಆದ ಮೊಸವೇ ಸರಿ.ಅದನ್ನು ಸರಿ ಪಡಿಸಲು ಮಾನ್ಯ ಹೈಕೋರ್ಟ್ ತೀರ್ಪು ಮೊದಲ ಹೆಜ್ಜೆ ಆಗಿದೆ. ಈ ತೀರ್ಪು ವಿಶ್ವ ಹಿಂದೂ ಪರಿಷದ್ ,ಬಜರಂಗದಳ ಹೋರಾಟಕ್ಕೆ ಸಂದ ಜಯ. ತಕ್ಷಣ ರಾಜ್ಯ ಸರ್ಕಾರ ಮಾನ್ಯ ಹೈಕೋರ್ಟ್ ಆದೇಶವನ್ನು ಪಾಲಿಸಿ ದತ್ತ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಬೇಕಾಗಿ ಆಗ್ರಹ ಮಾಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೆ ಆರ್ ಸುನಿಲ್ ತಿಳಿಸಿದ್ದಾರೆ.
