VHP protested at Mulabaagilu taluk, Karnataka

Vishwa Hindu Parishat Mulabagilu unit demanded ban on KFD and staged a protest. VHP-Bajarangadal jointly requested Chief Minister of Karnataka to ban KFD. Below given the full text of the request letter.

VHP protested at Mulabaagilu taluk, Karnataka

ರವರಿಗೆ, ಮಾನ್ಯ ಶ್ರೀ ಮುಖ್ಯಮಂತ್ರಿಗಳು. ಕರ್ನಾಟಕ ಸರ್ಕಾರ.

ಮುಖಾಂತರ,

ತಾಲ್ಲೂಕು ದಂಡಾಧಿಕಾರಿಗಳು. ಮುಳಬಾಗಲು.

ವಿಷಯ: ಕೆ.ಎಫ್.ಡಿ ಸಂಘಟನೆ ನಡೆಸಿದ ಕೃತ್ಯಕ್ಕೆ ಖಂಡನೆ ಮತ್ತು ನೀಷೆಧಕ್ಕೆ ಒತ್ತಾಯ

ಭಾರತ ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಗೆ ಎಲ್ಲಾ ಸಮುದಾಯಗಳ ಮತ್ತು ಧರ್ಮಗಳ ಸಹಜ ನೆಮ್ಮದಿಯ ಜೀವನಕ್ಕೆ ನಮ್ಮ ರಾಜ್ಯ ಅತ್ಯುತ್ತಮ ಎಂದು ಖ್ಯಾತಿಯನ್ನು ಪಡೆದುಕೊಂಡಿದೆ. ಕೆ.ಎಫ್.ಡಿ ಎಂಬ ಸಮಾಜಘಾತುಕ ಸಂಘಟನೆಯ ಕಾರ್ಯಕರ್ತರು ಮೈಸೂರಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಾದ ಸುಧೀಂದ್ರ ಮತ್ತು ವಿಘ್ನೆಶ್ ಎಂಬವರನ್ನು ಹಣಕ್ಕಾಗಿ ಅಪಹರಿಸಿ ಚಿಕ್ಕಬಳ್ಳಾಪುರ ಸಮೀಪ ಬರ್ಬರವಾಗಿ ಕೋಲೆ ಮಾಡಿರುವುದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳವು ಉಗ್ರವಾಗಿ ಖಂಡಿಸುತ್ತದೆ.

ಆದರೇ ಇತ್ತೀಚಿಗೆ ನಮ್ಮ ರಾಜ್ಯ ಹಾಗೂ ತಾಲ್ಲೂಕಿನಲ್ಲಿ, ನಡೆದ ಕೆಲವು ಘಟನೆಗಳು ಮತ್ತು ನಡೆಯುತ್ತಿರುವ ಚಟುವಟಿಕೆಗಳು ರಾಜ್ಯದ ಹಾಗೂ ತಾಲ್ಲೂಕಿನ ನಾಗರೀಕ ಸಮಾಜವನ್ನು ಬೆಚ್ಚಿಬೀಳುಸುತ್ತಿದೆ ರಾಷ್ಟ್ರ ವಿರೋಧಿ ಹಾಗೂ ಸಮಾಜಗಾತಕ ಶಕ್ತಿಗಳು ಪಾಕಿಸ್ತಾನ, ಆಪ್ಘಾನಿಸ್ಥಾನ, ಮಾನವ ವಿರೋಧಿ ಜಿಹಾದಿ ಗುಂಪುಗಳ ಉನ್ಮಾದ, ಹುಚ್ಚಾಟಗಳಿಂದ ಪ್ರೇರಣೆ ಪಡೆದು ರಾಷ್ಟ್ರ ಮತ್ತು ನಾಗರೀಕ ಸಮಾಜದ ನೆಮ್ಮದಿಯ ಜೀವನಕ್ಕೆ ಭಂಗವನ್ನು ಉಂಟುಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಕೃತ್ಯಗಳನ್ನು ಬೇರು ಮಟ್ಟದಿಂದ ದಮನಿಸಲು ಈಗಿನಿಂದಲೇ ಪ್ರಯತ್ನಿಸದಿದ್ದರೆ ರಾಜ್ಯ ಹಾಗೂ ತಾಲ್ಲೂಕು ಕೇರಳದ ಮಲ್ಲಪುರಂನಂತೆ ಹಿಂಸಾಗ್ರಸ್ತ ಪ್ರದೇಶಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ .

ಇತ್ತೀಚೆಗೆ ನಡೆದ ಘಟನೆಗಳು ಮತ್ತು ಬೇಡಿಕೆಗಳು.

೧) ಮುಳಬಾಗಲು ತಾಲ್ಲೂಕಿನ ನಂಗಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಮುಸ್ಲಿಂ ವಿದ್ಯಾರ್ಥಿನಿಯೊಂದಿಗೆ ಕೋಲಾರದ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಪರಸ್ಪರ ಮಾತನಾಡಿದ ಹುಡುಗ ಹಿಂದು ಎನ್ನುವ ಒಂದೇ ಕಾರಣಕ್ಕಾಗಿ ಆ ಹುಡುಗನನ್ನು ಜಿಹಾದಿಗಳ ಗುಂಪು ಅಪಹರಿಸಿ ಚಿಕ್ಕಬಳ್ಳಾಪುರಕ್ಕೆ ಹೋಗುವ ರಸ್ತೆಯ ಮನೆಯಲ್ಲಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದು ಮತ್ತು ಸಜೀವವಾಗಿ ಸಮಾಧಿ ಮಾಡಲು ಪ್ರಯತ್ನಿಸಿದ್ದು  ಪೊಲೀಸರ ಸಕಾಲಿಕ ಕ್ರಮದಿಂದ ಆ ಹುಡುಗನ ಪ್ರಾಣ ಉಳಿದಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

೨) ಮುಳಬಾಗಲು ಪಟ್ಟಣದ ಬೋವಿನಗರದ ಗಂಗಮ್ಮನ ಜಾತ್ರೆಯ ಸಂಜೆ ಸಂಗೀತ ಕಾರ್ಯಕ್ರಮದ ಮೇಲೆ ಜಿಹಾದಿಗಳು ಮಹಿಳೆಯರು ಹಾಗೂ ಮಕ್ಕಳ ಮೇಲೆ ಕಲ್ಲುತೂರಾಟ ನಡೆಸಿ ಗಾಯಗೊಳಿಸಿ ಆಕ್ರಮಣ ಮಾಡಿದರು.

೩) ಮುಳಬಾಗಲು ಪಟ್ಟಣದಲ್ಲಿ ಅನೇಕ ಮುಸ್ಲಿಂ ಯುವಕರು ಏ.ಈ.ಆ,  S.ಆ.P.I ಹಾಗೂ ಪಾಪುಲರ್ ಫ್ರೇಂಟ್ ಆಪ್ ಇಂಡಿಯಾ ಮುಂತಾದ  ಜಿಹಾದಿ ಗುಂಪುಗಳು ನೀಡುವ ತರಬೇತಿಯಿಂದ ಪ್ರೇರಿತರಾಗಿ ಭಯೋತ್ಫಾದಕ ಕೃತ್ಯಗಳಲ್ಲಿ ಸಹಭಾಗಿಗಳಾಗುತ್ತಿದ್ದಾರೆ. ಈಗ ನಡೆದಿರುವ ನಡೆಯುತ್ತಿರುವ ಚಟುವಟಿಕೆಗಳಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ತಾಲ್ಲೂಕು ನೆಮ್ಮದಿಯ ಸಹಬಾಳ್ವಗೆ ಸಂಚಕಾರ ಬರುವುದರಲ್ಲಿ ಯಾವುದೇ ಸಂಶಯವಿಲ, ಈಗಿನಿಂದಲೇ ನಿಗಾವಹಿಸುವುದು ಅನಿವಾರ್ಯ.

೪) ಹುಣಸೂರಿನಲ್ಲಿ ನಡೆದಿರುವ ಜೋಡಿ ವಿದ್ಯಾರ್ಥಿಗಳ ಅಪಹರಣ ಮಾಡಿ ನಂತರ ಬರ್ಬರವಾಗಿ ಕೊಲೆಮಾಡಿರುವ ಜಿಹಾದಿಗಳ ಸಂಘಟನೆ ಏ.ಈ.ಆ (ಕರ್ನಾಟಕ ಪೊರೊಂ ಪಾರ್ ಡಿಗ್ನಿಟಿ) ರಾಷ್ಟ್ರ ವಿರೋದಿ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗುವುದರಿಂದ  ಈ ಸಂಘಟನೆಯನ್ನು ನಿಷೇಧಿಸಿ ಕೊಲೆಗಾರರಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿ ಉಗ್ರವಾಗಿ ಆಗ್ರಹಿಸುತ್ತದೆ.

೫) ಮುಳಬಾಗಲು ಪಟ್ಟಣದಲ್ಲಿ ಹೊರ ರಾಜ್ಯಗಳ ಜಿಹಾದಿ ಸಂಘಟನೆಗಳ ಅನೇಕ ಕಾರ್ಯಕರ್ತರು ನೆಲೆಯೂರಿ ಭಯೋತ್ಫಾದಕ ಚಟುವಟಿಕೆಗಳನ್ನು ತೀರ್ವಗೊಳಿಸಿದ್ದಾರೆ, ಮುಳಬಾಗಿಲಿನಲ್ಲಿ ಅಶಾಂತಿಯನ್ನು ಉಂಟುಮಾಡುತ್ತಿರುವ ಎಲ್ಲಾ ಜಿಹಾದಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಗಡಿಪಾರು ಮಾಡಿ.

೬) ಪೊಲೀಸರ ನಿಗಾ ಘಟಕಗಳನ್ನು ಹೆಚ್ಚಿಸಿ.

ಇಂತಿ ತಮ್ಮ ವಿಶ್ವಾಸಿ.

ಚಲಪತಿ

ಬಜರಂಗದಳ ಜಿಲ್ಲಾ ಸಹ ಸಂಚಾಲಕರು.

ಕೋಲಾರ ಜಿಲ್ಲೆ.

Leave a Reply

Your email address will not be published.

This site uses Akismet to reduce spam. Learn how your comment data is processed.