
ಮಂಗಳೂರು: ಅಳಿಕೆ ಪದವಿಪೂರ್ವ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬನ್ನಂಗಳ ನಾರಾಯಣ ರಾವ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪವನ್ನು ಸೂಚಿಸಿದೆ.
ಆರ್ ಎಸ್ ಎಸ್ ಸಂತಾಪ ಸಂದೇಶ
ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ
ಭಾವಪೂರ್ಣ ಶ್ರದ್ಧಾಂಜಲಿ
ಶ್ರೀ ಬನ್ನಂಗಳ ನಾರಾಯಣ ರಾವ್
ಪ್ರತಿಷ್ಠಿತ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ಮಡಿಯಾಲ ನಾರಾಯಣ ಭಟ್ ಅವರೊಡಗೂಡಿ ಸಂಸ್ಥೆಯ ಆರಂಭ ಹಾಗೂ ಬೆಳವಣಿಗೆಗೆ ಕಾರಣಕರ್ತರಾದ ಹಿರಿಯ ಶಿಕ್ಷಣ ತಜ್ಞರಾದ ಶ್ರೀ ಬನ್ನಂಗಳ ನಾರಾಯಣ ರಾವ್ ಅವರ ನಿಧನದ ವಾರ್ತೆ ಅತೀವ ದುಃಖನ್ನುಂಟುಮಾಡಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೇಷ್ಠ ಶಿಕ್ಷಕರಾದ ನಾರಾಯಣ ರಾವ್ ಅವರು ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿಯಾಗಿ, ಶ್ರೀ ಸತ್ಯಸಾಯಿ ಲೋಕಸೇವಾ ಪಿ.ಯು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ,
ಪ್ರಶಾಂತಿ ನಿಲಯದ ಹಾಸ್ಟೆಲ್ ಗಳ ನಿಲಯಪಾಲಕರಾಗಿ ಶಿಕ್ಷಣ ಲೋಕಕ್ಕೆ ಅನನ್ಯ ಸೇವೆಯನ್ನು ಸಲ್ಲಿಸಿದ್ದರು.
ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಶಿಷ್ಯವೃಂದಕ್ಕೆ ನೀಡಲಿ ಮತ್ತು ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
ಜಿ ಎಸ್ ಉಮಾಪತಿ
ಪ್ರಾಂತ ಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ
ಕರ್ನಾಟಕ ದಕ್ಷಿಣ
10.01.2024