ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆಹಳ್ಳಿ ಮತ್ತು ಇಟ್ಟಮಡು ಸುತ್ತಮುತ್ತಲಿನ ಜನವಸತಿ ಪ್ರದೇಶಗಳು ಜಲಾವೃತವಾಗಿ, ಜನರು ಸಂಕಷ್ಟಕೊಳಗಾಗಿದ್ದರು. ಹಾನಿಗೊಳಗಾದ ಜನವಸತಿ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಲ್ಲಿನ ಜನರ ರಕ್ಷಣೆ ಮಾಡಿದರು. ರಾತ್ರಿ ಮನೆಗಳು ಜಲಾವೃತವಾದ್ದರಿಂದ ಆಹಾರ ಪದಾರ್ಥಗಳ ಕೊರತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಆರೆಸ್ಸೆಸ್ ಕಾರ್ಯಕರ್ತರು ಆಹಾರ ಮತ್ತು ಶಿಶುಗಳಿಗೆ ಹಾಲು ವಿತರಣೆ ಮಾಡಿದರು. ಇಂದು ಬೆಳಗ್ಗೆಯೂ ಉಪಾಹಾರದ ಸಂತ್ರಸ್ತ ಕುಟುಂಬಗಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.
50 ಸ್ವಯಂಸೇವಕರು ಭಾಗವಹಿಸಿದ ಈ ಸೇವಾಕಾರ್ಯದಲ್ಲಿ ಸುಮಾರು 1500 ರಷ್ಟು ಆಹಾರದ ಪೊಟ್ಟಣಗಳನ್ನು ಮತ್ತು 200 ಲೀಟರ್ ಗಳಷ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪ್ರವಾಹದ ನೀರಿನಿಂದ ಮಲಿನವಾಗಿದ್ದ ಸುಮಾರು 50 ಮನೆಗಳನ್ನು ಸ್ವಚ್ಛ ಮಾಡಲಾಯಿತು.