RSS Sarasanghachalak addressing. To his right M Venkataramu, RSS Pranth Sanghachalak and to his left Dr BN Gangadhar, RSS Bengaluru Mahanagar Sanghachalak

ಬೆಂಗಳೂರು ನವೆಂಬರ್ 16: ‘ಸಾಮಾಜಿಕವಾಗಿ ಸಕ್ರಿಯವಾಗಿರುವ ಆರೆಸ್ಸೆಸ್ ಮುಖ್ಯವಾಗಿ ಎರಡು ಕೆಲಸಮಾಡುತ್ತದೆ. ಮೊದಲನೆಯದು ನಿತ್ಯ ಶಾಖೆಗಳ ಮೂಲಕ ಸ್ವಯಂಸೇವಕರನ್ನು ರೂಪಿಸುವುದು, ಎರಡನೆಯದು ಶಾಖೆಯ ಮೂಲಕ ಸ್ಥಳೀಯ ಪರಿಸರದಲ್ಲಿ ಸಾಮಾಜಿಕ ಪರಿವರ್ತನೆ ತರುವುದು’  ಎಂದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

RSS Sarasanghachalak addressing. To his right M Venkataramu, RSS Pranth Sanghachalak and to his left Dr BN Gangadhar, RSS Bengaluru Mahanagar Sanghachalak
RSS Sarasanghachalak addressing. To his right M Venkataramu, RSS Pranth Sanghachalak and to his left Dr BN Gangadhar, RSS Bengaluru Mahanagar Sanghachalak

ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಸಂಜೆ ನಡೆದ ಸುಮಾರು ಏಳು ಸಾವಿರ ಉದ್ಯೋಗಿ ತರುಣರು ಪಾಲ್ಗೊಂಡಿದ್ದ ಬೌದ್ಧಿಕ ವರ್ಗ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್  ಸ್ವಯಂಸೇವಕರನ್ನು ಉದ್ಧೇಶಿಸಿ ಮಾತನಾಡಿದರು.

ಸರಸಂಘಚಾಲಕರ ಭಾಷಣದ ಸಾರಾಂಶ ಹೀಗಿದೆ:

ಇಂದಿನ ಕಾರ್ಯಕ್ರಮದಲ್ಲಿ ಉದ್ಯೋಗಿ ತರುಣ ಸ್ವಯಂಸೇವಕರನ್ನು ಮಾತ್ರ ಕರೆಯಲಾದೆ. ಸಂಘದಲ್ಲಿ ವಯಸ್ಸಿಗನುಗುಣವಾಗಿ ಗಣಗಳನ್ನು ಮಾಡುವ ಪದ್ಧತಿ ಇದೆ. ಇಂದು ಕೆಲಸ ಮಾಡುತ್ತಿರುವ ಸ್ವಯಂಸೇವಕರನ್ನೇ ಯಾಕೆ ಕರೆಯಲಾಗಿದೆ? ಎನ್ನುವ ಯೋಚನೆ ಮನಸ್ಸಿನಲ್ಲಿ ಮೂಡಿತು. ಇಂದು ಉದ್ಯೋಗದಲ್ಲಿರುವ ಸ್ವಯಂಸೇವಕರೇ ಒಟ್ಟಿಗೆ ಬರಬೇಕಾಗಿರುವ ಅಪೇಕ್ಷೆ ಯಾಕೆ ಇದೆ ಎಂದು ವಿಚಾರ ಮಾಡಿದಾಗ ಸ್ಮರೆಣೆಯಾಯಿತು, ಒಮ್ಮೆ ನಾಗಪುರದಲ್ಲಿ ಪ್ರಚಾರಕನಾಗಿದ್ದಾಗ ಯಾದವರಾವ್‌ಜಿಯವರ ಸಮಯದಲ್ಲಿ ವಿವಿಧ ಉದ್ಯೋಗಗಳಲ್ಲಿರುವ ಕರ್ಮಚಾರಿಗಳ ಬೈಠಕ್‌ನ್ನೂ ಆಯೋಜಿಸಲಾಗಿತ್ತು. ಸಂಘದಲ್ಲಿ ಈ ವ್ಯವಸ್ಥೆಯೂ ಇದೆ ಎಂದು ಆಗ ಯಾದವರಾವ್‌ಜಿವರಿಂದ ತಿಳಿಯಿತು.
ಸಂಘದ ಕಾರ್ಯ ವ್ಯಕ್ತಿತ್ವ ನಿರ್ಮಾಣದ ಕೆಲಸ, ರಾಷ್ಟ್ರನಿರ್ಮಾಣದಲ್ಲಿ ವ್ಯಕ್ತಿಗಳನ್ನು ಜೋಡಿಸುವುದು ಸಂಘದ ಕಾರ್ಯ. ನಮ್ಮ ದೇಶದಲ್ಲಿ ಸಾಮಾಜಿಕ ಜೀವನದ ಜೊತೆಗೆ ವ್ಯಕ್ತಿಯ ಪಾರಿವಾರಿಕ ಜೀವನವೂ ಮಹತ್ವದ್ದಾಗಿದೆ. ಹಾಗೆಯೇ ಮನೆಗಳ ಸಂಸ್ಕಾರದ ಬಗ್ಗೆಯೂ ಗಮನ ಹರಿಸಿಬೇಕಾಗುತ್ತದೆ.

ಶಾಖೆಯಲ್ಲಿ ಶಾರೀರಿಕ ಕ್ಷಮತೆಯ ಆಧಾರದ ಮೇಲೆ ಗಣಗಳಾಗುತ್ತವೆ. ಗಣಶಿಕ್ಷಕ ಶಾಖೆಯ ಸಮಯದಲ್ಲಿ ತನ್ನ ಗಣದ ಸ್ವಯಂಸೇವಕನ ವ್ಯಕ್ತಿಗತ ಬದಕಿನಲ್ಲಿ ಕ್ಷಮತೆಯನ್ನು ಬೆಳೆಸುವಲ್ಲಿ ಹಾಗೂ ಶಾಖೆಯ ನಂತರ ಸಂಸ್ಕಾರ ಗುಣಸಂಪನ್ನತೆ ಬೆಳೆಸುವ ಕೆಲಸ ಮಾಡತ್ತಾನೆ. ಸ್ವಯಂಸೇವಕನ ಪರಿವಾರದೊಂದಿಗೆ ಸಂಪರ್ಕವಿಟ್ಟುಕೊಂಡು ವ್ಯಕ್ತಿಗತ ಜೀವನದಲ್ಲಿ ಪಡೆದ ಸಂಸ್ಕಾರ ಅವನ ಪರಿವಾರದಲ್ಲೂ ಪರಿಣಾಮ ಬೀರಿ, ಕೌಟುಂಬಿಕ ಜೀವನವ ಸಮೃದ್ಧವಾಗಬೇಕೆಂಬ ವಿಚಾರವನ್ನು ಗಟನಾಯಕ ಗಮನಿಸುತ್ತಾನೆ,

ಯಾದವರಾವ್‌ಜಿ ಹೇಳಿದ್ದಂತೆ ಸಂಘದಲ್ಲಿ ಚಾಲ್ತಿಯಲ್ಲಿದ್ದ ಇನ್ನೊಂದು ವ್ಯವಸ್ಥೆ ವೃತ್ತಿವ್ಯವಸ್ಥಾ, ಸಮಾನ ವೃತ್ತಿಯಲ್ಲಿರುವವರು, ಒಂದೇ ಕಾರ್ಯಾಲಯದಲ್ಲಿ ಕೆಲಸ ಮಾಡುವ ಸ್ವಯಂಸೇವಕರ ಮಾಸಿಕ ಬೈಟಕ್. ನಮ್ಮ ನಮ್ಮ ಉದ್ಯೋಗ ಕ್ಷೇತ್ರದಿಂದ ಸಂಘಕ್ಕೆ ಎಷ್ಟು ಸ್ವಯಂಸೇವಕರನ್ನು ಜೋಡಿಸಬಹುದು ಎನ್ನುವ ವಿಚಾರ. ಎರಡನೆಯದು ಸಂಘದಿಂದ ಸಮಾಜದಲ್ಲಿ ನಡೆಯುವ ವಿವಧ ಕಾರ್ಯಗಳಿಗೆ ನಮ್ಮ ನಮ್ಮ ಕಾರ್ಯಾಲಯ, ಕೆಲಸಗಳಿಂದ ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹದು. ಮೂರನೆಯದು ನಮ್ಮ ಉದ್ಯೋಗದ ಕ್ಷೇತ್ರ, ಕಾರ್ಯಾಲಯಗಳಲ್ಲಿ ಎಂತಹ ವಾತಾವರಣವನ್ನು ನಿರ್ಮಿಸುವುದು. ನಮ್ಮ ಉದ್ಯೋಗ ಮಾಡುತ್ತ ನಮ್ಮ ರಾಷ್ಟ್ರ ಸಮಾಜದ ಹಿತದಲ್ಲಿ ಕೆಲಸ ಮಾಡುವ ವಾತಾವರಣ ಬೆಳೆಸುವುದು. ನಾಲ್ಕನೆಯ ವಿಷಯ ಸಂಘದ ವಿಚಾರಗಳ ಪ್ರಚಾರ ಪ್ರಸಾರದ ಕೆಲಸ ಉದಾಹರಣೆಗೆ ಸಂಘದ ಕಾರ್ಯಕ್ರಮಗಳ ಸೂಚನೆ ನೀಡುವುದ, ಪುಸ್ತಕಗಳ ಮಾರಾಟ ಇತ್ಯಾದಿ ಸಂಘದ ಸ್ವಯಂಸೇವಕರು ೨೪ ಘಂಟೆಗೂ ಸ್ವಯಂಸೇವಕರೇ ತಮ್ಮ ವೈಯಕ್ತಿಕ ಕೆಲಸದ ಜೊತೆಗೆ ಎಲ್ಲ ಸ್ವಯಂಸೇವಕರು ಮಾಡಲೇಬೇಕಾದ ನಾಲ್ಕು ಕೆಲಸಗಳು- ಮೊದಲನೆಯದು ನಿತ್ಯ ಶಾಖೆಯಲ್ಲಿ ಸಾಧನೆ ಮಾಡುವುದು. ಎರಡನೆಯದು ಸಂಘದಲ್ಲಿ ನೀಡಲಾಗಿರುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದು ಮೂರನೆಯದು ಪ್ರತಿವರ್ಷ ಒಬ್ಬರನ್ನಾದರು ಮಿತ್ರರನ್ನಾಗಿ ಮಾಡಿಕೊಂಡು ಸಂಘಕ್ಕೆ ಕರೆತರುವುದು. ಕೊನೆಯದಾಗಿ ಶಾಖೆಯಲ್ಲಿ ಕಲಿತ ಸಂಸ್ಕಾರವನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ ಬೆಳೆಸುವುದು.

ಚಿಕ್ಕ ಸ್ವಯಂಸೇವಕನಿಂದ ಹಿಡಿದು ಪ್ರಧಾನಿಯವರೆಗಿನ ವ್ಯಕ್ತಿಯೂ ಸಂಘದ ಸ್ವಯಂಸೇವಕನಾಗಿರುವ ಬಗ್ಗೆ ಜನರಿಗೆ ಆಶ್ಚರ್ಯವಾಗಬಹುದು. ಆದರೆ ಜನರ ದೃಷ್ಟಿಯಲ್ಲಿ ಒಬ್ಬ ಹುಡುಗ ಹುಡುಗನೇ. ಸಾಮಾನ್ಯವಾಗಿ ವ್ಯಕ್ತಿ ಗಳಿಸಲು ತೊಡಗಿದಾಗ ಸಮಾಜದಲ್ಲಿ ಆತನಿಗೆ ಸ್ಥಾನ ಸಿಗುತ್ತದೆ. ಉದ್ಯೋಗೀ ಪ್ರೌಢ ವ್ಯಕ್ತಿಯ ಮಾತಿಗೆ ಸಮಾಜದಲ್ಲಿ ಗೌರವ ಇರತ್ತದೆ. ಹಾಗೇಯೇ ಓರ್ವ ಉದ್ಯೋಗಿ ಸ್ವಯಂಸೇವಕ ಸಮಾಜದ ಮೇಲೆ ಪ್ರಭಾವ ಬೀರಬಲ್ಲವನಾಗುತ್ತಾನೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲಸ ಶಾಖೆಯಿಂದ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಮತ್ತು ಎರಡನೆಯದು ಅಂತಹ ವ್ಯಕ್ತಿಗಳ ಸಾಮರ್ಥ್ಯದಿಂದ ವಸತಿ ಉಪವಸತಿಗಳಲ್ಲಿ ಉತ್ತಮ ವಾತಾವರಣ ನಿರ್ಮಿಸುವುದು. ಇದು ಇಂದು ನಾನು ಹೇಳುತ್ತಿರುವ ಮಾತಲ್ಲ ಡಾಕ್ಟರ್ಜೀಯವರ ಯವರ ಕಾಲದಲ್ಲಿಯೇ ಈ ವಿಚಾರ ಬೆಳೆದುಬಂದಿದೆ.

ಡಾಕ್ಟರ್ಜೀಯವರ ಕಾಲದಲ್ಲಿ ಕೇವಲ ವಿದ್ಯಾರ್ಥಿಗಳು ಹುಡುಗರೇ ಸಂಘದಲ್ಲಿದ್ದರು. ಆಗ ಉದ್ಯೋಗೀ ಸ್ವಯಂಸೇವಕರು, ನೌಕರರು, ಕರ್ಮಚಾರಿಗಳು ಮುಂತಾದ ವೃತ್ತಿ ವ್ಯವಸ್ಥೆ ಸಾಧ್ಯವಿರಲಿಲ್ಲ, ಆದರೆ ಇಂದು ಐದು ದಶಕಗಳ ನಂತರ ಅನೇಕ ತರಹದ ಸ್ವಯಂಸೇವಕರು ಇದ್ದಾರೆ, ಬಾಲಕರು ಯವಕರು, ಉದ್ಯೋಗಿಗಳು, ಪ್ರೌಢರು, ಪ್ರಚಾರಕರಾಗಿದ್ದವರು. ಪೂರ್ವಸರಸಂಘಚಾಲಕರಾಗಿದ್ದ ಸುದರ್ಶನಜೀವರನ್ನೂ ನೋಡಿರದ ಸಣ್ಣವಯಸ್ಸಿನ ಸ್ವಯಂಸೇವಕರೂ ಇಂದು ಸಂಘದ ಶಾಖೆಗಳಲ್ಲಿದ್ದಾರೆ.
ಹಿಂದೆ ಸಂಘದಿಂದ ಯಾವುದೇ ಅಪೆಕ್ಷಗಳಿದ್ದಿರಲಿಲ್ಲ, ಸಂಘದಿಂದ ಸಮಾಜ ಪರಿವರ್ತನೆ ಸಾಧ್ಯ ರಾಜಕೀಯ ಬದಲಾವಣೆ ಸಾಧ್ಯ ಎಂದು ಯಾರೂ ಭಾವಿಸುತ್ತಿರಲಿಲ್ಲ. ಆದರೆ ಇಂದು ಸಮಾಜಕ್ಕೆ ಸಂಘದಿಂದ ಅನೇಕ ಅಪೇಕ್ಷೆಗಳಿವೆ. ಇಂದು ಉದ್ಯೋಗಿ ತರುಣ ಸ್ವಯಂಸೇವಕರು ಸಂಘದ ವಿಭಿನ್ನಕಾರ್ಯಗಳಲ್ಲಿ, ಸೇವಾ ಕೆಲಸಗಳಲ್ಲಿ ತೊಡಗಬೇಕಾದ ಅವಶ್ಯಕತೆಯಿದೆ. ನಮ್ಮ ವಸತಿಗಳಲ್ಲಿ ನಡೆಯುವ ಕೆಲಸಗಳಿಗೆ ಸಮಾಜದ ಜನರನ್ನು ಎಬ್ಬಿಸುವುದು ಗ್ರಾಮವಿಕಾಸ, ಗೋರಕ್ಷಾ, ಧರ್ಮಜಾಗರಣ ಮುಂತಾದ ಸಮಾಜ ಪರಿವರ್ತನೆಯ ಕೆಲಸಗಳಲ್ಲಿ ತೊಡಗುವುದು ಉದ್ಯೋಗಿ ತರುಣರ ಶಾಖೆಯ ಸ್ವಯಂಸೇವಕರ ಕಾರ್ಯವಾಗಿದೆ. ಸಂಸ್ಕೃತ ಪ್ರಸಾರ, ಕುಟುಂಬ ಪ್ರಭೋದನ ಮುಂತಾದ ಕಾರ್ಯಗಳಲ್ಲಿ ಪ್ರೌಢಶಾಖೆಯ ಸ್ವಯಂಸೇವಕರು ತೊಡಗುತ್ತಾರೆ. ಸ್ವಯಂಸೇವಕರು ಶಾಖಾ ಕಾರ್ಯವನ್ನು ಬೆಳೆಸುವುದರ ಜೊತೆಗೆ ಸುತ್ತಲಿನ ಪ್ರದೇಶದಲ್ಲಿ ಸತ್ಯ, ಬ್ರಷ್ಟಾಚಾರರಹಿತ ಶಿಸ್ತಿನ ವಾತಾವರಣ ನಿರ್ಮಿಸುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಾರೆ.

ರಾಷ್ಟ್ರನಿರ್ಮಾಣದ ಸಂಘಕಾರ್ಯದಲ್ಲಿ ಉದ್ಯೋಗಿ ತರುಣರು ಕೆಲಸಮಾಡಬೇಕಾದ ಇಂದಿನ ಅಗತ್ಯವೇಕೆಂದರೆ, ಇಂದು ನಮ್ಮ ಕೆಲಸದ ಎರಡನೇ ಹಂತ ಪ್ರಾರಂಬವಾಗಿದೆ.

ಮೊದಲನೆಯ ಹಂತದಲ್ಲಿ ಸಂಘದ ಮಾರ್ಗದಲ್ಲಿ ಹಿಂದೂ ಸಮಾಜವನ್ನು ಜಾಗೃತಗೊಳಿಸಿ ತನ್ನನ್ನು ತಾನು ಸುಧೃಢಗೊಳಿಸಿ ವಿರೋಧಗಳನ್ನು ಎದುರಿಸ ತನ್ನನು ರಕ್ಷಿಸಿಕೊಳ್ಳಬಹುಸು ಎಂದು ಡಾಕ್ಟರ್ಜೀಯವರೇ ತೋರಿಸಿಕೊಟ್ಟರು. ಸಂಕಷ್ಟ ಸಮಯದಲ್ಲಿ ಸಂಘವನ್ನು ಪಾರುಗೊಳಿಸಿ ಸಮಾಜದ ಎಲ್ಲ ವರ್ಗಕ್ಕೆ ಸಂಘಕಾರ್ಯವನ್ನು ತಲುಪಿಸುವ ಕಾರ್ಯ ಪೂಜನೀಯ ಗುರೂಜಿ ಸಮಯದಲ್ಲಿ ನಡೆಯಿತು. ಸಂಘಕಾರ್ಯವನ್ನು ವಿವಿಧ ಕ್ಷೇತ್ರಗಳಿಗೆ ವಿಸ್ತರಿಸುವ ಕಾರ್ಯ ಮುಂದಿನ ಹಂತಗಳಲ್ಲಿ ನಡೆಯಿತು.
ಇಂದು ನಮ್ಮ ಮುಂದೆ ಮುಂದಿನ ಕಾರ್ಯವಿದೆ ಸಂಘ ಯಾವ ರಾಷ್ಟ್ರಜೀವನದ ಕಲ್ಪನೆಯನ್ನಿಟ್ಟಿದೆಯೋ ಅದನ್ನು ಎಲ್ಲ ಕಡೆ ವಿಸ್ತರಿಸುವುದು, ಸಜ್ಜನ ಶಕ್ತಿಯನ್ನು ಏಕತ್ರೀಕರಿಸ ಸಂಪೂರ್ಣ ಸಮಾಜ ಅದನ್ನು ಅನುಸರಿಸುವಂತೆ ಮಾಡುವುದು, ಸಂಪೂರ್ಣ ರಾಷ್ಟ್ರ ಪರಮ ವೈಭವ ರಾಷ್ಟ್ರಜೀವನ ಸಾಧ್ಯವನ್ನಾಗಿಸವುದು, ಸಜ್ಜನ ಶಕ್ತಿಯು ರಾಷ್ಟರದ ನೇತೃತ್ವ ವಹಿಸುವಂತೆ ಮಾಡುವುದು ನಮ್ಮ ಮುಂದಿರುವ ಕೆಲಸ ಅರ್ಧ ನಿಕ್ಕರ ಧರಿಸಿ ಮೈದಾನದಲ್ಲಿ ಏನೋ ಮಾಡತ್ತಾರೆ, ಚುನಾವಣೆಯಲ್ಲಿ ಯಾವುದೋ ಗುಂಪಿನೊಡನೆ ಸೇರಿಕೊಳ್ಳುತ್ತಾರೆ, ಕೋಮುಗಲಭೆಯಾದಾಗ ಕಮ್ಯೂನಲ್ ಇಷ್ಟೇ ಹೊರಜಗತ್ತಿಗೆ ಸಂಘದ ಬಗ್ಗೆ ತಿಳಿದಿರುವುದು. ಆದರೆ ಇಡೀ ಸಮಾಜವನ್ನು ಸಂಘಟಿಸಿ, ವ್ಯಕ್ತಿಗಳಲ್ಲಿ ಗುಣಸಂಪನ್ನತೆಯನ್ನು ಬೆಳೆಸಿ ರಾಷ್ಟ್ರದ ಕೆಲಸದಲ್ಲಿ ಜೋಡಿಸುವ ಕಾರ್ಯದಲ್ಲಿ ಸಂಘ ತೊಡಗಿಕೊಂಡಿದೆ. ಈ ಕೆಲಸದಲ್ಲಿ ಉದ್ಯೋಗಿ ತರುಣ ಸ್ವಯಂಸೇವಕರ ಕಾರ್ಯ ಅತ್ಯಂತ ಮಹತ್ವದ್ದಾಗಿದೆ.

IMG_6356 IMG_6371 DSC_7714

ಪ್ರಾಂತ ಸಂಘಚಾಲಕ ಮಾನನೀಯ ವೆಂಕಟರಾಮು ಮತ್ತು ಬೆಂಗಳೂರು ಮಹಾನಗರ ಸಂಘಚಾಲಕ ಮಾನನೀಯ ಡಾ ಬಿ ಎನ್ ಗಂಗಾಧರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.