Hubballi July 25, 2016: Bhoomi Poojan Ceremony of Bharatiya Majdoor Sangh (BMS) of Karnataka Uttara Pranth held today at Hubballi.

RSS Akhil Bharatiya Vyavastha Pramukh Mangesh Bhende performed the Bhoomi Poojan Ceremony and addressed the gathering. The new office building will be located at Amaragola, Navanagara road, Hubballi.

IMG-20160725-WA0019

IMG-20160725-WA0018

ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಪ್ರಮುಖ:  ಮಂಗೇಶ್ ಭೇಂಡೆ
ಹುಬ್ಬಳ್ಳಿ: ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ್ ಭೇಂಡೆ ಹೇಳಿದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯದ ಅಮರಗೋಳದಲ್ಲಿ ಸೋಮವಾರ ಭಾರತೀಯ ಮಜ್ದೂರ್ ಸಂಘ ಉತ್ತರ ಕರ್ನಾಟಕ ಭಾಗದ ಕಾರ್ಯಾಲಯ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ವರ್ಗವೆಲ್ಲಾ ಸುಖವಾಗಿ, ಆನಂದವಾಗಿ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದೇಶದ ಹಿತಕ್ಕಾಗಿ ದುಡಿಯೋಣ, ದುಡಿಮೆಯ ಫಲವನು ಪಡೆಯೋಣ ಎಂಬ ಆಶಯದೊಂದಿಗೆ ದತ್ತೋಪಂತ್ ಠೇಂಗಡಿಜೀಯವರು 1955ರಲ್ಲಿಯೇ ಈ ಮಜ್ದೂರ್ ಸಂಘ ಪ್ರಾರಂಭಿಸಿದರು. ಅವರು ಕಾರ್ಮಿಕರಾಗಿರಲಿಲ್ಲ, ಯಾವುದೇ ಅನುಭವ ಕೂಡಾ ಇರಲಿಲ್ಲ, ಶೂನ್ಯದಿಂದಲೇ ಪ್ರಾರಂಭಿಸಿ, ಪ್ರವಾಹದ ವಿರುದ್ಧ ಈಜಿ ಯಶಸ್ವಿಯಾಗಿದ್ದಾರೆ. ಇಂದು ಕೋಟ್ಯಾಂತರ ಕಾರ್ಮಿಕರ ಬಂಧುಗಳಿಗೆ ಸಂಘ ಬೆಳಕಾಗಿ ಹೊರಹೊಮ್ಮಿದೆ ಎಂದರು.

ಒಳ್ಳೆಯ ವಿಚಾರ, ಸಿದ್ದಾಂತ ಇಟ್ಟುಕೊಂಡು ಈ ಮಜ್ದೂರ್ ಸಂಘ ಪ್ರಾರಂಭವಾಗಿದೆ. ದೇಶದಲ್ಲಿ ಸಂಘಟನೆಗಳಿಗೆ ಕೊರತೆ ಇಲ್ಲ. ವಾಮ ಪಂತಿಯ ಚಿಂತನೆ ಹಲವಾರು ಸಂಘಟನೆಗಳಾಗಿದ್ದಾವೆ. ಆದರೆ, ಈ ಮಜ್ದೂರ್ ಸಂಘವು ದೇಶದ ಚಿಂತನೆ ಆಧಾರದ ಮೇಲೆ ಪ್ರಾರಂಭಗೊಂಡಿದೆ. ಯಾವುದೇ ರೀತಿಯ ಹಣ ಮಾಡುವ ಉದ್ದೇಶ ಈ ಸಂಘಟನೆಗೆ ಇಲ್ಲದೇ, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬರುತ್ತಿರುವುದು ವಿಶೇಷವಾಗಿದೆ ಎಂದರು.

ಶ್ರಮಿಕರ ಬಗ್ಗೆ ಚಿಂತನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಮೊದಲು ಹಳ್ಳಿಗಳಲ್ಲಿ ಸಹಬಾಳ್ವೆ ಇತ್ತು. ಗ್ರಾಮವೇ ಒಂದು ಮನೆಯಾಗಿ ಬದುಕುವ ವಾತಾವರಣ ಇತ್ತು. ಯಾವುದೇ ಬೇಧ-ಭಾವ ತಾರತಮ್ಯಗಳು ಇರುತ್ತಿರಲಿಲ್ಲ. ಅಂತಹ ಪರಂಪರೆ ಗ್ರಾಮಗಳಲ್ಲಿ ನೋಡುತ್ತಿದ್ದೇವು. ಅಂತಹ ಪುರಾತನ ವಿಚಾರಧಾರೆಯ ಆಧಾರದ ಮೇಲೆ ಸಂಘ ಪ್ರಾರಂಭವಾಗಿದೆ. ಇನ್ನೂ ಮಾಡಬೇಕಾದ ಕೆಲಸ ಕಾರ್ಯಗಳು ತುಂಬಾ ಇವೆ. ಈ ನಿಟ್ಟಿನಲ್ಲಿ ಈ ಕಾರ್ಯಾಲಯ ಶಕ್ತಿ ಕೇಂದ್ರವಾಗಿ ಬೆಳೆಯಬೇಕು. ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆಯುವಂತಾಗಬೇಕು ಎಂದರು.
ಕಾರ್ಮಿಕರ ಪರಿಶ್ರಮದಿಂದಲೇ ಈ ಕಟ್ಟಡ ಆಗಬೇಕಾಗಿದೆ. ಪ್ರತಿಯೊಬ್ಬ ಸದಸ್ಯರು ಕರ್ತವ್ಯ ಮೀರಿ ಸಹಾಯ ಹಸ್ತ ನೀಡಬೇಕು. ಅಂದಾಗ ಈ ಕಟ್ಟಡ ನಮ್ಮದು ಎಂಬ ಭಾವನೆ ಬರಲಿದೆ. ನಾವು ಪ್ರತಿದಿನ ಸಂಪಾದಿಸುವ ಸಂಪಾದನೆಯಲ್ಲಿ ಇನ್ನೊಬ್ಬರಿಗೆ ಕೊಟ್ಟು ಜೀವನ ನಡೆಸಬೇಕು. ಅದು ನಮ್ಮ ಸಂಸ್ಕೃತಿ. ಒಬ್ಬರೇ ತಿಂದರೆ ಕಳ್ಳ ಎಂಬಂತಾಗುತ್ತದೆ ಎಂದು ಹಲವಾರು ಉದಾಹರಣೆಗಳ ಮೂಲಕ ಹೇಳಿದರು.
ಭಾರತೀಯ ಮಜ್ದೂರ್ ಸಂಘದ ಧಾರವಾಡ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಡಿ. ಸವಣೂರ ಮಾತನಾಡಿ, BMS ಸಂಘವು ಇಂದು ಸಾವಿರಾರೂ ಸದಸ್ಯರನ್ನು ಹೊಂದಿದೆ. ಅಖಿಲ ಭಾರತ ಮಟ್ಟದಲ್ಲಿ ಹಾಗೂ ಜಿಲ್ಲೆಯಲ್ಲಿ ನಂಬರ್ ೧ ಸ್ಥಾನದಲ್ಲಿದೆ. ಬೋರುಕಾ ಟೆಕ್ಸಟೈಲ್ ಕಂಪನಿಯ ಹೋರಾಟದ ನೆನಪುಗಳನ್ನು ಬಿಚ್ಚಿಟ್ಟ ಅವರು, ಗಾಮನಗಟ್ಟಿ, ಸತ್ತೂರ, ನವಲೂರ, ಅಮರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರದೊಂದಿಗೆ ಹೋರಾಟ ಯಶಸ್ವಿಯಾಯಿತು ಎಂದರು.
ಭಾರತೀಯ ಮಜ್ದೂರ್ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಸಿ.ಟಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಗಣ್ಯರಾದ ಶ್ರೀಧರ ನಾಡಿಗೇರ, ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಹೊರಕೇರಿ, ಎಸ್.ಪಿ. ಜೋಶಿ, ಹನುಮಂತಪ್ಪ ಇಟಗಿ, ಶೇಷಾದ್ರಿ ಸೇರಿದಂತೆ ವಿವಿಧ ಘಟಕದ ಪದಾಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು. ಜಯತೀರ್ಥ ಕಟ್ಟಿ ಸ್ವಾಗತ ಗೀತೆ ಹಾಡಿದರು. ಯಲ್ಲಂಗಡಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಹೋರಾಟಕ್ಕೆ ಭಾರತೀಯ ಮಜ್ದೂರ್ ಸಂಘದಿಂದ ಬೆಂಬಲ ಸೂಚಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.