ದಿನಾಂಕ ; ೧೦.೧೦.೨೦೧೦ ರ ಬುಧವಾರದಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯ ಬೆಳಿಗ್ಗೆ ಸರಿಯಾಗಿ ೧೧ ಗಂಟೆಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ ರವರು ಅತಿಥಿಗಳನ್ನು ಎಲ್ಲಾ ಹಿಂದೂ ಬಾಂಧವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀಯುತ ಶ್ರೀಕಂಠಮಹಾಸ್ವಾಮಿಗಳು (ಮುಡಿಗುಂಡ) ಶ್ರೀ ಡಾ|| ಚಂದ್ರಶೇಖರ್ ವಿಭಾಗೀಯ ಕಾರ್ಯಕಾರಿಣಿ ಪ್ರಮುಖ್ ಮತ್ತು ಶ್ರೀ ಮಂಜುನಾಥ, ಭಜರಂಗದಳ ರಾಜ್ಯ ಸಹ ಸಂಚಾಲಕರು ಉಪಸ್ಮಿತರಿದ್ದರು.
ಧರಣಿಯನ್ನು ಉದ್ದೇಶಿಸಿ ಡಾ|| ಚಂದ್ರಶೇಖರ್ ರವರು ಮಾತನಾಡುತ್ತಾ ರಾಷ್ಟ್ರೀಯಾ ಸ್ವಯಂ ಸೇವಕ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅವರು ಅನೇಕ ಉದಾಹರಣೆಗಳನ್ನು ನೀಡುತ್ತಾ ಸಂಘವು ದೇಶದ ಸಂಸ್ಕೃತಿ, ರಕ್ಷಣೆಯನ್ನು, ರಕ್ಷಿಸುವಲ್ಲಿ ಸಂಘದ ಪಾತ್ರವನ್ನು ವಿವರಿಸಿದರು. ಹಾಗೆಯೇ ಸಂಘವು ಎದುರಿಸುತ್ತಿರುವ ರಾಜಕೀಯವಾಗಿ ಸಾಮಾಜಿಕ ಮತ್ತು ಧಾರ್ಮಿಕ ಅಡೆತಡೆಗಳನ್ನು ತಿಳಿಸಿದರು. ಹಿಂದೂ ಸಮಾಜವು ದುರ್ಬಲವಲ್ಲ ಅದು ಇಡೀ ಪ್ರಪಂಚಕ್ಕೆ ಮಾದರಿಯಾಗಿರುವ ರಾಷ್ಟ್ರ. ಇಂದು ಹಿಂದೂ ರಾಷ್ಟ್ರ ಸಂಕಷ್ಟದ ಸ್ಥಿತಿಯಲ್ಲಿದೆ. ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ಸಮಾಜದ ಯುವಕ – ಯುವತಿಯರು ಎಚ್ಚೆತ್ತಿಕೊಳ್ಳಬೇಕಾಗಿದೆ. ಎಂದು ತಿಳಿಸಿದರು. ಕೇಂದ್ರ ಸರ್ಕಾರವು ಇಂದು ಹಿಂದೂಗಳ ವಿರುದ್ಧ ತಳೆದಿರುವ ಕುಟಿಲ ನೀತಿಗಳನ್ನು ತಿಳಿಸಿದರು. ಸಂಘದ ಕಾರ್ಯಕರ್ತರಾದ ಶ್ರೀ ಇಂದ್ರೇಶ್‌ಕುಮಾರ್ ರವರ ಮೇಲೆ ಇರುವ ಆರೋಪಗಳು ಶುದ್ಧ ಸುಳ್ಳಾಗಿದ್ದು ಇದು ಕೇಂದ್ರ ಸರ್ಕಾರದ ಹುನ್ನಾರ ಎಂದು ಅವರು ವಿವರಿಸಿದರು. ಇಂದು ದೇಶ ವಿರೋಧಿ ಕೃತ್ಯಗಳನ್ನು ಎಸಗಿರುವ ಮುಸ್ಲಿಂ ಉಗ್ರರನ್ನು ಶಿಕ್ಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಲು ಹಿಂದೇಟು ಹಾಕುತ್ತಿದೆ. ಮತ ಬ್ಯಾಂಕ್‌ಗಾಗಿ ತುಷ್ಠೀಕರಣ ನೀತಿಯನ್ನು ಅನುಸರಿಸುತ್ತಿದೆ. ಎಂದು ಅವರು ತಿಳಿಸಿದರು. ಭಾರತದ ಗಡಿಯಲ್ಲಿ ಪಾಕೀಸ್ಥಾನಿಯರ ಆಕ್ರಮಣ ನಡೆಯುತ್ತಿದೆ. ಸಾವಿರಾರು ಸೈನಿಕರು ಮಡಿಯುತ್ತಿದ್ದಾರೆ. ಬಾಂಗ್ಲದೇಶದಿಂದ ಇದುವರೆಗೆ ಸುಮಾರು ೩ ಕೋಟಿ ಜನರು ಇಂದು ಭಾರತದಲ್ಲಿ ನೆಲೆಸಿದ್ದಾರೆ. ಇವರಿಗೆ ಎಲ್ಲಾ ಸೌಕರ್ಯ ಸವಲತ್ತುಗಳನ್ನು ನೀಡುವ ಮೂಲಕ, ದೇಶದಲ್ಲಿ ಭಯೋತ್ಪಾದನೆ ನಡೆಸುತ್ತಿದೆ. ಬರಾಕ್‌ಒಬಾಮ ಭಾರತ ಭೇಟಿ ದುರದ್ದೇಶದಿಂದ ಕೂಡಿದ್ದು ಇದರಿಂದ ಯಾರಿಗು ಪ್ರಯೋಜನವಿಲ್ಲವೆಂದು ತಿಳಿಸಿದರು. ದೇಶವನ್ನು ಉಳಿಸಿಕೊಳ್ಳಲು ಯುವಕರು ಬೇಕು ಎಂದು ಆಗ್ರಹಿಸಿದರು. ಚೀನಾ ಮಾವೋವಾದಿಗಳು ದೇಶದ ಒಳಕ್ಕೆ ನುಸುಳುತ್ತಿದ್ದಾರೆ. ದೇಶ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ರಾಹುಲ್‌ಗಾಂಧಿಯಂತ ನಾಯಕರು ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಯುವಕರ (ಯುವತಿಯರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇದನ್ನೆಲ್ಲಾ ನಿಗ್ರಹಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಜ್ಜಾಗಿದೆ. ಇದಕ್ಕೆ ಎಲ್ಲಾ ಹಿಂದೂ ಬಾಂಧವರು ಕೈಜೋಡಿಸಬೇಕು ಎಂದು ಕರೆ ನೀಡಿದರು. ದೇಶ-ವಿದೇಶಗಳಲ್ಲಿರುವ ದೇವಸ್ಥಾನಗಳು ನಾಶವಾಗುತ್ತಿದೆ. ಪ್ರತಿ ನಗರ ಗ್ರಾಮಗಳಲ್ಲಿ ಶಾಖೆಯನ್ನು ನಡೆಸುವ ಮೂಲಕ ದೇಶ ಸೇವೆ ಮಾಡಿ ದೇಶವನ್ನು ರಕ್ಷಿಸುವ ಪುರುಷ ಸಿಂಹಗಳಾಗಿರಬೇಕೆಂದು ಕರೆ ನೀಡುತ್ತಾ ತಮ್ಮ ಮಾಹಿತಿಗಳನ್ನು ಮುಕ್ತಾಯಗೊಳಿಸಿದರು.
ನಂತರ ಶ್ರೀಯುತ ಮಂಜುನಾಥ್‌ರವರು ಮಾತನಾಡುತ್ತಾ ಕೇಂದ್ರ ಸರ್ಕಾರವು ಸಂಘದ ಮೇಲೆ ಗಾಂಧಿ ಹತ್ಯೆ ಆರೋಪ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಆದ ಸಂಘವನ್ನು ತುಳಿಯುವ ಕ್ರಮಗಳು, ೧೯೨೫ ರಿಂದ ಇದುವರೆಗೆ ಸಂಘವು ದೇಶ ರಕ್ಷಣೆಗಾಗಿ ದುಡಿದಿರುವುದನ್ನು ಸ್ಮರಿಸಿದರು. ಸಂಘದ ಹುಟ್ಟು, ಬೆಳವಣಿಗೆ, ಸ್ಥಾಪಕರು, ಸ್ಥಾಪನೆಯ ವೇಳೆ ಉದಾರಿಸಿದ ಅಡೆತಡೆಗಳು ಸಂಘದ ಉದ್ದೇಶಗಳನ್ನು ವಿವರಿಸಿದರು. ಇಂದ್ರೇಶ್‌ಕುಮಾರ್ ಒಬ್ಬ ಉತ್ಕೃಷ್ಟ ನಾಯಕರು ಅಮರನಾತ ಸ್ಥಳ ವಿವಾದದಲ್ಲಿ ಅವರು ವಹಿಸಿದ ಪ್ರಮುಖ ಪಾತ್ರವನ್ನು ಸ್ಮರಿಸುತ್ತಾ ಇಂತಹ ದೇಶ ಭಕ್ತರ ಮೇಲೆ ದೇಶ ದ್ರೋಹಿ ಆರೋಪ ಮಾಡಿರುವುದು. ಸರಿಯಿಲ್ಲ ಎಂದು ತಿಳಿಸಿದರು. ಸಂಘವನ್ನು ದಮನ ಮಾಡುವ ಹುನ್ನಾರ್ ಕೇಂದ್ರ ಸರ್ಕಾರದ್ದು. ಪ್ರಧಾನ ಮಂತ್ರಿಗಳು ಕೂಡ ದೇಶಿ ವಿರೋಧಿ ಹೇಳಿಕೆಯನ್ನು ನೀಡುತ್ತಿದ್ದಾರೆ. ರಾಮಸೇತುವನ್ನು ಹೊಡೆಯುವ ಪ್ರಯತ್ನ ನಡೆಯುತ್ತಿದೆ. ಶ್ರದ್ಧಾ ಕೇಂದ್ರಗಳ ಮೇಲೆ ಅತಿಕ್ರಮಣ, ಹಜ್‌ಯಾತ್ರಿಕರಿಗೆ ಸವಲತ್ತು, ನೀಡುವ ಮೂಲಕ ದೇಶದಲ್ಲಿ ಹಿಂದೂಗಳನ್ನು ಅಲ್ಪ ಸಂಖ್ಯಾತರನ್ನಾಗಿ ಮಾಡುವ ಪ್ರಯತ್ನ ಕೇಂದ್ರ ಸರ್ಕಾರದಿಂದ ಆಗುತ್ತಿದೆ. ಎಂದು ಅವರು ತಿಳಿಸಿದರು. ಹಿಂದೂ ಸಮಾಜದ ದಿವ್ಯ ಮೌನದಿಂದಾಗಿ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಗೃಹ ಮಂತ್ರಿ ಶ್ರೀ ಚಿಂದಂಬರಂ ಒಬ್ಬ ಮೂರ್ಖ ಗೃಹ ಮಂತ್ರಿ ಎಂದು ಬಣ್ಣಿಸಿದರು. ದೇಶ ಉಳಿಯಬೇಕಾದರೆ ರಾಷ್ಟ್ರೀಯಾ ಸ್ವಯಂ ಸೇವಕ ಸಂಘವನ್ನು ಸಬಲ ಪಡಿಸಬೇಕು. ದೇಶದಲ್ಲಿ ಸುಮಾರು ೬೦ ಸಾವಿರ ಮುಸಲ್ಮಾನ ಯುವಕರು ಭಯೋತ್ಪಾದನೆಯಲ್ಲಿ ಕಾರ್ಯನಿರತರಾಗುತ್ತಿದ್ದಾರೆ. ಸಂಘವನ್ನು ಉಗ್ರಗಾಮಿ ಗುಂಪಿಗೆ ಸೇರಿಸುವ ಪ್ರಯತ್ನ ಕೇಂದ್ರ ಸರ್ಕಾರದಿಂದ ನಡೆಯುತ್ತಿದೆ ಎಂದು ಅವರು ಹೇಳಿದರು. ಜಾಗೃತ ಹಿಂದೂ ಸಮಾಜದಿಂದ ಮಾತ್ರ ರಾಷ್ಟ್ರವನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದರು.ಅವರು ದೇಶ ರಕ್ಷಣೆಗಾಗಿ ಹಿಂದೂ ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲಾ ಶಕ್ತಿಶಾಲಿಗಳಾಗಿ ಧೈರ್ಯವಂತರಾಗಿ ಮುನ್ನಡೆಯಬೇಕೆಂದು ಕರೆ ನಿಡುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

ನಂತರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಹಿಂದೂಗಳ ಮೇಲೆ ಆಗುತ್ತಿರುವ ಆಕ್ರಮಣಗಳನ್ನು ಪುನರುಚ್ಚಿಸಿದರು. ಹಿಂದೂಗಳು ಸಂತೋಷವಾಗಿರಬೇಕೆಂದು ಪಡೆದ ಸ್ವಾಂತಂತ್ರ್ಯವು ಇಂದು ದುರುಪಯೋಗವಾಗುತ್ತಿದೆ ಎಂದು ವಿಷಾದಿಸಿದರು. ಯುವಕರಲ್ಲಿ ದೇಶ ಭಕ್ತಿ ಒಳ್ಳೆಯ ಭಾವನೆ ದೇಶ ಭಕ್ತಿ ಪ್ರೇಮ ಪೂಜ್ಯ ಭಾವನೆಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ದೇಶದ ಅನೇಕ ಭಾಗಗಳಲ್ಲಿ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಎಂದು ತಿಳಿಸಿದರು. ದೇಶವನ್ನು ಸಂಘಟಿಸುವುದರಲ್ಲಿ ಸಂಘವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ತಿಳಿಸಿದರು. ಈಗಿನ ಕೇಂದ್ರ ಸರ್ಕಾರವನ್ನು ಕೆಳಗಿಳಿಸಬೇಕು ಎಂದು ಕರೆ ನೀಡಿದರು. ಮನವಿ ಪತ್ರವನ್ನು ಓದಲಾಯಿತು. ಘೊಷಣೆ ಕೂಗಿದ ನಂತರ ವಂದನಾರ್ಪಣೆಯೂ ಆಯಿತು. ಶಾಂತಿ ಮಂತ್ರದ ಮೂಲಕ ಪ್ರತಿಭಟಣಾ ಧರಣಿಯು ಮುಕ್ತಾಯಗೊಂಡಿತು.
ಕಾರ್ಯಕ್ರಮದ ಸ್ವರೂಪ:-
೧) ನಿರೂಪಣೆ : ಶ್ರೀ ಅನಂತ್.ಜೀ. ಜಿಲ್ಲಾ ಬೌದ್ದಿಕ್ ಪ್ರಮುಖ್.
೨) ವಯಕ್ತಿಕ ಗೀತೆ : ಶ್ರೀ ಆ.ಶಿ.ಶಿವುಕುಮಾರ್.
೩) ಸ್ವಾಗತ : ಶ್ರೀ ಎಸ್.ಬಾಲಸುಬ್ರಹ್ಮಣ್ಯಂ.ಜೀ
೪) ಮನವಿ ಓದುವುದು : ಶ್ರೀ ರವಿಪ್ರಸಾದ್.ಜೀ.ಶಿಕ್ಷಕರು
೫) ವಂದನಾರ್ಪಣೆ : ಶ್ರೀ ಮಂಜುನಾಥ್

Leave a Reply

Your email address will not be published.

This site uses Akismet to reduce spam. Learn how your comment data is processed.