
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪೂರ್ವ ಸಂಘಟನಾ ಕಾರ್ಯದರ್ಶಿ, ವಿಶ್ವ ಸಂವಾದ ಕೇಂದ್ರದ ಸಂಸ್ಥಾಪಕರು, ಲೇಖಕರು, ಕವಿಗಳಾದ ಚಂದ್ರಶೇಖರ ಭಂಡಾರಿಗಳು (87) ದೈವಾಧೀನರಾಗಿದ್ದು ಬೆಂಗಳೂರಿನ ಕೇಂದ್ರ ಕಾರ್ಯಾಲಯ ಕೇಶವಕೃಪಾದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು


ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ,ಬೇಲಿ ಮಠದ ಶ್ರೀಗಳು ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ, ಮಾಜಿ ವಿಧಾನಸಭಾ ಸದಸ್ಯರಾದ ಶ್ರೀ ರಾಮಚಂದೇಗೌಡರು, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ, ಎಂ.ಕೆ.ಶ್ರೀಧರ್,ದು.ಗು.ಲಕ್ಷ್ಮಣ ಇನ್ನಿತರ ಲೇಖಕರು,ಪತ್ರಕರ್ತರು,ಸಾಹಿತಿಗಳು,ಗಣ್ಯರು ಅಂತಿಮ ದರ್ಶನ ಪಡೆದರು.
ಅಂತಿಮ ದರ್ಶನದ ಬಳಿಕ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ಕ್ರಿಯೆಯನ್ನು ನಡೆಸಲಾಗಿದ್ದು ಸಹಸರಕಾರ್ಯವಾಹರಾದ ಶ್ರೀ ಮುಕುಂದ,ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ. ನಾಗರಾಜ, ಕ್ಷೇತ್ರೀಯ ಕಾರ್ಯವಾಹ ಶ್ರೀ.ತಿಪ್ಪೇಸ್ವಾಮಿ, ಕರ್ನಾಟಕದ ದಕ್ಷಿಣ ಪ್ರಾಂತದ ಪ್ರಚಾರಕರಾದ ಶ್ರೀ ಗುರುಪ್ರಸಾದ್, ಉತ್ತರ ಪ್ರಾಂತ ಪ್ರಚಾರಕರಾದ ಶ್ರೀ ನರೇಂದ್ರ ಉಪಸ್ಥಿತರಿದ್ದರು.





ಚಂದ್ರಶೇಖರ ಭಂಡಾರಿಗಳ ಶ್ರದ್ಧಾಂಜಲಿ ಸಭೆಯು ದಿನಾಂಕ 10,ನವೆಂಬರ್ನಂದು ಬೆಂಗಳೂರಿನಲ್ಲಿ ಅವರ ಓದುಗರು,ನಾಡಿನ ಹಿರಿಯ ಗಣ್ಯರು ಹಾಗು ಹಿರಿಯ ಸ್ವಯಂಸೇವಕರ ಸಮ್ಮುಖದಲ್ಲು ನಡೆಯಲಿದೆ.