ಕೋಮು ಮತ್ತು ನಿರ್ದೇಶಿತ ಹಿಂಸೆ ತಡೆ ಮಸೂದೆ-2001ರ ಕುರಿತ ಕಾರ್ಯಾಗಾರ

ಸೆಪ್ಟೆಂಬರ್ 13, ಬೆಂಗಳೂರು: ಸಂವಿಧಾನಾತ್ಮಕ ಸಂಸ್ಥೆಗಳನ್ನು ಅಪಮೌಲ್ಯ ಮಾಡುವ ಹಾಗೂ ಅಸಾಂವಿಧಾನಿಕ ಗುಂಪುಗಳಿಗೆ ಉತ್ತೇಜನ ಕೊಡುವ ಕೆಲಸವನ್ನು ಕಾಂಗ್ರೆಸ್ ಸಕಾಱರಗಳು ಹಿಂದಿನಿಂದಲೂ ನಡೆಸಿಕೊಂಡು ಬಂದಿವೆ ಎಂದು ಅಸ್ಸಾಂನ ನಿವೃತ್ತ ಎಡಿಜಿಪಿ ಶ್ರೀ ಅಶೋಕ್ ಸಾಹು ಅವರು ತಿಳಿಸಿದರು. ಕೋಮು ಮತ್ತು ನಿರ್ದೇಶಿತ ಹಿಂಸೆ ತಡೆ ಮಸೂದೆ-2001ರ ಕುರಿತು ಬೆಂಗಳೂರಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ವಕೀಲರಿಗಾಗಿ ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಉದ್ದೇಶಿತ ಈ ಮಸೂದೆಯನ್ನು ಶಿಫಾರಸು ಮಾಡಿರುವ ಸಂಸ್ಥೆ, ರಾಷ್ಟ್ರೀಯ ಸಲಹಾ ಮಂಡಳಿ (NAC)ಗೆ ಯಾವುದೇ ಸಂವಿಧಾನಾತ್ಮಕ ತಳಹದಿ ಇಲ್ಲ. ಈ ಸಲಹಾ ಮಂಡಳಿಗೆ ಕೋಮು ಹಿಂಸಾಚಾರ ಮಸೂದೆ ಬಗ್ಗೆ ಸಲಹೆ ನೀಡಲು ಮತ್ತೊಂದು ಸಲಹಾ ಮಂಡಳಿ ರಚಿಸಲಾಗಿದೆ. ಅದರ ಸದಸ್ಯರಲ್ಲಿ ಕೆಲವರು ಸ್ವತಃ ಕೋಮುವಾದಿಗಳಾಗಿದ್ದಾರೆ. ಸಮಿತಿಯ ಸದಸ್ಯರೊಲ್ಲಬ್ಬರಾದ General Council for Indian Christians(GCIC) ಯ ಪ್ರಧಾನ ಕಾರ್ಯದರ್ಶಿ ಜಾನ್ ದಯಾಳ್ ನೀಡಿರುವ ಅನೇಕ ಅಸಾಂವಿಧಾನಿಕ ಪದಪುಂಜಗಳನ್ನು ಯಥಾವತ್ತಾಗಿ ಕರಡು ಮಸೂದೆಯಲ್ಲಿ ಸೇರಿಸಲಾಗಿದೆ.

ಪ್ರಜಾತಂತ್ರ ವ್ಯವಸ್ಥೆಯನ್ನು ಗಟ್ಟಿಗೊಳಿಸಲೆಂದೇ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ವಿಚಕ್ಷಣಾ ಆಯೋಗ, ಸಿ.ಎ.ಜಿ, ಸುಪ್ರೀಂಕೋರ್ಟ್, ಚುನಾವಣಾ ಆಯೋಗ…..ಮುಂತಾದ ಸಂಸ್ಥೆಗಳಿದ್ದಾಗ್ಯೂ ರಾಷ್ಟ್ರೀಯ ಸಲಹಾ ಮಂಡಳಿಯಂತಹ ಅಸಾಂವಿಧಾನಿಕ ಸಂಸ್ಥೆಯ ಪ್ರಸ್ತುತತೆಯನ್ನು ಅವರು ಪ್ರಶ್ನಿಸಿದರು.

ಮಸೂದೆಯ ನಾಲ್ಕನೇ ಅಧ್ಯಾಯದಲ್ಲಿ Commission for National Justice ಎಂಬ ಸಂಸ್ಥೆಯನ್ನು ಹುಟ್ಟುಹಾಕುವಂತೆ ಸೂಚಿಸಲಾಗಿದೆ. ಇದು ರಾಜ್ಯ ಸರ್ಕಾರಗಳ ದಿನನಿತ್ಯದ ಕಾರ್ಯಗಳಲ್ಲಿ ಮೂಗುತೂರಿಸಿ ರಾಜ್ಯ ಸರ್ಕಾರಗಳ ಘನತೆಗೆ ಕುಂದು ತರುತ್ತದೆ. ಇದು ಒಕ್ಕೂಟ ವ್ಯವಸ್ಥೆಗೆ ಅಪಾಯ ತರಬಲ್ಲದು.

ಈ ಮಸೂದೆಯನ್ನು 2002ರಲ್ಲಿ ಗುಜರಾತ್ನಲ್ಲಿ ನಡೆದ ಹಿಂಸಾಚಾರವನ್ನು ಕಣ್ಣಮುಂದೆ ಇಟ್ಟುಕೊಂಡು ಹೆಣೆಯಲಾಗಿದೆ. ಕೆಲವು ಸರ್ಕಾರೇತರ ಸಂಸ್ಥೆಗಳ ಕಾರ್ಯಕರ್ತರು ಸೇರಿಕೊಂಡು ನರೇಂದ್ರ ಮೋದಿಯವರನ್ನು  ಹಿಂಸಿಸಲು ಯತ್ನಿಸುತ್ತಿದ್ದಾರೆ, ಅವರ ಕುಣಿತಕ್ಕೆ ತಕ್ಕಂತೆ ಕೇಂದ್ರ ಸರ್ಕಾರವು ವೇದಿಕೆ ಒದಗಿಸಿಕೊಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದೂಜಾಗರಣ ವೇದಿಕೆ ಸಂಚಾಲಕ ಶ್ರೀ ಜಗದೀಶ್ ಕಾರಂತ, ಖ್ಯಾತ ನ್ಯಾಯವಾದಿಗಳಾದ ವಿ.ಎಸ್ ಹೆಗ್ಡೆ, ಎಲ್.ಎನ್ ಹೆಗ್ಡೆ ಸೇರಿದಂತೆ 30ಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.