
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಹಿರಿಯ ಪುರಾತತ್ವ ತಜ್ಞರು ಮತ್ತು ಪದ್ಮವಿಭೂಷಣ ಪುರಸ್ಕೃತ ಶ್ರೀ ಬ್ರಜ ಬಸೀಲಾಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಖ್ಯಾತ ಪುರಾತತ್ವಶಾಸ್ತ್ರಜ್ಞ ಶ್ರೀ ಬ್ರಜ್ ಬಸಿ ಲಾಲ್ ಅವರ ನಿಧನ ತೀವ್ರ ನೋವು ತಂದಿದೆ. ಅವರು ಪ್ರತಿಭೆಯಿಂದ ಶ್ರೀಮಂತರಾಗಿದ್ದರು ಮತ್ತು ಭಾರತದ ಉನ್ನತವಾದ ಐತಿಹಾಸಿಕ ಪರಂಪರೆಯನ್ನು ಸ್ಥಾಪಿಸುವಲ್ಲಿ ತಮ್ಮ ಸಂಶೋಧನೆಯ ಮೂಲಕ ಗಣನೀಯ ಕೊಡುಗೆ ನೀಡಿದ್ದಾರೆ. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ಕೆಳಭಾಗದ ದೇವಾಲಯದ ಪರಿಶೀಲನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಸ್ಮರಣೀಯ. ಅವರಿಗೆ, ಅವರ ಕಾರ್ಯಕ್ಕೆ ನಮನ ಸಲ್ಲಿಸುತ್ತೇವೆ ಮತ್ತು ದೇವರು ಅವರ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷವನ್ನು ನೀಡಲಿ ಎಂಬ ನಮ್ಮ ಪ್ರಾರ್ಥನೆ.