
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಹಾಗು ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ.ನಾಗರಾಜ ಅವರು ಅಗಲಿದ ಹಿರಿಯ ಸಂತ ವಿಜಾಪುರದ ಜ್ಞಾನ ಯೋಗಾನಂದಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶ್ರದ್ಧಾಂಜಲಿ ಸಂದೇಶ
ಇಂದು ದೇವಲೋಕಕ್ಕೆ ತೆರಳಿದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಣ್ಯ ಸ್ಮೃತಿಗೆ ಶ್ರದ್ಧಾಪೂರ್ವಕ ನಮನಗಳು. ಜನತೆಯು ಪೂಜ್ಯಶ್ರೀಗಳನ್ನು ನಡೆದಾಡುವ ದೇವರೆಂದೇ ಭಕ್ತಿ ತೋರಿತು. ಆಧ್ಯಾತ್ಮಿಕ ಸಾಧನೆಯ ಶಿಖರವೇರಿದ, ಜನರು ನೈತಿಕ ಹಾಗೂ ಧಾರ್ಮಿಕವಾಗಿ ಉನ್ನತಿಗೇರುವಂತೆ ಸತತವಾಗಿ ಬೆಳಕು ನೀಡಿದ ಸಾತ್ವಿಕ ದೀಪ ಆರಿಹೋಯಿತು. ಇಡೀ ನಾಡೇ ಇಂದು ಕಂಬನಿ ಹರಿಸುತ್ತಿದೆ. ಅಸಂಖ್ಯ ಜನರಿಗೆ ಧರ್ಮದೀಕ್ಷೆಯನ್ನೂ ಕರ್ತವ್ಯಬೋಧೆಯನ್ನೂ ನೀಡಿದ್ದ ಅವರ ಜೀವನ ಸಂದೇಶವು ಚಿರಕಾಲ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ. ಜ್ಞಾನ,
ಸೇವೆ, ಕರುಣೆ, ಪ್ರೀತಿಗಳ ಸಾಕಾರಮೂರ್ತಿಯಾಗಿದ್ದ ಜ್ಞಾನಯೋಗಾಶ್ರಮದ ಸಂತರ ಪಾವನ ಸ್ಮೃತಿಗೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತ ಶತ ನಮನಗಳು.
ಶಿವಾಯ ನಮಃ॥
ದತ್ತಾತ್ರೇಯ ಹೊಸಬಾಳೆ,ಸರಕಾರ್ಯವಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ
ವಿ.ನಾಗರಾಜ, ಕ್ಷೇತ್ರೀಯ ಸಂಘಚಾಲಕರು,
ರಾಷ್ಟ್ರೀಯ ಸ್ವಯಂಸೇವಕ ಸಂಘ
03.01.2023