Dr Keshav Baliram Hedgewar, RSS Founder

by ನಾರಾಯಣ ಶೇವಿರೆ

Dr Keshav Baliram Hedgewar, RSS Founder
Dr Keshav Baliram Hedgewar, RSS Founder

ವ್ಯಕ್ತಿಯೋರ್ವನ ಬದುಕು ಕಥಾನಕದ ವಸ್ತುವಾಗುವುದು ಆ ಬದುಕಲ್ಲಿ ಸಾಧನೆಗಳಿದ್ದಾಗ. ವಿಚಾರಬದ್ಧವಾದ ಬದುಕು ಒಂದು ಅಧ್ಯಯನದ ವಸ್ತುವಾಗಬಲ್ಲದು. ವಿಚಾರಕ್ಕೆ ಬದ್ಧವಾಗಿ ಸಾಧನೆಗೈವಾತ ಆಂದೋಲನಗಳನ್ನೇ ಹುಟ್ಟುಹಾಕಬಲ್ಲ. ಇಂಥ ಆಂದೋಲನಗಳ ನೇತಾರರನ್ನೇ ನಿರ್ಮಾಣ ಮಾಡಬಲ್ಲ ಕೆಲವರ ಬದುಕು ಅತ್ಯಂತ ಎತ್ತರದ್ದು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲರಾಂ ಹೆಡಗೇವಾರರು ಈ ಎತ್ತರವನ್ನೇರಿದವರೆನಿಸುತ್ತದೆ. ಒಂದರ್ಥದಲ್ಲಿ ಅವರು ನಿರ್ಮಾಪಕರ ನಿರ್ಮಾಪಕರು.

ನಿರ್ಮಾಪಕರ ನಿರ್ಮಾಪಕರನ್ನು ಯಾರು ನಿರ್ಮಿಸುತ್ತಾರೆ? ಸಾಮಾನ್ಯವಾಗಿ ಅವರು ಸ್ವಯಂ ನಿರ್ಮಿತರು ಅಥವಾ ಹುಟ್ಟು ನಿರ್ಮಿತರು. ನಿರ್ಮಾಣವಾಗದೇ ಇದ್ದದ್ದನ್ನು ಅಥವಾ ನಿರ್ಮಾಣಕ್ಕೆ ತನ್ನನ್ನೊಡ್ಡಿಕೊಂಡಿದ್ದನ್ನು ನಿರ್ಮಾಣ ಮಾಡಬೇಕಾಗುತ್ತದೆ. ಇಲ್ಲವೇ ಅವರು ನಿರ್ಮಾಣಗೊಳ್ಳಲು ಸಣ್ಣದೋ ದೊಡ್ಡದೋ ಹೊರಗಿನದೊಂದು ಸಹಾಯ ಬೇಕಾಗುತ್ತದೆ. ಸ್ವಯಂನಿರ್ಮಿತರಿಗೆ ಈ ಬಾಹ್ಯ ಸಹಾಯದ ಅವಶ್ಯಕತೆಯಿಲ್ಲ. ಹುಟ್ಟು ನಿರ್ಮಿತರಿಗೆ ಈ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಬಾಹ್ಯಪ್ರೇರಣೆಯ ಅವಶ್ಯಕತೆಯೇ ಇಲ್ಲದವರ ಸಾಲಿನಲ್ಲಿ ಅಗ್ರೇಸರರಾಗಿ ನಿಲ್ಲಬಲ್ಲವರು ಡಾ. ಹೆಡಗೇವಾರರು.
ಅದು ಹೇಗಂದಿರಾ?
ನೋಡಿ, ಅವರನ್ನು ಹುಟ್ಟು ದೇಶಭಕ್ತರೆಂದು ಗುರುತಿಸಬಲ್ಲ ನಾಲ್ಕಾರು ಘಟನೆಗಳು ಅವರ ಬಾಲ್ಯಕಾಲದಲ್ಲೇ ನಡೆದುಬಿಡುತ್ತವೆ. ಅವುಗಳಲ್ಲಿ ಪ್ರಸಿದ್ಧವಾದದ್ದೆಂದರೆ ವಿಕ್ಟೋರಿಯಾ ರಾಣಿಯ ಅರುವತ್ತನೆಯ ಸಿಂಹಾಸನಾರೋಹಣದ ನಿಮಿತ್ತ ಶಾಲೆಯಲ್ಲಿ ನೀಡಿದ ಸಿಹಿಯನ್ನು ತಮ್ಮ ಎಂಟನೆಯ ವಯಸ್ಸಿನಲ್ಲೇ ಬಿಸಾಕಿದ್ದು, ಇತಿಹಾಸವನ್ನು ಪೂರ್ತಿ ಓದಿರದ; ಬ್ರಿಟಿಷರು – ವಿಕ್ಟೋರಿಯಾ ರಾಣಿ ಯಾರು, ಏನು ಮಾಡಿದರು ಇತ್ಯಾದಿ ಆಳ ವಿವರಗಳನ್ನು ಅರಿತಿರದ ರಾಷ್ಟ್ರದ – ರಾಷ್ಟ್ರೀಯತೆ -ರಾಷ್ಟ್ರೀಯರು ಇತ್ಯಾದಿ ಭಾವಗಳನ್ನು – ವಿಚಾರಗಳನ್ನು ಇನ್ನೂ ಸ್ಪಷ್ಟವಾಗಿ ಮಾಡಿಕೊಂಡಿರದ ಅಥವಾ ಮಾಡಿಕೊಳ್ಳಲು ತೀರಾ ಕಷ್ಟಸಾಧ್ಯ ಎಂದಂದುಕೊಳ್ಳಬಹುದಾದ ವಯಸ್ಸೊಂದರಲ್ಲಿ ಕೇಶವ, ಯಾರೇ ಆಗಲೀ ಎಲ್ಲೇ ಆಗಲೀ ಯಾವ ಕಾರಣಕ್ಕೇ ಆಗಲೀ ಕೊಟ್ಟ ಸಿಹಿಯನ್ನು ಮರುಮಾತಿಲ್ಲದೇ ತಿಂದು ಚಪ್ಪರಿಸಿ ಮುಂದಿದ್ದಕ್ಕೆ ಕೈಯೊಡ್ಡಬೇಕಾಗಿದ್ದ ವಯಸ್ಸೊಂದರಲ್ಲಿ ಕೇಶವ ಸಿಹಿಯಂಥ ಸಿಹಿಯನ್ನೇ ಬಿಸಾಕಿದನಲ್ಲ; ಯಾರೂ ಹೇಳಿಕೊಡದೆ, ಯಾರ ಪ್ರೇರಣೆಯಾಗಲೀ ಒತ್ತಡವಾಗಲೀ ಇಲ್ಲದೆ ಬಿಸಾಕಿದನಲ್ಲ – ಇದು ಹುಟ್ಟಿನಿಂದಷ್ಟೇ ಬರಬಹುದಾದ ದೇಶಭಕ್ತಿಯ ಭಾವ.
ಹುಟ್ಟಿನಿಂದ ಬಂದದ್ದು ಸ್ಥಾಯಿ. ಹೇಳುತ್ತಾರಲ್ಲ, ಹುಟ್ಟುಗುಣ ಸುಟ್ಟರೂ ಹೋಗದೆಂದು. ಇದು ಒಳ್ಳೆಯದಲ್ಲದ ಗುಣದ  ಬಗ್ಗೆ ಹೇಳಿರಬೇಕು. ಇಲ್ಲವಾದರೆ ಸುಡಬೇಕೇಕೆ? ಒಳ್ಳೆಯದಲ್ಲದ್ದು ಹೇಗೆ ಹೋಗದೋ ಹಾಗೇ, ಹುಟ್ಟಿನಿಂದ ಬಂದ್ದೇ ಹೌದಾಗಿದ್ದರೆ ಒಳ್ಳೆಯ ಗುಣವೂ ಹೋಗದು.
ಹುಟ್ಟಿನಿಂದ ಬಂದದ್ದು ಎಂಬುದಕ್ಕಾಗೇ ಗುಣವೊಂದಕ್ಕೆ ಜತೆಯಾಗಿ ಬಂದದ್ದು ಸ್ಥಾಯೀಧರ್ಮ.
ಹುಟ್ಟಿನಿಂದಲೇ ಒಂದಷ್ಟು ಗುಣಗಳು ಬರುತ್ತವೆ. ಒಳ್ಳೆಯದೂ, ಜೊತೆಗೆ ಕೆಟ್ಟದು ಕೂಡಾ. ಕೆಟ್ಟ ಗುಣಕ್ಕೆ ಆಕರ್ಷಣೆ ಅಧಿಕ. ಒಳ್ಳೆಯವರೂ ಅಲ್ಲದ ಕೆಟ್ಟವರೂ ಅಲ್ಲದ ಹತ್ತಾರು ತರುಣರನ್ನು ಕೆಟ್ಟವರನ್ನಾಗಿಸಲು ಒಬ್ಬನ ಅಲ್ಪ ಪರಿಶ್ರಮ ಸಾಕು. ಅದೇ ತರುಣರನ್ನು ಒಳ್ಳೆಯವರನ್ನಾಗಿಸಲು ಹಲವರ ಅಪಾರ ಪರಿಶ್ರಮವೇ ಬೇಕಾದೀತು.
ಒಳ್ಳೆಯವರಾಗುವುದೆಂದರೆ ಏರುವುದಲ್ಲವೆ? ಅದು ಪರಿಶ್ರಮದ ಕೆಲಸ.
ಕೆಟ್ಟವರಾಗುವುದೆಂದರೆ ಜಾರುವುದಲ್ಲವೆ? ಅದು ಪರಿಶ್ರಮವನ್ನು ಅಪಹಾಸಗೈಯುತ್ತದೆ, ಇಲ್ಲವೇ ನಿರ್ಲಕ್ಷಿಸುತ್ತದೆ.
‘ಸಹವಾಸ ದೋಷ’ ಎಂಬ ಶಬ್ದ ಅದಕ್ಕಾಗೇ ಟಂಕಿಸಲ್ಪಟ್ಟಿರಬೇಕು. ಒಳ್ಳೆಯದೂ ಕೆಟ್ಟದರಷ್ಟೇ ಮನುಷ್ಯಾಕರ್ಷಣೆಯನ್ನು ಹೊಂದಿರುತ್ತಿದ್ದರೆ. ‘ಸಹವಾಸ ದೋಷ’ ಎಂಬ ಶಬ್ದದಷ್ಟೇ ಪ್ರಮಾಣದಲ್ಲಿ ಅದಕ್ಕೇ ಪರ್ಯಾಯವಾಗಿ ಹಾಗೂ ವಿರೋಧಶಬ್ದವಾಗಿ ‘ಸಹವಾಸ ಗುಣ’ ಎಂಬ ಶಬ್ದವೂ ಬಳಕೆಯಾಗಬೇಕಾಗಿತ್ತು.
ಬಳಕೆಯಾಗುವುದು ಒತ್ತಟ್ಟಿಗಿರಲಿ, ವಿರೋಧಶಬ್ದವಾಗಿಯೂ ಕೂಡಾ ‘ಸಹವಾಸ ಗುಣ’ ಎಂಬುದು ಟಂಕಿಸಲ್ಪಡಲೇ ಇಲ್ಲ.
ನಿಜಕ್ಕಾದರೆ ಹುಟ್ಟುದೋಷ ಸುಟ್ಟರೂ ಹೋಗದು ಎಂದಾಗಬೇಕಿತ್ತು.
ಇಲ್ಲಿ ಗುಣದ ಮುಂದೆ ದೋಷವನ್ನು ತಂದು ನಿಲ್ಲಿಸಿದ್ದು ಹಣಾಹಣಿಗಾಗಿ ಅಲ್ಲ, ದೋಷ- ಕೆಟ್ಟತನಗಳೆಷ್ಟು ಪ್ರಭಾವೀ – ಆಕರ್ಷಕ – ದೀರ್ಘಕಾಲಿಕತೆಗಳುಳ್ಳವು ಎಂಬುದನ್ನು ಚಿತ್ರಿಸಲಿಕ್ಕಾಗಿ ಅಷ್ಟೆ.
ಇಂಥ ದೋಷ – ಕೆಟ್ಟತನಗಳನ್ನು ಸೀಳಿಕೊಂಡು, ಅವುಗಳಾವ ಪ್ರಭಾವಕ್ಕೂ ಜಗ್ಗದೆ ಬಗ್ಗದೆ ರಾಷ್ಟ್ರಭಕ್ತಿಯಂಥ ಉನ್ನತ ಭಾವವೊಂದು ಹುಟ್ಟಿನಿಂದಲೇ ಒಬ್ಬಾತನಲ್ಲಿ ಮೈದಾಳಿ ಬರುತ್ತದೆಂದರೆ ಅದಕ್ಕೊಂದು ಮಹತ್ತ್ವವಿರಲೇ ಬೇಕು ಮತ್ತು ಅದಕ್ಕೊಂದು ಹಿನ್ನೆಲೆಯೂ ಇರಲೇಬೇಕು.
ತೆಲಂಗಾಣದ ಕಂದಕುರ್ತಿ ಗ್ರಾಮ ಮೂಲದವರಾದ ಡಾ. ಹೆಡಗೇವಾರರ ವಂಶಸ್ಥರು ವೇದಾಧ್ಯಯನ – ಅಧ್ಯಾಪನ – ಅಗ್ನಿಹೋತ್ರಾದಿಗಳು ಕುಲಪರಂಪರೆಯಾಗಿ ಉಳ್ಳವಾಗಿದ್ದರು. ವೇದವಿದ್ಯೆಗೆ ಅಪಹಾಸ್ಯ – ವಿರೋಧಗಳಿದ್ದ ನಿಜಾಮನ ರಾಜ್ಯದಿಂದ ಅದಕ್ಕೆ ಪುರಸ್ಕಾರವಿದ್ದ ಭೋಸಲೇ ರಾಜರ ನಾಗಪುರಕ್ಕೆ ಡಾಕ್ಟರ್‌ಜೀಯವರ ತಂದೆಯ ಮುತ್ತಜ್ಜ ವಲಸೆ ಬರಬೇಕಾಗಿ ಬಂದುದು ಸಹಜವೇ ಇದೆ.
ಭಾರೀ ಮೈಕಟ್ಟು, ಜತೆಗೆ ಅಂಗಸಾಧನೆ – ಇವು ಈ ವಂಶದ ಕುಲ ಪರಂಪರೆಯೇ ಆಗಿಬಿಟ್ಟಿತ್ತು. ಜತೆಗೆ ಕುಲಸ್ವಭಾವವಾಗಿ ಬಂದ ಸಿಟ್ಟು!
ಬಡಕಲ ಶರೀರಿಯ ಸಿಟ್ಟು ಆತನದ್ದೇ ದವಡೆಗೆ ಬಂದೀತು. ಜಟ್ಟಿಯಂಥವನಿಗೆ ಸಿಟ್ಟು ಬಂದರೆ? ಡಾಕ್ಟರ್‌ಜೀ ಅಣ್ಣ ಮಹಾದೇವ ಶಾಸ್ತ್ರಿ ಒಮ್ಮೆ ನಿರಪರಾಧಿಯೋರ್ವನನ್ನು ಪೀಡಿಸುತ್ತಿದ್ದ ನಾಲ್ಕಾರು ಪುಂಡರಿಗೆ ತಮ್ಮ ಕೋಪಾವೇಶದಿಂದಾಗಿ ವಜ್ರಮುಷ್ಟಿಯ ರುಚಿ ತೋರಿಸಿದ್ದರು. ಹೀಗೆ ಇವರ ಕುಲಸ್ವಭಾವವಾಗಿ ಬಂದ ಸಿಟ್ಟು ತಮ್ಮ ದವಡೆಗೆ ಬರುವುದಂತಿರಲಿ ಅನ್ಯಾಯಕೋರರ ದವಡೆಯನ್ನು ಬಿಡುತ್ತಿರಲಿಲ್ಲ. ಅನ್ಯಾಯ ನಿವಾರಣೆಗೈದು ನ್ಯಾಯಸ್ಥಾಪನೆಗೇ ಅದು ಬಹುತೇಕ ಬಳಕೆಯಾಗುತ್ತಿತ್ತು.
ವೇದ ವಿದ್ಯೆ – ಮೈಕಟ್ಟು – ನ್ಯಾಯದ ಸಿಟ್ಟು ಈ ಮೂರೂ ಹದವಾಗಿ ಸಂಗಮಿಸಿ ಪರಂಪರೆಯಾಗಿ ಬಂದ ಕುಲದಲ್ಲಿ ಹುಟ್ಟು ರಾಷ್ಟ್ರಭಕ್ತನಾಗಿ ಕೇಶವ ಹುಟ್ಟಿದ್ದು ವಿಶೇಷವಲ್ಲ, ಕಾಕತಾಳೀಯವಲ್ಲ ಎಂಬಂತಿದೆ. ಅಂಥ ಕುಲಪರಂಪರೆಯೂ ಅಲ್ಲೊಬ್ಬ ಹುಟ್ಟು ರಾಷ್ಟ್ರಭಕ್ತ ಹುಟ್ಟುವುದೂ – ಇವು ಪರಸ್ಪರ ಸಂಬಂಧವುಳ್ಳವು.
ಈ ಸಂಬಂಧವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಬೇಕೇಕೆಂದರೆ, ಡಾಕ್ಟರ್‌ಜೀಯವರಲ್ಲಿ ಉದ್ದೀಪ್ತಗೊಂಡ ರಾಷ್ಟ್ರಭಾವವು ತಕ್ಷಣದ ಆವೇಶವೂ ಅಲ್ಲ, ಕ್ಷಣಿಕಾವೇಶವೂ ಅಲ್ಲ, ಬಾಹ್ಯಪ್ರೇರಿತವೂ ಅಲ್ಲ ಎಂಬ ಸ್ಪಷ್ಟತೆಗಾಗಿ.
ಅವರ ಮುಂದಿನ ಬದುಕು ಈ ಸ್ಪಷ್ಟತೆಯನ್ನಂತೂ ಸಾದರಪಡಿಸಿಯೇ ಬಿಡುತ್ತದೆ. ಆದರೆ ಆ ಕಾರ್ಯದ ಕಾರಣವನ್ನು ಅವರ ಹಿಂಬದುಕಿನ ಮೂಲದಿಂದಲೇ ತೋರಬೇಕಷ್ಟೆ.
ಅವರ ರಾಷ್ಟ್ರಭಕ್ತಿ ವಿಕಾಸೋನ್ಮುಖೀ ಚಲನೆಯುಳ್ಳದ್ದು; ದಾರ್ಶನಿಕ ಚಲನೆಯುಳ್ಳದ್ದು.
ತನ್ನಲ್ಲಿಯ ರಾಷ್ಟ್ರಭಕ್ತಿ ತನಗಷ್ಟೇ ಸೀಮಿತಾದರೆ ತನ್ನಲ್ಲೆಷ್ಟೇ. ಬೆಳೆದರೂ ಅದು ವ್ಯಕ್ತಿತ್ವವನ್ನು ವಿಕಸಿತಗೊಳಿಸೀತೇ ವಿನಾಃ ಸಮಷ್ಟಿಯಾಗಿ ಬೆಳವಣಿಗೆ ಸಾಧಿಸಲಾರದು. ಸಮಷ್ಟಿ ವ್ಯಕ್ತಿತ್ವವಿದ್ದವನಿಂದಷ್ಟೇ ಅವನಲ್ಲಿಯ ರಾಷ್ಟ್ರಭಾವವೂ ಸಮಷ್ಟಿ ವಿಕಾಸ ಹೊಂದೀತು.
ಸೀತಾಬರ್ಡಿ ಕೋಟೆಯ ಮೇಲಿದ್ದ ಆಂಗ್ಲರ ಯೂನಿಯನ್‌ಜಾಕ್ ಧ್ವಜವನ್ನಿಳಿಸಿ ಅಲ್ಲಿ ಭಗವಾಧ್ವಜವನ್ನೇರಿಸುವುದಕ್ಕಾಗಿ ಅಲ್ಲಿಗೆ ಹೋಗಲು ಬಾಲಕ ಕೇಶವ ವಝೆ ಮಾಸ್ತರರ ಮನೆಯ ಆವರಣದಲ್ಲಿ ತನ್ನ ಓರಗೆಯ ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು ಸುರಂಗ ತೋಡಲು ಮಣ್ಣನ್ನಗೆಸಿದ. ಅದೆಷ್ಟು ವ್ಯಾವಹಾರ್ಯ ಎಂಬ ಪ್ರಶ್ನೆ ಆ ಬಾಲಕ ಪ್ರಾಯದಲ್ಲಿ ಸುಳಿದಿರಲಾರದು. ಆದರೆ ಆ ಕಾರ್ಯಕ್ಕಾಗಿ ನಾಲ್ಕಾರು ಬಾಲಕರನ್ನು ತಯಾರುಗೊಳಿಸುವನಲ್ಲ, ಅವರಲ್ಲೂ ರಾಷ್ಟ್ರಭಕ್ತಿಯನ್ನುದ್ದೀಪಿಸಿ.
ರಾಷ್ಟ್ರಭಕ್ತಿ ಅನ್ನುವುದು ಒಂದು ಾವ. ಭಾವವೊಂದು ಉನ್ನತಗೊಳ್ಳುವುದು ಕರ್ತವ್ಯವಾಗಿ ಬೆಳೆದಾಗ, ರಾಷ್ಟ್ರಭಕ್ತಿ ಒಂದು ಮೌಲ್ಯವಾಗಿ ಸಾರ್ಥಕಗೊಳ್ಳುವುದು ಅದು ರಾಷ್ಟ್ರಧರ್ಮವಾಗಿ ರೂಪುಗೊಂಡಾಗ
ರಾಷ್ಟ್ರಭಕ್ತಿ – ಭಾವ ಸ್ವರೂಪದ್ದು.
ರಾಷ್ಟ್ರಧರ್ಮ – ಕರ್ತವ್ಯ ಸ್ವರೂಪದ್ದು.
ಇಪ್ಪತ್ತನೆಯೇ ಶತಮಾನದ ಪ್ರಾರಂಭ ದಿನಗಳು. ನಮ್ಮ ದೇಶದಲ್ಲಿ ಬ್ರಿಟಿಷರು ‘ವೆಂದೇ ಮಾತರಂ’ನ್ನು ನಿಷೇಧಿಸಿದ್ದರಷ್ಟೇ. ಶಾಲೆಯಲ್ಲಿ ವಂದೇ ಮಾತರಂ ಹೇಳಕೂಡದೆಂದು ಸುತ್ತೋಲೆಯನ್ನೇ ಹೊರಡಿಸಿದ್ದರು. ಕೇಶವ ಕಲಿಯುತ್ತಿದ್ದ ನೀಲ್‌ಸಿಟಿ ಶಾಲೆಗೆ ಶಾಲಾ ನಿರೀಕ್ಷಕರು ಬಂದಾಗ ಅವರು ಪ್ರವೇಶಗೈಯಲೆಂದು ಹೊರಟ ಎರಡೂ ತರಗತಿಗಳಲ್ಲೂ ವಂದೇ ಮಾತರಂ ಮೊಳಗಿದವು. ಆ ಆಂಗ್ಲನಿಷ್ಠ ಅಧಿಕಾರಿ ಕೇವಲ ಆಂಗ್ಲನಿಷ್ಠನಷ್ಟೇ ಆಗಿರಲಿಲ್ಲ. ಆತ ಮಹಮ್ಮದೀಯನೂ ಆಗಿದ್ದ. ತನ್ನ ಮತನಿಷ್ಠೆಯ ಕಾರಣಕ್ಕಾಗಿ ತಾಯಿಗೆ ನಮಿಸುವ ಕಲ್ಪನೆಗೇ ಆತ ಕಡು ವಿರೋಧಿಯಾಗಿದ್ದ. ತನ್ನ ಆಂಗ್ಲನಿಷ್ಠೆ ಹಾಗೂ ಮತನಿಷ್ಠೆ ಈ ಎರಡೂ ಕಾರಣಗಳಿಗಾಗಿ ‘ವಂದೇ ಮಾತರಂ’ ಘೋಷಣೆಯಿಂದಾದ ಅಪಮಾನ ಅವನ ಪಾಲಿಗೆ ದುಪ್ಪಟ್ಟು. ತರಗತಿಗೆ ತರಗತಿಯೇ, ನಿಜ ಹೇಳಬೇಕೆಂದರೆ ಶಾಲೆಗೆ ಶಾಲೆಯೇ ವಂದೇ ಮಾತರಂ ಘೋಷಣೆ ಕೂಗಬೇಕಿದ್ದರೆ ಅದರ ಹಿಂದೊಬ್ಬ ಸೂತ್ರಧಾರಿ ಇರಲೇಬೇಕೆಂದು ಆತ ತರ್ಕಿಸಿದ. ಸರಿಯಾಗಿಯೇ ತರ್ಕಿಸಿದ. ಅದಾರೆಂದು ಪತ್ತೆಹಚ್ಚಲು ಯತ್ನಿಸಿದ. ವಿಫಲವಾದಾಗ ಅದನ್ನು ಪತ್ತೆಹಚ್ಚಲು ಮುಖ್ಯೋಪಾಧ್ಯಾಯ ಓಕರಿಗೆ ಹೇಳಿ, ಆ ರಾಜದ್ರೋಹಿಯನ್ನು ಶಾಲೆಯಿಂದ ಹೊರಹಾಕಿ ತಕ್ಕ ಶಿಕ್ಷೆ ನೀಡಬೇಕೆಂದು ಕಟ್ಟಾಜ್ಞೆ ಮಾಡಿದ.
ಚತುರೋಪಾಯಗಳಲ್ಲಿ ಯಾವುದಕ್ಕೂ ಜಗ್ಗದ ವಿದ್ಯಾರ್ಥಿಗಳು ಕೇಶವನ ಹೆಸರು ಹೇಳಲಿಲ್ಲ. ತಮ್ಮ ಶೈಕ್ಷಣಿಕ ಭವಿಷ್ಯವನ್ನೂ ಲೆಕ್ಕಿಸದೆ ತಮ್ಮ ನಾಯಕನನ್ನು ಒಟ್ಟಾರೆ ಈ ಪ್ರಕರಣದ ಸಂಘಟಕನನ್ನು ಅವರೆಲ್ಲ ಸೇರಿ ಕಾಪಾಡಲೆತ್ನಿಸಿದರು. ತಮ್ಮನ್ನು ಶಾಲೆಯಿಂದ ಹೊರ ಹಾಕಿದಾಗ ಅವರೆಲ್ಲ ಶಾಲೆಯಿಂದ ಹೊರಬಿದ್ದು ಶಾಲೆಯ ವಿರುದ್ಧವೇ. ಮುಷ್ಕರ ಹೂಡಿದರು. ಪೊಲೀಸೇ ಶಾಲೆಗೆ ಕಾವಲು ನಿಲ್ಲಬೇಕಾಯಿತು. ಶಾಲೆಗೆ ಪ್ರತಿಷ್ಠೆ ಪ್ರಶ್ನೆ. ವಿದ್ಯಾರ್ಥಿ ಪಾಲಕರಿಗೆ ಮಕ್ಕಳ ಓದಿನ ಚಿಂತೆ. ಇಬ್ಬರೂ ರಾಜಿ ಮಾಡಿಕೊಂಡರು. ಮಕ್ಕಳು ನಾಯಕನ ಹೆಸರು ಹೇಳಬೇಕಿಲ್ಲ, ಮುಂದೆ ವಂದೇ ಮಾತರಂ ಹೇಳುವಂತಿಲ್ಲ ಎಂಬ ಕರಾರಿವಂತೆ ಶಾಲೆ ಪುನರಾರಂಭವಾಯಿತು.
ವಂೇ ಮಾತರಂ ಹೇಳಲು ಸ್ವಾತಂತ್ರ್ಯವಿಲ್ಲದ ಶಾಲೆಗೆ ಕೇಶವ ಹೋದಾನು ಹೇಗೆ?
ಒಟ್ಟಾರೆ ಈ ವಂದೇ ಮಾತರಂ ಪ್ರಕರಣದಲ್ಲಿ ಕೇಶವನ ನಾಯಕತ್ವವೂ ಪ್ರಕಟಗೊಂಡಿತ್ತು, ಸಂಘಟಕತ್ವವೂ ಪ್ರಕಟಗೊಂಡಿತ್ತು.
ಒಂದು ಚಳವಳಿಯನ್ನು ರೂಪಿಸುವಾತ ಸಂಘಟಕ. ಅದನ್ನು ಮುಂದಕ್ಕೆ ಕೊಂಡೊಯ್ಯುವಾತ ನಾಯಕ.
ಚಳವಳಿಯನ್ನು ಒಂದು ಸರಪಳಿಗೆ ಹೋಲಿಸುವುದಾದರೆ, ಆಗ ಆ ಸರಪಳಿಯು ಈಡೇರಿಸಬೇಕಾದ ಉದ್ದೇಶವನ್ನು ಈಡೇರಿಸುವಂತೆ ಮಾಡುವವ ನಾಯಕ. ಉದ್ದೇಶ ಈಡೇರಿಕೆಗೆ ಯೋಗ್ಯವಾಗುವಂತೆ ಅದರ ಪ್ರತಿಯೊಂದು ಕೊಂಡಿಯನ್ನೂ ಗಮನಿಸಿ ಸಾಮರ್ಥ್ಯ ಹೆಚ್ಚಿಸಿ ಅದನ್ನು ಉಪಯೋಗದ ಹಂತಕ್ಕೆ ತಂದು ನಿಲ್ಲಿಸುವಾತ ಸಂಘಟಕ.
ಸಂಘಟಕ ಗುಂಪನ್ನು ಪ್ರೀತಿಸುತ್ತಾನೆ. ಗುಂಪನ್ನು ಯೋಗ್ಯವಾಗಿ ನಿರ್ಮಿಸುತ್ತಾನೆ.
ನಾಯಕನನ್ನು ಗುಂಪು  ಪ್ರೀತಿಸುತ್ತೆ. ಗುಂಪಿಗೆ ಯೋಗ್ಯ ನೇತೃತ್ವ ನೀಡುತ್ತಾನೆ.
ಗುಂಪು ಹೇಳಿದಂತೆ ಸಂಘಟಕ ಕೇಳುತ್ತಾನೆ. ನಾಯಕ ಹೇಳಿದಂತೆ ಗುಂಪು ಕೇಳುತ್ತದೆ. ಇದನ್ನು ಹೀಗೆಯೇ ಬೆಳೆಸಬಹುದೆನ್ನಿ.
ಒಟ್ಟಾರೆಯಾಗಿ, ಸಂಘಟಕನದು ಎಲೆಮರೆಯ ಕಾಯಿಯಂಥ ಕಾಯಕ.
ನಾಯಕನದೇನಿದ್ದರೂ ವೇದಿಕೆ ಮೇಲೆಯೇ ನಿರ್ವಹಣೆ ಮಾಡಬೇಕಾದ ಸ್ವರೂಪದ್ದು.
ಇವೆರಡೂ ತದ್ವಿರುದ್ಧ ಎಂಬ ರೀತಿಯ ವ್ಯಕ್ತಿತ್ವಗಳು. ಕೇಶವನಲ್ಲದು ಅದ್ಭುತ ರೀತಿಯಲ್ಲಿ ಸಮನ್ವಯಗೊಂಡಿತ್ತು.
ಇಡಿಯ ಶಾಲೆ ಕೇಶವ ಹೇಳಿದಂತೆ ಕೇಳಿತ್ತು. ಅದೇ ವೇಳೆ ಅದು ಕೇಶವನ ಹೆಸರನ್ನು ಅಪ್ಪಿತಪ್ಪಿಯೂ ಹೇಳದಂತೆ ಸಂಯಮ – ಧೈರ್ಯ ತೋರಿತ್ತು. ಆ ರೀತಿ ತಾನೇ ರೂಪಿಸಿದ ಈ ವಿದ್ಯಾರ್ಥಿಗಳ ಗುಂಪಿಗೆ ಅದೇ ಗುಂಪಿನವಾಗಿ ಇಡಿಯ ಪ್ರಕರಣದಲ್ಲಿ ನೇತೃತ್ವವನ್ನೂ ಕೊಟ್ಟುಬಿಟ್ಟಿದ್ದ ಕೇಶವ.
ಕೇಶವನಲ್ಲಿ ರಾಷ್ಟ್ರಭಕ್ತಿಯು ರಾಷ್ಟ್ರಧರ್ಮವಾಗಿ ಬೆಳವಣಿಗೆ ಹೊಂದಿದ್ದರಿಂದಲೇ (ನಿಜಕ್ಕಾದರೆ ಕೇಶವನನ್ನು ಹುಟ್ಟು ರಾಷ್ಟ್ರಧರ್ಮಿ ಎನ್ನಬೇಕು. ರಾಷ್ಟ್ರಧರ್ಮವು ಮೊದಲು ಪ್ರಕಟವಾಗುವುದು ರಾಷ್ಟ್ರಭಕ್ತಿಯಾಗಿ ಅಷ್ಟೆ). ಆತ ಮೆಟ್ರಿಕ್‌ಶಿಕ್ಷಣ ಪೂರೈಸಿದ ಬಳಿಕ ಮನೆಯ ಅಗಾಧ ದಾರಿದ್ರ್ಯದ ನಡುವೆಯೂ ಅಂದರೆ ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಯ ನಡುವೆಯೂ ವೈದ್ಯ ಶಿಕ್ಷಣಕ್ಕೆಂದು ಕಲ್ಕತ್ತೆಗೆ ಹೋದ. ವೈದ್ಯ ಶಿಕ್ಷಣವು ನಿಮಿತ್ತವಷ್ಠೆ. ಲಕ್ಷ್ಯವಿದ್ದುದು ಅಲ್ಲಿಯ ಕ್ರಾಂತಿಕಾರಿಗಳ ಜತೆ ಕೆಲಸ ಮಾಡುವುದು, ಕ್ರಾಂತಿ ಕಾರ್ಯ ಕಲಿಯುವುದು ಮತ್ತು ಈ ಕಲಿಕೆ ಮುಂದಕ್ಕೆ ನಾಗಪುರದಲ್ಲಿ ಕ್ರಾಂತಿಕಾರ್ಯ ಬೆಳೆಸುವುದಕ್ಕಾಗಿ.
ಆಗಿನ ಖ್ಯಾತ ಕ್ರಾಂತಿಕಾರಿ ಶ್ರೀ ರಾಮಲಾಲ ವಾಜಪೇಯಿಯವರು ಈ ಕುರಿತು ತಮ್ಮ ಆತ್ಮಚರಿತ್ರೆಯಲ್ಲಿ ಬರೆದ ಅಂಶ ಹೀಗಿದೆ: ‘ಶ್ರೀ ದಾದಾಸಾಹೇಬ್‌ಬುಟೆಯವರಿಂದ ಆರ್ಥಿಕ ಸಹಾಯ ಪಡೆದು ಆರೆಸ್ಸೆಸ್ ಸಂಸ್ಥಾಪಕರಾದ ಶ್ರೀ ಕೇಶವರಾವ್ ಹೆಡಗೇವಾರ್ ಅವರನ್ನು ವಿದ್ಯಾಭ್ಯಾಸಕ್ಕಿಂತಲೂ ಮುಖ್ಯವಾಗಿ ಶ್ರೀ ಪುಲಿನಬಿಹಾರಿದಾಸ್ ಅವರ ನೇತೃತ್ವದಲ್ಲಿ ಕ್ರಾಂತಿಕಾರಿ ಸಂಘಟನೆಯ ಶಿಕ್ಷಣ ಪಡೆಯಲು ಕಳಿಸಲಾಯಿತು, ವಿದ್ಯಾರ್ಥಿ ೆಸೆಯಲ್ಲೇ ಆಂಗ್ಲರ ವಿರುದ್ಧದ ತನ್ನ ಹೋರಾಟ ಪ್ರವೃತ್ತಿಯಿಂದಾಗಿ ಗುಪ್ತಚರರ ಪೀಡೆಯನ್ನು ಬೆನ್ನಿಗಂಟಿಸಿಕೊಂಡಿದ್ದ ಕೇಶವರಾವ್, ಕಲ್ಕತ್ತೆಯ ವೈದ್ಯ ಶಿಕ್ಷಣದ ದಿನಗಳಲ್ಲೂ ತಮ್ಮದೇ ಕೋಣೆಯಲ್ಲಿ ಅಂಥೊಬ್ಬ ಗುಪ್ತಚರನಿರುತ್ತಲೇ ಕ್ರಾಂತಿಕಾರ್ಯದಲ್ಲಿ ತೊಡಗಿದರು. ಅಸಾಧ್ಯವೆನಿಸಬಲ್ಲ ಇಂಥ ಸಾಹಸವನ್ನು ಅವರು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು.
ಹುಟ್ಟು ರಾಷ್ಟ್ರಧರ್ಮಿಯೇ ಆಗಿದ್ದರೂ ಕೇಶವರಾಯರಿಗೆ ರಾಷ್ಟ್ರಧರ್ಮದ ಪಾಲನೆಯು ಅಕ್ಷರಶಃ ತಂತೀಯ ಮೇಲಿನ ನಡಿಗೆಯೇ ಆಗಿತ್ತು. ಆದರೆ ಅವರ ಪಾಲಿಗೆ ಅದು ಭೂಮಿಯ ಮೇಲಿನ ನಡಿಗೆ. ರಾಷ್ಟ್ರಧರ್ಮವನ್ನು ಪಾಲಿಸಬೇಕಾದ ಸ್ವಭಾವ ಮತ್ತು ಸಾಮರ್ಥ್ಯಗಳೆರಡೂ ಅವರಲ್ಲಿದ್ದವು.
ದೃಷ್ಟಾಂತಕ್ಕೆ – ಅವರೊಬ್ಬ ಉತ್ತಮ ಭಾಷಣಕಾರರಾಗಿದ್ದರು. ಧ್ಯೇಯವಾದಿ – ರಾಷ್ಟ್ರವಾದಿ ಉತ್ತಮ ಭಾಷಣಕಾರನೂ ಆಗಿದ್ದಿದ್ದರೆ ಏನಾಗಬಹುದು? ಆಗ ಅದು ಕೇವಲ ಭಾಷಣವಾಗುಳಿಯುವುದಿಲ್ಲ; ಭಾಷಣಕ್ಕೆ ಸಲ್ಲಬೇಕಾದ ಓತಪ್ರೋತ, ಉತ್ತರದ ಧ್ವನಿ, ಆಕರ್ಷಕ ಶೈಲಿ, ಉಗ್ರವೋ ವೀರಾವೇಶವೋ ಇತ್ಯಾದಿ ಲಕ್ಷಣಗಳಂತೂ ಇದ್ದೇ ಇದ್ದುವು. ಜತೆಗೆ ವಿಚಾರಬದ್ಧ ಮತ್ತು ಕೇಳುಗರನ್ನು ಯೋಚಿಸುವಂತೆ ರಾಷ್ಟ್ರಭಕ್ತರನ್ನಾಗಿಸುವಂತೆ, ರಾಷ್ಟ್ರಧರ್ಮಿಗಳೂ ಆಗುವಂತೆ ಮಾಡುವ ಪ್ರೇರಕ ಶೈಲಿ, ಹಾಗಾಗಿ ಡಾ.ಜೀ ಭಾಷಣಕ್ಕೆ ಸಾವಿರಗಟ್ಟಲೆ ಜನ ಸೇರುತ್ತಿದ್ದರು. ಬ್ರಿಟಿಷರಿಗಿದು ನುಂಗಲಾರದ ತುತ್ತಾದಾಗ ಅವರ ಭಾಷಣಕ್ಕೆ ನಿಷೇಧ ಹೇರಿದರಷ್ಟೇ ಅಲ್ಲ, ಐದು ಜನರ ನಡುವೆ ಮಾತಾಡಕೂಡದೆಂದೂ ವಿಧಿ ನಿಯಮಿಸಿದರು. ಈ ನಿಷೇಧ ಉಲ್ಲಂಘಿಸಿಯೇ ಭಾಷಣಗೈದರವರು.
ತನ್ನ ಜನರಲ್ಲಿ ರಾಷ್ಟ್ರಜಾಗೃತಿಗೊಳಿಸುವ ತನ್ನ ಸ್ವಾತಂತ್ರ್ಯವನ್ನು ಕಾನೂನು – ನಿಷೇಧದ ದಾರಿಯಲ್ಲಿ ಕಿತ್ತುಕೊಳ್ಳುವ ಅವಕಾಶವನ್ನು ಯಾರಿಗೂ ಕೊಡೆ ಎಂಬ ಧಾಟಿಯಲ್ಲಿ .
ಈ ಕುರಿತು ಮೊಕದ್ದಮೆ ಎದುರಿಸಬೇಕಾಗಿ ಬಂದಾಗ ತಮ್ಮ ಪರ ವಾದವನ್ನು ತಾವೇ ಮಂಡಿಸಿದರು. ಈ ವಾದ ಕೇಳಲೆಂದೇ ನ್ಯಾಯಾಲಯದಲ್ಲಿ ಒಳಗೂ ಹೊರಗೂ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ನೆರೆ ಜನರಿಗೆ, ರಾಷ್ಟ್ರಭಕ್ತ ಜನರಿಗೆ ನಿರಾಶೆಯಾಗದಂಥ, ಹೆಚ್ಚೇಕೆ ಅವರಲ್ಲಿ ರಾಷ್ಟ್ರಧರ್ಮವನ್ನು ಉದ್ದೀಸಿಸುವಂಥ ಭಾಷಣ ಸ್ವರೂಪದ ವಾದವನ್ನು ಕೇಶವರಾಯರು ಮಂಡಿಸಿದರು. ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶ ಸ್ಮೆಲಿ, ‘ನಿಮ್ಮ ಮೂಲ ಭಾಷಣಕ್ಕಿಂತ ಇಲ್ಲಿಯ ನಿಮ್ಮ ಸಮರ್ಥನೆಯೇ ಹೆಚ್ಚು ರಾಜದ್ರೋಹಾತ್ಮಕಾಗಿದೆ’ ಎಂದ.
ಬ್ರಿಟಿಷರಿಗೆ ಯಾವುದು ಹೆಚ್ಚು ರಾಜದ್ರೋಹಾತ್ಮಕವಾಗಿ ಕಾಣುತ್ತದೋ ಅದು ಭಾರತೀಯರಿಗೆ ಅಷ್ಟೇ ಹೆಚ್ಚು ರಾಷ್ಟ್ರಪ್ರೇಮಾತ್ಮಕವಾಗಿ ಕಾಣುತ್ತಿತ್ತು. ಅಂಥ ಗುಲಾಮೀ ದಿನಗಳವು. ಅಂದರೆ ಬ್ರಿಟಿಷರು ಹೇರಿದ ಗುಲಾಮತನದ ತೀವ್ರತೆಯನ್ನು ಇದರಿಂದರಿಯಲು ಸಾಧ್ಯ.
10 ಸಾವಿರ ರೂ. ಜಾಮೀನು ನೀಡಿದರೆ ಹಾಗೂ ಒಂದು ವರ್ಷ ಭಾಷಣ ಮಾಡಲ್ಲ ಎಂದು ಬರೆದು ಕೊಟ್ಟರೆ ಜೈಲು ಶಿಕ್ಷೆಯಿಂದ ಮುಕ್ತಗೊಳಿಸುವೆನೆಂದ ನ್ಯಾ ಸ್ಮೆಲಿ.
ವೈಯಕ್ತಿಕವಾಗಿ ಡಾಕ್ಟರ್‌ಜೀ ಬಡವರಿದ್ದಿರಬಹುದು. ಭಾರೀ ದೊಡ್ಡ ಗಣ್ಯ ಹಾಗೂ ಶ್ರೀಮಂತ ಸ್ನೇಹಿತ ಬಳಗವನ್ನು ಹೊಂದಿದ್ದ ಅವರು ಸಾಮಾಜಿಕವಾಗಿ ಭಾರೀ ಶ್ರೀಮಂತರೇ ಇದ್ದರು.
ತಮ್ಮ ಸಾಮಾಜಿಕ ಶ್ರೀಮಂತಿಕೆಯನ್ನು ಯಾವುದೇ ದುರ್ಭರ ಸನ್ನಿವೇಶದಲ್ಲೂ ತಮ್ಮ ವೈಯಕ್ತಿಕ ಬಡತನ ನಿವಾರಣೆಗೆ ಅವರು ಬಳಸಿಕೊಳ್ಳಲೇ ಇಲ್ಲ. ಅಂಥ ವ್ಯಕ್ತಿತ್ವ ಅವರದು.
ಜತೆಗೆ, ಒಂದು ವರ್ಷ ಬಿಡಿ, ಒಂದು ದಿನವೇ ಆದರೂ ತನ್ನ ಜನರ ಜತೆ, ಅದೂ ರಾಷ್ಟ್ರ ವಿಷಯಕವಾಗಿ ಮಾತಾಡಕೂಡದೆಂಬ ಸ್ವನಿಷೇಧವನ್ನು ಎಂಥದ್ದೇ ಸಂದರ್ಭದಲ್ಲಿ ಒಪ್ಪಿಕೊಳ್ಳಲಾರರು ಡಾಕ್ಟರ್‌ಜೀ.
ಹಾಗಾಗಿ ಒಂದು ವರ್ಷ ಜೈಲು ಾಸ ಅನಿವಾರ್ಯವಾಯಿತು ಅವರಿಗೆ.
ಅದು ಕೃಷ್ಣನ ಜನ್ಮಸ್ಥಾನ. ಸಂಘಸ್ಥಾಪಕರದ್ದೂ ಕೂಡಾ. ಸಂಘದ ಬೀಜ ಚಿಂತನೆಯ ರೂಪದಲ್ಲಿ ಮೊಳಕೆಯೊಡೆದದ್ದು ಜೈಲಿನಲ್ಲೇ.
ಏರುಗತಿಯ ನಿರಂತರ ಸಕ್ರಿಯತೆಯಿಂದ ಸಾಧನೆ. ಅಂಥ ಸಾಧಕನಿಗೆ ಅನಿವಾರ್ಯವಾಗಿಯೇ ಆದರೂ ಒಂದು ಬಿಡುವು ಸಿಕ್ಕೆ ಸಾಧನೆಯ ಅನುಭವದ ಆಧಾರದಲ್ಲೇ ಚಿಂತಕನಲ್ಲದವನಲ್ಲೂ ಒಂದು ಉನ್ನತ  ಚಿಂತನೆ ಚಿಗುರೊಡೆಯುತ್ತದೆ. ಡಾಕ್ಟರ್‌ಜೀ ಚಿಂತಕರಲ್ಲ, ದ್ರಷ್ಟಾರರೇ ಆಗಿದ್ದರು. ದಾರ್ಶನಿಕ ಜ್ಯೋತಿಷಿಯಲ್ಲ. ಹಿಂದಣ ಹಾಗೂ ವರ್ತಮಾನದ ಅನುಭವದ ಆಧಾರದಲ್ಲಿ ಮುಂದಾಗುವುದನ್ನು ಊಹಿಸಬಲ್ಲವ.
ಹಾಗೆ ಾರ್ಶನಿಕವಾಗಿ ಊಹಿಸಬಲ್ಲವ ಯಾವುದೇ ಸಮಸ್ಯೆಯನ್ನು ಮೂಲಭೂತವಾಗಿ ಗ್ರಹಿಸಬಲ್ಲ. ಅದರ ಪರಿಹಾರವನ್ನು ಕೂಡ ಮೂಲಭೂತವಾಗಿಯೇ ಕಂಡುಕೊಳ್ಳಬಲ್ಲ. ಇದಕ್ಕೊಂದಿಷ್ಟು ವಿವರವನ್ನು ಕೊಡುವುದಾದರೆ –
ಅಂದಿನ ಬಹುತೇಕ ಹೋರಾಟಗಾರರಲ್ಲಿದ್ದ ಪ್ರಶ್ನೆ – ಸ್ವಾತಂತ್ರ್ಯ ಎಂದು, ಎಂತು ಬಂದೀತು?
ಡಾಕ್ಟರ್‌ಜೀಗೆ ಕಾಡಿದ ಪ್ರಶ್ನೆ – ಸ್ವಾತಂತ್ರ್ಯ ಹೇಗೆ ಹೋಯಿತು? ಮರಳಿ ಬಂದಾಗ ಅದನ್ನು ಉಳಿಸಿಕೊಳ್ಳುವುದೆಂತು?
ಈ ಮೂಲಭೂತ ಪ್ರಶ್ನೆ ಕಾಡಿದವರಿಗೆ ಸ್ವಾತಂತ್ರ್ಯವು ರಾಜ್ಯ / ರಾಜಕೀಯ ಸಂಬಂಧಿಯಾಗ್ಟೇ ಕಾಣದೆ ರಾಷ್ಟ್ರಸಂಬಂಧಿಯಾಗಿ ಕಾಣುತ್ತದೆ. ರಾಷ್ಟ್ರದ ಅಸ್ಮಿತೆ ಪ್ರಮುಖ ವಿಷಯವಾಗುತ್ತದೆ.
ರಾಷ್ಟ್ರದ ಆತ್ಮದಂತಿರುವ ಮೂಲ ಸಮಾಜವೇ ಅಂದರೆ ಹಿಂದು ಸಮಾಜವೇ ದುರ್ಬಲವಾದರೆ ಸ್ವಾತಂತ್ರ್ಯಸಿಕ್ಕಿದರೂ ರಾಷ್ಟ್ರ ಸಿಗದಂಥ ಕಠೋರ ಸನ್ನಿವೇಶ ಎದುರಾಗುತ್ತದೆ. ಪಂಜಾಬ್, ಸಿಂಧ್, ಬಂಗಾಳದಂಥ ಅಹಿಂದು ಬಹುಸಂಖ್ಯಾತ ಪ್ರದೇಶಗಳು ಮುಂದೊಮ್ಮೆ ಮೂಲ ಹಿಂದು ಸಮಾಜವನ್ನು ಘಾತಿಸುವ ಹಾಗೂ ರಾಷ್ಟ್ರದಿಂದಲೇ ಬೇರೆಯಾಗುವ ಸನ್ನಿವೇಶವನ್ನು ಡಾಕ್ಟರ್‌ಜೀ 1932ರಷ್ಟು ಪೂರ್ವದಲ್ಲೇ ಊಹಿಸಿದ್ದರು.
ಹೋದ ಸ್ವಾತಂತ್ರ್ಯ ಬಂದೇ ಬರುತ್ತದೆ. ಆದರೆ ಕೈತಪ್ಪಿ ಹೋದ ರಾಷ್ಟ್ರ ಪುನಃ ಕೈಸೇರುವುದಶಕ್ಯ. ಅದಕ್ಕಾಗೇ ಡಾಕ್ಟರ್‌ಜೀ ನಮ್ಮೀ ರಾಷ್ಟ್ರವನ್ನು ಅದರ ಮೂಲ ಸಮಾಜದ ಹೆಸರಿನಲ್ಲೇ ‘ಹಿಂದೂ ರಾಷ್ಟ್ರ’ ಎಂದು ಗುರುತಿಸಿದರು. ಯಾವ ಸಮಾಜ ಇಲ್ಲದಿದ್ದರೆ ಒಂದು ರಾಷ್ಟ್ರಕ್ಕೆ ಅದರ ಮೂಲ ಅಸ್ತಿತ್ವವೇ ಇರಲಾರದೋ ಆ ಸಮಾಜದ ಹೆಸರಿನಿಂದ ಆ ರಾಷ್ಟ್ರವನ್ನು ಗುರುತಿಸುವುದು ಅತ್ಯಂತ ಉಚಿತವಾದುದು. ಅದು ರಾಷ್ಟ್ರದ ಅಸ್ಮಿತೆಯನ್ನು ನಿಖರಾಗಿ ಗುರುತಿಸಿ ಸ್ಪಷ್ಟಪಡಿಸಿಕೊಳ್ಳುವ, ರಾಷ್ಟ್ರಜೀವನವನ್ನು ಯಾವ ದಿಸೆಯಲ್ಲಿ ಮುಂದುವರಿಸಿಕೊಂಡು ಹೋಗಬೇಕೆನ್ನುವ ದಿಕ್ಸೂಚಿ ಕ್ರಮವೂ ಹೌದು.
ಡಾಕ್ಟರ್‌ಜೀ ಈ ರೀತಿ ತೊಡಗಲು ರಾಷ್ಟ್ರೀಯ ಅಸ್ಮಿತೆಗೇ ಸವಾಲಾಗಬಲ್ಲ ಅಂಶಗಳು ಕಾರಣವಿದ್ದವು.
ಉದಾಹರಣೆಗಾಗಿ ಕೆಲವನ್ನೇ ಗುರುತಿಸುವುದಾದರೆ:
– 1923ರ ಕಾಕಿನಾಡ ಕಾಂಗ್ರೆಸ್ ಅಧಿವೇಶನದಲ್ಲಿ ಪರಂಪರೆಯಂತೆ ‘ವಂದೇ ಮಾತರಂ’ ಗೀತೆಗೆ ತಮ್ಮ ಮತೀಯ ನೆಲೆಯಲ್ಲಿ ವಿರೋಧ ಸೂಚಿಸಿ ವೇದಿಕೆಯಿಂದಿಳಿದು ಹೊರ ನಡೆದಿದ್ದರು ಅಧಿವೇಶನಾಧ್ಯಕ್ಷ ಮಹಮ್ಮದ್ ಆಲಿ.
– ತುಕರ್ವೇ  ಉಚ್ಚಾಟಿಸಿದ ಖಲೀಫನನ್ನು ಮರುಸ್ಥಾಪಿಸಬೇಕೆಂದು ಭಾರತೀಯ ಮುಸ್ಲಿಮರು ಇಲ್ಲಿ ದಂಗೆ ನಡೆಸಿ ಕೇರಳದಲ್ಲಿ ನೂರಾರು ಹಿಂದುಗಳನ್ನು ಹತ್ಯೆಗೈದರು. ಹಿಂದು ಸ್ತ್ರೀಯರ ಮಾನಭಂಗಗೈದರು, ಮತಾಂತರವನ್ನೂ ಮಾಡಿದರು.
– ನಾಗಪುರ, ಅಮೇಠಿ, ಗುಲ್ಬರ್ಗಾ, ಕೋಹಾಟ್‌ಗಳಲ್ಲಿ ಮುಸ್ಲಿಮರು ನಡೆಸಿದ ದಂಗೆಗೆ ಗಾಂಧೀಜಿ ಶಾಂತಿ ಭಾಷಣಗೈದಾಗ ‘ನಿಮ್ಮ ಶಾಂತಿ ಭಾಷಣ ಸಾಕೆಂದರು’ ಗಾಂಧಿ ಶಿಷ್ಯೆ ಸರೋಜಿನಿ ನಾಯ್ಡು.
– 21 ದಿನಗಳ ಗಾಂಧೀಜಿ ಉಪವಾಸದ ಪರಿಣಾಮ ಮುಸ್ಲಿಮರು ಐಕಮತ್ಯ ಘೋಷಣೆ ಹೊರಡಿಸಿದಾಗ ಅದರ ಅಪ್ರಾಮಾಣಿಕತೆಯನ್ನು ಚೆನ್ನಾಗಿಯೇ ಅರಿತಿದ್ದ ಡಾ. ಅಂಬೇಡ್ಕರ್ ಹೇಳಿದ್ದಿಷ್ಟು: ‘ಈ ಐಕಮತ್ಯ ಘೋಷಣೆ ಆದರೆ ಅವುಗಳ ಉಲ್ಲಂಘನೆಗೆ ಮುಕ್ತ ಅವಕಾಶ ಸಿಕ್ಕಂತೆ, – ‘ಅನೇಕ ಕಾಂಗ್ರೆಸ್ಸಿಗರು ರಾಷ್ಟ್ರೀಯತೆ ಮುಸುಕಿನಲ್ಲಿ ಮತೀಯವಾದಿಗಳಾಗಿದ್ದರು’ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಸ್ವತಃ ನೆಹರೂರವರೇ ಹೇಳಿದ್ದರು, ಆ ಬಳಿಕ.
– ‘ಹಿಂದು ರಾಷ್ಟ್ರ ಭವಿಷ್ಯ ಉಜ್ವಲವಾಗಲು ಶುದ್ಧಿ, ಹಿಂದುಗಳ ಸಂಘಟನೆ, ಹಿಂದು ರಾಜ್ಯ ಸ್ಥಾಪನೆ,  ಭಾರತ, ಅಫ್‌ಘಾನಿಸ್ಥಾನ ವಿಲೀನ – ಈ ನಾಲ್ಕು ಕೈಗೂಡಬೇಕು’ ಎಂದು 1925ರಲ್ಲಿ ಲಾಲಾ ಹರದಯಾಳರು ಲಾಹೋರಿನ ‘ಪ್ರತಾಪ’ ಪತ್ರಿಕೆಯಲ್ಲಿ ಬರೆದರು.
– ಆವಾಗಲೇ ಸಾವರ್ಕರ್ ‘ಹಿಂದುತ್ವ’ ಪುಸ್ತಕ ಬೆದಿದ್ದರು.
ರಾಷ್ಟ್ರದ ಅಸ್ಮಿತೆಯನ್ನುಳಿಸಲು ಮತ್ತದನ್ನು ಉನ್ನತ ಸ್ಥಿತಿಗೇರಿಸಲು ಡಾಕ್ಟರ್‌ಜೀ ಕಂಡುಕೊಂಡ ದಾರಿ ಹಿಂದು ಸಂಘಟನೆ.
ಈ ದಾರಿಯಲ್ಲಿ ತೊಡಗಲು ಅವರಿಗೆ ಹಲವು ವಿಧ ಸಂಘಟನೆಗಳಲ್ಲಿ ಕಾರ್ಯ ಮಾಡಿದ ಮತ್ತವುಗಳಲ್ಲಿ ಕೆಲವನ್ನು ಸ್ವತಃ ಾವೇ ಸ್ಥಾಪಿಸಿದ ಅನುಭವದ ಪಾಯ ಇತ್ತು.
ಅವುಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ:
– ಕ್ರಾಂತಿಕಾರ್ಯದಲ್ಲಿ ಕಾಂಗ್ರೆಸ್ಸಿನಲ್ಲೂ  ಪದನಿಮಿತ್ತ ಹೊಣೆವಹಿಸಿ ಕೆಲಸ ಮಾಡಿದ್ದರು.
– ಕ್ರಾಂತಿಕಾರಿ ಗಂಗಾಧರ ಪ್ರಸಾದ್ ಪಾಂಡೆ ಮೂಲಕ ‘ರಾಷ್ಟ್ರೀಯ ಮಲ್ಲವಿದ್ಯಾ ಶಾಲೆ’ ಪ್ರಾರಂಭಿಸಿದರು.
– 1921ರಲ್ಲಿ ಹಿಂದು ಮಹಾಸಭೆಯ ಕಾರ್ಯದರ್ಶಿಯಾಗಿದ್ದರು.
– ‘ನಾಗಪುರ ನ್ಯಾಷನಲ್ ಯೂನಿಯನ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
– ವಿದ್ಯಾರ್ಥಿಗಳಲ್ಲಿ ಉತ್ಸವಗಳ ಮೂಲಕ ರಾಷ್ಟ್ರಭಾವ ಜಾಗೃತಿ ಮೂಡಿಸಲು ‘ರಾಷ್ಟ್ರೀಯ ಉತ್ಸವ ಮಂಡಲ’ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು.
– 1920ರಲ್ಲಿ ಪರಾಂಜಪೆಯವರು ಪ್ರಾರಂಭಿಸಿದ ‘ಭಾರತ ಸ್ವಯಂಸೇವಕ ಮಂಡಲ’ದಲ್ಲಿ ಸಕ್ರಿಯ ಭಾಗಿ.
– ಸಂಪಾದಕರಾಗಿ ಯಾರೂ ಮುಂದೆ ಬರಲೊಪ್ಪದ ಮುಳುಗುತ್ತಿದ್ದ ‘ಸ್ವಾತಂತ್ರ್ಯ’ ಎಂಬ ದೈನಿಕ ಪತ್ರಿಕೆಗೆ ಸಂಪಾದಕರಾಗಿ ಅದನ್ನು ಮೇಲೆತ್ತಿದರು.
– ತಿಲಕರ ‘ಕೇಸರಿ’ ಹಾಗೂ ‘ಸಂಕಲ್ಪ’ ಪತ್ರಿಕೆಗಳಿಗೆ ಚಂದಾ ಹಣ ಸಂಗ್ರಹವನ್ನೂ ತಾವೇ ಮಾಡಿದರು.
ಹೀಗೆ ಕಾರ್ಯಕರ್ತನಾಗಿ, ಸಂಘಟಕನಾಗಿ, ನಿರ್ವಾಹಕನಾಗಿ, ಸಂಸ್ಥಾಪಕನಾಗಿ, ನಾಯಕನಾಗಿ ವಿಧವಿಧ ಶೈಲಿಯ ಜನ – ಸಂಘ – ಸಂಸ್ಥೆಗಳೊಂದಿಗೆ ಾರ್ಯ ಮಾಡುತ್ತ ಮಾಡುತ್ತ ಅನುಭವದ ಅಗಾಧ ನಿಧಿಯಾಗಿದ್ದರು ಡಾಕ್ಟರ್‌ಜೀ.
ಇಂಥ ಡಾಕ್ಟರ್‌ಜೀಗೆ ಜೈಲಲ್ಲಿ ಬರೋಬ್ಬರಿ ಒಂದು ವರ್ಷ ಬಿಡುವು ಸಿಕ್ಕಿತು ದಾರ್ಶನಿಕರಾಗಿ ಚಿಂತಿಸಲು.
ಜೈಲು ಸೇರಿದಾಗ ನಡೆದ ಅಭಿನಂದನಾ ಸಭೆಯಲ್ಲಿ ‘ಮುಂಪೀಳಿಗೆಯ ನಾಯಕ ಾಕ್ಟರ್‌ಜೀ’ ಎಂದಿದ್ದರು ನಾರಾಯಣರಾವ್ ಅಳೇಕರ್. ‘ಅನಿವಾರ್ಯವಾದಾಗ ಜೈಲಿಗೆ ೋಗಲೂ ಸಿದ್ಧವಿರಬೇಕು, ಆದರೆ ಜೈಲಿಗೆ ಹೋಗುವುದೇ ಗುರಿಯಾಗಕೂಡದು’ ಎಂದು ಡಾಕ್ಟರ್‌ಜೀ ಜೈಲಿಗೆ ಹೋಗುವಾಗ ನೀಡಿದ ಸಂದೇಶವನ್ನು ವಿಶ್ವನಾಥರಾವ್ ಕೇಳ್ಕರ್ ಸ್ಮರಿಸಿಕೊಂಡಿದ್ದರು.
ಜೈಲಿಂದ ಹೊರಬಂದ ಬಳಕ ಎಲ್ಲೆಡೆ ್ವಾಗತ ಸಭೆಗಳಾದವು. ಸಭೆಗಳಲ್ಲಿ ಪತ್ರಿಕೆಗಳಲ್ಲೂ ಡಾಕ್ಟರ್‌ಜೀಯ ಸ್ತುತಿಯೇ ಸ್ತುತಿ.
ಹಿಂದು ಸಂಘಟನೆಯ ಕನಸು ಹೊತ್ತು ಹೊರಬಿದ್ದ ಡಾಕ್ಟರ್‌ಜೀಯವರ ಸಂಕಲ್ಪವನ್ನು ವಿಚಲಿತಗೊಳಿಸಲು ಈ ಯಾವ ಸನ್ಮಾನ – ಸ್ತುತಿಗಳಿಗೂ ಸಾಧ್ಯವಾಗಲಿಲ್ಲ.
ಸನ್ಮಾನ – ಸ್ತುತಿಗಳಿಗೆ ಅವರು ನೀಡಿದ ಉತ್ತರದಲ್ಲೇ ಆ ಗಟ್ಟಿತನ ಪ್ರಕಟಗೊಂಡಿದೆ. ಅವರು ಉತ್ತರಿಸಿದ್ದಿಷ್ಟು; ‘ಸರ್ಕಾರೀ ಅತಿಥ್ಯದಿಂದ (ಜೈಲುವಾಸ) ನನ್ನ ಅರ್ಹತೆಯೇನೂ ಬೆಳೆದಿಲ್ಲ.’
ಹಿಂದು ಸಂಘಟನೆಯ ತಮ್ಮ ಕಾರ್ಯಧ್ಯೇಯವನ್ನು ಅವರು ಉನ್ನತ ನಾಯಕೊಂದಿಗೂ ಚರ್ಚಿಸಿದರು. ಓರಗೆಯ ಸ್ನೇಹಿತರ ಜತೆಗೂ ಚರ್ಚಿಸಿದರು.
ಕೊನೆಗೆ 1925ರ ವಿಜಯದಶಮಿಯಂದು ತಮ್ಮದೇ ಮನೆಯ ಮಹಡಿಯಲ್ಲಿ ಪುಟ್ಟ ಕೋಣೆಯಲ್ಲಿ 17 ಮಂದಿ ಸೇರಿ ಸಂಘವನ್ನು ಪ್ರಾರಂಭಿಸಿದರು. ‘ನಾವೆಲ್ಲ ಸೇರಿ ಇಂದು ಸಂಘವನ್ನು ್ರಾರಂಭಿಸಿದ್ದೇವೆ, ಎಂದರು.
ಸಾಮೂಹಿಕ ಜೀವನದಲ್ಲಿ ಅಥವಾ ಸಮಷ್ಟಿ ಜೀವನದಲ್ಲಿ ವೈಯಕ್ತಿಕತೆಯನ್ನು ಹೋಮ ಮಾಡುವುದೆಂದರೆ ಹೀಗೇ ಅಲ್ಲವೆ? ತಾವೇ ಪ್ರಾರಂಭಿಸಿದ ಸಂಘ, ಜಾಗವೂ ತಮ್ಮದೇ. ಆದರೂ ಅಲ್ಲಿ ‘ಸ್ವ’ಭಾವಕ್ಕೆ ಇನಿತೂ ಅವಕಾಶವಿಲ್ಲ.
ನಾವು ್ರಾರಂಭಿಸಿದ ಸಂಘಕ್ಕೆ ನಾನು ಮುಖ್ಯಸ್ಥನಾಗಬೇಕೆಂಬ ಆಗ್ರಹವಂತೂ ಬರಲೇ ಆರದು. ಸಾಂಘಿಕ್ ಒಂದರಲ್ಲಿ ಅಪ್ಪಾಜಿ ಜೋಶಿ ಡಾಕ್ಟರ್‌ಜೀಯವರನ್ನು ಸರಸಂಘಚಾಲಕರೆಂದು ಘೋಷಿಸಿದಾಗ ಒಲ್ಲದ ಮನಸ್ಸಿನಿಂದೊಪ್ಪಿ ಹೇಳಿದ್ದಿಷ್ಟು: ನಾನು ಅಯೋಗ್ಯನೆಂದು ಅನಿಸಿಾಗ ಈ ಸ್ಥಾನಕ್ಕೆ ಯೋಗ್ಯನಾದವನನ್ನು ಆಯ್ಕೆಮಾಡಿ. ಆತನ ಆಜ್ಞೆಯನ್ನು ಶಿರಸಾ ಪಾಲಿಸುವೆ.
ನಾವು ಈ ಸಂಘವನ್ನು ಪ್ರಾಂಭಿಸಿದ್ದೇವೆ ಎಂದವರಿಂದ ಮಾತ್ರ ಬರಬಹುದಾದ ಉತ್ತರದ ಮಾತಿದು.
ನಾಸಿಕದ ಶಂಕರಾಚಾರ್ಯರು ಅವರಿೆ ನೀಡಿದ ರಾಷ್ಟ್ರಸೇನಾಪತಿ ಎಂಬ ಬಿರುದನ್ನು ಸ್ವಯಂಸೇವಕರು ಡಾಕ್ಟರ್‌ಜೀ ಹೆಸರಿನ ಹಿಂದೆ ಬಳಸಲು ಪ್ರಾರಂಭಿದಾಗ ಅದನ್ನು ಬಳಸಕೂಡದೆಂದು ಕಟ್ಟುನಿಟ್ಟಾಗಿ ಸೂಚಿಸಿದರು. ಸಂಘಕಾರ್ಯಕ್ಕೆ ಆ ಬಿರುದಿನಿಂದ ಉಪಯೋಗ ಇಲ್ಲ ಎಂಬುದೇ ಅವರೀ ಸೂಚನೆಗೆ ಕಾರಣವಾಗಿತ್ತು.
ಸರಸಂಘಚಾಲಕ ಎಂಬ ಪದನಾಮ ಸಾಮಾನ್ಯ ಸ್ವಯಂಸೇವಕರೇ ಕೊಟ್ಟಿದ್ದಾದರೂ ಸಂಘಕಾರ್ಯಕ್ಕೆ ಉಪಯೋಗಿಯಾಗುವುದಾದರೆ ಇರಲಿ. ರಾಷ್ಟ್ರಸೇನಾಪತಿ ಎಂಬ ಪದನಾಮ ಶಂಕರಾಚಾರ್ಯರೇ ನೀಡಿದರೂ ಕಾರ್ಯೋಪಯೋಗಿಯಲ್ಲವಾದ ಕಾರಣ ಬೇಡ.
ಹೀಗೆಂದುಕೊಳ್ಳಲು ಎಂಟೆದೆಯ ಅತ್ಯಂತ ನಿರಹಂಕಾರ ವ್ಯಕ್ತಿತ್ವೇ ಬೇಕು.
ತನ್ನೀ ಸ್ಥಾನಕ್ಕೆ ಯೋಗ್ಯ ವ್ಯಕ್ತಿಯಿದ್ದಲ್ಲಿ ಆಯ್ಕೆ ಮಾಡಲು ಸ್ವಯಂಸೇವಕರಿಗೆ ಹೇಳಿದರು. ಅಂಥ ಯೋಗ್ಯ ವ್ಯಕ್ತಿಯ ಹುಡುಕಾಟಕ್ಕೆ ತಾವೇ ತೊಡಗಿದರು.
ತಮ್ಮ ನಿರಂತರ ಪ್ರವಾಸ, ಬಿಡುವಿಲ್ಲದ ಕಾರ್ಯಗಳಿಂದಾಗಿ ದೇಹ ಜರ್ಜರಿತವಾಗಿತ್ತು. ಅಲ್ಲಿಯ ತನಕದ ಸಂಘಕಾರ್ಯವನ್ನು ಮುಂದುವರಿಸಿ ಬೆಳೆಸಲು ಅದನ್ನು ಯೋಗ್ಯ ವ್ಯಕ್ತಿಯ ಕೈಗೆ ಕೊಟ್ಟು ಹೋಗಬೇಕಿತ್ತು. ಾಗೆ ಅವರಿಗೆ ಸಿಕ್ಕಿದರು ಗುರೂಜಿ.
1940ರಲ್ಲಿ ಅವರು ನಿಧನರಾಗುವ ಮುನ್ನ ದೇಶದೆಲ್ಲೆಡೆಗಳಿಂದ ಸಂಘಶಿಕ್ಷಾ ವರ್ಗಕ್ಕೆ ಬಂದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತಾಡಿದರು. ಆ ಮಾತು ಪ್ರತಿಯೊಬ್ಬ ಸ್ವಯಂಸೇವಕನಿಗೂ ಬದುಕಿನ ಧ್ಯೇಯಬುತ್ತಿಯಂತಿದೆ.
ಅಲ್ಲವರು ವ್ಯಕ್ತಿಶಃ ಪರಿಚಯ ಮಾಡಿಕೊಳ್ಳಲಾಗದಿದ್ದುದಕ್ಕೆ ನೋವನ್ನು ವ್ಯಕ್ತಪಡಿಸಿ ‘ನಿಮ್ಮೆಲ್ಲರ ದರ್ಶನ ಮಾಡಲು ಬಂದಿರುವೆ’ ಎಂದರು.
ಎಷ್ಟೇ ದೊಡ್ಡ ವ್ಯಕ್ತಿಯಿರಲಿ, ಮನುಷ್ಯರನ್ನು ಭೇಟಿ ಮಾಡುತ್ತೇವೆ. ದರ್ಶನ ಮಾಡುವುದು ದೇವರನ್ನು.  ಸಂಘ ಕಾರ್ಯ ಭಗವಂತನ ಕಾರ್ಯ. ಭಗವಂತನ ಕಾರ್ಯ ಮಾಡುವವ ಭಗವಂತನೇ ಎಂಬುದು ನಮ್ಮ ವಾಙ್ಮಯದ ಧ್ವನಿ. ಇದೇ ವಾಙ್ಮಯಧ್ವನಿಯಾಗಿ ಡಾಕ್ಟರ್‌ಜೀ ದರ್ಶನ ಪದ ಬಳಸಿದಂತಿದೆ.
ಸ್ವಯಂಸೇವಕ ನಿರಂತರ ಕಾರ್ಯದಿಂದ ಭಗವಂತನಾಗಬೇಕು. ಅದಕ್ಕಾಗೇ ಅವರು ‘ಸ್ವಯಂಸೇವಕನಾಗಿದ್ದೆ ಎಂಬ ದುಷ್ಟಗಳಿಗೆ ನಮ್ಮ ಬದುಕಲ್ಲಿ ಬಾರದಿರಲಿ’ ಎಂದರು.
ಸ್ವಯಂಸೇವಕರು ಪರಸ್ಪರ ಅತ್ಯಂತ ಹತ್ತಿರದ ಬಂಧುವಿನಷ್ಟು ಆಪ್ತರಾಗಬೇಕು. ‘ಎಳ್ಳಷ್ಟೂ ಪರಿಚಯವಿಲ್ಲದಿದ್ದಾಗ್ಯೂ ಸ್ವಯಂಸೇವಕರಲ್ಲಿ ಪ್ರಥಮ ಭೇಟಿಯಲ್ಲೇ ಪರಸ್ಪರ ಪ್ರೇಮ ನೆಲೆಸುತ್ತದೆ’ ಎಂದರು.
ಹಿಂದು ಸಂಘಟನೆಯಿಂದಲೇ ರಾಷ್ಟ್ರೋದ್ಧಾರದ ಸತ್ಯ ಮಾರ್ಗ ಎಂದವರು ಹೇಳಿದ ಇನ್ನೊಂದು ಮುಖ್ಯ ಅಂಶ. ಹೀಗಾಗಿ ಸಂಘಕಾರ್ಯ ಮತ್ತು ರಾಷ್ಟ್ರ ಕಾರ್ಯ ಭಿನ್ನವಲ್ಲ. ಇಲ್ಲಿ ನಿರ್ಮಾಣಗೊಳ್ಳುವ ಶಕ್ತಿ ರಾಷ್ಟ್ರೋನ್ನತಿಗಾಗಿ ಇದೆಯೇ ವಿನಾ ಇನ್ಯಾರ ಮೇಲಿನ ದಾಳಿಗಾಗಲ್ಲ. ಆದರೆ ‘ಇನ್ಯಾರ ಆಕ್ರಮಣವೂ ಆಗದಂತೆ ಜಾಗೃತಿಗಾಗಿಯೂ ಈ ಶಕ್ತಿ ಇದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸ್ವಯಂಸೇವಕನ ಜೀವನ ರಾಷ್ಟ್ರಕ್ಕಾಗಿ, ರಾಷ್ಟ್ರದ ಜೀವನ ಜಗತ್‌ಹಿತಕ್ಕಾಗಿ ಎಂಬ ಲಕ್ಷ್ಯಧ್ವನಿ ಡಾಕ್ಟರ್‌ಜೀ ಅಂತಿಮ ಭಾಷಣದಿಂದ ಗ್ರಾಹ್ಯ.

(Author is an RSS Pracharak, serves as Sah-Bouddhik Pramukh of Karnataka Dakshin. Source: Vikrama Weekly)

Leave a Reply

Your email address will not be published.

This site uses Akismet to reduce spam. Learn how your comment data is processed.