ಸಮಾನತೆ, ಸಾಮರಸ್ಯಕ್ಕಾಗಿ ನಿರಂತರ ಹಂಬಲಿಸಿದ, ಕನ್ನಡದ ಮಹತ್ತ್ವದ ಕ್ರಿಯಾಶೀಲ ಕವಿ ಡಾ. ಸಿದ್ದಲಿಂಗಯ್ಯನವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಡಾ. ಸಿದ್ದಲಿಂಗಯ್ಯ, ಕನ್ನಡ ಕವಿಗಳು.

ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಡಾ. ಸಿದ್ದಲಿಂಗಯ್ಯನವರಿಗೆ 67 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕಿನ ನಂತರ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಮ್ಮನ್ನು ಅಗಲಿದ್ದಾರೆ.

ಸಂಘದ ಅನೇಕ ಪ್ರಮುಖರ ಜೊತೆ ಸಿದ್ದಲಿಂಗಯ್ಯನವರದು ಮೂರು ದಶಕಗಳಿಗೂ ಮಿಕ್ಕ ಒಡನಾಟ. ಜಾತಿ ವಿಷಮತೆಯನ್ನು ತಿಳಿಗೊಳಿಸಲು ಸಂಘದ ಅನ್ಯಾನ್ಯ ವೇದಿಕೆಗಳಲ್ಲಿ ನಿರಂತರ ಚರ್ಚೆ, ಸಂವಾದ ನಡಸಿದವರು ಸಿದ್ದಲಿಂಗಯ್ಯನವರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಪಾರ ಸ್ನೇಹ ಬಳಗಕ್ಕೆ ತಾಯಿ ಚಾಮುಂಡೇಶ್ವರಿ ಕರುಣಿಸಲಿ” ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ್ ತಮ್ಮ ಸಂದೇಶದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

File picture of V Nagaraj

ಹಿಂದೆ ಮಿಥಿಕ್ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗಯ್ಯ ಭಾಗವಹಿಸಿದ್ದರು. ’ದಲಿತರು ಏಳಿಗೆ ಹೊಂದುವುದರಲ್ಲಿ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಪ್ರಯತ್ನ ಅತ್ಯಮೂಲ್ಯವಾಗಿದೆ. ದಲಿತರಲ್ಲಿ ದಲಿತೇತರ ಹಿಂದೂ ಸಮಾಜ ಸುಧಾರಕರ ಬಗ್ಗೆ ಗೌರವವನ್ನು ಬೆಳೆಸಬೇಕಾಗಿದೆ. ಅವರ ಪ್ರಯತ್ನಗಳನ್ನು ಎಂದೂ ಮರೆಯಬಾರದು’ ಎಂದು ಹಿರಿಯ ಕವಿ, ಚಿಂತಕ ಡಾ. ಸಿದ್ದಲಿಂಗಯ್ಯ ಅಭಿಪ್ರಾಯ ಪಟ್ಟಿದ್ದರು. ‘ದಲಿತ ಸಮಸ್ಯೆಯ ಹೊಸ ಆಯಾಮಗಳು ಎನ್ನುವ ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದ್ದರು. ಆರೆಸ್ಸೆಸ್ ಹಿರಿಯ ಪ್ರಚಾರಕರಾದ ಶ್ರೀ ಚಂದ್ರಶೇಖರ ಭಂಡಾರಿ, ಶ್ರೀ ವಿ ನಾಗರಾಜ್ ಆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2014ರ ಕಾರ್ಯಕ್ರಮದಲ್ಲಿ ಕವಿಗಳಾದ ಡಾ. ಸಿದ್ದಲಿಂಗಯ್ಯ, ಆರೆಸ್ಸೆಸ್ ಸಂಘಚಾಲಕರಾದ ವಿ ನಾಗರಾಜ್, ಹಿರಿಯ ಪ್ರಚಾರಕರಾದ ಶ್ರೀ ಚಂದ್ರಶೇಖರ ಭಂಡಾರಿ

Leave a Reply

Your email address will not be published.

This site uses Akismet to reduce spam. Learn how your comment data is processed.