ಬೆಂಗಳೂರು ಜೂನ್ 9, 2021: ಸಾಮರಸ್ಯ ವೇದಿಕೆ, ಕರ್ನಾಟಕ ವತಿಯಿಂದ ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು (Various efforts to achieve Social Harmony) ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. ಹೊಸದಿಗಂತ ದಿನಪತ್ರಿಕೆಯು ಪ್ರಬಂಧ ಸ್ಪರ್ಧೆಯ ಸಹಭಾಗಿತ್ವ ವಹಿಸಿದೆ.

ವಿವರಗಳು ಈ ಕೆಳಗಿನಂತಿವೆ.
ಪ್ರಬಂಧ ಸ್ಪರ್ಧೆಯ ವಿಷಯ: ಸಾಮಾಜಿಕ ಸಾಮರಸ್ಯಕ್ಕಾಗಿ ನಡೆದ ವಿವಿಧ ಪ್ರಯತ್ನಗಳು (Various efforts to achieve Social Harmony)
ನಿಯಮಗಳು: 18 ರಿಂದ 30 ವರ್ಷದ ಒಳಗಿನ ಯುವಕ – ಯುವತಿಯರು ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.
ಬಹುಮಾನ:

  • ಪ್ರಥಮ: ರೂ 10,000 ಮತ್ತು ಪ್ರಮಾಣ ಪತ್ರ
  • ದ್ವಿತೀಯ: ರೂ 7,500 ಮತ್ತು ಪ್ರಮಾಣ ಪತ್ರ
  • ತೃತೀಯ: ರೂ 5,000 ಮತ್ತು ಪ್ರಮಾಣ ಪತ್ರ
    ಮತ್ತು ತಲಾ ರೂ 1,000 ದಂತೆ 10 ಸಮಾಧಾನಕರ ಬಹುಮಾನಗಳು
  1. ಮೇಲೆ ತಿಳಿಸಿದ ವಿಷಯದ ಕುರಿತು, ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ 1500 ಪದಗಳ ಮಿತಿಯಲ್ಲಿ ಪ್ರಬಂಧವನ್ನು ಸ್ವಹಸ್ತಾಕ್ಷರದಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಅಥವಾ ಟೈಪ್ ಮಾಡಿ essaysamarasyavedike@gmail.com ಗೆ ಜುಲೈ 25, 2021ರ ಒಳಗಾಗಿ ಕಳುಹಿಸಿ ಕೊಡಬೇಕಾಗಿ ವಿನಂತಿ.
  2. ವಯಸ್ಸಿನ ಧೃಢೀಕರಣಕ್ಕಾಗಿ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ಜತೆಗಿರಿಸಬೇಕು.
  3. ವಿಳಾಸ: ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’ ಹೊಸದಿಗಂತ, ಕನ್ನಡ ದಿನಪತ್ರಿಕೆ, ಮಿಕಾಸ, ಎರಡನೇಯ ಮಹಡಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ, ಬಿಜೈ, ಮಂಗಳೂರು-575004
  4. ಪ್ರಬಂಧ ಸ್ವೀಕರಿಸಲು ಕೊನೆಯ ದಿನಾಂಕ: ಜುಲೈ 25, 2021
    ಹೆಚ್ಚಿನ ಮಾಹಿತಿಗಾಗಿ: 9880923907, 7259011545

Leave a Reply

Your email address will not be published.

This site uses Akismet to reduce spam. Learn how your comment data is processed.