ಇಲ್ಲೆ ನಮ್ಮ ಉಡುಪಿಯಲ್ಲಿ‌ ಶುರುವಾದ ಹಿಜಾಬ್ ಸಂಘರ್ಷ ಸೋವಿಯತ್ ಯೂನಿಯನ್ನ ತಲುಪಿತು,ತಾಲಿಬಾನ್‌ನ ಡೆಪ್ಯೂಟಿ ಸ್ಪೀಕರ್‌ರಿಂದ ಹಿಡಿದು ಅನೇಕ ಅಂತಾರಾಷ್ಟ್ರೀಯ ಮೂಲಭೂತವಾದಿ ಸಂಘಟನೆಗಳು ಬೆಂಬಲ ನೀಡಿದವು, ಎಂದಿಗೂ ವಿವಾದವಾಗಿರದ ವಿಷಯ ಇದ್ದಕ್ಕಿದ್ದಂತೆ ಕಿಡಿಯಾಗಿದ್ದಿದ್ದಾದರು ಹೇಗೆ?  ಎಂದಿನಂತೆ ಕಾಲೇಜಿಗೆ ಬರುತ್ತಿದ್ದವರು ಇದ್ದಕ್ಕಿದ್ದಂತೆ ಹಿಜಾಬ್ ಗಾಗಿ ರಸ್ತೆಗಿಳಿದಿದ್ದಾದರು ಏಕೆ? ಇಲ್ಲಿ ಕಾಲೇಜು ಮುಖ್ಯವೆ? ಹಿಜಾಬ್ ಮುಖ್ಯವೆ?

ಇದೆಲ್ಲದರ ಬಗ್ಗೆ ಸಾಕು ಎನ್ನುವಷ್ಟು ಚರ್ಚೆಗಳು ಆಗಿ‌ಹೋಗಿವೆ, ಇದು ಒಂದು ಹಂತಕ್ಕೆ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲೆ ಕರ್ನಾಟಕ ರಾಜ್ಯ ಸರ್ಕಾರ ಗುಜರಾತಿನ ನಿರ್ಧಾರದಂತೆ ನಮ್ಮಲ್ಲು 6-12 ತರಗತಿ ವರೆಗೆ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಅಡಿ ಸೇರಿಸುವುದರ ಬಗ್ಗೆ ಚರ್ಚೆ ಶುರುವಾಯಿತು, ಇದು ಒಂದು ಕಡೆ ಆದರೆ ಇನೊಂದೆಡೆ ಇನ್ನು ಹಲಾಲ್,ಮಸೀದಿಯ ಲೌಡ್ ಸ್ಪೀಕರ್ ಇತ್ಯಾದಿಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.ಮತ್ತೊಂದೆಡೆ ಮದರಸಾವನ್ನ ಶಿಕ್ಷಣ ಇಲಾಖೆಯ ಅಡಿ ತರುವುದರ ಕುರಿತು ಸರ್ಕಾರ ಯೋಚನೆ ಮಾಡುತ್ತಾ ಇದೆ.

ಅರೆ ಹೌದಲ್ವ ನಮ್ಮ ಸರಕಾರಿ ಶಾಲೆಯಲ್ಲಿ , ಕಾಲೇಜುಗಳಲ್ಲಿ ನಡೆಯುವ ಪಾಠದ ಕುರಿತು ಸಣ್ಣ ಪುಟ್ಟ ಬದಲಾವಣೆ ಆದರೂ ಎಲ್ಲರಿಗೂ ತಿಳಿದೇ ತಿಳಿಯುತ್ತದೆ. ಆದರೆ ಮದರಾಸಾದೊಳಗೆ ಯಾವ ರೀತಿಯ ಶಿಕ್ಷಣ ಕ್ರಮವಿದೆ, ಯಾವ ಮಾದರಿಯ  ಪಾಠವನ್ನ ಬೋಧಿಸಲಾಗುತ್ತದೆ ಯಾರಿಗೂ ಅಷ್ಟಾಗಿ ಅರಿವಿಲ್ಲ. ಯಾರು ಕೂಡ ಮದರಸಾದೊಳಗೆ ಹೋಗಿ ಏನಾಗ್ತಿದೆ ಅಂತ ನೋಡಿರುವುದು ನನಗಂತು ತಿಳಿದಿಲ್ಲ. ಕೇಳಿದರೆ ಮಾಮೂಲಿ ಪಠ್ಯದಂತೆ ಗಣಿತ, ವಿಜ್ಞಾನ, ಮೌಲ್ಯಗಳು ಮತ್ತು ಜೊತೆಗೆ ಉರ್ದು ಭಾಷೆ‌ ಹೇಳಿಕೊಡಲಾಗತ್ತೆ ಅಂತ ಕೇಳಿರುತ್ತೇವೆ ಅಷ್ಟೆ. ಆದರೆ ಸಾಮರಸ್ಯದ ಪಾಠ?
ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾದಲ್ಲಿ ಏನು ಪಾಠ ಮಾಡುತ್ತಾರೆ ಎಂದು ತಿಳಿಯುವ ಹಕ್ಕು ನಮಗಿಲ್ಲವೇ?? ನಮ್ಮದೇ ಟ್ಯಾಕ್ಸಿನ ಹಣ ತೆಗೆದುಕೊಳ್ಳುವಾಗ ಅದರ ಅಕೌಂಟೆಬಿಲಿಟಿ ಕೂಡ ಇರುತ್ತದೆ.
ಸರ್ಕಾರಿ ಶಾಲೆಗಳು ಕಾಲೇಜುಗಳಲ್ಲಿ ಇರುವ ಪಾರದರ್ಶಕತೆ ಇಲ್ಲಿ ಯಾಕೆ ಇಲ್ಲ??
ಮದರಸಾವನ್ನ ಶಿಕ್ಷಣ ಇಲಾಖೆ ಅಡಿ ತರಲು ಮದರಸಾ ಸಂಸ್ಥೆಯವರಿಗೆ ಆಕ್ಷೇಪವಿದೆ. ಮದರಸಾ ಸರ್ಕಾರದ ಅಡಿ ಬಂದರೆ ಅಲ್ಲಿನ ಮಕ್ಕಳಿಗೆ ಅಚ್ಚು ಕಟ್ಟಾದ ಶಿಕ್ಷಣ ಕೊಡಬಹುದಲ್ಲವೇ?
ಶಿಕ್ಷಣ ಇಲಾಖೆಯ ಅಡಿ ತಂದರೆ ಶಿಕ್ಷಕರಿಗೂ ಒಳ್ಳೆಯ ವೇತನ‌ ವ್ಯವಸ್ಥೆ ಮಾಡಬಹುದಲ್ಲವೇ?

ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ಎಸಳನ್ನು ತೆಗೆದು ಗಂಟು ಮಾಡಿಟ್ಟ ಆರೋಪವೀಗ ಯಾರಮೇಲಿದೆ??
ಸುಳಿವಿಲ್ಲದೆ ಶುರುವಾದ ಹಿಜಾಬ್ ವಿವಾದಕ್ಕೆ ಶುರುಮಾಡಿದ ವಿದ್ಯಾರ್ಥಿನಿಯಾರು ಕಾರಣವೋ?
ಅವರಗೆ ಸಾಥ್ ನೀಡಲು ಮುಂದಾದ ಕೆಲ ಸಂಘಟನೆ ಕಾರಣವೋ?? ಕೇಸರಿ ಶಾಲ್ ಹೊದ್ದು ಸ್ವಂತ ಇಚ್ಛೆಯಿಂದ ಹೊರಟ ವಿದ್ಯಾರ್ಥಿಗಳು ಕಾರಣವಾದರೇ??
ಇದರ ನಡುವೆ ಪಾನಲ್ ನಲ್ಲಿ ಕೂತು ಚರ್ಚೆ ಮಾಡಿ ವಿವಾದವನ್ನು ಅತಿರೇಕಕ್ಕೆ ಏರಿಸಿದ ಮಾಧ್ಯಮ ಕಾರಣವೋ?

ಎಲ್ಲದರ ಮಧ್ಯ ಕೆಳೆದು ಹೋದ್ದದ್ದು ಮಾತ್ರ ಸಮವಸ್ತ್ರದ ಪರವಾಗಿ ನಿಂತ ಹರ್ಷನ ಜೀವ. ಧರ್ಮಕ್ಕಾಗಿ ಜೀವ ಕೊಡಲು ಅವ ಸಿದ್ದನಿದ್ದ ಮಾತ್ರಕ್ಕೆ ಜೀವ ತೆಗೆಯುವುದು ಎಷ್ಟು ಸರಿ??

ಈ ಎಲ್ಲ ರಾಜಕೀಯ ಧರ್ಮ ಯುದ್ಧದ ಮಧ್ಯೆ ಹಾಳದದ್ದು ವಿದ್ಯಾರ್ಥಿಗಳ ಮನಸ್ಥಿತಿ. ಯಾವ ಕಾಲೇಜಿಗೆ ಸಮವಸ್ತ್ರ ಧರಿಸಿ‌ ಪಾಠ ಕೇಳಲು ಹೋಗುತ್ತೆದ್ದೆವೋ ಆ ಕಾಲೇಜುಗಳಲ್ಲಿ ಕೇಸರಿ ಶಾಲು ಹಿಜಾಬ್ ಧರಸಿ ವಿದ್ಯಾರ್ಥಿಗಳ ನಡುವೆಯೇ ಅಂತರ ಶುರುವಾಗಿದೆ.

ನನಗೂ‌ ಮುಸ್ಲಿಂ ಗೆಳತಿಯರಿದ್ದರು, ಅವರು ಕಾಲೇಜುಗಳಲ್ಲಿ ಎಂದು ಹಿಜಾಬ್ ‌ಧರಿಸಿದ್ದು ನಾ ಕಂಡೇ‌‌ ಇಲ್ಲ. ಈ ಹಿಜಾಬ್ ವಿವಾದ ಹೊರ ಬಂದಿದ್ದೆ ‌ತಡ ಯಾವ ಸ್ನೇಹಿತೆ ಕಾಲೇಜಿಗೆ ಹಿಜಾಬ್ ಧರಿಸುತ್ತಿರಲಿಲ್ಲವೋ ಆಕೇ ತನ್ನ Whatsapp ಸ್ಟೇಟಸ್ ನಲ್ಲಿ “Hijab is my right its my choice” ಎಂದು ಬರೆದದ್ದನ್ನು ನೋಡಿ ಮನಸ್ಸು ‌ಒಂದು ಕ್ಷಣಕ್ಕೆ ವಿಚಲಿತವಾಯಿತು.

ಮೊನ್ನೆವರಗೂ ನನ್ನ ಗೆಳೆತಿ ಆದ ಆಕೆ ಇವತ್ತು ಮುಸ್ಲಿಂ ಗೆಳತಿ ಆಗಿದ್ದಾಳೆ, ಪಕ್ಕದಲ್ಲಿ ಕೂತು ಪಾಠ ಕೇಳುತ್ತದ್ದಾಗ ಆಕೆಯ ಧರ್ಮ ನನಗೆ ಸಂಬಂಧವಿಲ್ಲದ ವಿಷಯವಾಗಿತ್ತು, ಈಗ ಆಕೆ ಸುಮ್ಮನೆ ಎದುರು ಸಿಕ್ಕರೂ ಹಿಜಾಬ್ ಧರಿಸಿಲ್ಲ ಯಾಕೆ ಎನ್ನುವ ಪ್ರಶ್ನೆ ಮೂಡುತ್ತೆ.

ಹಿಜಾಬ್ ಬೇಕೆಂದು ಬುರ್ಖಾ ಧರಿಸಿ ರಸ್ತೆಗಿಳಿದು ಇದು ನಮ್ಮ ಸ್ವಾತಂತ್ರ್ಯದ ಪ್ರಶ್ನೆ ಎಂದು ಪ್ರತಿಭಟಿಸುತ್ತಿರವ ಮುಸ್ಲಿಂ ಹೆಣ್ಣು ಮಕ್ಕಳು, ಅವರ ಮಸೀದಿಗಳಲ್ಲಿ ಅವರಿಗೆ ಪ್ರವೇಶವಿಲ್ಲದರ ಬಗ್ಗೆ ಯಾಕೆ ಪ್ರಶ್ನೆ ‌ಮಾಡುವುದಿಲ್ಲ??
ಹಿಜಾಬ್ ವಿಚಾರವಾಗಿ ಮೊನ್ನೆ ಪರೀಕ್ಷೆ ಬರೆಯದ ವಿದ್ಯಾರ್ಥಿಗಳ ಸಂಖ್ಯೆ 11 ಸಾವಿರ, ಹಿಜಾಬ್ ನಮ್ಮ ಸ್ವಾತಂತ್ರ್ಯ ಅದು ನಮ್ಮ ಹಕ್ಕು ಎನ್ನುತ್ತಿರುವ ವಿದ್ಯಾರ್ಥಿಗಳಿಗೆ ಅದರಿಂದಲೇ ತಮ್ಮ ಶಿಕ್ಷಣ ಸ್ವಾತಂತ್ರ್ಯ ದೂರವಾಗುತ್ತಿರುವ ಬಗ್ಗೆ ಅರಿವಾಗುವುದಾದರು ಹೇಗೆ??

ಇದೆಲ್ಲದರ ಪರಿಣಾಮ ಕೇವಲ ಶಿಕ್ಷಣ ವ್ಯವಸ್ಥೆಯ ಮೇಲೆ ಮಾತ್ರವಲ್ಲ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ಕೆಲವು ಆಯೋಜನೆ ಮುಖಾಂತರವೊ ಹೊಸ ರೀತಿಯ ಸಿಸ್ಟಮ್ ನ ಮುಖಾಂತರವೋ ಹಳಿಗೆ ತರಬಹುದೇನೋ ಆದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದಾದರು ಹೇಗೆ??

ಇದೆಲ್ಲದಕ್ಕೂ ಉತ್ತರ ಕೊಡಿವವರಾರು?? ಇದಕ್ಕೆಲ್ಲ ಪರಿಹಾರವಾದರೂ ಏನು??  ಶಿಕ್ಷಣ ವ್ಯವಸ್ಥೆಯೊಳಗೆ ಮತೀಯ ಭಾವನೆ ವಿದ್ಯಾರ್ಥಿಗಳ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ.ಈ ಕುರಿತಾಗಿ ಅತ್ಯಂತ ಹೆಚ್ಚಿನ ಗಮನ ಹರಿಸಬೇಕು.ಶಿಕ್ಷಣದಲ್ಲಿ ಧಾರ್ಮಿಕ ಶಿಕ್ಷಣ ಸಾಮರಸ್ಯದ ಶಿಕ್ಷಣ ಇಂದಿನ ಅವಶ್ಯಕತೆ.ಅದು ಎಲ್ಲರಿಗೂ ಸಮಾನವಾಗಿಯೇ ಇರಬೇಕು.

ಮುಂದಿನ ಪೀಳಿಗೆ ಚಂದಿರ,ಮಂಗಳ ಹೀಗೇ ಬೇರೆ ಗ್ರಹಗಳವರೆಗೂ ತಲುಪುತ್ತಿರುವಾಗ ನಾವು ಮತದ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸಿದರೆ ನಾಳೆ, ನಮ್ಮ ದೇಶ ಹಿಂದುಳಿಯುವ ಕಾರಣ ನಾವೇ ಆಗಬಹುದು.ಸಾಮರಸ್ಯವೊಂದೇ ಭಾರತ ಜಗತ್ತಿನ ಎಲ್ಲ ದೇಶಗಳಿಗೆ ನೀಡಬಹುದಾದ ಮಂತ್ರ, ನಾವು ಅದರಲ್ಲಿ ಸೋತು, ಮಾತು ಸೋತ ಭಾರತವಾಗಬಾರದು,ಮಾತು ಗೆದ್ದ ಭಾರತವಾಗಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.