a scene from Yegdaage ella aite-Drama at Bangalore

ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ ಜೀವನ ಘಟನೆ ಆಧಾರಿತ ನಾಟಕ “ಏಗ್ದಾಗೆ ಎಲ್ಲ ಐತೆ ” ಬೆಂಗಳೂರಿನ ರಾಷ್ಟ್ರೋತ್ತಾನ ಪರಿಷತ್ ನ ಕೇಶವ ಶಿಲ್ಪ ಸಭಾಂಗಣದಲ್ಲಿ ಜರಗಿತು. ಯಶಸ್ವೀ ಪ್ರದರ್ಶನ ಕಂಡ ಈ ನಾಟಕದ ರಚನೆ, ನಿರ್ದೇಶನವನ್ನು ಖ್ಯಾತ ರಂಗ ಕರ್ಮಿ ಕೊರಗಿ ಶಂಕರನಾರಾಯಣ ಉಪಾಧ್ಯಾಯ ಮಾಡಿದ್ದರು.

ನಾಟಕದಲ್ಲಿ  ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ ಜೀವನದ ಆಧ್ಯಾತ್ಮದ ಮಾರ್ಗದರ್ಶಕರಾದ ಮುಕುಂದಸ್ವಾಮಿಗಳ ಪಾತ್ರದಲ್ಲಿ ಕಾಣಿಸಿಕೊಂಡ ಕೊರಗಿ ಶಂಕರನಾರಾಯಣ ಉಪಾಧ್ಯಾಯರು ತಮ್ಮ ಮನೋಜ್ಞ ಅಭಿನಯದ ಮೂಲಕ ಜನಮನ ಸೂರೆಗೊಂಡರು.

ನಾಟಕದುದ್ದಕ್ಕೂ ಆಡುಭಾಷೆಯ ಸೊಗಡನ್ನು ಕಾಯ್ದುಕೊಂಡದ್ದು ಗಮನಾರ್ಹ ಸಂಗತಿಯಾಗಿತ್ತು. ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ ಪಾತ್ರದಲ್ಲಿ ಕಲಾಗಂಗೋತ್ರಿಯ ಕಲಾವಿದ ಶ್ರೀವತ್ಸ ಅಭಿನಯಿಸಿದರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಯಶಸ್ವೀ ಪ್ರದರ್ಶನ ಕಂಡ ಈ ನಾಟಕವನ್ನು ಸಂಸ್ಕಾರ ಭಾರತಿ ಸಂಘಟನೆ ಆಯೋಜಿಸಿತ್ತು.

ಸ್ವತಃ ಬೆಳೆಗೆರೆ ಕೃಷ್ಣ ಶಾಸ್ತ್ರಿಯವರೇ ನಾಟಕವನ್ನು ಪೂರ್ತಿಯಾಗಿ ವೀಕ್ಷಿಸಿದರು. ರಂಗದ ಮೇಲೆ ಮೂಡಿ ಬಂದ ತಮ್ಮ ಬದುಕಿನ ಪುಟಗಳನ್ನು ಓರ್ವ ಸಾಮಾನ್ಯ ಪ್ರೇಕ್ಷಕನಂತೆ ನೋಡಿದ ಬೆಳೆಗೆರೆ ಕೃಷ್ಣ ಶಾಸ್ತ್ರಿಯವರು ನಾಟಕ ಮುಕ್ತಾಯದ ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದರು.”ಯೋಗದಲ್ಲಿ ಎಲ್ಲವೂ ಇದೆ-ಏಗ್ದಾಗೆ ಎಲ್ಲ ಐತೆ” ಎಂಬ ಮೂಲ ಆಶಯಕ್ಕೆ ಪೋಣಿಸಿಕೊಂಡಿದ್ದ  ನಾಟಕದ ಸಂಭಾಷಣೆಗಳು ಪ್ರೇಕ್ಷಕರಿಂದ ಪ್ರಶಂಸೆಗೊಳಗಾಯಿತು.

a scene from Yegdaage ella aite-Drama at Bangalore

Leave a Reply

Your email address will not be published.

This site uses Akismet to reduce spam. Learn how your comment data is processed.