20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ

ಬೆಂಗಳೂರು: ಭೂಮಿಕಾಡು ಮತ್ತು ದೇಶಿಯ ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಅರಿತು ಇಲ್ಲಿ ವೈವಿದ್ಯಮಯ ದೇಶಿಯ ಸಸಿಗಳನ್ನು ಬೆಳೆಸಲು ಒತ್ತು ನೀಡಲಾಗಿದೆ ಎಂದು ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು.

ಅವರು ದೊಡ್ಡಬಳ್ಳಾಪುರದ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನಡೆಸಲಾಗುತ್ತಿರುವ ಗೋಶಾಲೆಯ ಆವರಣದ ಸುಮಾರು ಐದು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.

Vrindavana forests, Ghati

ಕಾಡು ಬೆಳೆಸುವುದೆಂದರೆ ಕೇವಲ ಗಿಡನೆಟ್ಟು ಮರ ಬೆಳೆಸುವುದಷ್ಟೇ ಅಲ್ಲ. ಅದರಿಂದ ಭೂಮಿಯ ಕೆಳಗಿನ ಇಪ್ಪತ್ತು ಅಡಿ ಹಾಗೂ ಮೇಲೀನ ನೂರು ಅಡಿಗಳಿಗೂ ಮಿಕ್ಕಿ ಒಂದು ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ರಾಷ್ಟ್ರೋತ್ಥಾನ ಪರಿಷತ್‍ನವೃಂದಾವನ ಯೋಜನೆಯಂತೆ ಅಂತಹ ಒಂದು ವನ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯ ಆವರಣದಲ್ಲಿ ಬೆಳೆಸಲಾಗುತ್ತಿರುವ ಸುಮಾರು 150 ಬಗೆಯ ವಿವಿಧಬಗೆಯ ದೇಶಿಯ ತಳಿಗಳನ್ನು ಗುರುತಿಸಿ ಸಸಿಗಳನ್ನು ಬೆಳೆಸಲಾಗುತ್ತದೆ. ಮೊದಲ ಹಂತದಲ್ಲಿ 5 ಎಕರೆಯಲ್ಲಿ ಒಂದು ಸಾವಿರ ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ಯೋಜನೆಯ ಮಾರ್ಗದರ್ಶಕರೂ ಆದ ಯಲ್ಲಪ್ಪ ರೆಡ್ಡಿ ಅವರು ತಿಳಿಸಿದರು.

ಗೋಶಾಲೆ ಆವರಣದಲ್ಲಿ ನಾಟಿ ಮಾಡಲಾಗಿರುವ ಸಸಿಗಳು ಬೆಳೆದು ದೊಡ್ಡವಾದ ನಂತರ ಇಡೀ ದಿನ ಇಲ್ಲಿನ ಮರಗಳ ಮಧ್ಯದಲ್ಲಿ ಕುಳಿತು ಕಾಲ ಕಳೆದರು ಸಾಕು ಹಲವಾರು ಅನಾರೋಗ್ಯದ ಸಮಸ್ಯೆಗಳು ನಿವಾರಣೆ ಮಾಡುವಂತಹ ಶಕ್ತಿ ಇಲ್ಲಿನ ಗಾಳಿಗೆ ಬರಲಿದೆ. ಇಂತಹ ಒಂದು ವನವನ್ನು ನಿರ್ಮಿಸಬೇಕು ಎನ್ನುವ ನನ್ನ 30 ವರ್ಷಗಳ ಕನಸು ನನಸಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮಹಾವನದ ಬಳಿಕ ಮುಂದೆ ಇಲ್ಲಿ ತಪೋವನಶ್ರೀವನಗಳನ್ನು ರೂಪಿಸಲಾಗುವುದು. ಇಲ್ಲಿಗೆ ಬಂದವರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವಂತಹ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಐಸಿಆರ್-ಎನ್‍ಡಿಆರ್‍ಐನ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ|| ಕೆ.ಪಿ. ರಮೇಶ್ ಅವರು ಗಾವೋ ವಿಶ್ವಸ್ವ ಮಾತರ:’ (ಗೋವು ಜಗತ್ತಿನ ತಾಯಿ) ಎಂಬ ಮಾತನ್ನು ಬೆಂಬಲಿಸಿ ಮಾತನಾಡಿದರು. ಮುಖ್ಯಮಂತ್ರಿಯವರು ಇತ್ತೀಚೆಗೆ ನಡೆಸಿದ ಸಭೆಗೆ ಆಗಮಿಸಿದ ಆಂಧ್ರಪ್ರದೇಶದ ತಜ್ಞರು ಸಾವಯವ ಕೃಷಿ ಇಂದಿನ ಅಗತ್ಯ ಎಂದರಲ್ಲದೆ ಅದರಲ್ಲಿ ಗೋವಿನ ಪಾತ್ರವನ್ನು ತಿಳಿಸಿದರು. ಹಸುವಿನ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿದ್ದುಅದರಿಂದ ಅನೇಕ ಸೂಕ್ಷ್ಮಜೀವಿಗಳುಫಂಗಸ್ಫಲವತ್ತತೆಯ ಮೈಕ್ರೋಬ್ ಮುಂತಾದವು ನಮಗೆ ಸಿಗುತ್ತವೆ. ಕೃಷಿಗೆ ಕೇವಲ ಎನ್‍ಪಿಕೆ ಗೊಬ್ಬರ ಸಾಲದು. ಮೈಕ್ರೋಬ್ ಬೇಕು. ಅದು ಇರುವುದು ದನದಲ್ಲಿ ಮಾತ್ರ ಎಂದು ಅವರು ತಿಳಿಸಿದರು.

ದೇಶೀ ಹಸುಗಳು ಭುಜ ಮತ್ತು ದೊಗಲಿನಲ್ಲಿರುವ ಉಷ್ಣಗ್ರಂಥಿಗಳು ಉಷ್ಣವನ್ನು ಹೊರಹಾಕುತ್ತವೆ. ವಿದೇಶಿ ಹಸುಗಳಲ್ಲಿ ಅದು ಇಲ್ಲ. ಹೀಗಾಗಿ ಉಷ್ಣತೆ ಹೆಚ್ಚಾದಂತೆ ವಿದೇಶಿ ಹಸುಗಳ ಹಾಲು ಕಡಮೆಯಾಗುತ್ತದೆ. ದೇಶೀ ಹಸುಗಳಲ್ಲಿ ಹಾಗಾಗುವುದಿಲ್ಲ. ನಮ್ಮ ದನಗಳು ಬಿಸಿಲಿಗೆ ಹೆದರುವುದಿಲ್ಲಆದರೆ ವಿದೇಶಿ ಹಸುಗಳು ನೆರಳಿಗೆ ಹೋಗುತ್ತವೆ. ಅದರಿಂದಾಗಿ ಹಾಲಿನಲ್ಲಿ ಪೌಷ್ಟಿಕಾಂಶ ಕಡಮೆಯಾಗಿ ಜನರಲ್ಲಿ ಬೆನ್ನುನೋವಿನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಬುದ್ದಿಶಕ್ತಿ ಬೆಳೆಯಲು ಬೇಕಾದ ಲ್ಯಾಕ್ಟೋಫೆರಿನ್ ಮಲೆನಾಡು ಗಿಡ್ಡದಂತಹ ದನಗಳ ಹಾಲಿನಲ್ಲಿ ಅಧಿಕ ಇರುತ್ತದೆ. ದೇಸೀ ಹಸುಗಳ ಹಾಲಿನಿಂದ ಕರೋಟಿನೈಡ್ ಸಿಗುತ್ತಿದ್ದುಅದರಿಂದಾಗಿ ಕನ್ನಡಕಧಾರಿಗಳು ಕಡಮೆ ಇರುತ್ತಿದ್ದರು ಎಂದ ವಿಜ್ಞಾನಿ ಡಾರಮೇಶ್ ಹಸುಗಳನ್ನು ಮೇಯಲು ಕಾಡಿಗೆ ಹೋಗದಂತೆ ತಡೆಯಬಾರದು. ಬಹಳಷ್ಟು ಬೀಜಗಳು ದನದ ಸೆಗಣಿಯಲ್ಲಿ ಹೊರಬಂದಾಗ ಮಾತ್ರ ಗಿಡಹುಟ್ಟಿ ಬೆಳೆಯುತ್ತವೆ ಎಂದು ದೇಶಿಯ ತಳಿಯ ಹಸುಗಳ ಮಹತ್ತ್ವವನ್ನು ತಿಳಿಸಿದರು.

ಪತ್ರಕರ್ತ ಕೆ.ಎನ್. ಚನ್ನೇಗೌಡ ಮಾತನಾಡಿಗೋ ಶಾಲೆ ಆವರಣದಲ್ಲಿ ನಡೆದಿರುವ ಕೆಲಸ ಸಾರ್ಥಕವಾಗಿರುವಂತಹದ್ದು. ಪರಿಸರ ತಜ್ಞರು ರೂಪಿಸಿರುವ ಈ ಯೋಜನೆ ಸಫಲವಾಗಲು ಎಲ್ಲರ ಸಹಕಾರ ಅಗತ್ಯ ಎಂದು ಶ್ಲಾಘಿಸಿದರು.

ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗಡೆ ಮಾತನಾಡಿ53 ವರ್ಷಗಳಿಂದ ಶಿಕ್ಷಣಆರೋಗ್ಯಸಾಹಿತ್ಯಗೋಸೇವೆ ಮುಂತಾದ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಇದೀಗ ಕಾಡು ಬೆಳೆಸಲು ನಿರ್ಧರಿಸಿದೆ. ಘಾಟಿ ಸುಬ್ರಹ್ಮಣ್ಯ ಪರಿಸರದ ದೇಸಿ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಡೆಯುತ್ತಿರುವ ಈ ಗೋಶಾಲೆಯಲ್ಲಿ 10 ಬಗೆಯ ದೇಶಿಯ ತಳಿಯ 500ಕ್ಕೂ ಅಧಿಕ ಹಸುಗಳನ್ನು ಸಾಕಲಾಗುತ್ತಿದೆ. ಇದೇ ಪರಿಸರದ 20 ಎಕರೆ ಜಾಗದಲ್ಲಿ ಕಾಡು ಬೆಳೆಸಲಾಗುವುದು. ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಂತೆ ಇಲ್ಲಿನ ಅರಣ್ಯವನ್ನು ಇಡೀ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ವಿವಿಧ ಐಟಿ ಕಂಪನಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಶ್ರೀರಾಮ್ಅರ್ಕಾವತಿ ಜಲಾನಯನ ಪ್ರದೇಶ ಸಮಿತಿಯ ರವೀಂದ್ರ,ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮುರುಳಿಧರ್ಗೋ ಶಾಲೆಯ ಉಸ್ತುವಾರಿ ಜೀವನ್‍ಕುಮಾರ್ ಉಪಸ್ಥಿತರಿದ್ದರು.

ಸಾರ್ವಜನಿಕರೂ ಈ ಯೋಜನೆಯಲ್ಲಿ ಕೈಜೋಡಿಸಬಹುದು…

ನಮಗೆ ಸರ್ವವನ್ನೂ ನೀಡುವ ಪ್ರಕೃತಿಯ ಸಂರಕ್ಷಣೆಗೆ ಕನಿಷ್ಠ ರೂ. 1000 ನೀಡಿದವರ ಹೆಸರಿನಲ್ಲಿ 2 ಗಿಡಗಳನ್ನು ನೆಟ್ಟು ಹಲವು ವರ್ಷಗಳ ಕಾಲ ಅವುಗಳನ್ನು ಪೋಷಿಸಿಬೆಳೆಸಿ,ಸಂರಕ್ಷಿಸಲಾಗುವುದು.

ಬಾಂಕ್ ಖಾತೆ ವಿವರ

ಹೆಸರು : ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆ

ಬ್ಯಾಂಕ್ : ಕೆನರಾ ಬ್ಯಾಂಕ್,

ಶಾಖೆ : ಕೆಂಪೇಗೌಡನಗರ, ಬೆಂಗಳೂರು

A/C No. : 0789101078233

IFSc code : CNRB0000789

(ಹಣ ಪಾವತಿಸಿದ ನಂತರ ನಿಮ್ಮ ಮಾಹಿತಿಯನ್ನು ಯೋಜನೆಯ ವ್ಯವಸ್ಥಾಪಕರಿಗೆ (ಮೊಬೈಲ್ ಸಂಖ್ಯೆ: 9902476719/ 9448240610) ಕರೆ ಮಾಡಿ ತಿಳಿಸುವುದನ್ನು ಮರೆಯಬೇಡಿ.)

ಬನ್ನಿಮಣ್ಣಿಗೆ ಮರಳೋಣ… ಮರಗಳನ್ನು ಬೆಳೆಸೋಣ…

 

Leave a Reply

Your email address will not be published.

This site uses Akismet to reduce spam. Learn how your comment data is processed.