ಇಂದು ಜಯಂತಿ
ಗುರು ಅಮರ್‌ ದಾಸ್‌ ಅವರು ಸಿಖ್ ಧರ್ಮದ ಹತ್ತು ಮಂದಿ ಗುರುಗಳಲ್ಲಿ ಮೂರನೆಯವರಾಗಿದ್ದರು. ಪರಮ ವಿಷ್ಣು ಭಕ್ತರು. ಇವರು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕೆಂದು ಹೋರಾಡಿದರು. ಸಿಖ್ ಮಹಿಳೆಯರಲ್ಲಿ ಸತಿ ಪದ್ಧತಿಯನ್ನು ರದ್ದುಗೊಳಿಸಿದವರಲ್ಲಿ ಅವರೂ ಒಬ್ಬರು. ಸಿಖ್ಖರು ತಮ್ಮ ಪ್ರಾಮಾಣಿಕತೆ, ಧಾರ್ಮಿಕ ಚಿಂತನೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಇಡೀ ಜೀವನವನ್ನು ಸಿಖ್ ಧರ್ಮಕ್ಕಾಗಿ ಮುಡಿಪಾಗಿಟ್ಟವರು ಗುರು ಅಮರ್‌ ದಾಸ್‌ ಅವರು. ಇಂದು ಅವರ ಜಯಂತಿ.


ಪರಿಚಯ
ಗುರು ಅಮರ್‌ ದಾಸ್‌ ಅವರು ಮೇ 5, 1479 ರಂದು ಅಮೃತಸರ ಜಿಲ್ಲೆಯಲ್ಲಿ ಬಸಾರ್ಕೆ ಗ್ರಾಮದಲ್ಲಿ ಜನಿಸಿದರು. ತಂದೆ ತೇಜ್ ಭಾನ್ ಭಲ್ಲಾ ಮತ್ತು ತಾಯಿ ದಯಾ ಕೌರ್. ಅವರ ಪೋಷಕರು ಧಾರ್ಮಿಕರಾಗಿದ್ದು, ದತ್ತಿ ಚಟುವಟಿಕೆಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದರು. ಈ ಕಾರಣಕ್ಕಾಗಿ ಅಮರ್‌ ಅವರು ಪವಿತ್ರ ಚಟುವಟಿಕೆಗಳಲ್ಲಿ ಗಮನಾರ್ಹ ಆಸಕ್ತಿಯನ್ನು ಬೆಳೆಸಿಕೊಂಡರು. ಅಮರ್‌ ದಾಸ್‌ ಅವರು ಆಧ್ಯಾತ್ಮಿಕ ಮಾರ್ಗದರ್ಶನವನ್ನು ಪಡೆದರು. ಅವರು ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದಲ್ಲದೇ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದರು.


ಅಮರ್ ದಾಸ್ ಅವರು 61 ನೇ ವಯಸ್ಸಿನಲ್ಲಿ ಸಿಖ್ ಧಾರ್ಮಿಕ ಕೇಂದ್ರವಾದ ಖದೂರ್ ಸಾಹಿಬ್‌ ಗೆ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು. ಅಲ್ಲಿ ಅವರು ಎರಡನೇ ಸಿಖ್ ಗುರುವಾದ ಗುರು ಅಂಗದ್ ದೇವ್ ಜಿ ಅವರನ್ನು ಭೇಟಿಯಾದರು. ಈ ದೈವಿಕ ಭೇಟಿಯು ಅವರ ಆಧ್ಯಾತ್ಮಿಕ ಪರಿವರ್ತನೆಗೆ ಕಾರಣವಾಯಿತು. 1552 ರಲ್ಲಿ ಗುರು ಅಮರ್ ದಾಸ್ ಎರಡನೇ ಸಿಖ್ ಗುರು ಅಂಗದ್ ದೇವ್ ಜಿ ಉತ್ತರಾಧಿಕಾರಿಯಾದರು. ನಂತರ ಅವರು 73 ನೇ ವಯಸ್ಸಿನಲ್ಲಿ ಗುರುಗಳಾದರು. ಇವರು ಸುಮಾರು 22 ವರ್ಷಗಳ ಕಾಲ ಸಿಖ್ ಧರ್ಮಕ್ಕಾಗಿ ಕೆಲಸ ಮಾಡಿದರು.

ಗುರು ಅಮರ್ ದಾಸ್ ಜಿ ಸಿಖ್ ಧರ್ಮಗ್ರಂಥಗಳಿಗೆ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಅವರು ಅನೇಕ ಸ್ತೋತ್ರಗಳನ್ನು ಬರೆದಿದ್ದಾರೆ. ಅವರು ಆನಂದ್ ಸಾಹಿಬ್ ಅವರ ಬಾನಿಗೆ ಹೆಸರುವಾಸಿಯಾಗಿದ್ದಾರೆ. ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಜಿಯಲ್ಲಿ ಸೇರಿಸಲಾಗಿತ್ತು. ಗುರು ಕಾ ಲಂಗರ್
ಗೋಯಿಂಡ್ವಾಲ್ ಸಾಹಿಬ್ ಗೆ ಭೇಟಿ ನೀಡುವ ಸಿಖ್ಖರ ಸಂಖ್ಯೆ ಹೆಚ್ಚಾಗುತ್ತಿತ್ತು . ಆದರೆ ಹಳ್ಳಿಯಲ್ಲಿ ಒಂದೇ ಒಂದು ನೀರಿನ ಬಾವಿ ಇತ್ತು. ಹಾಗಾಗಿ ಅಲ್ಲಿಗೆ ಬರುವ ಜನರಿಗೆ ನೀರು ಪೂರೈಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಗುರೂಜಿ ಅವರು ಮೊದಲ ಸರೋವರವನ್ನು ನಿರ್ಮಿಸಿದರು. ಸರೋವರ ನಿರ್ಮಾಣದಲ್ಲಿ ಗುರುಜಿ ಇಡೀ ಸಿಖ್ ಸಂಘವನ್ನು ತೊಡಗಿಸಿಕೊಂಡಿತ್ತು.


ಸಾಮಾಜಿಕ ಸುಧಾರಣೆಗಳು
ಗುರು ಕಾ ಲಂಗರ್ ಅನ್ನು ರಚಿಸಿ ಸಾಮಾಜಿಕ ತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರುತ್ತಿದ್ದರು. ಇವರು ಗುರುನಾನಕ್‌ ಅವರ ತತ್ವವನ್ನು ಅನುಸರಿಸುತ್ತಿದ್ದರು. ಅಮರ್ ದಾಸ್ ಜಿ ವಿಧವಾ ಮರು-ವಿವಾಹದಂತಹ ಕೆಲವು ಸಾಮಾಜಿಕ ಅನಿಷ್ಟಿ ಪದ್ಧತಿ ವಿರುದ್ಧ ಹೋರಾಡಿದರು. ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಬಲವಾಗಿ ಪ್ರತಿಪಾದಿಸಿದರು . ಅವರು ಸತಿ ಮತ್ತು ಬುರ್ಕಾ ಪದ್ಧತಿಯ ವಿರುದ್ಧವೂ ಹೋರಾಡಿದರು. ಮಹಿಳಾ ಶಿಕ್ಷಣ ಮತ್ತು ಸಬಲೀಕರಣವನ್ನು ಪ್ರೋತ್ಸಾಹಿಸಿದರು. ಗುರು ಅಮರ್ ದಾಸ್ ಜಿ ಅವರ ನಾಯಕತ್ವದಲ್ಲಿ ಸಿಖ್ ಧರ್ಮವು ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿತು. ಅವರು 22 ಮಾಂಜಿಗಳನ್ನು (ಧರ್ಮಪ್ರಾಂತ್ಯಗಳು) ಸ್ಥಾಪಿಸುವ ಮೂಲಕ ಸುಸಂಘಟಿತ ಸರ್ಕಾರದ ವ್ಯವಸ್ಥೆಯನ್ನು ಸ್ಥಾಪಿಸಿದರು.

ಗುರು ಅಮರ್‌ ದಾಸ್‌ ಅವರು ಸೆಪ್ಟೆಂಬರ್‌ 1574 ರಂದು ತಮ್ಮ 95 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.