ರವೀಂದ್ರನಾಥ್‌ ಟ್ಯಾಗೋರ್‌ ಅವರು ಭಾರತಕ್ಕೆ ರಾಷ್ಟ್ರಗೀತೆಯನ್ನು ನೀಡಿದ ಕವಿ ಎಂದೇ ಗುರುತಿಸಿಕೊಂಡವರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಪ್ರಥಮ ಭಾರತೀಯರಾಗಿದ್ದರು. ಇಂದು ಅವರ ಜಯಂತಿ.


ಪರಿಚಯ
ರವೀಂದ್ರನಾಥ ಟ್ಯಾಗೋರ್ ಅವರು ಮೇ 7, 1861 ರಂದು ಕೊಲ್ಕತ್ತಾದಲ್ಲಿ ಜನಿಸಿದರು. ಇವರ ತಂದೆ ದೇಬೇಂದ್ರನಾಥ ಟ್ಯಾಗೋರ್‌ ಮತ್ತು ತಾಯಿ ಶಾರದಾ ದೇವಿ. ಟ್ಯಾಗೋರ್‌ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ಅವರು ಲಂಡನ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ನಡೆಸಿದರು. ಇವರು ಬಾಲ್ಯದಿಂದಲೂ ಸಾಹಿತ್ಯದ ಕಡೆ ಹೆಚ್ಚು ಆಸಕ್ತಿ ಹೊಂದಿದರು.


ಸಾಹಿತ್ಯದ ಕೊಡುಗೆ
ಟ್ಯಾಗೋರ್‌ ಅವರು ಸಾಹಿತ್ಯಿಕ ನಿಯತಕಾಲಿಕೆ ಪ್ರಕಟಣೆಗಳನ್ನು ಕೆಲಸ ಮಾಡುವುದರ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು. ಆಗಾಗ್ಗೆ ನಾಟಕ ಪ್ರದರ್ಶನಗಳು ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲೂ ಪ್ರಭಾವಿತರಾಗಿದ್ದರು. ನಂತರ ಅವರು ಎಂಟು ವರ್ಷದವರಿದ್ದಾಗಲೇ ಮೊದಲ ಕವಿತೆಯನ್ನು ಬರೆದಿದ್ದರು. ಹದಿನಾರನೇ ವಯಸ್ಸಿನಲ್ಲಿ ಅವರ ಸಣ್ಣ ಕಥೆಯು “ಭಾನುಸಿಂಹ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು. ರವೀಂದ್ರನಾಥ ಟ್ಯಾಗೋರ್ ಕವನಗಳು ಮತ್ತು ಸಣ್ಣ ಕಥೆಗಳು, ನಾಟಕಗಳು ಮತ್ತು ಹಾಡುಗಳ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.


ರವೀಂದ್ರನಾಥ್ ಅವರು ಕಬೀರ್ ಮತ್ತು ರಾಮಪ್ರಸಾದ್ ಸೇನ್ ರಂತಹ ಹಳೆಯ ಕವಿಗಳಿಂದ ಸ್ಫೂರ್ತಿ ಪಡೆದಿದ್ದರು. “ಗೀತಾಂಜಲಿ” ಎಂಬ ಪ್ರಸಿದ್ಧ ಕೃತಿಯು ಭಾರತ ಮತ್ತು ಇಂಗ್ಲೆಂಡ್‌ನಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಅವರು ಎರಡು ರಾಷ್ಟ್ರಗೀತೆಗಳನ್ನು ಬರೆದಿದ್ದು ಭಾರತಕ್ಕಾಗಿ ಜನ ಗಣ ಮನ” ಹಾಗೂ ಬಾಂಗ್ಲಾದೇಶಕ್ಕಾಗಿ “ಅಮರ್ ಸೋನಾರ್ ಬಾಂಗ್ಲಾ ಗೀತೆಯಿಂದಲೇ ಟ್ಯಾಗೋರ್‌ ಅವರು ಹೆಚ್ಚು ಪ್ರಚಲಿತಗೊಂಡವರು . ‘ನೌಕಾಡುಬಿ,’ ‘ಗೋರಾ,’ ‘ಚತುರಂಗ,’ ‘ಘರೆ ಬೈರೆ,’ ಮತ್ತು ‘ಜೋಗಜೋಗ.’ ಎಂಬ ಪ್ರಸಿದ್ಧ ಪುಸ್ತಕಗಳನ್ನು ಬರೆದಿದ್ದಾರೆ.


ಶಾಂತಿನಿಕೇತನ ಸ್ಥಾಪನೆ
ರವೀಂದ್ರನಾಥ್‌ ಟ್ಯಾಗೋರ್‌ ಅವರು ಶಾಂತಿನಿಕೇತನದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಇದರಿಂದ ಟ್ಯಾಗೋರ್‌ ಅವರನ್ನು ವಿದ್ಯಾರ್ಥಿಗಳು ಗೌರವದಿಂದ ಗುರುದೇವ ಎಂಬ ಹೆಸರಿನಿಂದ ಕರೆದಿದ್ದರು. ಈ ವಿಶ್ವವಿದ್ಯಾನಿಲಯದಲ್ಲಿ ತರಗತಿ ಕೊಠಡಿಗಳು ಮತ್ತು ಕಲಿಕೆಯ ವ್ಯಾಪ್ತಿ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿಲ್ಲ. ಬದಲಾಗಿ, ವಿಶ್ವವಿದ್ಯಾನಿಲಯದ ಮೈದಾನದಲ್ಲಿ ಬೃಹತ್ ಆಲದ ಮರಗಳ ಕೆಳಗೆ ತೆರೆದ ಜಾಗದಲ್ಲಿ ತರಗತಿಗಳು ನಡೆಯುತ್ತಿದ್ದವು.


ಪ್ರಶಸ್ತಿ
ಟ್ಯಾಗೋರ್ ಅವರು 1913 ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಆ ಮೂಲಕ ನೊಬೆಲ್ ಪ್ರಶಸ್ತಿ ಪಡೆದ ಮೊದಲ  ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.


ರವೀಂದ್ರನಾಥ್‌ ಟ್ಯಾಗೋರ್‌ ಅವರು ಅನಾರೋಗ್ಯ ಸಮಸ್ಯೆಯಿಂದ ಆಗಸ್ಟ್‌ 7, 1941 ರಂದು ತಮ್ಮ 80ನೇ ವಯಸ್ಸಿನಲ್ಲಿ ಕೊಲ್ಕತ್ತಾದಲ್ಲಿ ನಿಧನರಾದರು

Leave a Reply

Your email address will not be published.

This site uses Akismet to reduce spam. Learn how your comment data is processed.