Bengaluru March 03, 2017: Eminent economist S Gurumurthy delivered a lecture on ‘Sri Guruji Golwalkar and Contemporary India’ at Shashwati Auditiorium of NMKRV College, Bengaluru in a programme organised by Manthana, Bengaluru.

His speech S Gurumurthy said “Guruji was a name first used by some students to call him, it was not a status of Shri Golwalkar in RSS. Golwalkar was not a Guruji in the ordinary sense of the word. He was a profound and visionary thinker and philosopher. To clearly understand him, we should stop being reverential and start studying him deeply. The more you study his views and how he lead the RSS during its most challenging times, you realize he was a great visionary who foresaw things to come and lead with moral conviction and clarity.”

“Sri Guruji and RSS are synonymous as he shaped the organization and it’s philosophy and vision for decades during its formative years. Before Khilafat and 1940, there was national consensus on many issues such as Hindu Nationalism,  Hindu identity of Bharat and how cultural unity is the basis on which we should operate. Gandhiji, Nehru and even communist leaders like RP Dutt agreed on the Hindu identity and civilizational values of Bharat.” added Gurumurthy.

“After, 1940 and then after Independence in 1947, Nehru and others started veering away from the consensus because of the rude shock of Partition by following a strange type of secularism which made Hindu nationalism a bad word and RSS and Guruji, communal. The assassination of Gandhiji also brought a lot of pressure on RSS through maligning accusations. Guruji valiantly lead the RSS and the Hindu society during these turbulent times. He was the lone dissenter who struggled to keep the pre-1940 consensus on Hindu identity of Bharat alive, while others deserted the same.” said S Gurumurthy.

“But,  posterity has proved Guruji’s views and vision to be valid and correct. Be it the fundamentalism project of Chicago university or the Supreme Court of India,  their views on validity of Hindu Nation and Hindu Nationalism or Militant Hinduism being fig leaf, have echoed Guruji’s views. On cultural assimilation of religious minorities, Gandhiji and Guruji held convergent views.” said S Gurumurthy.

“The greatness of a person is how posterity treats him and his views. When Guruji passed away, he was honored by the Indian Parliament. His views on Bharat and the path we need to follow, China and global affairs have been vindicated. We need to study him deeply and realize the full import of his views on the contemporary challenges we face. That will be best and fitting tribute to Shri Guruji Golwalkar.”  concluded S Gurumurthy.

FULL AUDIO: S Gurumurthy’s lecture on ‘Sri Guruji Golwalkar and Contemporary India’ at Bengaluru

ಬೆಂಗಳೂರು ಮಾರ್ಚ್ 03, 2017: ಬೆಂಗಳೂರಿನ ಜಯನಗರದ 4ನೇ ಬ್ಲಾಕ್ ನ ಎನ್‌.ಎಂ.ಕೆ.ಆರ್‌.ವಿ ಕಾಲೇಜಿನಲ್ಲಿ ಮಂಥನ ವೈಚಾರಿಕ ಸಂಸ್ಥೆ ಆಯೋಜಿಸಿದ್ದ ಆರೆಸ್ಸೆಸ್ ನ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೋಳ್ವಲ್ಕರ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಸರಾಂತ ಆರ್ಥಿಕ ತಜ್ಞ ಎಸ್. ಗುರುಮೂರ್ತಿಯವರು ಮಾಡಿದ ಭಾಷಣದ ಸಾರ ರೂಪ ಇಲ್ಲಿದೆ. 

ಶ್ರೀ ಗುರೂಜಿ ಗೋಳ್ವಲ್ಕರ್ ಮತ್ತು ಸಮಕಾಲೀನ ಭಾರತ: ಎಸ್. ಗುರುಮೂರ್ತಿ

ಯಾವುದೇ ಮನುಷ್ಯನನ್ನು ವಿಶ್ಲೇಷಿಸಬೇಕಾದರೆ ನಾವು ಮೊದಲು ಆ ಮನುಷ್ಯನನ್ನು ಆರಾಧಿಸದೇ ಒಬ್ಬ ಮೂರನೇ ವ್ಯಕ್ತಿಯಂತೆ ಅವರನ್ನು ನೋಡಬೇಕು. ಗೋಳ್ವಲ್ಕರ್ ಮತ್ತು ರಾ. ಸ್ವ. ಸಂಘವನ್ನು ಬೇರೆ ಬೇರೆಯಾಗಿ ನೋಡಲು ಅಸಾಧ್ಯವೆಂದು ನನಗೆ ಮೊದಲ ಬಾರಿಗೆ ಅವರ ಬಗ್ಗೆ ಓದಿದಾಗ ಮನದಟ್ಟಾಯಿತು. ಹಾಗಾಗಿ ಗುರೂಜಿ ಗೋಳ್ವಲ್ಕರ್ ಅವರನ್ನು ತಿಳಿಯಲು ಸಂಘವನ್ನು ತಿಳಿಯಬೇಕು. ಗೋಳ್ವಲ್ಕರ್ ಅವರು ರಾ. ಸ್ವ. ಸಂಘವನ್ನು ೩೩ ವರ್ಷಗಳ ಕಾಲ ಮುನ್ನಡೆಸಿ ಅದರ ಬೆಳವಣಿಗೆಗೆ ತಮ್ಮ ಯೋಗದಾನವನ್ನು ಮಾಡಿದರು. ಅವರನ್ನು ಬಹಳ ಜನರು ಕೇವಲ ಭಾರತಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ಆದರೆ ಅವರು ಮತ್ತು ಅವರ ವಿಚಾರಗಳು ಇಡೀ ವಿಶ್ವಕ್ಕೆ ಅನ್ವಯವಾಗುವಂಥವು ಎನ್ನುವುದು ನನ್ನ ಖಚಿತ ಅಭಿಪ್ರಾಯ.

1995ರಲ್ಲಿ ರಾ. ಸ್ವ. ಸಂಘದ ಬಗ್ಗೆ ಒಬ್ಬ ಪ್ರಖ್ಯಾತ ಕಮ್ಯುನಿಸ್ಟ್ ವಿಚಾರಧಾರೆಯ ಚಿಂತಕ ಹೀಗೆ ಹೇಳಿದ್ದಾರೆ – ’ಇದುವರೆಗೂ ಸಂಘವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದಿಲ್ಲ.’ ಸಂಘವನ್ನು ಅರ್ಥ ಮಾಡಿಕೊಳ್ಳದೇ ಸಂಘದ ಬಗ್ಗೆ ಟೀಕೆ ಮಾಡುವವರೇ ಹೆಚ್ಚಿನವರು. ರಜನಿ ಪಾಲ್ ದತ್ತ್ ಇಂಗ್ಲೆಂಡಿನಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ. ಭಾರತದಲ್ಲಿ ಒಂದು ವೇಳೆ ಆಂಗ್ಲ ಶಿಕ್ಷಣ ಪದ್ಧತಿಯಿಲ್ಲದಿದ್ದರೂ ಕೂಡ ವೇದ ಉಪನಿಷತ್‌ನಲ್ಲಿ ಇರುವ ಋಕ್ ಮಂತ್ರಗಳಿಂದ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯನ್ನು ಪಡೆಯುತ್ತಿದ್ದರು ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಪಂ. ನೆಹರು ಕೂಡ ತಮ್ಮ ಗ್ಲಿಂಪ್ಸಸ್ ಆಫ಼್ ವರ್ಲ್ಡ್ ಹಿಸ್ಟರಿಯಲ್ಲಿ ಹೀಗೆ ಹೇಳಿದ್ದಾರೆ – ಭಾರತೀಯತೆ ಮತ್ತು ಹಿಂದು ರಾಷ್ಟ್ರೀಯತೆ ಬೇರೆ ಅಲ್ಲ, ಅವು ಒಂದರೊಳಗೊಂದು ಬೆಸೆದುಕೊಂಡಿವೆ. ಗಾಂಧೀಜಿ ತಮ್ಮ ಲಂಡನ್ ಯಾತ್ರೆಯಲ್ಲಿದ್ದಾಗ ಅಲ್ಲಿ ಇದ್ದ ಬ್ರಿಟಿಷ್ ಜನರ ಜೊತೆ ಸಂವಾದದ ಬಗ್ಗೆ ಸ್ವರಾಜ್ಯ ಪತ್ರಿಕೆಯಲ್ಲಿ ಬಂದ ಲೇಖನದಲ್ಲೂ ಇದೇ ವಿಚಾರವನ್ನು ವ್ಯಕ್ತಪಡಿಸುತ್ತಾರೆ. ಒಬ್ಬ ಬ್ರಿಟಿಷ್ ಪ್ರಜೆ ಭಾರತವನ್ನು ಬ್ರಿಟಿಷರು ಬಂದ ನಂತರ ಒಂದು ರಾಷ್ಟ್ರವಾಗಿ ಕಟ್ಟಿದರು, ಅದಕ್ಕೆ ಮೊದಲು ನೀವು ಒಂದು ರಾಷ್ಟ್ರವಾಗಿ ಇರಲಿಲ್ಲ ಎಂದಾಗ ಗಾಂಧೀಜಿಯವರು – ನಮ್ಮ ಪೂರ್ವಜರು ಭಾರತದ ಅನೇಕ ಕಡೆ ಪುಣ್ಯ ಕ್ಷೇತ್ರಗಳನ್ನು ಮಾಡಿದರು. ದೇಶದ ಎಲ್ಲರೂ ಆ ಕ್ಷೇತ್ರಗಳಿಗೆ ಹೋಗುತ್ತಿದ್ದರು. ರಾಜ್ಯ ಮತ್ತು ರಾಜರು ಬೇರೆ ಬೇರೆ ಇದ್ದಿರಬಹುದು. ಆದರೆ, ನಮ್ಮದು ಒಂದು ರಾಷ್ಟ್ರವೆಂಬ ಭಾವನೆ ಮೊದಲಿನಿಂದಲೇ ಇತ್ತು. ಹಾಗೆ ಇದ್ದಿದ್ದರಿಂದಲೇ ನೀವು ರೈಲು, ಪೋಸ್ಟ್ ಇತ್ಯಾದಿಗಳನ್ನು ಸುಲಭವಾಗಿ ತರಲು ಸಾಧ್ಯವಾಯಿತು ಎಂದಿದ್ದರು.

ಈ ಎಲ್ಲದರ ಅರ್ಥ ಏನೆಂದರೆ, 1940ಕ್ಕೂ ಮೊದಲು ಭಾರತದಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ಭಾರತ ಮತ್ತು ಹಿಂದು ರಾಷ್ಟ್ರೀಯತೆ ಬಗ್ಗೆ ಒಂದೇ ವಿಚಾರವುಳ್ಳವಾಗಿದ್ದವು. ಆದರೆ 1940 ರ ನಂತರ ಈ ವಿಚಾರಗಳು ಬದಲಾದವು. ಇಂತಹ ಕಾಲಖಂಡದಲ್ಲಿ ಗುರೂಜಿಯವರು ಹಿಂದು ರಾಷ್ಟ್ರೀಯತೆ ಬಗ್ಗೆ ಮಾತನಾಡಿದರು.

ಪಾಶ್ಚಾತ್ಯ ಆರ್ಥಿಕತೆಯ ಪ್ರಕಾರ ಒಂದು ದೇಶ ತನ್ನ ಪ್ರಾಚೀನ ವಿಚಾರಧಾರೆ, ಸಂಸ್ಕೃತಿಯಿಂದ ಬೇರ್ಪಟ್ಟಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ದೇಶ ಸ್ವತಂತ್ರಗೊಂಡ ಮೇಲೆ, ಈ ವಿಚಾರದ ಆಧಾರದ ಮೇಲೆಯೇ ಅಭಿವೃದ್ಧಿ, ಯೋಜನೆಗಳು ನಡೆದವು. ಇದಕ್ಕೆ ಹೆಚ್ಚಿನವರ ಸಮ್ಮತಿಯೂ ಇತ್ತು. ಆದರೆ ಸಂಘ ಮತ್ತು ಗುರೂಜಿಯವರು ಇದನ್ನು ತಿರಸ್ಕರಿಸುತ್ತಾರೆ, ಹೆಚ್ಚಿನ ಜನರು ಇದನ್ನು ಒಪ್ಪಿದ್ದರೂ ಕೂಡಾ! ಆದರೆ, ಇಂದು ಪ್ರಪಂಚದಲ್ಲಿ ಈ ವಿಚಾರಕ್ಕೆ ಮನ್ನಣೆ ಬರುತ್ತಿದೆ. ಒಮ್ಮೆ ಹಾಗೆ ಹೇಳಿದ್ದ ವಿಶ್ವಸಂಸ್ಥೆಯೇ ಈಗ ಗೋಳ್ವಲ್ಕರ್ ಹೇಳಿದ್ದ ವಿಚಾರವನ್ನು ಒಪ್ಪಿಕೊಳ್ಳುತ್ತಿದೆ!

ಚಿಕಾಗೊ ವಿಶ್ವವಿದ್ಯಾಲಯ ಅನೇಕ ವರ್ಷಗಳ ಹಿಂದೆ ಫಂಡಮೆಂಟಲಿಸಮ್ ಪ್ರಾಜೆಕ್ಟ್ ಎಂಬ ಒಂದು ಪ್ರಾಜೆಕ್ಟ್ ಮಾಡಿತ್ತು. ಅದರ ಪ್ರಕಾರ, ಉಗ್ರವಾದಿ, ಆಕ್ರಮಣಕಾರಿ, ಪ್ರತಿಕ್ರಿಯಾತ್ಮಕ ಮೊದಲಾದ ಶಬ್ದಗಳನ್ನು ಹಿಂದು ವಿಚಾರವನ್ನು ಪ್ರತಿನಿಧಿಸಲು ಬಳಸುವುದು ಸಮಂಜಸವಲ್ಲ. ಹಿಂದು ಧರ್ಮ ಅಸಹಿಷ್ಣು ಅಲ್ಲ ಎಂಬುದು ಅದರ ಅಭಿಪ್ರಾಯ. ಇದೇ ವಿಚಾರವನ್ನು ಗೋಳ್ವಲ್ಕರ್ ಸ್ಪಷ್ಟವಾಗಿ ಹೇಳುತ್ತಲೇ ಬಂದಿದ್ದರು.

ಒಬ್ಬ ಮನುಷ್ಯನ ಮಹತ್ತ್ವ ಆ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಎಷ್ಟು ಪ್ರಭಾವಶಾಲಿಯಾಗಿದ್ದ ಎನ್ನುವುದಕ್ಕಿಂತ, ಅವನ ಕಾಲಾನಂತರ ಆ ಮನುಷ್ಯನ ವಿಚಾರಗಳು ಎಷ್ಟು ಪ್ರಭಾವಶಾಲಿಯಾಗಿರುತ್ತವೆ ಎನ್ನುವುದರ ಮೆಲೆ ಅವಲಂಬಿತವಾಗಿದೆ. ಹಿಂದುಗಳ ಬಹುದೇವತಾರಾಧನೆ ಒಂದು ಅಮೂಲ್ಯ ಗುಣ, ಈ ಗುಣದಿಂದಲೇ ಒಬ್ಬ ಹಿಂದು ಎಲ್ಲರನ್ನು ಒಪ್ಪಿ ಅವರನ್ನು ತನ್ನವರಂತೆ ಕಾಣುತ್ತಾನೆ. ತನ್ನ ಪ್ರಕೃತಿಗನುಸಾರವಾಗಿ ತನಗೆ ತೋಚಿದ ಮಾರ್ಗದಲ್ಲಿ ಆರಾಧಿಸಲು ಮುಕ್ತನಾಗಿದ್ದಾನೆ. ಈ ಎಲ್ಲಾ ವಿಚಾರಗಳನ್ನು ಗೋಳ್ವಲ್ಕರ್ ಹೇಳುತ್ತಿದ್ದರು. ಆ ವಿಚಾರಗಳಿಗೆ ಇಂದು ಹೆಚ್ಚಿನ ಮನ್ನಣೆ ಸಿಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ನೆಹರು ವಿರುದ್ಧ ಒಬ್ಬ ಸ್ವಯಂಸೇವಕ ವಾಚಾಮಗೋಚರವಾಗಿ ಮಾತನಾಡುತ್ತಿದ್ದಾಗ, ಅದನ್ನು ಕೇಳಿಸಿಕೊಂಡ ಗೋಳ್ವಲ್ಕರ್, ಅವನನ್ನು ಕರೆದು ನಮ್ಮ ಪ್ರಧಾನಮಂತ್ರಿಯ ಬಗ್ಗೆ ಹೀಗೆ ಮಾತನಾಡಲು ನಿನಗೆ ಯಾವ ಅಧಿಕಾರವೂ ಇಲ್ಲ ಎಂದು ಬೈಯುತ್ತಾರೆ. ಅದೇನು, ಸಾರ್ವಜನಿಕ ಸ್ಥಳವಾಗಿರಲಿಲ್ಲ. ಖಾಸಗಿಯಾಗಿಯೂ ಸ್ವಯಂಸೇವಕನೊಬ್ಬ ಹಾಗೆ ಮಾತನಾಡಬಾರದು ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ವಿರೋಧಿಗಳನ್ನೂ ಗೌರವಿಸುವ ಸಂಘಟನೆಯನ್ನು ಕಟ್ಟಬೇಕೆನ್ನುವುದು ಅವರ ಹಂಬಲವಾಗಿತ್ತು. ಲಂಡನ್‌ನಲ್ಲಿ ನೆಹರು ಪ್ರವಾಸದ ಸಮಯದಲ್ಲಿ ಕಪ್ಪುಬಾವುಟದ ಪ್ರದರ್ಶನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತ, ಅದು ತಪ್ಪು, ನಮ್ಮಲ್ಲಿ ಎಷ್ಟೇ ಅಭಿಪ್ರಾಯಭೇದವಿದ್ದರೂ ಹೊರ ದೇಶಕ್ಕೆ ಹೋದಾಗ ನಾವೆಲ್ಲರೂ ಒಂದೇ ಎನ್ನುತ್ತ ಮಹಾಭಾರತದ ‘ವಯಂ ಪಂಚಾಧಿಕಂ ಶತಂ’ಎನ್ನುವ ಯುಧಿಷ್ಠಿರನ ಮಾತನ್ನು ಉದ್ಗರಿಸುತ್ತಾರೆ. ಹೀಗಿತ್ತು ಅವರ ವಿಚಾರಧಾರೆ.

ಚೀನಾದ ಬಗ್ಗೆ ಮಾತನಾಡುತ್ತ ಚೀನಾವು ತನ್ನ ವಿಸ್ತರಣಾವಾದಿ ಪ್ರವೃತ್ತಿಯನ್ನು ಉಳಿಸಿಕೊಳ್ಳುತ್ತಲೇ ಕಮ್ಯುನಿಸಂನಿಂದ ಕನ್ಫ್ಯೂಷನಿಸಂ ಕಡೆ ವಾಲುತ್ತದೆ ಎಂದು ಹೇಳಿದ್ದರು. ಈಗಿನ ಪರಿಸ್ಥಿತಿಂiiನ್ನು ಅವಲೋಕಿಸಿದಾಗ ಅದು ಸತ್ಯ ಎಂದು ಗೋಚರವಾಗುತ್ತದೆ. ಹಾಗೆ ಪಾಕಿಸ್ತಾನದ ಬಗ್ಗೆ ಹೇಳುತ್ತ ಅದು ಪ್ರಪಂಚದಲ್ಲಿ ಎಲ್ಲರಿಗೂ ಒಂದು ದೊಡ್ಡ ಕಿರಿಕಿರಿಯಾಗಿಯೇ ಉಳಿಯುತ್ತದೆ ಎಂದಿದ್ದರು. ಇವು ಗೋಳ್ವಲ್ಕರ್ ಅವರ ದೂರದರ್ಶಿತ್ವಕ್ಕೆ ಹಿಡಿದ ಕನ್ನಡಿ.

ಗೋಳ್ವಲ್ಕರ್ ಅವರ ವಿಚಾರದ ಅಧ್ಯಯನ ಆಗಬೇಕಿದೆ. ಅದು, ನಮ್ಮ ದೇಶದ ಮತ್ತು ವಿಶ್ವದ ಅಭ್ಯುದಯಕ್ಕೆ ಬೇಕಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.