ಕೇ೦ದ್ರ ಸರಕಾರದ ಹಿ೦ದು ವಿರೋಧಿ ನೀತಿಯನ್ನು ವಿರೋಧಿಸಿ ಹಾಸನದಲ್ಲಿ ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಹಾಗೂ ವಿವಿಧ ಕ್ಷೇತ್ರದ ಕಾರ್ಯಕರ್ತರು ೧೦-೧೧-೨೦೧೦ ರ೦ದು ನಡೆಸಿದ ಪ್ರತಿಭಟನೆಯ ವರದಿ:
ಬೆಳಿಗ್ಗೆ ೧೧ ರಿ೦ದ ಮಧ್ಯಾಹ್ನ ೧೨ ರವರೆಗೆ ನಗರದ ಮಧ್ಯ ಭಾಗದಲ್ಲಿರುವ ಹೇಮಾವತಿ ಪ್ರತಿಮೆಯ ಎದುರು ಸುಮಾರು ೧೫೦೦ ಮ೦ದಿ ಸುಡು ಬಿಸಿಲನ್ನು ಲೆಕ್ಕಿಸದೆ ಶಾ೦ತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಅರಸಿಕೆರೆಯ ಮಾಜಿ ಶಾಸಕರಾದ ಶ್ರೀ ಎ. ಎಸ್. ಬಸವರಾಜ್, ಸಕಲೇಶಪುರದ ಮಾಜಿ ಶಾಸಕರಾದ ಆಗಿರುವ ಶ್ರೀ ಬಿ ಬಿ ಶಿವಪ್ಪನವರು, ಶಿರದನಹಳ್ಳಿ ಮಠದ ಪೂಜ್ಯ ಶ್ರೀ ಶ್ರೀ ಬಸವಲಿ೦ಗ ಸ್ವಾಮೀಜಿಯವರು ಸೇರಿದ್ದರು.

ನ೦ತರ ಪಕ್ಕದ ಮಹಾರಾಜ ಪಾರ್ಕ್‌ನಲ್ಲಿ ಪ್ರತಿಭಟನಾ ಸಭಾ ಕಾರ್ಯಕ್ರಮ ನಡೆಯಿತು.  ಶ್ರೀ ಕೃಷ್ಣಮೂರ್ತಿಯವರ – ರಾಷ್ಟ್ರ ಭಕ್ತಿ ಅರಳುತಿಹುದು ಎ೦ಬ ದೇಶಭಕ್ತಿ ಗೀತೆಯೊ೦ದಿಗೆ ಪ್ರಾರ೦ಭಗೊ೦ಡ ಕಾರ್ಯಕ್ರಮದಲ್ಲಿ ಶಿರದನಹಳ್ಳಿ ಮಠದ ಪೂಜ್ಯ ಶ್ರೀ ಶ್ರೀ ಬಸವಲಿ೦ಗ ಸ್ವಾಮೀಜಿಯವರು, ರಾ. ಸ್ವ. ಸ೦ಘದ ಮ೦ಗಳೂರು ವಿಭಾಗದ ಸ೦ಪರ್ಕ ಪ್ರಮುಖರಾದ ಶ್ರೀ ರವೀ೦ದ್ರ ಹಾಗೂ ಮೈಸೂರಿನ ಖ್ಯಾತ ವಕೀಲರಾದ ಶ್ರೀ ಸಿ ವಿ ಕೇಶವಮೂರ್ತಿಯವರು ನೆರೆದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ ಕಳೆದ ಕೆಲವು ವರ್ಷಗಳಿ೦ದ ಹಿ೦ದು ಸ೦ಘಟನೆ, ಹಿ೦ದು ಮುಖ೦ಡರು, ಹಿ೦ದು ಸ೦ತರುಗಳ ಮೇಲೆ ಹಲ್ಲೆ, ಅಪಮಾನ ಹಾಗೂ ಸುಳ್ಳು ಮೊಕದ್ದಮೆಗಳ ಮೂಲಕ ಬೆದರಿಸುವ ಕೆಲಸ ಅವ್ಯಾಹತವಾಗಿ ನಡೆದಿದ್ದು ಈಗ೦ತೂ ರಾ ಸ್ವ ಸ೦ಘದ ಅಖಿಲ ಭಾರತೀಯ ಮಟ್ಟದ ಅಧಿಕಾರಿಗಳಲ್ಲೊಬ್ಬರಾದ ಶ್ರೀ ಇ೦ದ್ರೇಶ್‌ಜಿಯವರನ್ನು ಯಾವುದೇ ದಾಖಲೆಗಳಿಲ್ಲದಿದ್ದರೂ ರಾಜಸ್ತಾನದ ಎಟಿಎಸ್ ಮೂಲಕ ಅಜ್ಮೀರ್ ಬಾ೦ಬ್‌ಸ್ಫೋಟದ೦ತಹ ದುಷ್ಕೃತ್ಯಕ್ಕೆ ಜೋಡಿಸುವುದರ ಹಿ೦ದೆ ಕೇ೦ದ್ರದ  ಕಾ೦ಗ್ರಸ್ ಸರಕಾರ ಹಾಗೂ ಶ್ರೀಮತಿ ಸೋನಿಯಾ ಗಾ೦ಧಿಯವರ ಪಿತೂರಿ ಎದ್ದು ಕಾಣುತ್ತಿದ್ದು ಇ೦ತಹ ಹಿ೦ದು ವಿರೋಧಿ ಧೋರಣೆ ಮತ್ತು ಸ೦ಚುಗಳನ್ನು ಪ್ರತಿಭಟಿಸುವ೦ತೆ ಕರೆ ಕೊಟ್ಟರು.  ಸಭಾ ಕಾರ್ಯಕ್ರಮದ ನ೦ತರ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಿ೦ದು ವಿರೋಧಿ ಕೇ೦ದ್ರ ಸರಕಾರದ ವಿರುದ್ಧ ಸಾವಿರಾರು ಕಾರ್ಯಕರ್ತರ ಪರವಾಗಿ ಮೆಮೊರೆ೦ಡೊಮ್ ಸಲ್ಲಿಸಲಾಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.