
ಬಾಗಲಕೋಟೆ : ಬಾಗಲಕೋಟೆಯ ಬಾದಾಮಿಯ ಕೆರೂರಿನ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರುಣ್ ಕಟ್ಟಿಮನಿ,ಲಕ್ಷ್ಮಣ್,ಹಾಗು ಯಮನೂರು ಅವರ ಮೇಲೆ ಮುಸಲ್ಮಾನರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಇತ್ತೀಚೆಗಷ್ಟೆ ನೂಪುರ್ ಶರ್ಮ ಅವರ ಹೇಳಿಕಗೆ ಬೆಂಬಲ ನೀಡಿ,ಮತ್ತು ರಾಜಾಸ್ಥಾನದ ಉದಯಪುರದ ಬಡ ದರ್ಜಿ ಕನ್ಹಯ್ಯಾಲಾಲ್ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಈ ಕುರಿತಂತೆ ಅರುಣ್ ಕಟ್ಟಿಮನಿಯವರು ಪ್ರತಿಭಟನೆಯನ್ನು ಆಯೋಜಿಸಿದ ಕಾರಣಕ್ಕಾಗಿ ಮುಸಲ್ಮಾನ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು.
ಅನೇಕ ದಿನಗಳಿಂದ ಕೆರೂರು ಬಸ್ ನಿಲ್ದಾಣದಲ್ಲಿ ಮುಸಲ್ಮಾನ ಯುವಕರು ಕಾಲೇಜಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಹಿಂದು ಹುಡುಗಿಯರಿಗೆ ತೊಂದರೆ ನೀಡುತ್ತಿದ್ದು,ಅದರ ವಿರುದ್ಧ ದನಿಯೆತ್ತಿದ್ದ ಎನ್ನಲಾಗಿದೆ.ನಿನ್ನೆ ಬುಧವಾರ (6/7/2022)ರಂದು ಕೂಡ ಹಿಂದೂ ಹುಡುಗಿಯರನ್ನು ಚುಡಾಯಿಸಿದ ಒಂದಷ್ಟು ಮುಸಲ್ಮಾನ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದ. ಆದರೆ, ಮೊನ್ನೆ ನಡೆದ ಪ್ರತಿಭಟನೆಯಿಂದ ಅರುಣ್ ಅವರ ಕುರಿತು ಆಕ್ರೋಶಗೊಂಡಿದ್ದ ಕೆಲವು ಮುಸಲ್ಮಾನ ಗೂಂಡಾಗಳು ಸಂಜೆ 4:30ರ ವೇಳೆಗೆ 30-40 ಸಂಖ್ಯೆಯಲ್ಲಿ ಜಮಾಯಿಸಿದ್ದು ಗುಂಪಾಗಿ ಬಂದು ಅರುಣ್ ಕಟ್ಟಿಮನಿ, ಅವರ ಅಣ್ಣ ಲಕ್ಷ್ಮಣ,ಮತ್ತು ಯಮನೂರು ಅವರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಅತ್ಯಂತ ಅಮಾನವೀಯವಾಗಿ ದಾಳಿ ಮಾಡಿ,ಮಾರಕಾಸ್ತ್ರಗಳಿಂದ ಹೊಡೆಯಲಾಗಿದೆ,ಅಲ್ಲದೆ ಚೂಕುವಿನಿಂದ ಇರಿಯಲಾಗಿದೆ. ಬಡತನದ ಹಿನ್ನೆಲೆಯ ಕೃಷಿ ಕುಟುಂಬದಿಂದ ಬಂದಿರುವ ಅರುಣ್ ಅವರ ಮೇಲೆ ಒಂದಷ್ಟು ಮುಸಲ್ಮಾನ ಗೂಂಡಾಗಳು ಶಸ್ತಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರಾತ್ರಿಯ ಹೊತ್ತಿಗೆ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು 30ಮಂದಿಯನ್ನು ಹೆಸರಿಸಲಾಗಿದೆ.ಅದರಲ್ಲಿ ಸದ್ಯ ಪೋಲೀಸರು 18 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರ ನಡುವೆ ಆಕ್ರೋಶಗೊಂಡ ದುಷ್ಕರ್ಮಿಗಳು ಬಸ್ ನಿಲ್ದಾಣದ ಬಳಿಯ ಎರಡು ತಳ್ಳುವ ಗಾಡಿಗೆ ಬೆಂಕಿ ಹಾಕಿದ್ದು ಐದು ಬೈಕ್ಗಳು ಜಖಂಗೊಂಡಿವೆ ಎನ್ನಲಾಗಿದೆ.ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಖಾಕಿ ಪಡೆಯ 150 ಮಂದಿ ಅಗತ್ಯ ಬಂದೋಬಸ್ತ್ ನೋಡಿಕೊಳ್ಳುತ್ತಿದ್ದು, ಎಸ್ಪಿ ಜಯಪ್ರಕಾಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.ಸ್ಥಳದಲ್ಲಿ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ನಾಳೆ ರಾತ್ರಿ 8ರವರೆಗೂ 144ಸೆಕ್ಷನ್ ಜಾರಿ ಮಾಡಲಾಗಿದೆ. ಕೆರೂರು ಪಟ್ಟಣಕ್ಕೆ ಐಜಿಪಿ ಸತೀಶ್ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ಜಾರಿಯಲ್ಲಿದೆ ಎನ್ನಲಾಗಿದೆ.