Picture for representation

ಪಾಕಿಸ್ತಾನ: ಇಸ್ಲಾಮಾಬಾದ್ ನಲ್ಲಿರುವ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿರುವ ದೇವಾಲಯ ನಿರ್ಮಾಣಕ್ಕೆ ಪಾಕ್ ಸರ್ಕಾರ ಕೊನೆಗೂ ಅನುಮತಿ ನೀಡಿದೆ.

ಇಸ್ಲಾಮಾಬಾದ್‌ನಲ್ಲಿ ಸುಮಾರು 800 ಮಂದಿ ಹಿಂದೂಗಳಿದ್ದು, ದೇವಾಲಯಗಳಿಲ್ಲದ ಕಾರಣ ಅವರೆಲ್ಲರೂ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನೂ ಮನೆಯಲ್ಲೇ ಆಚರಿಸಬೇಕಾಗಿತ್ತು.

ಸ್ಥಳೀಯ ಹಿಂದೂಗಳ ಬಹುಕಾಲದ ಬೇಡಿಕೆಯಂತೆ 2018ರಲ್ಲಿ ದೇವಾಲಯ ನಿರ್ಮಾಣಕ್ಕೆ ಸಮುದಾಯ ಭವನ ಮತ್ತು ಸ್ಮಶಾನಕ್ಕಾಗಿ ಸ್ಥಳೀಯಾಡಳಿತ ಅರ್ಧ ಎಕರೆ ಜಾಗ ನೀಡಿತ್ತು. ನಂತರ ಇಸ್ಲಾಂ ಸಮುದಾಯಗಳ ಒತ್ತಡಕ್ಕೆ ಮಣಿದು ಅನುಮತಿಯನ್ನು ಹಿಂದೆಗೆದುಕೊಂಡ ಪರಿಣಾಮವಾಗಿ ನಿರ್ಮಾಣ ಕಾರ್ಯ ಕಳೆದ 6 ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿತ್ತು.

Leave a Reply

Your email address will not be published.

This site uses Akismet to reduce spam. Learn how your comment data is processed.