ಪಾಕಿಸ್ತಾನವನ್ನು ದ್ವೇಷದ ಕೂಸು ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜನ್ಮದ ಗುಟ್ಟಿರುವುದೇ ಭಾರತ ದ್ವೇಷದಲ್ಲಿ. ಅದರ ಉಳಿವು ಸಹ ಅದರಲ್ಲಿಯೇ. ಅದಕ್ಕಾಗಿಯೇ ಅದು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಒಂದಲ್ಲ ಒಂದು ಕುತಂತ್ರ ಹೂಡುತ್ತ ಬಂದಿದೆ. ಅಂತಹ ಪಾಕ್ನ ದ್ವೇಷದ ಮರಿ ಕೂಸು ಅದೇ ’ಲಷ್ಕರ್ ಇ ತೊಯ್ಬಾ’ – ಎಲ್.ಇ.ಟಿ.
’ಲಷ್ಕರ್ ಇ ತೊಯ್ಬಾ’ ಎಂದರೆ ಶುದ್ಧರ ಸೈನ್ಯ. ಇದರ ಮುಖ್ಯಸ್ಥ ಝಕಿಯಾರ್ ರೆಹಮಾನ್ ಲಖ್ವಿ ಅಲಿಯಾಸ್ ’ಚಾಚಾಜಿ’. ಇವನೇ ಮುಂಬೈ ದಾಳಿಗಳನ್ನು ರೂಪಿಸಿ ಅದರ ಬೆನ್ನೆಲುಬಾಗಿ ನಿಂತವನು. ಭಾರತದಲ್ಲಿ ಎಲ್.ಇ.ಟಿ.ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ. ಮುಂಬೈ ದಾಲಿಗಾಗಿ ೩೨ ಜನರ ಒಂದು ತಂಡ ರಚಿಸಲಾಗಿತ್ತು. ಅದರಲ್ಲಿ ೧೦ ಜನರ ಒಂದು ಗುಂಪನ್ನು ರಚಿಸಿ ಅದಕ್ಕೆ ಈಜು ಮತ್ತು ಸಮುದ್ರ ಸಂಬಂಧಿತ ಯಾಂತ್ರಿಕ ದೋಣಿ ಚಾಲನೆ ಮುಂತಾದ ತರಬೇತಿಗಳನ್ನು ಮೀನುಗಾರರ ಮೂಲಕ ನೀಡಿ ಅವರನ್ನು ಸಂಪೂರ್ಣವಾಗಿ ಸಾಗರ ಸಂಬಂಧಿತ ವಾತಾವರಣದಲ್ಲಿ ಉಳಿಸಲಾಯತು. ಅವರಾರಿಗೂ ಮುಂದಿನ ಕಾರ್ಯಾಚರಣೆಯ ವಿವರಗಳನ್ನು ತಿಳಿಸಿರಲಿಲ್ಲ. ಇದಕ್ಕಾಗಿ ಲಖ್ವಿ ೩ ತಿಂಗಳ ಕಾಲ ಕರಾಚಿಯಲ್ಲಿ ಬಿಡಾರ ಹೂಡಿ ಸೆಪ್ಟಂಬರ ೨೭ಕ್ಕೆ ಹೊರಡಬೇಕಾದ ತಂಡವು ಹೊರಡುವುದು ವಿಳಂಬಾದಾಗ ಅದು ನವೆಂಬರ್ ೨೭ಕ್ಕೆ ತಾನೇ ನಿಂತು ಅವರನ್ನು ಬೀಳ್ಕೊಟ್ಟಿದ್ದಾನೆ. ಮುಜಫ್ಫರಾಬಾದ್ ಬಳಿಯಿರುವ ಯಾರ ಗಮನ ಸೆಳೆಯದ ಶವಾಯಿ ನಾಲಾ ಎಂಬ ಗುಪ್ತಸ್ಥಳದಲ್ಲಿ ಈ ಸಂಚನ್ನು ರೂಪಿಸಲಾಯಿತು ಎಂದು ಹೇಳಲಾಗುತ್ತಿದೆ. ಹಿಮಾಲಯದ ತಪ್ಪಲು ಪ್ರದೇಶದಲ್ಲಿರುವ ಈ ಸ್ಥಳಲ್ಲಿ ಒಂದು ಮೂರಂತಸ್ತಿನ ಕಟ್ಟಡ ಒಂದು ಮಸೀದಿ ಮತ್ತು ಕೆಲವು ಸತಿ ಕೋಣೆಗಳಿವೆ.ಪಾಕಿಸ್ತಾನದ ವಿವಿಧ ನಗರಗಳಲ್ಲಿ ದೊಡ್ಡ ಅಂಗರಕ್ಷಕ ಪಡೆಯೊಂದಿಗೆ ನಾಲ್ಕಾರು ಎಸ್.ಯು.ವಿ.(ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್) ವಾಹನಗಳೊಂದಿಗೆ ಸುತ್ತುತ್ತಿರುವ ಅಮೀರ್ ಸಯೀದ್ ತನ್ನೆಲ್ಲ ಪ್ರಮುಖರೊಂದಿಗೆ ತುರಯಾ ಸೆಟಲೈಟ್ ಫೋನ್ಗಳನ್ನು ಬಳಸಿಕೊಂಡು ಮತ್ತು ಉಳಿದ ಸಹಚರರೊಂದಿಗೆ ವಿ.ಓ.ಐ.ಪಿ. (ಕಂಪ್ಯೂಟರ್ ಮೂಲಕ ಮಾತನಾಡಬಹುದಾದ ಮತ್ತು ಗುರುತಿಸಲು ಕಷ್ಟವಾದ) ಸೆಲ್ ಫೋನ್ ಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾನೆ. ಮುಂಬೈ ಹೋಟೆಲ್ಗಳಲ್ಲಿ ಭೀಕರ ಕದನ ನಡೆಯುವ ಸಂದರ್ಭಗಳಲ್ಲೂ ಅವನು ತನ್ನ ಸಹಚರರೊಂದಿಗೆ ಮಾತನಾಡಿದ್ದಾನೆ. ಎಲ್.ಇ.ಟಿ.ಯು ಅಲ್-ಖೈದಾದ ಒಂದು ಅಂತಾರಾಷ್ಟ್ರೀಯ ಅಂಗವಾಗಿದ್ದು ಭೀಕರ ಮಾನವ ಹತ್ಯೆಗಳಿಗೆ ಕುಖ್ಯಾತವಾಗಿದೆ. ಇದು ವಿವಿಧ ದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೂ ಕೂಡ, ಈ ಉಗ್ರರನ್ನು ಬಂಧಿಸಲು ಸಾಧ್ಯವಾಗಿಲ್ಲ.
೧೯೮೬ರಲ್ಲಿ ಬೇರೊಂದು ಹೆಸರಿನಲ್ಲಿ ಲಾಹೋರ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಪ್ರೊ.ಹಫೀಜ್ ಮಹಮದ್ ಸಯೀದ್ ಅವರಿಂದ ಪ್ರಾರಂಭವಾದ ಎಲ್.ಇ.ಟಿ., ಯ ಮೂಲ ಗುರಿ ಇದ್ದಿದ್ದು ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿದ್ದ ರಶಿಯನ್ನರ ವಿರುದ್ಧದ ಕಾಳಗಕ್ಕೆ ಸೈನಿಕರನ್ನು ತರಬೇತುಗೊಳಿಸುವುದು. ನಿಧಾನವಾಗಿ ಅವರ ಗಮನ ಕಾಶ್ಮೀರದ ಕಡೆ ತಿರುಗಿತು. ನಿಧಾನವಾಗಿ ಪ್ರಬಲವಾದ ಇದು ಅರ್ಕತ್-ಉಲ್-ಮುಜಾಹಿದ್ದೀನ್ ಅನ್ನು ಹಿಂದೆ ಹಾಕಿ, ಅಧಿಕೃತವಾಗಿ ಐ.ಎಸ್.ಐ.ನ ಆಂತರಿಕ ಉಗ್ರರ ತಂಡವಾಯಿತು. ಅದರೊಂದಿಗೆ ಸರ್ಕಾರದ ಸಂಬಂಧ ಎಷ್ಟು ನಿಕಟವಾಗಿತ್ತೆಂದರೆ ಜನ ಅದರ ಸದಸ್ಯರನ್ನು ಸರ್ಕಾರಿ ಮುಜಾಹಿದ್ರು ಎಂದು ಕರೆಯುತ್ತಿದ್ದರು. ಕಂದಹಾರ್ ನಲ್ಲಿ ಐ.ಸಿ.೧೮೪ ವಿಮಾನ ಪ್ರಯಾಣಿಕ ಒತ್ತೆಯಾಳುಗಳಿಗೆ ಪ್ರತಿಯಾಗಿ ಬಿಡುಗಡೆಗೊಂಡ ಮೂವರು ಉಗ್ರರಲ್ಲಿ ಒಬ್ಬನಾದ ಮೌಲಾನ ಮಸೂದ್ ಅಜರ್ ಸ್ಥಾಪಿಸಿದ ಜೆಶ್-ಎ-ಮೊಹಮ್ಮದ್ ನಂತಲ್ಲದೇ ಎಲ್.ಇ.ಟಿ.ಯು ಅಲ್-ಖೈದಾದೊಂದಿಗೆ ಸಂಬಂಧಗಳನ್ನು ಸ್ಥಾಪಿಸಿಕೊಂಡಿತು. ಅದರಿಂದಾಗಿ ಅಮೇರಿಕ ಈಗ ಇಷ್ಟೊಂದು ಉಗ್ರವಾಗಿ ಮುಂಬೈ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಿರುವುದು. ಅಮೇರಿಕನ್ನರಿಗೆ ತೊಂದರೆ ಕೊಡದಿರುವ ಕಾರಣಕ್ಕಾಗಿ ಎಲ್.ಇ.ಟಿ.ಯನ್ನು ವಿಸರ್ಜಿಸುವಂತೆ ಪಾಕಿಸ್ತಾನಕ್ಕೆ ಹೇಳಿರಲಿಲ್ಲ. ಆದರೆ ಮುಂಬೈ ಘಟನೆಯಲ್ಲಿ ಅಮೇರಿಕ ಅದನ್ನು ನಿಷೇಧಿಸುವಂತೆ ಹೇಳುತ್ತಿದೆ ಎನ್ನುತ್ತಾರೆ ಭಾರತೀಯ ಸೇನಾ ಪಡೆಗಳ ನಿವೃತ್ತ ಮುಖ್ಯಸ್ಥ ಜನರಲ್ ಮಲ್ಲಿಕ್.
ಇನ್ನಷ್ಟು ಸ್ಫೋಟಕ ವಿವರಗಳಿಗೆ ಓದಿ : ಇಂಡಿಯಾ ಟುಡೇ, ೨೨ ಡಿಸೆಂಬರ್,೨೦೦೮. ಪುಟ ೨೬