Chhatrapati Shivaji Maharaj

          ಶಿವಾಜಿ ಪಟ್ಟಾಭಿಷೇಕ ದಿನೋತ್ಸವದಂದೇ ಹಿಂದೂ ಸಾಮ್ರಾಜ್ಯ ದಿನೋತ್ಸವವಾಗಿ ರಾಷ್ಟ್ರಜಾಗರಣ ಮಹೋತ್ಸವವಾಗಿ ಆಚರಿಸುತ್ತಾ ಅವರ ಗುಣಗಳನ್ನು ಹಿಂದೂಗಳಲ್ಲಿ ಉಂಟುಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಯತ್ನಿಸುತ್ತಿದೆ.

Chhatrapati Shivaji Maharaj
Chhatrapati Shivaji Maharaj

ಹಿಂದೂ ದೇಶದ ಚರಿತ್ರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಒಂದು ಪ್ರತ್ಯೇಕವಾದ ಗೌರವ ಸ್ಥಾನವಿದೆ. ಅವರು ಜ್ಯೆಷ್ಠ ಶುದ್ಧ ತ್ರಯೋದಶಿ ದಿನ ಹಿಂದೂ ಪದಶಾಹಿಗೆ ಪ್ರಭುವಾಗಿ ರಾಜ್ಯಾಭಿಷೇಕವನ್ನು ಮಾಡಿಕೊಂಡರು. ಲೋಕಮಾನ್ಯ ತಿಲಕರು ಛತ್ರಪತಿ ಶಿವಾಜಿ ಜಂಯತ್ಯೋತ್ಸವಗಳನ್ನು ನಡೆಸುವ ಸಂಪ್ರದಾಯಕ್ಕೆ ಮೊಟ್ಟ ಮೊದಲು ಮಹಾರಾಷ್ಟ್ರದಲ್ಲಿ ಅಂಕುರಾರ್ಪಣ ಮಾಡಿದರು. ಅದು ಕ್ರಮೇಣ ದೇಶಾದ್ಯಂತ ವ್ಯಾಪಿಸಿತು ವಂಗ ವಿಭಜನೆಯಿಂದ ದೇಶದಲ್ಲಿ ಉಕ್ಕಿ ಹರಿದ  ರಾಷ್ಟ್ರೀಯ ಪುನರುತ್ಧಾನದ ಕಾರ್ಯಕ್ರಮಗಳಲ್ಲಿ ಶಿವಾಜಿ ಜಯಂತಿಗೆ ಕೂಡಾ ಪ್ರಮುಖ ಸ್ಥಾನವೇರ್ಪಟ್ಟಿತು. 1925 ರಲ್ಲಿ ಸಂಘವು ಪ್ರಾರಂಭವಾದ ನಂತರ ಶಿವಾಜಿ ಪಟ್ಟಾಭಿಷೇಕದ ದಿನವನ್ನು ರಾಷ್ಟ್ರೀಯ ಪರ್ವವಾಗಿ ಸಮಾಜೋತ್ಸವಗಳಲ್ಲಿ ಒಂದಾಗಿ ನಡೆಸುವ ಪರಿಪಾಟವನ್ನು ಡಾ:ಜಿ ಪ್ರಾರಂಭಿಸಿದರು.ಸಮಾಜಕ್ಕೆ ಯಾರು ಆದರ್ಶ ? ಎಂಬ ಪ್ರಶ್ನೆಗೆ ಶಿವಾಜಿ ಮಹಾರಾಜರು ಎಂದು ಡಾ:ಜೀ ಉತ್ತರ ಕೊಡುತ್ತಿದ್ದರು ಹಾಗಾದರೆ ಇ ದೇಶದ ಹಿರಿಮೆ ಗರಿಮೆ ಗೌರವಗಳನ್ನು, ಆತ್ಮವನ್ನು ಕಾಪಾಡಿದ ರಾಮಕೃಷ್ಣರು ಮನುಭಗಿರಥಾದಿಗಳು, ಅತ್ರಿ ವಸಿಷ್ಠಾಧಿಗಳು, ಚಂದ್ರಗುಪ್ತ ಚಾಣಕ್ಯ, ಸಮುದ್ರಗುಪ್ತಾದಿ ಪರಮದೇಶಭಕ್ತರು, ರಾಣಾಪ್ರತಾಪ, ಗುರುಗೋವಿಂದಸಿಂಗ್, ದುರ್ಗಾದಾಸರಂತಹ  ವೀರ ಶಿರೋಮಣಿಗಳು ನಮಗೆ ಆದರ್ಶರಲ್ಲವೇ ? ಅವರೇಲ್ಲರೂ ನಮಗೆ ಆದರ್ಶರೇ ಸಂದೇಹವಿಲ್ಲ. ಆದರೆ ಮಾನವನ ಬುದ್ದಿ ಸಮೀಪವಾದ ಗುರಿಯನ್ನು ಬೇಗ ಗುರುತಿಸುತ್ತದೆ. ಪ್ರಾಚೀನ ಮಹಾ ವ್ಯಕ್ತಿಗಳ ಜೀವನ ಕಥೆಗಳಾಗಿ ಕಾಣಿಸಿಕೊಳ್ಳುತ್ತದೆ. ಅವರಲ್ಲಿ ಕೆಲವರನ್ನು ಭಗವಂತನೆಂದು ಅವತಾರ ಪುರುಷನೆಂದು ವ್ಯವಹರಿಸುವದು ಪ್ರಾರಂಭವಾಯಿತು.

ಶ್ರೀ ರಾಮಚಂದ್ರನು ಮರ್ಯಾದಾ ಪುರುಷುತ್ತೋಮನು ಆದರ್ಶ ಮಗನು, ಆದರ್ಶ ತಂದೆಯು, ಆದರ್ಶ ಸೋದರನು, ಆದರ್ಶ ಪರಿಪಾಲಕನು. ಜೀವನದಲ್ಲಿ ಅವನು ಪ್ರತಿ ಪಾತ್ರಕ್ಕೂ ಒಂದು ಅತ್ಯೂನ್ನತವಾದ ಆದರ್ಶವನ್ನು   ಎತ್ತಿ ಹಿಡಿದಿದ್ದಾನೆ. ಶ್ರೀ ರಾಮನು ಭಾರತದ ಹೃದಯಾರಾದ್ಯನು. ಶ್ರೀಕೃಷ್ಣನೋ ! ಶಾಶ್ವತ ಧರ್ಮಪಾಲಕ ಧರ್ಮ ವಿಜಯಕ್ಕೆ ಎತ್ತಿ ಹಿಡಿದ ಪತಾಕೆ. ಶ್ರೀ ಕೃಷ್ಣನು ಜೀವನವನ್ನೇಲ್ಲಾ ಧರ್ಮ ಸಂಗ್ರಾಮದಲ್ಲಿ ಕಳೆದ ಮಹಾಮೂರ್ತಿ ಅಂತಹ ರಾಮ-ಕೃಷ್ಣರನ್ನು ಅವತಾರಪುರುಷರ ಸಾಲಿಗೆ ಸೇರಿಸಿದ್ದೇವೆ. ಅವರು ಸ್ಮರಣೆ ಮಾಡಿದರೆ ಸಾಕು ಅವರನ್ನು ನಾವು ಅನುಸರಿಸಲಾದಿತೇ ಸಾಕ್ಷಾತ್ ಪರಮೇಶ್ವರರಾದ ಅವರೆಲ್ಲಿ, ಮನುಷ್ಯರಾದ ನಾವೆಲ್ಲಿ ?  ಎಂದು ತಪ್ಪಿಸಿಕೊಳ್ಳಲು ಭಕ್ತಿ ಕವಚವನ್ನು ಹೊದ್ದುಕೊಳ್ಳುತ್ತೇವೆ. ಆದರೆ ಶಿವಾಜಿಯ ವಿಷಯದಲ್ಲಿ ಅಂತಹ ಅವಕಾಶವಿಲ್ಲ ಅತೀ ಸನಿಹವಾದ ಇತಿಹಾಸ ಪುರುಷ ಶಿವಾಜಿ. ಇಂದಿಗೂ ಶಿವಾಜಿ ಪೌರುಷವನ್ನು ಒಳಗೊಂಡ ಚಿಹ್ನೆಗಳು ಸಜೀವವಾಗಿ ಅನೇಕ ಪ್ರಾಂತಗಳಲ್ಲಿ ಕಾಣಸಿಗುತ್ತವೆ. ಶಿವಾಜಿ ನಿರ್ಮಾನ ಮಾಡಿದ ಸ್ವರಾಜ್ಯ ದೇಶದಿಂದ ವಿದೇಶಿ ಆಳ್ವಿಕೆಯ ಪೀಡೆಯನ್ನು ತೊಲಗಿಸಲು ಪ್ರಯತ್ನಿಸಿದ್ದು ಆದ್ದರಿಂದ ಶಿವಾಜಿ ಚರಿತ್ರೆ ಆಧುನಿಕ ಚರಿತ್ರೆಯಲ್ಲಿ ಮೊದಲ ಪುಟವಿದತೆ ನಮ್ಮ ಕಣ್ನ ಮುಂದೆ ಕಾಣಿಸುತ್ತಿರುವದರಿಂದಲೇ ಶಿವಾಜಿಯನ್ನು ಆದರ್ಶವಾಗಿ ಸ್ವೀಕರಿಸಿದ್ದೇವೆ. ಹಾಗಾದರೆ ಶಿವಾಜಿ ನಮಗೆ ಆದರ್ಶನಾಗಲು ಇರುವ ಕಾರಣಗಳೇನು. ? ಜೀವನವೆಂಬುದು ಬಂಗಾರದಂತಹುದು ತೆರೆದಿಟ್ಟರೆ ಹೊಳೆಯುತ್ತದೆ ಇಲ್ಲವಾದರೆ ಮಣ್ಣಿನ ಮುದ್ದೆ ಅಂತಹುದು ಸಮಾಜದಲ್ಲಿನ ಶಕ್ತಿ.  ಹಿಂದೂ ಸಮಾಜ ಚಿರಕಾಲ ಸುಖ ಸಂಪನ್ನವಾಗಿ ಜೀವಿಸಿದೆ. ಜೀವನದಲ್ಲಿ ಸಂಘರ್ಷವಿಲ್ಲದೆ ಮೆರೆದ ಕಾರಣ ಆತ್ಮಾಶ್ರಯವಾಗಿ ವ್ಯಕ್ತಿನಿಷ್ಠವಾಯಿತು.

ನಮಗೆ ಶ್ರೇಷ್ಠವಾದ ಧರ್ಮವಿದೆ. ನಮ್ಮ ಸಂಸ್ಕೃತಿ ಸಭ್ಯತೆಗಳು ಪರಮೋನ್ನತವಾದವು. ನಾವು ಕಲಿತುಕೊಳ್ಳುವದು ನಮ್ಮ ಪೂರ್ವಜರಿಂದ  ಆದ್ದರಿಂದ ನಮಗೆ ಇತರರೊಂದಿಗೆ ಸಂಬಂಧವಿಲ್ಲ. ಎಂಬ ಧೋರಣೆ ವ್ಯಾಪಿಸಿತು. ಇದರಿಂದ ಒಂದು ರೀತಿಯಾಗಿ ಪರಿಸರ ಪ್ರಪಂಚದೊಂದಿಗಿನ ಸಂಬಂಧ ಕಡಿಯಿತು. ಹೀಗೆ ಹಿಂದೂ ಧರ್ಮ ಸಂಕೋಚ    ಹೊಂದಿ ಸಂಪೂರ್ಣವ್ಯಕ್ತಿನಿಷ್ಠವಾಯಿತು. ಆಚಾರಗಳು, ಸಂಪ್ರದಾಯಗಳು, ಮುಕ್ತಿ, ಸಾಧನೆ, ಭಜನೆ, ಕೀರ್ತನೆ ಒಂದು ಕಡೆಯಾದರೆ, ಸ್ವಂತಲಾಭ, ಕೀರ್ತಿ, ಪ್ರತಿಷ್ಠೆ, ಸ್ವಾತ್ಕರ್ಷಗಳು ಮತ್ತೊಂದು ಕಡೆ ಸಮಾಜವನ್ನು ಸಂಪೂರ್ಣ ಸ್ವಾರ್ಥಮಯ ಮಾಡಿದವು. ನಮಗೆ ಎಲ್ಲಿಂದಲೂ ಆಪತ್ತು ಎಲ್ಲವೆಂದು ಅಹಾಂಕಾರ ಎದಕ್ಕೆ ಜೊತೆಯಾಯಿತು.ಹೀಗೆ ಸುಖ-ಸಂಪನ್ನತೆ ಅಹಂಕಾರ,ಸ್ವಾರ್ಥಗಳು ಒಂದಾಗಿ ಮೊದಲೇ ಆತ್ಮಶ್ರಯವಾದ ಸಮಾಜ ಗುಣಗಳನ್ನು ಸ್ವಾರ್ಥ ಕೆಳಕ್ಕೆ ತಳ್ಳಿ, ಸ್ವಧರ್ಮ ಎಂಬ ವಿಷಯಗಳನ್ನು ಮರೆತು, ’ನಾನು,ನನ್ನ ಸುಖ’ ಎಂಬ ವರ್ತುಲದಲ್ಲಿ ವ್ಯಕ್ತಿಗಳನ್ನು ಬಂಧಿಸಿದ ಪರಿಸ್ಥಿತಿ ಏರ್ಪಟ್ಟಿತು.ಧರ್ಮ ಒಂದೆ, ಸಾಧನ ಮಾರ್ಗಗಳು ಬೇರಿಯಾದುದರಿಂದ ಒಬ್ಬರಿಗೊಬ್ಬರೆ ಬೇರೆಯಾದೆವು. ದೇಶ ಒಂದೆ ಆದರೆ ಹೊರಗಿನಿಂದ ಆಪತ್ತು ಇಲ್ಲವೆಂದುಕೊಂಡು ಹೀಗೆ ನಿರ್ಭಯವಾಗಿ ಶತಮಾನಗಳು ಕಳೆದು ಯಾರಗೂಡಿನಲ್ಲಿ ಅವರು ssssssssssssssssಸಿಕ್ಕಿಕೊಂಡ ಕಾರಣದಿಂದ ದೇಶದೊಂದಿಗೆ ವ್ಯಕ್ತಿಗಿದ್ದ ಮಾತಾಪುತ್ರ ಸಂಬಂಧವನ್ನು ವಿಸ್ಮರಿಸಿದೆವು. ಈ ಸಂಬಂಧ ವಿಸ್ಮರಣೆಯಿಂದ ಸಹಜವಾಗಿ ಹುಟ್ಟುವ ಸೋದರಭಾವ ಹೋಯಿತು. ಅದರಿಂದ ಸ್ವಾರ್ಥ ಮತ್ತಷ್ಟು ಬೆಳೆಯಿತು. ಸಣ್ಣ ಪುಟ್ಟ ಕಲಹಗಳು ಆರಂಭವಾದವು.ಪರಿಣಾಮವಾಗಿ ಸ್ವಪರವಿಚಕ್ಷಣೆ. ಸ್ವಧರ್ಮ, ಪರಧರ್ಮ  ವಿಚಕ್ಷಣೆ, ಸ್ವದೇಶ ವಿದೇಶ ವಿಚಕ್ಷಣ ನಶಿಸಿ, ಜನ ಕೇವಲ ಸ್ವಾರ್ಥಿಗಳು, ಸ್ವಾತ್ಕರ್ಷಕ್ಕೆ ಸ್ವಾಹಂಕಾರಕ್ಕೆ ದೇಶವನ್ನು ಬಲಿಕೊಡಲಿಕ್ಕೂ ಸಿದ್ದರಾದರು. ಹೀಗೆ ಯಾರಿಗೆ ಅವರು ಯಾವ ಪ್ರಾಂತಕ್ಕೆ ಪ್ರಾಂತ, ಯಾವ ವರ್ಗಕ್ಕೆ ಆ ವರ್ಗ ಬೇರೆಯಾಗಿ ಪರಸ್ಪರ ಸಂಬಂಧವಿಲ್ಲದವರಾದೆವು.

ಹೊರಗಿನಿಂದ ಬರುವ ಶತ್ರುಗಳು ಇದನ್ನು ಗುರುತಿಸಿದರು. ಅವರಿಗೆ ಈ ದೇಶದಲ್ಲಿರುವ ಜನಗಳೆಲ್ಲರೂ ಶತ್ರುಗಳೇ ವಧ್ಯರೇ, ಇವರಲ್ಲಿನ ಭೇದಗಳಿಗೆ ಅವರಿಗೆ ಸಂಬಂಧವಿಲ್ಲ. ಆ ಭೇದಗಳು ತಮ್ಮ ಯಶಸ್ಸಿಗೆ ಸಹಾಯವಾದರೆ ಉಪಯೋಗಿಸಿಕೊಳ್ಳಬಹುದಲ್ಲದೇ ಇದು ಶತ್ರು ಸಮಾಜವೇ ಇದನ್ನು ಸಂಹರಿಸುವುದು ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುವುದು ಇಲ್ಲಿನವರನ್ನು ತಮ್ಮ ಮತದಲ್ಲಿ ಸೇರಿಸಿ ಗುಲಾಮರಂತೆ ಪರಿವರ್ತಿಸುವುದು ಇದೇ ಅವರ ಆಶಯ ಶಿವಾಜಿ ಒಂದು ಸಂಧಿಕಾಲದಲ್ಲಿ ಜನಿಸಿದನು.ಗಜನಿ ದಂಡಯಾತ್ರೆ ಮಾಡಿದಾಗಿನಿಂದ, ಔರಂಗಜೇಬನವರೆಗೆ ಮಹಮ್ಮದೀಯರು ಸಂಪೂರ್ಣ ದೇಶವನ್ನು ಆವರಿಸಿ ನಮ್ಮ ರಾಷ್ಟೀಯ ಆತ್ಮವನ್ನು ಶತಾಯ -Uತಾಯ ಭಗ್ನಗೊಳಿಸಲು ಅನೇಕ ಮಾರ್ಗಗಳನ್ನು ಅವಲಂಬಿಸಿದರು.ಆದ್ದರಿಂದಲೇ ಹಿಂದುದೇಶದ ಸ್ವಭಾವಕ್ಕೆ,ಆತ್ಮಕ್ಕೆ ಸಂಕೇತವಾಗಿ ನಿಂತಿದ್ದ ಗುಡಿಗಳನ್ನು, ಗೋಪುರಗಳನ್ನು, ದೇವತಾ ಮೂರ್ತಿಗಳನ್ನು, ಗ್ರಂಥಾಲಯಗಳನ್ನು ಸಂಪೂರ್ಣವಾಗಿ ವಿಧ್ವಂಸಗೊಳಿಸುವುದೇ ಕೆಲಸವಾಗಿಟ್ಟುಕೊಂಡು ಪ್ರಯತ್ನಿಸಿದರು. ಹಿಂದುಗಳ ಜೀವನ ಎಲ್ಲಾ ಕಡೆಯಿಂದ ಅವಮಾನಿಸಲ್ಪಡುವುದೇ,ಕುಗ್ಗಿಸಿಕೊಳ್ಳುವುದೇ, ಸ್ವತ್ವ ಕ್ಷೀಣಿಸಿ ಜೀವನ ಸುಣ್ಣವಾಗಬೇಕೆಂಬುದೇ ಆಗಂತುಕರಾದ ಶತ್ರುಗಳು ಬಯಸಿದ್ದು ಆ ಉದ್ದೇಶವನ್ನು ಸಾಧಿಸಲು ಅವರು ಮಾಡದ ಕೆಡುಕಿಲ್ಲ ಅಮಾನುಷತ್ವವಿಲ್ಲ.

ಕಾಶಿ ವಿಶ್ವೇಶ್ವರನು ಸಮಸ್ತ ಹಿಂದೂ ಜನತೆಗೆ ಆರಾಧ್ಯದೈವ. ಅಂತಹ ಆಲಯವನ್ನು ಧ್ವಂಸಗೊಳಿಸಿದರು. ಇಕ್ಷಾಕು ಕುಲ ಸಂಜಾತ, ಶ್ರೀರಾಮ ರಾಜಧಾನಿ ಅಯೋಧ್ಯಾ, ಅದು ಬಾಬರನ ಕೈಯಲ್ಲಿ ಶಿಥಿಲವಾಯಿತು. ಸರಯೂ ನದಿ ಹಿಂದುಗಳ ರಕ್ತದಿಂದ ಕೆಂಪಾಯಿತು. ಮಥುರಾ ಬೃಂದಾವನಗಳು ಪಾಳು ಬಿದ್ದವು. ಕಾಕತೀಯ ಸ್ವಯಂಭು ದೇವರು, ವಿಜಯನಗರದ ವಿರೂಪಾಕ್ಷೇಶ್ವರ ಭಗ್ನರಾದರು. ಹೀಗೆ ದೇಶದ ಆ ಮೂಲೆಯಿಂದ ಈ ಮೂಲೆಯವರೆಗೆ ಅದೆಷ್ಟೋ ದೇವಸ್ಥಾನಗಳು ಧ್ವಂಸವಾದವು. ಅಂತರಂಗಗಳನ್ನು ಭಕ್ತಿ ತರಂಗಗಳಾಗಿ ಬದಲಿಸುತ್ತಾ ಯಾವ ಶ್ರದ್ಧಾ ಕೇಂದ್ರಗಳನ್ನು ಹಿಂದುಗಳ ಪರಮ ಪವಿತ್ರವಾಗಿ, ಪರಮೇಶ್ವರ ನಿಲಯವಾಗಿ ಭಾವಿಸುತ್ತಿದ್ದರೋ ಅಂತಹ ಶ್ರದ್ಧಾಕೇಂದ್ರಗಳ ಸರ್ವನಾಶ ತಮಗೆ ಧಾರ್ಮಿಕ ಕರ್ತವ್ಯ ಎಂಬ ವಿಶ್ವಾಸದಿಂದ ಸರದಿಯಾಗಿ ಮಹಮ್ಮದೀಯರು ಹಿಂದುತ್ವ ನಾಶಕ್ಕೆ ಪ್ರಯತ್ನ ಮಾಡಿದರು. ಹೀಗೆ ಹಿಂದೂ ದೇಶದಲ್ಲಿ ಹಿಂದೂ ಶ್ರದ್ದಾಕೇಂದ್ರಗಳು ನಶಿಸುತ್ತಿದ್ದರು ಸಮಾಜದಲ್ಲಿ ಪೌರುಷಾಗ್ನಿ ಬಡಬಾನಲವಾಗಿ ಎದ್ದು ಶತೃಯುಹವನ್ನು ಧೂಳಿಪಟಮಾಡದೆ ಹೊಯಿತು. ಸಹಜವಾಗಿ ಇದರಿಂದ ಪ್ರಜೆಗಳಲ್ಲಿ ಆತ್ಮವಿಶ್ವಾಸ ಕುಗ್ಗಿತು. ಯಾವ ದೇವತೆಗಳು ಪರಮ ಶಕ್ತಿವಂತರೆಂದು, ರಾಕ್ಷಸ ಸಂಹಾರಕರೆಂದು, ಸಾಧುಗಳನ್ನು ರಕ್ಷಿಸಲೆಂದು ಓಡಿಬರುವವರೆಂದು ತಾವು ಭಾವಿಸಿದ್ದರು ಆ ದೇವತಾ ಮೂರ್ತಿಗಳು ಭಗ್ನವಾಗುತ್ತಿದ್ದರೂ, ಆ ಶಕ್ತಿ ಅವಿರ್ಭವಿಸಿ ಶತ್ರು ಸಂಹಾರ ಮಾಡುತ್ತಿಲ್ಲವೇಕೆ? ಎಂದು ಸಾಮಾನ್ಯರು ಅಂದುಕೊಳ್ಳುತ್ತಿದ್ದರು.

ಹಿಂದೂ ಸ್ತ್ರೀಯ ಮಾನ ಗೌರವಗಳು ರಾಷ್ಟ್ರದ ಮಹೋನ್ನತ ಶ್ರದ್ಧಾಕೇಂದ್ರಗಳು ಸ್ತ್ರೀಯರು ಪೂಜಿಸಲ್ಪಡದ ಕಡೆ ದೇವತೆಗಳಿರುವುದಿಲ್ಲ ಎಂದು ಹಿಂದುಗಳ ನಂಬಿಕೆ. ಅಂತಹ ಹೈಂದ ಸ್ತ್ರೀಯರನ್ನು ಈ ದುರಾಕ್ರಮಣಕಾರರು, ಅವರ ಹಿಂದೆ ಗುಂಪುಗಳು ಅವಮಾನಿಸದ ದಿನವಿಲ್ಲ ಚಿತ್ತೂರು ಕೋಟೆಯಲ್ಲಿದ್ದ ೧೪೦೦೦ ರಾಜ ಪುತ್ರಿ ಸ್ತ್ರೀಯರು ಅಲ್ಲಾವುದೀನ್ ದುಷ್ಟಬುದ್ದಿಯಿಂದ ತಪ್ಪಿಸಿಕೊಳ್ಳಲು ಮಹಾರಾಣಿಯಾದ ಪದ್ಮಿನಿಯೋಂದಿಗೆ ಅಗ್ನಿಕುಂಡದಲ್ಲಿ ಬಿದ್ದು ಆಹುತಿಯಾದರು ಸ್ತ್ರೀ ಆದಿಶಕ್ತಿ ಸ್ತ್ರಿಯನ್ನು ರಕ್ಷಿಸಿಕೊಳ್ಳಲಾರದ ಪುರುಷನು ಪುರುಷನೇ? ಆರ್ಯ ಸ್ತ್ರೀ ಮಾನವನ್ನು ನಡುಬೀದಿಯಲ್ಲಿ ಅಪಹರಿಸುವ ಆ ದುರ್ಮಾರ್ಗಿಗಳನ್ನು ಸಂಹರಿಸಲು ರಾವಣಾಂತಕ ಶ್ರೀರಾಮನು ಕೋದಂಡಪಾಣಿಯಾಗಿ ಬಾರನೇಕೆ? ಶ್ರೀಕೃಷ್ಣನು ನರಕಾಸುರನ ಸರೆಯಿಂದ ಹದಿನಾರು ಸಾವಿರ ರಾಜ ಪುತ್ರಿಯರ ಬಿಡುಗಡೆಗೊಳಿಸಿ ಮುಕ್ತಿ ಇತ್ತ ದಾತ ಎಂದು ಸಾಮಾನ್ಯರು ಕರೆಯುವರು.

ಗೋವು ಕಾಮದೇನು ಭೂಮಿಃ ದೇನುಃ ಧರಣೀಎಂದು  ನಾವು ಸ್ತುತಿಸುತೇವೆ. ಇಷ್ಟಾರ್ಥಗಳನ್ನು ಕೊಡುವುದು ಗೋವು. ಭೂಮಿಗೆ ಗೋವಿಗೆ ವ್ಯತ್ಯಾಸವಿಲ್ಲ ಭೂಮಿಯೇ ಗೋವಿನ ರೂಪವನ್ನು ಧರಿಸಿದೆ. ಗೋವು ಹಿಂದೂ ಜನ ಜೀವನಕ್ಕೆ ಆತ್ಮವಿದ್ದಂತೆ ಗೋವಿನ ಶರೀರ ಸಮಸ್ತ ದೇವತೆಗಳಿಗೆ ನಿಲಯ ಅಂತಹ ಗೋ ಮಾತೆಯನ್ನು ಅಪಹರಿಸಬೇಕೆಂದುಕೊಂಡ ಕಾರ್ತವೀರಾರ್ಜುನನ ಸಾವಿರ ಕೈಗಳನ್ನು ಕತ್ತರಿಸಲಿಲ್ಲವೆ ಪರಶುರಾಮ? ಆದರೆ ಮಹಮ್ಮದೀಯರು ಗೋವಧೆಯನ್ನು ವಿಧಿಯಾಗಿಟ್ಟುಕೊಂಡಿದ್ದಾರೆ ಅದು ಅವರ ಮತಕ್ಕೆ ತಕ್ಕ ಆಚಾರವಾ ಎಂದರೆ ಅದೂ ಅಲ್ಲ ಗೋವು ಹಿಂದು ಧರ್ಮಾಚರಣೆಯಲ್ಲಿ ಕೇಂದ್ರವಿದ್ದಂತೆ. ಅಂತಹ ಗೋವಿನ ವಧೆಯನ್ನು ಮಾಡಿದರೆ ಹಿಂದೂಗಳ ಆತ್ಮವನ್ನು ಹತ್ಯೆಮಾಡಿದಂತೆ ಆದರೂ ಹಿಂದು ಸಮಾಜ ಮೌನವಹಿಸಿದೆ. ಆ ಗೋವುಗಳನ್ನು ಪಾಲಿಸಿದ ಗೋಪಾಲಕ ಇಂದ್ರನ ಶಕ್ತಿಯನ್ನು ಎದುರಿಸಿದವನು ಎಲ್ಲಿ ಆ ಶ್ರೀಕೃಷ್ಣನು? ಎಂದು ಎದುರುನೋಡಿ ನೊಂದುಕೊಳ್ಳುವರು ಮೂಕ ಪ್ರಜೆಗಳು.

ಹಿಂದು ಧರ್ಮದ ವ್ಯಾಖ್ಯಾನುಕಾರರಾದ ಹಿಂದು ಧರ್ಮದ ಬೀಜವನ್ನು ಜನರಲ್ಲಿ ಬಿತ್ತುತ್ತಾ ಸ್ವಧರ್ಮವನ್ನು ನೆನಪಿಸುತ್ತಾ ಇದ್ದ ಪಂಡಿತರನ್ನು ವಿಪ್ರರನ್ನು ನಿರ್ಭಂದಿಸಿ ಅವರನ್ನು ಸೇವಕರಂತೆ ಪಶುಗಳನ್ನು ಸಂತೆಯಲ್ಲಿ ಮಾರಿದಂತೆ ಮಾರಿದರು ಮದ್ಯ ಏಷ್ಯಾದಲ್ಲಿ ಈ ದುಸ್ತಿತಿ ಸಮಾಜದಲ್ಲಿ ಅನೇಕ ವಿಧವಾದ ವೀಪರೀತಗಳನ್ನು ಸೃಷ್ಟಿಸಿತು. ಧರ್ಮನಿಷ್ಟೆ ತೀವ್ರವಾಗಿಲ್ಲದವರು ಆಗಿಂದಾಗಲೆ ಯಾರೀಗೋ ಶರೀರವನ್ನು ಬುದ್ದಿಯನ್ನು ಮಾರಿಕೊಂಡು ಜೀವಿಸುವ ಉದರ ಪಾರಾಯಣರು ಕಾಮಿನಿ ಕಾಂಚನಗಳಿಗೆ ಪದವಿಗಳಿಗೆ, ಕೀರ್ತಿಗಾಗಿ ಎಂತಹ ನೀಚ ಕೆಲಸಕ್ಕಾದರು ಸಿದ್ದರಾಗುವವರು, ಬಲಹೀನವಾದ ಮನಸ್ಸು ಶರೀರವುಳ್ಳವರು ಎಂದಿಗೂ ಅಯಾ ಸಮಾಜದಲ್ಲಿರುತ್ತಾರೆ. ಅಂತಹ ಹಿಂದುಗಳು ಮಹಮ್ಮದೀಯರ ಕತ್ತಿ ಝಳಪಿಗೆ ಭಯಪಟ್ಟು ಅವರ ಪ್ರಲೋಭನೆಗಳಿಗೆ ಹೊಳಗಾಗಿ ಮಹಮ್ಮದೀಯ ಮತದಲ್ಲಿ ಸೆರಿಹೊದರು. ಇಸ್ಲಾಂ ಮತದಲ್ಲಿ ಸೇರಿದ ಹಿಂದುಗಳೆಲ್ಲರೂ ಯಾವುದೋ ಒಂದು ಕಾರಣದಿಂದ ಸೇರಿದ ಅಲ್ಪಪ್ರಾಣಿಗಳೇ ಕೊನೆಗೆ ಹಾಗೆ ಸೇರಿದವರೆಲ್ಲರೂ ಮೇಲೆ ಹೇಳಿದಂತೆ ದೇಶದ್ರೋಹಿಗಳಾಗಿ ಮಾತೃಘಾತಕರಾದವರೇ.

ರಾಜ ಯಾರಾದರೇನೂ ನಮಗೆ ದಿನ ಬರುವ ಆದಾಯ ಸಾಕೆಂದು ಸಾಮಾನ್ಯ ಜನ ಸ್ವಲ್ಪ ತಲೆಬಾಗಿದರೇನಂತೆ, ನಮ್ಮ ಧನ ಸಂಪತ್ತುಗಳು ದಕ್ಕಿದರೆ ಸಾಕು ನಮ್ಮ ತಂಟೆಗೆ ಯಾರು ಬಾರದಿದ್ದರೆ ಸಾಕು ಎಂದುಕೊಳ್ಳವ ದೊಡ್ಡವರೂ ಮೌನವಹಿಸಿದರು. ರಾಜ ಮಾನಸಿಂಹರು ಜಯಸಿಂಹ, ಯಶವಂತಸಿಂಹರು ಕಮ್ಮಿಯವರೇನು? ಮೊಘಲ ಸಾಮ್ರಾಜ್ಯಕ್ಕೆ ಮೂಲ ಸ್ತಂಭಗಳಲ್ಲವೆ! ಮನಸ್ಸು ಮಾಡಿದರೆ ಮೊಘಲ ಶಕ್ತಿಯನ್ನು ಕಿರುಬೆರಳಲ್ಲಿ ಕಿತ್ತೆಸಯಬಲ್ಲ ಶಕ್ತಿಯುಳ್ಳವರಲ್ಲವೇ! ಆದರೆ ಸ್ವಾರ್ಥದಿಂದಾಗಿ ತಲೆಬಾಗಿದವರು ಅಷ್ಟು ಸಾಲದೆ ತಮ್ಮ ಹೆಣ್ಣು ಮಕ್ಕಳನ್ನು, ಬಲ ಪೌರುಷಗಳನ್ನು ಮಾರಿಕೊಂಡು ತಮ್ಮ ಹಿರಿತವನ್ನು, ವೈಭವವನ್ನು ಕಾಪಾಡಿಕೊಳ್ಳಬೇಕೆಂದು ಪ್ರಯತ್ನಿಸಿದರು. ಶಿವಾಜಿ ತಂದೆ ಸ್ವಯಂ ಹೀಗೆ ತಲೆ ತಗ್ಗಿಸಿದವರು ದಕ್ಷಿಣದ ನವಾಬರನ್ನು ಬೆರಳ ತುದಿಯಲ್ಲಿ ಕುಣಿಸಿದ ವೀರನಾತ ಇವರಿಗೆ ಇಷ್ಟೆಲ್ಲ ಶಕ್ತಿ ಇದ್ದರೂ ಸಮಾಜವನ್ನು ಒಂದು ಮಾಡಬೇಕು. ಪರಕೀಯ ದಾಳಿಗಳನ್ನು ಪರಕೀಯ ರಾಕ್ಷಸರನ್ನು ಹೊಡೆದೊಡಿಸಬೇಕು, ಸ್ವರಾಜ್ಯವನ್ನು ಸ್ವಧರ್ಮವನ್ನು ನೆಲೆ ನಿಲ್ಲಿಸಬೇಕೆಂಬ ಭಾವ ಸ್ಪುರಿಸಲಿಲ್ಲ. ಅಷ್ಟೆ ಅಲ್ಲ ಸ್ವಾಭಿಮಾನದಿಂದ ಸ್ವಾತ್ವದಿಂದ ನಿಂತುಕೊಂಡು ಯುದ್ಧ ಮಾಡುತ್ತಿದ್ದವರಿಗೆ ವಿರುದ್ದವಾಗಿ ಶತ್ರುಗಳೊಡನೆ ಸೇರಿ ಜಯಿಸಲ್ಪಟ ಗುಲಾಮರು ಕೂಡ ಆಗಲಿಲ್ಲ.ಸರ್ದಾರರೂ,ಸೈನೀಕರೂ,ರಾಜರಷ್ಟೇ ಅಲ್ಲ, ಕವಿ ಪಂಡಿತರು ಕೂಡಾ”ದಿಲ್ಲೀಶ್ವರೋವ ಜಗದೀಶ್ವರೋವ ಎಂದು ಹೊಗಳುತ್ತಾ ತಮ್ಮ ನಡೆಸಿಕೊಂಡರೇ ಸಾಕೆಂಬ ಉದರ ಮಾತ್ರ ಜೀವಿಗಳಾದರು.

ಹಿಂದುಗಳಲ್ಲಿ ಐಕ್ಯಮತ್ಯ ಕೆಟ್ಟಿತು. ಅಪಸ್ಮಾರ ಹೆಚ್ಚಿತು.ಜೀವನ ತಯಾರಾಯಿತು.ಒಂದು ಕೈಯಲ್ಲಿ ಕತ್ತಿ,ಒಂದು ಕೈಯಲ್ಲಿ ಮತವನ್ನು ಹಿಡಿದು ಹೊರಗಿನಿಂದ ಬಂದ ಗುಂಪುಗಳು ಒಂದೊಂದು ಸಾರಿ ತಮ್ಮೋಳಗೆ ತಾವು ಕಲಹವಾಡಿದರೂ ಈ ದೇಶದ  ಪ್ರಜೆಗಳ ವಿಷಯದಲ್ಲಿ ಈ ದೇಶದ ಧರ್ಮ ಸಂಸ್ಕೃತಿ ಸಂಪ್ರದಾಯಗಳ ವಿಷಯದಲ್ಲಿ ಕೆಲವು ಸಂದರ್ಭಗಳನ್ನು ಬಿಟ್ಟರೆ ಸಮಾನ ಶತ್ರುತ್ವವನ್ನು ಪ್ರದರ್ಶಿಸಿದರು. ಕೆಲವು ಶತಾಬ್ದಿಗಳು ಹೀಗೆ ನಡೆದದ್ದರಿಂದ ಈ ದೇಶ ಮೂಲವಾಗಿ ಯಾರದು? ಈ ದೇಶಕ್ಕೂ ನಮಗೂ ಇರುವ ಸಂಬಂಧವೇನು? ಈ ದೇಶದ ಪ್ರಜೆಗಳಾದ ಜನ ಯಾರು? ಯಾರು ನಮ್ಮವರು,ಯಾರು ಪರಕೀಯರು? ಸ್ವಜನರಾದ ಹಿಂದುಗಳು ಮರಳಿ ವಿಜಯವನ್ನು ಸಾಧಿಸಬಲ್ಲರಾ? ಸ್ವಧರ್ಮ,ಸ್ವರಾಜ್ಯ ಪ್ರತಿಷ್ಠಾಪಿಸಿಕೊಳ್ಳಬಲ್ಲರಾ? ಮರಳಿ ಹಿಂದುಗಳ ಸ್ವಾಭಿಮಾನ ಕಾಲೂರಿ ಬದುಕಬಲ್ಲದೇ? ಈ ಪ್ರಜೆಗಳನ್ನು ಈ ಜನರ ಧರ್ಮವನ್ನು ಜೀವನವನ್ನು ಕಾಪಾಡುವವರು ಯಾರು? ಎಂಬ ಮೀಮಾಂಸೆ ಪ್ರಾರಂಭವಾಗುವಷ್ಟು ದುರ್ಗತಿ ನಿರ್ಮಾಣವಾಯಿತು.

ಶಿವಾಜಿ ಜನಿಸುವ ಪೂರ್ವದಲ್ಲಿ ಈ ಮೀಮಾಂಸೆಯಲ್ಲಿ ಸಮಾಜ ಸಂಕ್ಷೋಭೆಯಲ್ಲಿದ್ದಿತ್ತು.ಪ್ರತಿ ಪ್ರಾಂತದಲ್ಲೂ, ಏನೋ ಒಂದು ರೀತಿಯ ಕ್ರಾಂತಿ,ಸ್ವಲ್ಪ ಬದಲಾವಣೆ,ಕೆಲವು ಯುದ್ಧಗಳು ವಿಜಯ ಸೂಚನೆ ಸ್ವಲ್ಪ ಸಂಚಲನೆ ಕಾಣಿಸುತಿದ್ದವು. ಕೆಲವು ಪ್ರಕರವಾಗಿ ಪ್ರಜ್ವಲಿಸಿದ ಉದಾಹರಣೆಗಳು ಕೂಡಾ ಇವೆ ನಿರಾಶೆ ನಿಸ್ಪೃಹತೆ ಮಧ್ಯದಲ್ಲಿ ರಾಮಾಯಣ, ಭಾಗವತಾದಿಗಳು ಸಂಕೀರ್ತನೆ ನಡೆಸಿ, ಜನರಲ್ಲಿ ಧಾರ್ಮಿಕ ಭಾವ ಜಾಗೃತಿಗೆ ಪ್ರಯತ್ನಗಳು ನಡೆಯತಿದ್ದವು. ಆದರೆ ಇವೆಲ್ಲ ಸೋಲಿನಲ್ಲಿ ಹೊರಬಿದ್ದ ಆಕ್ರೋಶಗಳಾಗಿ ಉಳಿದವು.ಶಿವಾಜಿ ತಂದೆ ಶಹಾಜಿ ಆದಿಲ್‌ಶಾಹಿ ದರ್ಬಾರಿನಲ್ಲಿ ಸರ್ದಾರನಾಗಿದ್ದನು ಮಗ ಹುಟ್ಟುತ್ತಿದ್ದಂತೆ ಜೀಜಾಬಾಯಿಯನ್ನು, ಶಿವಾಜಿಯನ್ನು ಶಿವನೇರಿ ದುರ್ಗಕ್ಕೆ ಕಳಿಸಿ ಅಲ್ಲಿ ಕುಲ ಪುರೋಹಿತರಾದ ದಾದಾಜಿಕೊಂಡದೇವನ ಸಂರಕ್ಷಣೆಯಲ್ಲಿ ಇರಿಸಿದನು ಸ್ವಧರ್ಮ, ಸ್ವರಾಜ್ಯದ ಬೀಜಗಳು ತಾಯಿ ಜೀಜಾಬಾಯಿ, ಗುರುದೇವ ದಾದಾಜಿಕೊಂಡದೇವರ ದಯೆಯಿಂದ ಶಿವಾಜಿ ಹೃದಯದಲ್ಲಿ ನಾಟಿಕೊಂಡವು. ಅವನಿಗೆ ಜೀಜಾಮಾತೆಯ ಭಕ್ತಿ-ಭಾವ ಗುರು ಕೊಂಡದೇವರ ಶಿಕ್ಷಣ ನಿಪುಣತೆಯನ್ನು ಕೈಗೂಡಿದವು.

ಶಿವಾಜಿ ಆದಿಲ್‌ಶಾಹಿ ದರ್ಬಾರಿನಲ್ಲಿ ಯಾವುದಾದರೊಂದು ಪದವಿಯನ್ನು ಸಂಪಾದಿಸಬೇಕೆಂದು ತಂದೆ ಶಹಾಜಿಗೆ ಅನಿಸಿತು. ಅವನನ್ನು ಬಿಜಾಪುರಕ್ಕೆ ಕರೆಸಿದನು. ಆದರೆ ದಬಾರಿನಲ್ಲಿ ಶಿವಾಜಿ ವಿದೇಶಿ ವಿಧರ್ಮಿ ರಾಜನ ಮುಂದೆ ತಲೆಬಾಗಿಸಲು ನಿರಾಕರಿಸಿದನು ಅಲ್ಲದೆ ಮನೆಗೆ ಬಂದು ತಲೆಸ್ನಾನ ಮಾಡಿದನು ಶತ್ರು ಸ್ಪರ್ಶದಿಂದ ತಡೆದು ಕಟುಕನ ತಲೆ ಕಡಿದು ಗೋಹತ್ಯೆಯನ್ನು ತಡೆದನು. ಈ ಎರಡೂ ಘಟನೆಗಳು ಅವನ ಮಾನಸಿಕತೆಗೆ ನಿದರ್ಶನಗಳಾಗಿ ಬೆಳಗಿದವು. ಅಲ್ಲಿಂದ ಶಿವಾಜಿ ತನ್ನ ಹೋರಾಟವನ್ನು ಅವನ ಮಾನಸಿಕತೆಗೆ ನಿದರ್ಶನಗಳಾಗಿ ಬೆಳಗಿದವು. ಅಲ್ಲಿಂದ ಶಿವಾಜಿ ತನ್ನ ಹೋರಾಟವನ್ನು ಪ್ರಾರಂಭ ಮಾಡಿದನು.ಸಮಾಜದಲ್ಲಿ ಅಂದಿನವರೆಗೂ ಯಾರೋ ಕೆಲವರು ರಾಜರು, ಸರ್ಧಾರರೂ, ವಿದೇಶಿಯರೊಡನೆ ಕ್ಯೆಜೋಡಿಸುತ್ತಿದ್ದರು. ಅದು ತಮ್ಮ ಸ್ವಾರ್ಥಕ್ಕಾಗಿ ಜನರಲ್ಲಿ ಸ್ವಧರ್ಮ, ಸ್ವಧರ್ಮ ಭಾವಗಳು ಅಂತರ‍್ಗತವಾಗಿದ್ದರಿಂದ ರಾಜರ ಯುದ್ದಗಳಿಗೂ ಜನರಿಗೂ ಯಾವುದೇ ಸಂಬಂಧವಿರಲಿಲ್ಲ. ಸಮಾಜದಲ್ಲಿ ಮೇಲ್ವರ್ಗಕ್ಕೆ ಸೇರಿದವರು ಪರಮ ಸ್ವಾರ್ಥಿಗಳಾಗಿದ್ದರು. ಅಂತಹವರ ತಂಟೆಗೆ ಹೋಗಲಿಲ್ಲ ಶಿವಾಜಿ ಅವರ ಹಿಂದೆ ಬಿದ್ದು ಸಮಯವನ್ನು ವ್ಯರ್ಥಮಾಡಿಕೊಳ್ಳಲಿಲ್ಲ. ತಾನೊಂದು ಹೊಸ ಸೃಷ್ಠಿಮಾಡಬೇಕು. ಅದಕ್ಕಾಗಿ ಗ್ರಾಮಿಣರು, ಕಾಡುಜನರಾದ ಸಾಮಾನ್ಯ ಜನರ ಸ್ನೇಹ ಮಾಡಿ ಅವರಲ್ಲಿ ತನ್ನ ಹೋರಾಟದ ಬೀಜಬಿತ್ತಿದನು.ಹೀಗೆ ಸೈನ್ಯವನ್ನು ಒಗ್ಗೂಡಿಸಿ ಇತ್ತ ಬಿಜಾಪುರದ ಸುಲ್ತಾನನನ್ನು,ಅತ್ತ ಔರಂಗಜೇಬನನ್ನು ಎದುರಿಸಿ,ಕ್ರಮೇಣ ತನ್ನ ಬಲವನ್ನು ಹೆಚ್ಚಿಸಿಕೊಂಡು, ಆ ಇಬ್ಬರನ್ನು ಸೋಲಿಸಿ ತನ್ನ ಪ್ರಭಾವವನ್ನು ಮುದ್ರಿಸಿದನು.

ಹೋರಾಟದ ಸಾಧನೆಯಲ್ಲಿ ಅವನು ನಿರ್ವಹಿಸಿದ ಕಾರ್ಯ ಮಹಾದ್ಭತವಾದುದು ಸೋಲನ್ನು ಬಿಟ್ಟರೆ ಗೆಲವನ್ನು ಊಹಿಸಿಕೋಳ್ಳಲಾರದ ಜನರಿಗೆ ಅವನು ತೋರಿದ ನೈಪುಣ್ಯತೆ, ಸಾಧಿಸಿದ ವಿಜಯ ಪರಂಪರೆ ವಿಶೇಷವಾದ ಆತ್ಮ ವಿಶ್ವಾಸವನ್ನುಂಟು ಮಾಡಿದವು.ಶಿವಾಜಿ ರಾಜಧಾನಿ ಪೂನಾ ಅದು ಸಹ ಮೊಘಲರ ವಶವಾಯಿತು. ಎರಡು ವರ್ಷಗಳಕಾಲ ಮೊಘಲರ ಅಡ್ಡಿಯಿಲ್ಲದೆ ತೊಂದರೆ ಮಾಡುತ್ತಾ ವಿಜಯದ ಅಹಂಕಾರದೊಂದಿಗೆ ವಿಹರಿಸಿದರು. ವಿಲಾಸದಲ್ಲಿ ಮುಳಗಿ ತೇಲಿದರು ಅತಂಹ ಒಂದು ಮಧ್ಯರಾತ್ರಿ, ರಂಜಾನ್ ದಿನಗಳಲ್ಲಿ ಚಿಮ್ನಾಜಿ ಬಾಪುವನ್ನು ಜೊತೆ ಕರೆದುಕೊಂಡು ನಾಲ್ಕು ನೂರು ಯೋಧರೊಂದಿಗೆ ಶಿವಾಜಿ ಪೂನಾ ಕೋಟೆಗೆ ಲಗ್ಗೆಹಾಕಿದನು. ಷಾಹಿಸ್ತೇಖಾನನ ಸಾರಾಯಿ ಮತ್ತಿನಲ್ಲಿ ವಿಲಾಸಿನಿಯರ ಅಪ್ಪುಗೆಯಲ್ಲಿ, ಅರ್ಧನಗ್ನನಾಗಿ ಬಿದ್ದಿದ್ದಾನೆ ಶಿವಾಜಿ ಮಾಡಿದ ದಾಳಿಯಿಂದ ಕೋಟೆಯಲ್ಲಿ ಭಯಂಕರವಾದ ಅಲ್ಲೋಕ ಕಲ್ಲೋಲ ವ್ಯಾಪಿಸಿತು ಸೇವಕರು ಷಾಯಿಸ್ತೆಖಾನನ್ನು ಎಬ್ಬಿಸಿದರು. ಆ ಮೊಗಲ ಸೇನಾಧಿಪತಿ ಮತ್ತನ್ನು ನಿವಾರಿಸಿಕೊಂಡು ಏಳುವ ಮೊದಲೆ ಶಿವಾಜಿ ಬಿಚ್ಚುಗತ್ತಿ ಹಿಡಿದು ಮೇಲೆ ಬಿದ್ದನು. ಕತ್ತಲಲ್ಲಿ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಷಾಯಿಸ್ತೆಖಾನನ ಕೈಬೆರಳು ಶಿವಾಜಿ ಖಡ್ಗಕ್ಕೆ ಬಲಿಯಾದವು.ಅಷ್ಟೆ! ಶಿವಾಜಿಯನ್ನು ಜಯಿಸಲು ಬಂದ ಮೊಘಲರ ಆ ಮಹಾಸೈನ್ಯ ದಿಕ್ಕಿಲ್ಲದ ಪಕ್ಷಿಗಳಂತೆ ಚಲ್ಲಾ-ಪಿಲ್ಲಿಯಾಗಿ ಚದುರಿತು. ಶಿವಾಜಿ ಕೋಟೆಯ ಒಳಗೆ ಹೇಗೆ ಪ್ರವೇಶಿಸಿದನೋ! ಇರುವೆ ಸಹ ನುಸುಳಲು ಅವಕಾಶವಿಲ್ಲ? ಎಂತಹ ಸಾಹಸವಿದು! ಇಂತಹ ಯೋಜನಾಬದ್ದವಾದ ಸಾಹಸಗಳೇ ಚರಿತ್ರೆಗಳ ರೂಪವನ್ನು ಬದಲಿಸುವುದು.ಶಿವಾಜಿ ಅಂತಹ ಮಹತ್ತರವಾದ ಗಾದೆಯನ್ನು ನಿರ್ಮಿಸಿದನು.

ಔರಂಗಜೇಬನಿಗೆ ಸಹಿಸಲಸಾದ್ಯವಾದ ಅವಮಾನವಾಯಿತು. ಶಿವಾಜಿಯನ್ನು ಜಯಿಸಲು ಜಯಸಿಂಹನನ್ನು ಕಳುಹಿಸಿದನು. ಜಯಸಿಂಹ ಪರಾಕ್ರಮಶಾಲಿ ಹಿಂದುವೇ! ಮೊಘಲ ಸಾಮ್ರಾಜ್ಯದ ಆಧಾರ ಸ್ಥಂಭಗಳಲ್ಲಿ ಒಬ್ಬನು. ಆತನೊಡನೆ ವಿರೋಧ ಸ್ವರಾಜ್ಯ ನಿರ್ಮಾಣದ ಪ್ರಯತ್ನಗಳಿಗೆ ತೊಡಕಾಗುವುದೆಂದು ತಿಳಿದನು. ಶಿವಾಜಿ ಯುದ್ಧದಲ್ಲಿ ಉಭಯ ಪಕ್ಷಗಳಲ್ಲಿ ನಶಿಸುವುದು ಹಿಂದುಗಳೇ ಅಲ್ಲದೆ ಮೊಗಲ ಮೋಸವನ್ನು ಬಯಲು ಮಾಡಬೇಕು ಅಲ್ಲಿಯವರೆಗೆ ಅವರನ್ನು ನಂಬಿನಡೆದ ಹಿಂದೂ ಸದಾರರಿಗೆ ಅವರ ನೀಚ ಬುದ್ಧಿಯ ಬಟ್ಟ ಬಯಲು ಮಾಡಕೇಕು.ಶಿವಾಜಿ ಸಂಕಟಾವಸ್ಥೆ ಎರ್ಪಟ್ಟಾಗ ಸಂಧಿಗೆ ಅಂಗೀಕರಿಸಿದನು ಅದು ಫಲಿಸುತ್ತದೆ ಎಂದಲ್ಲ. ಅದೂಂದು ಆಗ್ರಾ ದರ್ಬಾರಿನಲ್ಲಿ ಔರಂಗಜೇಬನ ದುಷ್ಟಬುದ್ದಿಯನ್ನು ಪ್ರತ್ಯಕ್ಷವಾಗಿ ತೋರಿಸಿ, ಮೊಗಲರ ನ್ಯಾಯಬುದ್ದಿಯನ್ನು ನಂಬಿ ನಡೆಯುವ ಹಿಂದುಗಳ ಮೂರ್ಖತ್ವವನ್ನು ಬಯಲು ಮಾಡಿ, ಅವರ ಸಹಕಾರದಿಂದಲೇ ನಾಟಕ ಮಾಡಿ ತಪ್ಪಿಸಿಕೊಂಡು ಬಂದನು. ಆಗ್ರಾದಿಂದ ಶಿವಾಜಿ ತಪ್ಪಿಸಿಕೊಂಡು ಬಂದದ್ದು ಒಂದು ಮಾಹಾದ್ಬುತ ವೀರಗಾಥೆ. ಆಗ್ರಾಕ್ಕೆ ಹೊಗುವಾಗಲೇ ಔರಂಗಜೇಬನ ಕ್ರೋಧವನ್ನು ಅರಿತವನು, ಬಿಚ್ಚುಕತ್ತಿಯ ಪಹರೆಯಲ್ಲಿದ್ದವನು, ಎಲ್ಲರ ಕಣ್ಣಿಗೆ ಮಣ್ಣೆರಚಿ ಹೊರಬಿದ್ದು ಸುದೂರವಾದ ಉತ್ತರ ಭಾರತದಿಂದ ದಕ್ಷಿಣ ಪಥಕ್ಕೆ ಬಂದು ವಿಜಯದುಂದುಭಿ ಮೊಳಗಿಸಿದನೆಂದರೆ, ಎಂತಹ ಜಾಗರೂಕತೆ, ಎಂತಹ ಆಲೊಚನೆ ,ವಿಜಗೀಷು ಪ್ರವೃತ್ತಿಯಿಂದ ವ್ಯವಹರಿಸಿದನೆಂಬುದು ತಿಳಿಯುತ್ತದೆ. ಅಷ್ಟೇಅಲ್ಲ, ಆ ಸಂಪೂರ್ಣ ವ್ಯೂಹದ ಹಿಂದೆ ಎಂತಹ ಜಾಗೃತ ಪ್ರಯತ್ನ ಕೆಲಸ ಮಾಡಿತೋ ಅದು ಟಕ್ಕತನವೇ? ಅಲ್ಲಿ ಮೊಗಲರ ಕೈಯಲ್ಲಿ ಸಿಕ್ಕು ಸತ್ತ ಸ್ವದೇಶಿ ಸಾಲಿನಲ್ಲಿ ತಾನು ಒಬ್ಬನಾಗುವುದು ಶಿವಾಜಿಯ ಆದರ್ಶವಲ್ಲ. ಶಿವಾಜಿ ಮೊಗಲರನ್ನು ಗೆಲ್ಲಬೇಕೆಂದುಕೊಂಡನು,ಗೆದ್ದನು ಸಹ.ಅದು ಹೇಗೆ ಸಾದ್ಯವಾಯಿತು?

ಸಮಾಜದ ನಾಡಿಯನ್ನು ಶಿವಾಜಿ ಗುರುತಿಸಿದನು. ಪ್ರಾರಂಭದಲ್ಲಿ ಶಿವಾಜಿಯನ್ನು ಚಿಕ್ಕವರು. ದೊಡ್ಡವರೆಲ್ಲಾ ಎದುರಿಸಿದರು, ತಂದೆ ವಿರೋಧಿಸಿದನು. ಸ್ವದೇಶಿಯರಾದ ಚಂದ್ರರಾವ್, ಶ್ಯಾಮಲರಾವ್ ಶಿವಾಜಿಯನ್ನು ಕೊಲ್ಲಲು ಪ್ರಯತ್ನಿಸಿದರು. ಪರಿಸ್ಥಿಯೊಡನೆ ಹೊಂದಾಣಿಕೆ(ರಾಜಿ) ಮಾಡಿಕೊಂಡಾದರೂ,ಸುಖವನ್ನು ಅನುಭವಿಸ ಬೇಕೆಂದುಕೊಳ್ಳುವ ಪ್ರತಿ ವ್ಯೆಕ್ತಿಗೆಶಿವಾಜಿಯ ಹೋರಾಟದಲ್ಲಿ ದುರಹಂಕಾರವೇ ಕಾಣಿಸಿತು ಬಿಜಾಪುರದ ಸುಲ್ತಾನನು ಆ ದುರಹಂಕಾರವನ್ನು ಮೆಟ್ಟಿಹಾಕಲು ಅಫ್ಜಲ್‌ಖಾನನ್ನು ಕಳಿಸಿ ಶಿವಾಜಿಯನ್ನು ಸಜೀವವಾಗಿ ಹಿಡಿದು ತಾ ಎಂದನು. ಶಿವಾಜಿಗೆ ಈ ಸುದ್ದಿ ತಿಳಿಯಿತು. ಅವನು ಪ್ರತಿಕ್ರಿಯಿಸಲಿಲ್ಲ. ಅಫ್ಜಲ್‌ಖಾನ್ ದುರ್ಮಾರ್ಗಿ ಸೇಡಿನಿಂದ ಶಿವಾಜಿಯನ್ನು ಗೆಲ್ಲಲು ಬರುತ್ತಿದ್ದಾನೆ. ಹೇಗಾದರೂ ಮಾಡಿ ಶಿವಾಜಿಯನ್ನು ತನ್ನ ಬಲೆಯೊಳಗೆ ಬೀಳುವಂತೆ ಮಾಡಬೇಕೆನ್ನುವುದು ಅವನ ಆಶಯ. ಶಿವಾಜಿ ರಾಜಗಡದಲ್ಲಿದ್ದಾನೆ. ಅಫ್ಜಲ್ ಖಾನ್ ಆಕ್ರಮಣಕ್ಕೆ ಬರುತ್ತಿದ್ದಾನೆಂದು ತಿಳಿದರೂ ಹೆದರಲಿಲ್ಲ. ದುರಾಕ್ರಮಣದ ದಾರಿಯಲ್ಲಿ ಅಫ್ಜಲ್ ಖಾನನ ಸೇನೆ ಗ್ರಾಮಗಳನ್ನು ದಗ್ದಗೊಳಿಸಿತು. ಜನರನ್ನು ಕತ್ತರಿಸಿತು, ದೇವಾಲಯಗಳನ್ನು ಧ್ವಂಸ ಮಾಡಿತು.ಸ್ತ್ರೀಯರ ಮಾನಹರಣ ಮಾಡಿತು, ಗೋವುಗಳನ್ನು ಕೊಂದರು, ತುಳಜಾಪುರದ ಭವಾನಿ ದೇವಾಲಯವನ್ನು ಭಗ್ನಗೊಳಿಸಿದರು. ಪಂಡರಾಪುರದ ದೇವಾಲಯವನ್ನು ನೆಲಸಮಗೊಳಿಸಿದರು ಈ ಎಲ್ಲ ಸುದ್ದಿಗಳು ಶಿವಾಜಿಗೆ ಆಗಾಗ್ಗೆ ತಲುಪುತ್ತಿದ್ದವು. ಶಿವಾಜಿ ಸ್ಪಂದಿಸಲಿಲ್ಲ.ಅಫ್ಜಲ್ ಖಾನ್ ಎಲ್ಲಿ ನಿಮ್ಮ ರಕ್ಷಕ ಎಂದು ಗೇಲಿ ಮಾಡಿದನು. ಜನರು ಗೋ ಬ್ರಾಹ್ಮಣ ದೇವತಾ ಪರಿಪಾಲಕನಾದ ಆ ಶಿವಾಜಿ ಎಲ್ಲಿ? ಎಂದು ಆಕ್ರೋಶಿಸಿದರು. ಕೊನೆಗೆ ಬೇಸತ್ತು ಶಿವಾಜಿ ಹೇಡಿ ಎಂದರು , ಮೋಸಗಾರ ಎಂದರು. ಶಿವಾಜಿ ಪ್ರತಿಸ್ಪಂದಿಸಲಿಲ್ಲ. ಜನಗಳ ಉದ್ರೇಕಕ್ಕೆ ಬಲಿಯಾಗಲಿಲ್ಲ. ಹೆಸರಿಗೆ ಅಹಂಕಾರಕ್ಕೆ ಅವಿವೇಕಕ್ಕೆ ಒಳಗಾಗಲಿಲ್ಲ. ಅಲ್ಲದೆ ತಾನು ಭಯಪಟ್ಟಂತೆ ನಟಿಸಿದನು. ಅಫ್ಜಲ್ ಖಾನಗೆ ಶರಣಾಗಲು ಬರುತ್ತಿದ್ದಾನೆ. ಸಮಯ ಬಂದಾಗ ರಾಕ್ಷಸನಾದ ಆ ಅಫ್ಜಲ್ ಖಾನನನ್ನು ಬಲಿಕೊಟ್ಟು ಚರಿತ್ರೆಯಲ್ಲಿ ಅವಿಸ್ಮರಣೀಯ, ಅನುಪಮವಾದ ವಿಜಯವನ್ನು ಸಾಧಿಸಿದನು. ಸ್ವಧರ್ಮ,ಸ್ವರಾಜ್ಯಪ್ರತಿಷ್ಠೆ ಇದ್ದ ದೇಶದಲ್ಲಿ ಸಾವಿರಾರು ಪಂಡರೀನಾಥರು,ಸಾವಿರಾರು ಭವಾನಿ ಮಾತೆಯರು ಬೆಳಗಬಲ್ಲರು. ಆದರೆ ಅವೆರಡು ಲೋಪವಾದರೆ? ಚೌಕಬಾರದ ಕೀರ್ತಿ ಪ್ರತಿಷ್ಠೆಗಳಲ್ಲಿ ಅವನ ಲಕ್ಷ ವಿಜಯ ಸಾಧನೆ. ಅವನು ಬಯಸಿದ್ದು ಕೀರ್ತಿ ಪ್ರತಿಷ್ಠೆ ವ್ಯಕ್ತಿಗತ ಗರ್ವ ತೃಪ್ತಿಗಾಗಿಯಲ್ಲ,ಬದಲಾಗಿ ರಾಷ್ಟ್ರಗೌರವ ವೈಭವಗಳನ್ನು.ಯಾವ ಆದಿಲ್‌ಷಾಹಿ ಶಕ್ತಿ ಶಿವಾಜಿಯನ್ನು ತುಳಿದು ಹಾಕಲು ಒಂಟಿಕಾಲ ಮೇಲೆ ಎದ್ದು ನಿಂತಿತೋ, ಆ ಶಕ್ತಿ ತುಂಡಾಗಿ ಕೊನೆಗೆ ಶಿವಾಜಿ ದಯಾ ದಾಕ್ಷಿಣ್ಯಕ್ಕೆ ಕೈಚಾಚಿತು.ಮೊಗಲರು ವಿದೇಶಿ ವಿಘಾತಕ ಬುದ್ದಿಗಳು, ಕ್ರೂರರಷ್ಟೇ ಅಲ್ಲ ಷಡ್ಯಂತ್ರಿಗಳು ಕೂಡಾ ಶಿವಾಜಿ ಸಾದಿಸುತ್ತಿದ್ದ ವಿಜಯಗಳು ಅವರ ಕಣ್ಣು ಕೆಂಪಾಗಿಸಿದವು. ಷಾಯಿಸ್ಥೇಖಾನ್ ಮೊಗಲ ಸಾಮ್ರಾಟ ಔರಂಗಜೇಬನ ಸೋದರಮಾವ, ಅನೇಕ ಯುದ್ಧಗಳನ್ನು ಗೆದ್ದ ವೀರ ಅವನಿಗೆ ಸಹಾಯಕನಾಗಿ ಯಶವಂತಸಿಂಹನನ್ನು ಜೊತೆಮಡಿ, ಶಿವಾಜಿಯನ್ನು ಮಟ್ಟಹಾಕಲು ವರಂಗಜೇಬ ಲಕ್ಷ ಸೈನ್ಯದೊಡನೆ ಕಳಿಸಿದನು. ಮೊಗಲ ಸೈನ್ಯ ಅನೇಕ ಕೊಟೆಗಳನ್ನು ವಶಪಡಿಸಿಕೊಂಡವು. ಸಮರ್ಥ ರಾಮದಾಸರು  ಶಿವಾಜಿಯನ್ನು ಅನುಸರಿಸಿ ನಡೆಯಿರಿ ಎಂದು ಬೋಧಿಸಿದರುಆ ಸತ್ಯವನ್ನು ಗುರುತಿಸಿ, ಸ್ವಧರ್ಮ, ಸ್ವರಾಜ್ಯ ಭಾವನೆಯಂದ ಸಾಧಾರಣ ಮಾನವರಲ್ಲಿ ಮಹಾ ತೇಜಶ್ವಿಗಳಾದ ಮಹಾನ್ ಯೋದರನ್ನು ಶಿವಾಜಿ ಸೃಷ್ಟಿಸಿದನು.

ನೇತಾಜಿ ಪಾಲ್ಕರ್, ತಾನಾಜಿ ಮಾಲ್ಸುರೆ ,ಸೂರ‍್ಯಾಜಿ, ಪ್ರತಾಪ್ ರಾವ್ ಗುಜರ್, ಬಾಜಿಪ್ರಭುದೇಶಪಾಂಡೆ, ಖಂಡೋಜಿ ಭಲ್ಲಾಲ, ಶಂಭಾಜಿರಾವ್‌ಜೀ, ಜೀವಾಜೀ ಮೆಹಕಾರಂತಹ ಪರಮ ದೇಶಭಕ್ತರ ಬೆಳಕು ಉಕ್ಕಿತು ಪಶ್ಚಾತ್ತಾಪದ ಕಂಡು ಬಂದಕಡೆ, ಇತರರೊಂದಿಗೆ ಸೇರಿ ಸ್ವಧರ್ಮವನ್ನು ಬದಲಾಯಿಸಿಕೊಂಡವರನ್ನು ಕೂಡಾ ಮರಳಿ ಸ್ವಸಮಾಜದಲ್ಲಿ ಸೇರಿಸಿಕೊಂಡು ಅವರಿ ಉನ್ನತ ಸ್ಥಾನವನ್ನು ಕೊಟ್ಟನು ತನಗಿಂತ ತನ್ನ ವ್ಯಕ್ತಿಗತ ಮಮಕಾರಕ್ಕಿಂತ ದೇಶ ಶ್ರೇಷ್ಟವೆಂದು ಆಚರಣಿಯಲ್ಲಿ ಋಜುವಾತು ಮಾಡಿದನು. ಸಾಕ್ಷಾತ ತನ್ನ ತಂದೆಯನ್ನು ಬಿಜಾಪುರದ ಆಡಳಿತ ಬಂದಿಮಾಡಿದಾಗ ತಂದೆ ಉತ್ತರ ಬರೆದರು-ನೀನು ಈ ಹೋರಾಟವನ್ನು ನಿಲ್ಲಿಸದೆ ಹೋದರೆ ನನ್ನ ಜೀವ ಉಳಿಯದೆಂದು-ಶಿವಾಜಿ ವೈಯಕ್ತಿಕವಾಗಿ ನೋವು ಅನುಭವಿಸಿದರೂ ಈ ಮಹಾ ಸಂಗ್ರಾಮದಲ್ಲಿ ಎಷ್ಟೇ ಜನ ತಂದೆಗಳು ಆಹುತಿಯಾಗಿದ್ದಾರೋ, ಇನ್ನು ಎಷ್ಟು ಜನ ಆಗಬೆಕೋ ಎಂದು ಪ್ರಕಟಿಸಿದನು. ತನ್ನ ಕುಮಾರ ಶಂಬಾಜೀ ದುರ್ಮಾಗಿಯಾಗಿ ತಪ್ಪು ಮಾಡಿದರೆ ಅವನನ್ನು ಸೆರೆಮನೆಯಲ್ಲಿಡಲು ಭಯಪಡಲಿಲ್ಲ. ಮಹಮ್ಮದೀಯರನ್ನು ಮಣ್ಣಾಗಿಸಿದರೂ ಅವರ ಮಸೀದಿಗಳ ತಂಟೆಗೆ, ಧಾರ್ಮಿಕ ಭಾವನೆಗಳ ತಂಟೆಗೆ ಹೋಗಲಿಲ್ಲ. ವಿಜಯ ಪರಂಪರೆ ಲಭಿಸಿದರೂ ಗರ್ವಪಡಲಿಲ್ಲ. ಜಯಸಿಂಹನನ್ನು ಕುರಿತು ಸಂಭೋದಿಸುತ್ತಾ ನೀನು ಸ್ವತಃ ದಕ್ಷಿಣವನ್ನು ಜಯಿಸಲು ಬಂದರೆ ನಿನ್ನ ಕುದುರೆ ಹಗ್ಗವನ್ನಿಡಿದು ನಡೆಸಿ, ಸಮಸ್ತ ದಕ್ಷಿಣಪಥವನ್ನೇ ನಿನ್ನ ಕಾಲಡಿಗೆ ಸಮರ್ಪಿಸುತ್ತಿದ್ದೆ. ಆದರೆ ನೀನು ಗುಲಾಮನಾಗಿ ಬಂದಿರುವೆ ಎಂದು ಮೂದಲಿಸಿ, ಜೀವ ಸತ್ತ ಹೃದಯಗಳಲ್ಲಿ ರಾಷ್ಟ್ರೀಯ ಸ್ವಾಭಿಮಾನವನ್ನು ಅಂಕುರಾರ್ಪಣ ಮಾಡಿದನು.

ಶಿವಾಜಿ ಹೋರಾಟವನ್ನು ತನಗಾಗಿ ನಿರ್ಮಿಸಲಿಲ್ಲ ಅದಕ್ಕಾಗಿ ವ್ಯಕ್ತಿ ನಿಷ್ಠೆಯಿಂದ ಕೂಡಿದ ಹೋರಾಟವನ್ನು ವ್ಯಕ್ತಿ ಪೂಜಾರಿಗಳನ್ನು ನಿರ್ಮಿಸಲಿಲ್ಲ. ಅಫ್ಜಲ್‌ಖಾನನೊಡನೆ  ಹೋರಾಡಲು ಹೊರಟಾಗ ಷಾಯಿಸ್ತೇಖಾನನೊಂದಿಗೆ ಹೋರಾಟಕ್ಕಿಳಿದಾಗ, ಆಗ್ರಾಕ್ಕೆ ಹೋದಾಗ ರಾಜ್ಯವ್ಯವಸ್ಥೆಯನ್ನು ಹೊರಾಟದ ವ್ಯವಸ್ಥೆಯನ್ನು ನಿರಾಂತಕವಾಗಿ ಮುಂದುವರೆಸುವ ಎಲ್ಲಾ ಏರ್ಪಾಡುಗಳನ್ನು ಮಾಡಿದನು. ತಾನಿಲ್ಲದೆ ಹೋದರೂ ಸ್ವಧರ್ಮ ಸ್ವರಾಜ್ಯ ಹೋರಾಟ ನಡೆಸಬಲ್ಲ ನೀತಿವಿಶಾರದರನ್ನು, ವೀರಯೋಧರನ್ನು ನಿರ್ಮಿಸಿ ಪ್ರತಿಸಾರಿಯೂ ಮೊದಲೇ ಏರ್ಪಾಡುಗಳನ್ನು ಮಾಡಿರುತ್ತಿದ್ದನು.ತಾನು ಹಿಡಿದ ಕೆಲಸ ರಾಷ್ಟ್ರೀಯ ಕಾರ್ಯ, ಅದಕ್ಕೆ ಅಡ್ಡಿಯಾದ ತಂದೆಯನ್ನೂ ಲೆಕ್ಕ ಮಾಡಲಿಲ್ಲ ಸ್ವಜಾತೀಯರಾದ ಚಂದರ್‌ರಾವ್‌ನನ್ನು ಸಂಹರಿಸಿದನು. ಪುತ್ರ ಪೇಮವನ್ನು ಕಡಿದುಕೊಂಡು ಶಂಭಾಜಿಯನ್ನು ನಿರ್ಭಂಧದಲ್ಲಿಟ್ಟನು ವ್ಯಕ್ತಿಯನ್ನು ಆತ ಅಳೆದದ್ದು ಧರ್ಮಬುದ್ಧಿಯಿಂದಶಿವಾಜಿ ಹೀಗೆ ಒಂದು ಉತ್ತಮ ಸಂಘಟನಾಕಾರನಾಗಿ ಸಮಾಜದಲ್ಲಿ ವಿಜಗೀಷ ಪ್ರವೃತ್ತಿಯನ್ನು ಪ್ರಜ್ವಲಿಸುವಂತೆ ಮಾಡಿದನು. ತೂಗಿ ತೂಗಿ ಹೆಜ್ಜೆ ಇಡುತ್ತಾ ಅಲ್ಪಕಾಲದಲ್ಲಿ ಹೋರಾಟವನ್ನು ಸಂಘಟಿಸಿ, ಆ ಹೋರಾಟದ ಫಲವಾದ ಸ್ವರಾಜ್ಯಕ್ಕೆ ರಾಜನಾಗಿ ರಾಜ್ಯಾಭಿಷಿಕ್ತನಾದನು. ಅದು ಅಂದಿನ ಜನರ ಮನಸತ್ವವನ್ನು ಬದಲಿಸಿ, ಸ್ವಜಾತಿಯ ಅಭಿಮಾನದ ಬೆಳಕನ್ನು ಬೆಳಗಿಸಲು. ಆ ದಿನವು ಅದೇ ಅವಶ್ಯಕ ನೀತಿ ರಾಣಪ್ರತಾಪನಂತವನು ಸಂದಿಗೆ ಒಪ್ಪದೆ, ಸ್ವಾರ್ಥ ತಿಳಿಯದ ವೀರ ವ್ರತದ ಪರಮ ದೇಶಭಕ್ತ ವ್ರತವನ್ನು ಧರ್ಮಧೀಕ್ಷೆಯನ್ನು ಪ್ರಕಟಿಸಿದರೆ ಅವನ ಹೆಜ್ಜೆಗುರುತುಗಳಲ್ಲೂ ನಡೆಯುವುದು ಬಿಟ್ಟು ’ಇಷ್ಟೋಂದು ಮಾಡಿ ಸಾಧಿಸುವುದೇನು? ಏನೋ ಸರಿಪಡಿಸಿಕೊಂಡು ಹೋಗದೆ ಇರಿದು ಗೆಲಿಸಿದ್ದೇನು? ಎಂದು ಉಪೇಕ್ಷಿಸಿದ ಸಮಾಜ. ಆ ಸಮಾಜವೇ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಿದ ಶಿವಾಜಿಯನ್ನು ಸಾಕ್ಷಾತ್ ಪರಮೇಶ್ವರವೆಂದು ಸ್ತುತಿಸಿತು. ಕಾರಣ ಒಂದೇ-ಶಿವಾಜಿ ಗೆಲವು! ಸುಮಾರು ಆರು ಶತಮಾನಗಳ ಕಾಲದಲ್ಲಿ ಸ್ಪಷ್ಟವಾಗಿ ಒಂದು ಸರ್ವಾಂಗೀಣ ಸ್ವರಾಜ್ಯ ಆಡಳಿತದ ಕಲ್ಪನೆ ಕಾಣಿಸಲಿಲ್ಲ. ಸ್ವತ್ವಕ್ಕೆ ಪ್ರತಿಷ್ಟೆ ಸಿಗಲಿಲ್ಲ. ಶಿವಾಜಿ ಮಹಾರಾಜ ರಾಯಬಾರಿಗಳನ್ನು ನೇಮಿಸಿದನು. ಸಮುದ್ರವನ್ನು ಆಳಿದನು ವಿದೇಶಿ-ಸ್ವದೇಶಿ ವ್ಯತ್ಯಾಸವನ್ನು ಸ್ಪಷ್ಟಪಡಿಸಿ ಪ್ರಕಟಿಸಿದನು ಅದಕ್ಕಾಗಿ ಶಿವಾಜಿ ಅಂದಿನ ಒಂದು ಚಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡನು.

ಪಾಶ್ಚಾತ್ಯರು ಪಾಶ್ಚಾತ್ಯರ ಪ್ರಭಾವದಿಂದ ಆತ್ಮವಿಶ್ವಾಸ ಕಳೆದುಕೊಂಡ ಆಷಾಢಭೂತಿ ಉದಾರ ಜೀವಿಗಳು, ಶಿವಾಜಿ ಅಧರ್ಮಯುತ ಯುದ್ಧಮಾಡಿದವನೆಂದು, ದಾಳಿಕೋರನೆಂದು, ಬೆಟ್ಟದ ಇಲಿ ಎಂದು ಅಂದರು. ಅವನು ದೋಚಿದ್ದು ಯಾರದು? ಯಾರ ಮೇಲೆ ಕುಟಿಲತೆ ಪ್ರದರ್ಶಿಸಿದನು? ವಿದೇಶಿ ದುರಾಕ್ರಮಣಕಾರರ ಧರ್ಮ ಬೇರೆ, ಆಶಯ ಬೇರೆ, ಶಿವಾಜಿ ಧರ್ಮ ಬೇರೆ ಆಶಯ ಬೇರೆ ನೀತಿ ಅನೀತಿಗಳನ್ನು ಅಳೆಯುವ ಪ್ರಮಾಣ ಬೇರೆಯಾದಾಗ ಜಯವನ್ನು ಕೈಹಿಡಿಯಲು ಅವಲಂಬಿಸುವ ಪ್ರತಿಯೊಂದು ಮಾರ್ಗವೂ ಧರ್ಮವೇ ಕನಿಷ್ಟ ಮಾನವತ್ವದ ಬೆಲೆಯನ್ನು ಗುರುತಿಸದೆ, ಒಬ್ಬ ಪ್ರಜೆ ಹೃದಯಪೂರ್ವಕವಾಗಿ ಆರಾಧಿಸುವ ದೇವಾಲಯಗಳನ್ನು ಸ್ತ್ರೀಯರ ಮಾನವನ್ನು, ಗೋವುಗಳನ್ನು,ವಿದ್ವಾಂಸರನ್ನು ಧ್ವಂಸ ಮಾಡುವುದೇ ಮುಕ್ತಿ ಎಂದುಕೊಳ್ಳುವ ವರ್ಗವನ್ನು ಅವರ ಸಹಿಷ್ಣತೆಯನ್ನು ತೊಡೆದುಹಾಕಲು ಶಿವಾಜಿ ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಂಡನು. ಅವರ ಖಜಾನೆಗಳನ್ನು ದೋಚಿದನು, ಎಲ್ಲಯದು ಆ ಹಣ? ಅದು ಹೇಗೆ ಪರಕೀಯರಾದ ಶತ್ರುಗಳ ಕೈವಶವಾಯಿತು ನಮ್ಮ ಮೇಲೆ ಮಾಡಿದ ದಾಳಿ,ದುರಾಕ್ರಮಣಗಳಿಂದಲೇ ತಾನೇ? ಅದನ್ನೇತಕೆ ಉಪಯೋಗಿಸಿದರು ಶತ್ರುಗಳು ಈ ದೇಸವನ್ನು ನಾಶ ಮಾಡಲಲ್ಲವೇ? ಅಂತವರಿಂದ ಸ್ವದೇಶ ಧನವನ್ನು ವಶಪಡಿಸಿಕೊಂಡು ಅದನ್ನು ಸ್ವಧರ್ಮ ಸ್ವರಾಜ್ಯ ಹೋರಾಟಕ್ಕಾಗಿ ಶಿವಾಜಿ ವ್ಯಯಮಾಡಿದನು ಅದು ಧರ್ಮವಲ್ಲವೇ? ಶಿವಾಜಿ ಯುದ್ಧಗಳನ್ನು ಸಹ ಮೂರ್ಖರಾಗಿ ಮಾಡಲಿಲ್ಲ ಅವಶ್ಯಕವೆನಿಸಿದಾಗ ಸಂಧಿ ಬಯಸಿದನು ಸ್ವಾರ್ಥಪರನಾಗಿ ಅಲ್ಲ ಅವಕಾಶ ಲಭಿಸಲಿಕ್ಕಾಗಿ ಬಲವನ್ನು ವೃಧಿಸಿಕೊಳ್ಳಲು ಹಾಗೆ ಅವಕಾಶ ದೊರೆತಾಗಲೆಲ್ಲ ತಿರುಗೇಟು ಕೊಟ್ಟನು ಅವಕಾಶ ಸಿಕ್ಕದಾಗ ಹೋಡಿ ಹೋದನು. ಮೂರ್ಖನಾಗಿ ಮಿಡತೆಗಳ ದಂಡಿನಂತೆ ತನ್ನ ಸೇನೆಯನ್ನು ಯದುರಿನ ಬಲಕ್ಕೆ ಅಹುತಿಕೊಡಲಿಲ್ಲ ಹೇಗಾದರು ಜಯ ಲಭಿಸಬೇಕು ಅದು ಅವನ ಗುರಿ ಗೆಲುವು ಒಂದನ್ನು ಬಿಟ್ಟರೆ ಬೇರೊಂದಿಲ್ಲ ಗೆಲವನ್ನು ಸಾಧಿಸಲು ಅವನ ಸ್ವೀಕರಿಸಿದ ಸಾಧನೆಗಳೆಂತವು ಎಂಬುವುದು ಪ್ರಶ್ನೆಯಲ್ಲ. ಶಕ್ತಿಗೆ, ಗೆಲುವಿಗೆ ಪ್ರಪಂಚ ತಲೆಬಾಗುತ್ತದೆ ಅದು ಶಿವಾಜಿ ಗುರುತಿಸಿದ ಸತ್ಯ. ಅದಕ್ಕೆ ಅಂದಿನ ಉತ್ಸವವನ್ನು ನೋಡಿ ಆನಂದಿಸಲು ಲಕ್ಷಾಂತರ ಜನರು ರಾಯಗಢಕ್ಕೆ ಬಂದರು ಸಮಸ್ತ ನದಿಗಳ ಜಲ ಹರಿದು ಬಂದಿತು. ಸಮಸ್ತ ವೇಧ ಶಾಖೆಗಳನ್ನು ಪಟಿಸುವ ವಿಪ್ರರ ಕಂಠಗಳು ಉದ್ಘೋಶಿಸಿದವು ಸ್ವಾದೀನ ಅಹಿಂದವ ಶಕ್ತಿ ವಿರಾಟ ರೂಪವನ್ನು ಸಾಕ್ಷಾತ್ಕರಿಸಿಕೊಂಡಿತು.

ಶಿವಾಜಿ ಪ್ರಾರಂಭಿಸಿದ ಈ ಆಂದೋಲನ ಕ್ಷಣಿಕವಾದುದಲ್ಲ     ನಂತಹವುದಲ್ಲ ಪ್ರತಿಕ್ರಿಯಾತ್ಮಕವಾದುದಲ್ಲ. ಆದ್ದರಿಂದ ಅವನ ನಂತರ ರಾಜರು ಎಂಥವರೇ ಬಂದರೂ ಹೋರಾಟ ನಿಲ್ಲಲಿಲ್ಲ ಅಟಕ್‌ನಿಂದ ಕಟಕ್‌ವರೆಗೆ ಯಾವದ್ದೇಶದಲ್ಲಿ ಸ್ವರಾಜ್ಯ ಪ್ರತಿಷ್ಟಾಪಿಸಲ್ಪಟ್ಟಿತು. ಮಹಮ್ಮದೀಯರ ದಾಸ್ಯಸ ಸಂಕೋಲೆಗಳು ತುಂಡಾದವು.ಹೀಗೆ ಸ್ವದೇಶ, ಸ್ವಧರ್ಮ, ಸ್ವರಾಜ್ಯ ಎಂಬ ತ್ರಿಸೂತ್ರವನ್ನು ಮರೆತ ರಾಷ್ಟ್ರವನ್ನು ಮರಳಿ ಆ ತ್ರಿಸೂತ್ರವನ್ನು ಸಾಕ್ಷಾತ್ಕರಿಸಿಕೊಳ್ಳುವಂತೆ ಮಾಡಿದ್ದು ಶಿವಾಜಿ ಸ್ವರಾಜ್ಯವಲ್ಲ, ಯಾವುದೋ ರಾಜ್ಯವಲ್ಲ ಸ್ವರಾಜ್ಯ ಆ ಸ್ವರಾಜ್ಯ, ಸ್ವಧರ್ಮ ಇವು ನಮ್ಮ ಆದರ್ಶ ಎಂದು ಸಾರಿದ ರಾಷ್ಟ್ರದ್ರಷ್ಟ, ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿ, ಸಾಕ್ಷಾತ್ಕರಿಸಿಕೊಂಡು ಪೌರುಷ ಮೂರ್ತಿ ಶಿವಾಜಿ.ಇದು ಸಂಘಯುಗ ಇಂದಿಗೂ ಅಂದಿಗೂ ಸಾಮ್ಯತೆಗಳು ಅನೇಕ. ಆಂಗ್ಲರು ಕುದುರೆಯನ್ನೂ, ಕತ್ತೆಯನ್ನೂ, ಒಂದೇಗೂಟಕ್ಕೆ ಕಟ್ಟುತ್ತಿದ್ದರು. ಈ ದೇಶ ಹಿಂದೂಗಳದ್ದು, ಹಿಂದುಗಳು ಎಚ್ಚೆತ್ತರೆ ಪ್ರಪಂಚದಲ್ಲಿ ಇವರು ಒಂದು ಪ್ರಚಂಡ ಶಕ್ತಿಯಾಗಿ ರೂಪುಗೊಳ್ಳುತ್ತಾರೆ. ಅದ್ದರಿಂದ ಕುಟಿಲತೆಯಿಂದ ಹಿಂದು ಮುಸ್ಲಿಂ ಸಮಸ್ಯೆಯನ್ನು ಸೃಷ್ಟಿಸಿದವರು ಆಂಗ್ಲರು ಆ ಸಮಸ್ಯೆ ದಾಸೋಹವೆನ್ನುತ್ತಾ ಶರಣಾಗತರಾಗಿ ಹೋದರು ನಮ್ಮ ಹಿರಿಯರು. ಚರಿತ್ರೆಯಲ್ಲಿ ಮೊದಲ ಬಾರಿಗೆ ನಮ್ಮ ಕೈಯಾರೆ ಮಾತೃದೇವಿಯ ಶರೀರವನ್ನು ಕತ್ತರಿಸಿಕೊಳ್ಳುವ ದುರ್ದೆಶೆಗೆ ದೇಶವನ್ನು ತಂದರು. ತಮ್ಮ ತಪ್ಪನ್ನು ಗುರುತಿಸಿ ಮರಳಿ ಸರಿಪಡಿಸಲು ಯಾರಾದರು ಮುಂದಾದರೆ ತಮ್ಮ ಹೆಸರು ಇತಿಹಾಸದಲ್ಲಿ ಕಳಂಕವಾಗಿ ಉಳಿಯುವುದೆಂಬ ಭಯದಿಂದ  ವಿಭಜನೆ ಸ್ತಿರವಾದ ವಾಸ್ತವ ಎಂದು ಬರೆದು ಅಲ್ಲವೆಂದವರನ್ನು ನಿರ್ಬಂಧಿಸಿ ತಮ್ಮ ಸರ್ವಶಕ್ತಿಯನ್ನು ವಿನಿಯೋಗಿಸಿ ಪರಾಭವಗೊಳಿಸಲು ಸಂಕೋಚ ಪಡಲಿಲ್ಲ.

ಹಿಂದೂ ದೇಶದ ಸ್ವಾತಂತ್ರ್ಯ ಎಂದರೆ ಯಾರ ಸ್ವಾತಂತ್ರ್ಯ? ಇಲ್ಲಿನ ರಾಷ್ಟ್ರೀಯ ಸಮಾಜ ಯಾರದು? ಸ್ವರಾಜ್ಯ, ಸ್ವಧರ್ಮಗಳಿಗೆ ಈ ದೇಶದಲ್ಲಿ ಅರ್ಥವೇನು? ಶಿವಾಜಿ ಕಾಲದಲ್ಲಿ ಕಲಸುಮೇಲೋಗರವಾದ ಭಾವಗಳ ಮನಸತ್ವ ವ್ಯಾಪಿಸಿತು ಅದೇ ಮನಸತ್ತ್ವ ಇಂದಿಗೂ ಕಾಣಿಸುತ್ತದೆ ಅಂದು ವ್ಯಾಪಿಸಿದ ಪ್ರವೃತ್ತಿ ಇಂದು ಕಾಣಿಸುತ್ತಿದೆ. ಸಮಾನ ಮನಸತ್ತ್ವಗಳು, ಸಮಾನ ಇತಿಹಾಸ, ಸಮಾನ ಅಭಿಮಾನ ಕೇಂದ್ರಗಳು, ಸಮಾನ ಸಮಾಜ ಜೀವನ ಸಂಬಂಧಗಳು ಇಲ್ಲದ ಜನರನ್ನು ಸಮೀಕರಿಸುವ ವ್ಯಾಮೋಹದಲ್ಲಿ, ದೇಶದಲ್ಲೂ ಬಲವಾದ ಶ್ರದ್ಧಾ ಕೇಂದ್ರಗಳಾಗಿ ನಿಲ್ಲಬಲ್ಲ ’ಸ್ವಧರ್ಮ ಸ್ವರಾಜ್ಯ’ ತತ್ತ್ವಗಳಿಗೆ ವಿರುದಾರ್ಥಗಳನ್ನು ಹೇಳುತ್ತಾರೆ. ಫಲಿತವಾಗಿ ಸಮಾಜಕ್ಕೆ ವಿಶ್ವಾಸ ಕೇಂದ್ರವಿಲ್ಲದಾಯಿತು. ಶಿವಾಜಿಗೆ ಹಿಂದಿನ ಸಮಾಜದಲ್ಲಿ ಯಾವ ರೀತಿಯ ಹೀನಸ್ಥಿತಿ ಕಾಣಿಸಿತೋ ಇಂದು ಅಂತಹುದೇ ಕಾಣಿಸುತ್ತಿದೆ.ನಮ್ಮ ಪದವಿಗಳು ಸಿಕ್ಕಿದರೆ ಸಾಕೆಂಬ ಕೆಲವರು ನಮ್ಮ ಸಂಪತ್ತು ಹೆಚ್ಚಾಗುವ ಅವಕಾಶ ಇದ್ದರೆ ಸಾಕೆಂದುಕೊಳ್ಳುವವರು ಕೆಲವರು. ನಮಗೇಕೆ ಹೇಳು ಎಂದು ತಲೆ ತಗ್ಗಿಸಿಕೊಳ್ಳುವವರು ಕೆಲವರು, ಹಿಂದೂ ಸಮಾಜ ಪ್ರಾಂತವಾರು, ವರ್ಗವಾರು, ಜಾತಿವಾರು, ರಾಜಕೀಯ ಸ್ವಾರ್ಥವಾರು, ತುಂಡುತುಂಡಾಗಿ ಮೈ ಮರೆತಿದೆ.

ವಿಜಗೀಷು ಪ್ರವೃತ್ತಿಯಿಲ್ಲ, ಸಮಷ್ಟಿ ಭಾವವಿಲ್ಲ, ಸಮಾಜ ಹಿತವನ್ನು ನುಂಗಿಹಾಕುವ ಸ್ವಾರ್ಥ ವ್ಯಾಪಿಸಿದೆ. ಕ್ರೈಸ್ತ ಮುಸ್ಲಿಂ ಮತ ವರ್ಗಗಳು, ಕಮ್ಯುನಿಷ್ಟ ಮುಂತಾದ ಅಂತರಾಷ್ಟೀಯ ವರ್ಗಗಳು ದೇಶದಲ್ಲಿ ದೊಡ್ಡ ದೊಡ್ಡ ಪೀಠಗಳ ಮೇಲೆ ಕುಳಿತುಕೊಂಡಿವೆ ಹಿಂದು ದೇಶದಲ್ಲಿ ಹಿಂದು ಜನಗಳು ಪರಕೀಯ ಬದುಕು ಬದಕುವ ಸ್ಥಿತಿ ನಿರ್ಮಾಣವಾಗಿದೆ. ’ಹಿಂದೂ’ ಎಂಬ ಸ್ಫುರಣವನ್ನುಂಟುಮಾಡುವ ಪ್ರತಿಯೊಂದು ವಿಷಯವು ಮತೋನ್ಮಾದವಾಗುತ್ತಿದೆ. ಇದಕ್ಕೆಲ್ಲ ಕಾರಣರಾರು? ಹಿಂದೂಗಳೆ, ಓದಿಕೊಂಡವರು ವ್ಯಕ್ತಿಗತ ವಿಷಯ ಬಂದಾಗ ಪರಮ ಸ್ವಾರ್ಥಿಗಳಾಗಿ, ವಿಲವಿಲ ಒದ್ದಾಡಿಕೊಂಡಾದರು ತಮ್ಮ ಕೆಲಸ ಮಾಡಿಕೊಳ್ಳುವರು. ಸಮಾಜದ ವಿಷಯ ಬಂದಾಗ ಮಹಾ ಉದಾರಿಗಳಂತೆ ವಿಘಾತಕ ಭಾವನೆಗಳನ್ನು ಪ್ರಕಟಿಸುತ್ತಿದ್ದಾರೆ.ಇಂತಹ ಸಮಾಜದಲ್ಲಿ ಮರಳಿ ಸಂಘಟನಾ ಶಕ್ತಿಯನ್ನು ಉದಿಸುವುಂತೆ ಮಾಡಬೇಕು. ಶಿವಾಜಿಯನ್ನು ಸ್ವಜನರೆ ವಿರೋಧಿಸಿದ್ದು ನಮ್ಮನ್ನು ಎದುರಿಸುತ್ತಿರುವುದು ಸ್ವಜನರೆ ಶಿವಾಜಿ ವಿರೋಧಿಸಿದ್ದು ವಿಧರ್ಮ, ಪಾರತಂತ್ರಗಳನ್ನು ಇಂದು ನಾವು ವಿರೋಧಿಸುತ್ತಿರುವುದು ವಿಧರ್ಮ ಭಾವನೆಗಳನ್ನೆ, ಪಾರತಂತ್ರ ಪ್ರವೃತ್ತಿಗಳನ್ನೇ. ಶಿವಾಜಿ ಸ್ವರಾಷ್ಟ್ರ ಸಂಘಟನೆಗೆ ಹೋರಾಟ ನಡೆಸಿದನು. ನಾವು ಮಾಡುತ್ತಿರುವುದು ಅದೇ ಕಾರ್ಯಕ್ರಮ. ಸಮಯ, ವ್ಯಕ್ತಿಗಳು, ಘಟನೆಗಳು ಬೇರೆಯಾದರು ಈ ಎರಡೂ ಸಮಯಗಳಲ್ಲಿದ್ದ ಮಾನಸಿಕತೆ, ಸಂಘರ್ಷಗಳಿಗೆ ಕಾರಣಗಳು ಒಂದೇ. ಶಿವಾಜಿ ಜೀವನ ಕಾರ್ಯ ರಾಷ್ಟ್ರೀಯ ಪುನರ್ ಜಾಗರಣದ ಹೋರಾಟ. ಈ ದೇಶದಲ್ಲಿ ರಾಷ್ಟ್ರೀಯರೆಂದರೆ ಹಿಂದುಗಳೆ, ಮೇಲಿನಿಂದ ಬಂದವರೆಲ್ಲ ಪರಕೀಯರೆ ಎಂಬ ನಿಷ್ಕರ್ಷಯನ್ನು ತನ್ನ ಜೀವನ ಕಾರ್ಯದ ಮೂಲಕ ಪ್ರಕಟಿಸಿದ್ದಾನೆ. ಪಾರತಂತ್ರ್ಯ ಕೇವಲ ಭೌತಿಕ ಸ್ಥಿತಿವರೆಗೆ ಸೀಮಿತವಲ್ಲ. ಯಾವ ರೀತಿ ರಾಜಕೀಯವಾಗಿ ದೇಶವನ್ನು ವಿದೇಶಿ ಶಾಸನ ಬಂಧನಗಳಿಂದ ಮುಕ್ತಗೊಳಿಸಿ ಜನರಿಗೆ ಸ್ವೇಚ್ಛಾ ಸ್ವಾತಂತ್ರ್ಯಗಳನ್ನು ಕೊಡುವುದು ರಾಷ್ಟ್ರದರ್ಶನವೋ, ಅದೆ ರೀತಿಯಾಗಿ ಅಕ್ರಮಗಳ ಕಾರಣದಿಂದ, ಬಲವನ್ನು ಕಾಮಿನಿ ಕಾಂಚನಗಳ ಮೋಹದಿಂದ ತಮ್ಮ ಸಂಸ್ಕೃತಿ ಸಭ್ಯತಾದಿಗಳಿಂದ ಸ್ವಧರ್ಮ, ಸ್ವದೇಶಿ ವ್ಯವಹಾರ ಸದಾಚಾರಗಳಿಂದ ದೂರವಾದ ಜನರಿಗೆ ಸಾಂಘಿಕ, ಧಾರ್ಮಿಕ ಸ್ವಾತಂತ್ರ್ಯವನ್ನು ಲಭಿಸುವಂತೆ ಮಾಡಲು ಬದಲಾದ ಜನರನ್ನು ಸೇರಿಸಿಕೊಳ್ಳಲು ಹೋರಾಟವನ್ನಾರಂಭಿಸಬೇಕೆಂಬ ಭಾವವನ್ನು ಶಿವಾಜಿ ಸಾರಿ ಹೇಳಿದನು. ಆತ್ಮ ವಿಸಮೃತಿ ಉಂಟಾದ ರಾಷ್ಟ್ರಕ್ಕೆ ಸನಾತನವಾದ ಸ್ವಧರ್ಮ, ಸ್ವರಾಜ್ಯಾಧರ್ಶಗಳ ಮೂಲಕ ಸ್ವರಾಷ್ಟ್ರ ಸ್ಫುರಣ ಉಂಟುಮಾಡಿದನು ಪರಮ ಪೂಜನೀಯ ಡಾ|| ಜೀ ಸಂಘವನ್ನು ಸ್ಥಾಪಿಸಿದ್ದು ಆ ಸ್ವರಾಷ್ಟ್ರ ಸ್ಫುರಣ ಉಂಟಾದ ಮಹಾ ಸಂಘಟನೆಯನ್ನು ನಿರ್ಮಿಸಲೇಂದೆ ಶಿವಾಜಿ ಶಕ್ತಿಯನ್ನು ಉಪಾಸನೆ ಮಾಡಿದರು. ಸಂಘವು ಶಕ್ತಿಯನ್ನೇ ಉಪಾಸಿಸುತ್ತದೆ. ಆದ್ದರಿಂದ ಶಿವಾಜಿ ನಮಗೆ ಆದರ್ಶ ಪುರುಷ.ಆದ್ದರಿಂದ ಶತಮಾನಗಳ ದಾಸ್ಯಬಂಧನಗಳಿಂದ ದೇಶಕ್ಕೆ ವಿಮುಕ್ತಿಯನ್ನುಂಟುಮಾಡಿ,

ಶಿವಾಜಿ ಸ್ವಶಕ್ತಿಯಿಂದ ಹಿಂದೂ ಸಾಮ್ರಾಜ್ಯಕ್ಕೆ ಅಧಿಷ್ಟನಾಗಿ ಅಭೀಷಕ್ತನಾದ ದಿನ ಜೇಷ್ಠಶುದ್ಧ ತ್ರಯೋದಶಿಯನ್ನು ರಾಷ್ಟ್ರಕ್ಕೆ ಪರ್ವದಿನವಾಗಿ ಡಾ||ಜಿ ಪ್ರಕಟಿಸಿದರು. ಆ ದಿವ್ಯ ಮೂರ್ತಿಯು ಹೆಜ್ಜೆ ಇಟ್ಟ ದಾರಿಯಲ್ಲಿ ಆಸೇತು ಹಿಮಾಚಲದವರೆಗೆ ವ್ಯಾಪಿಸಿರುವ ಹಿಂದೂಗಳನ್ನು ಒಂದು ಸಂಘಟಿತ ಶಕ್ತಿಯಾಗಿ ನಿರ್ಮಿಸಲು ನಿರ್ಮಲವಾದ, ವಿಶುದ್ಧವಾದ ರಾಷ್ಟ್ರಭಕ್ತಿಯನ್ನು ಪ್ರಭೋದಿಸಿದರು.

ಶಿವಾಜಿ ಪಟ್ಟಾಭಿಷೇಕ ದಿನೋತ್ಸವದಂದೇ ಹಿಂದೂ ಸಾಮ್ರಾಜ್ಯ ದಿನೋತ್ಸವವಾಗಿ ರಾಷ್ಟ್ರಜಾಗರಣ ಮಹೋತ್ಸವವಾಗಿ ಆಚರಿಸುತ್ತಾ ಅವರ ಗುಣಗಳನ್ನು ಹಿಂದೂಗಳಲ್ಲಿ ಉಂಟುಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಯತ್ನಿಸುತ್ತಿದೆ.

ಲೇಖನ : ಅರುಣ್ ಕುಮಾರ್, ಧಾರವಾಡ 

Leave a Reply

Your email address will not be published.

This site uses Akismet to reduce spam. Learn how your comment data is processed.