ಮೈಸೂರು: ವನವಾಸಿ ಕಲ್ಯಾಣ, ಕರ್ನಾಟಕದ ಪ್ರಾಂತ ಕಾರ್ಯಾಲಯ ‘ವನಶ್ರೀ’ ಲೋಕಾರ್ಪಣಾ ಸಮಾರಂಭ ಆಗಸ್ಟ್ 28, 2023ರಂದು ಮೈಸೂರಿನ ಚಾಮುಂಡಿಪುರಂನಲ್ಲಿ ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ ಆರ್ ಉದ್ಘಾಟನೆ ನೆರವೇರಿಸಲಿದ್ದು, ವನವಾಸಿ ಕಲ್ಯಾಣ, ಕರ್ನಾಟಕ ಇದರ ಅಧ್ಯಕ್ಷ ಮನು ಕಾವೇರಪ್ಪ ಚಕ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವನವಾಸಿ ಕಲ್ಯಾಣಾಶ್ರಮದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ರಮೇಶ್ ಬಾಬು, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಉಪಸ್ಥಿತರಿರಲಿದ್ದಾರೆ.