Bengaluru: 3 day International conference on “The Relevance of Yajna for a Healthy Society’ was held at Veda Vijnana Shodhasamsthanam, Channenahalli Bengaluru on Feb 27, 28 and March 1. Governor of Karnataka VR Wala inaugurated the event. Nearly 150 Scholars, Academicians attended the event.

ವೇದವಿಜ್ಞಾನ ಶೋಧಸಂಸ್ಥಾನಮ್

ಜನಸೇವಾ ಟ್ರಸ್ಟ್ , ಚನ್ನೇನಹಳ್ಳಿ, ಮಾಗಡಿ ರಸ್ತೆ ಬೆಂಗಳೂರು

ಮೂರು ದಿನಗಳ ಅಂತಾರಾಷ್ಟ್ರಿಯ ಸಮ್ಮೇಳನ:

DSC00398

ಯಂತ್ರಪ್ರಧಾನವಾದ, ವಿಜ್ಞಾನಪ್ರಧಾನವಾದ ಈ ಯುಗದಲ್ಲಿ ಪ್ರತಿಯೊಂದೂ ವೈಜ್ಞಾನಿಕವಾಗಿ ಪ್ರಮಾಣೀಕರಿಸಿರೆ ಮಾತ್ರ ಅದು ಆಧುನಿಕ ಯುವಜನಾಂಗಕ್ಕೆ ಸ್ವೀಕಾರವಾಗುತ್ತದೆ.  ಯಜ್ಞವೆಂಬುದು ಕೇವಲ ಕೃತಯುಗದ ಕ್ರಮವಾಗಿರದೆ ಕಲಿಯುಗದಲ್ಲಿಯೂ ಇದು ಮಹತ್ವವನ್ನು ಹೊಂದಿದೆ ಎಂಬುದು ವೈಜ್ಞಾನಿಕವಾಗಿಯೂ ಪ್ರಮಾಣೀಕರಿಸುವುದು ಅನಿವಾರ್ಯವಾಗಿದೆ. ಅದಿಲ್ಲವಾದರೆ ಚಲನಶೀಲವಾದ ಈ ಪ್ರಪಂಚದಿಂದ ಯಜ್ಞವು ತನ್ನ ಕಾಲೌಚಿತ್ಯವನ್ನು ಕಳೆದುಕೊಳ್ಳಬಹುದು.

ಈ ಕಲ್ಪನೆಯನ್ನು ಸಾಕಾರಗೊಳಿಸುವ ಉದ್ದೇಶದಿಂದ ವೇದವಿಜ್ಞಾನ ಶೋಧಸಂಸ್ಥಾನದಲ್ಲಿ ಮೂರುದಿನಗಳ ಕಾಲ International Conference on “The Relevance of Yajna for a Healthy Society: ಎಂಬ ವಿಷಯವನ್ನು ಆಧರಿಸಿ ಅಂತಾರಾಷ್ಟ್ರಿಯ ಸಮ್ಮೇಳನವು ’ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ದಿ ಮಿಥಿಕ್ ಸೊಸೈಟಿ, ಎಸ್.ವ್ಯಾಸ ವಿಶ್ವವಿದ್ಯಾಲಯಗಳ’ ಸಹಯೋಗದೊಂದಿಗೆ  ಯಶಸ್ವಿಯಾಗಿ ಜರುಗಿತು. ಈ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕದ  ರಾಜ್ಯಪಾಲರಾದ  ವಝುಭಾಯು ರುಡಾಭಾಯಿ ವಾಲಾ’ ಇವರು ಮಾಡಿದರು.

ಉದ್ಘಾಟನಾ ಸಂದರ್ಭದಲ್ಲಿ ಮಾತನಾಡುತ್ತಾ ’ಸಾಮಾಜಸ್ವಾಸ್ಥ್ಯಕ್ಕಾಗಿ ಯಜ್ಞದ ಕೊಡುಗೆ’ ಎಂಬ ವಿಷಯವು ಕೇವಲ ಈ ಸಂಸ್ಥೆಗಸ್ಟೇ ಸೀಮಿತವಾಗಿರದೇ ಇಡೀ ಪ್ರಪಂಚಕ್ಕೇ ಆವಶ್ಯಕವಾದ ವಿಷಯ ಎಂದು ಪ್ರತಿಪಾದಿಸಿದರು. ವೇದಗಳಿಂದ ಆರಂಭಿಸಿ ಎಲ್ಲ ಸಂಸ್ಕೃತ ವಾಙ್ಮಯಗಳೂ ಮಾನವೀಯತೆಯನ್ನು ರೂಪಿಸಲು ಅತ್ಯಾವಶ್ಯಕ ಎಂದರು. ವಿಶೇಷವಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ ’ಸರಳ ಜೀವನ ಉನ್ನತ ಚಿಂತನ’ ಎಂಬ ವಿಷಯದ ವಿಶ್ಲೇಷಣೇ ಗೈದರು. ವಿದ್ಯಾರ್ಥಿಗಳು ’ಉತ್ಕೃಷ್ಟವಾದದ್ದನ್ನು ಪಡೆಯಲು ಸಾಮಾನ್ಯವಾದ್ದನ್ನು ಬಿಡಲೇ ಬೇಕು’ ಎಂದು ಮನವರಿಕೆ ಮಾಡಿದರು. ಇತರರಿಗೆ ನೀಡಿ ತಾನು ಅನುಭವಿಸುವುದರಲ್ಲಿ ಭಾರತೀಯರಿಗೆ ಆನಂದವಿದೆ ಅನುಭವಿಸುವುದೇ ನಮ್ಮ ಸಂಸ್ಕೃತಿ ಎಂದು ನಿರೂಪಿಸಿದರು. ಸರ್ವೇ ಭವಂತು ಸುಖಿನಃ ಸಂತು ಎಂಬ ಶ್ಲೋಕದ ಭಾವವನ್ನು ಉದಾಹರಿಸಿ, ಸರ್ವೇ ಎಂಬ ಶಬ್ದದ ಅರ್ಥ ಕೇವಲ್ಲ ಹಿಂದು ಅಥವಾ ಕೇವಲ ಭಾರತೀಯರಷ್ಟೇ ಅಲ್ಲ, ಆದರೆ ಮನುಕುಲದ ಎಲ್ಲ ಸದಸ್ಯರು ಅಷ್ಟೇ ಅಲ್ಲ ಎಲ್ಲ ಚರಾಚರ ಪ್ರಪಂಚಕ್ಕೂ ಮಂಗಲವಾಗಲಿ ಎಂಬುದೇ ಈ ಶ್ಲೋಕದ ಸಂದೇಶ. ಇದೇ ಭಾರತೀಯ ಸಂಸ್ಕೃತಿಯ ಮೂಲ ಅಥವಾ ಸಾರ ಎಂಬುದನ್ನು ಪ್ರತಿಪಾದಿಸಿದರು. ಗೀತೆಯಲ್ಲಿನ ಕೃಷ್ಣನ ಮಾತು ’ಕರ್ಮಣ್ಯೇವಾಧಿಕಾರಃ ತೇ’ ಎಂಬ ಶ್ಲೋಕವನ್ನು ಉದಾಹರಿಸಿದರು. ಬ್ರಿಟೀಶ್ ಮತ್ತು ಮೊಗಲರ ಆಳ್ವಿಕೆಯ ಕಾಲದಲ್ಲಿಯೂ ಯಾವುದನ್ನು ನಾವು ಅನೂಚಾನವಾಗಿ ಪಾಲನೆಮಾಡಿಕೊಂಡು ಬಂದೆವೋ ಅಂತಹ ಸಂಸ್ಕೃತಿ ಇಂದು ಟಿ.ವಿ. ಪ್ರಭಾವದಿಂದ ನಶಿಸುತ್ತಿದೆ ಎಂದರು. ಹಿಂದಿನ ಕಾಲದಲ್ಲಿ ’ನಲಂದಾ ತಕ್ಷಶಿಲಾ ಇತ್ಯಾದಿ ಸ್ಥಾನಗಳಲ್ಲೇ ವಸ್ತುತಃ ವ್ಯಕ್ತಿಗಳು ರೂಪಿತಗೊಳ್ಳುತ್ತಿದ್ದರು ಅಂತಹ ವ್ಯವಸ್ಥೆ ಈ ಗುರುಕುಲವಾಗಲಿ’ ಎಂದರು. ನಮ್ಮ ವ್ಯಕ್ತಿತ್ವವೂ ಕುಡಾ ಕೇವಲ ಪ್ರದರ್ಶನಕ್ಕಾಗಿ ಅಲ್ಲ ಅದು ಅಂತಃಸತ್ವವರ್ಧನೆಗಾಗಿ ಎಂಬುದನ್ನು ಪ್ರತಿಪಾದಿಸಿದರು. ರಾಷ್ಟ್ರಿಯ ಸ್ವಯಂಸೇವಕ ಸಂಘದ ದ್ವಿತೀಯ ಸರಸಂಘಚಾಲಕರ ಸಂದೇಶವಾದ ’ರಾಷ್ಟ್ರಾಯ ಸ್ವಾಹಾ ರಾಷ್ಟ್ರಾಯ ಇದಂ ನ ಮಮ’ ಎಂಬ ಸಂದೇಶವನ್ನು ನೀಡಿ ’ಭಾರತ ಮಾತಾ ಕೀ ಜೈ’ ಘೋಷಣೆನ್ನು ಮಾಡಿಸಿದರು.

ಈ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಪ್ರೋ. ರಾಮಚಂದ್ರ ಭಟ್ಟ ಕೋಟೆಮನೆ ಇವರು ಯೋಗವು ಇಂದು ಚಿಕಿತ್ಸಾ ವಿಧಾನವಾಗಿ ಪರಿಣಮಿಸಿದಂತೆ ಯಜ್ಞವನ್ನೂ ಚಿಕಿತ್ಸಾ ವಿಧಾನವನ್ನಾಗಿ ರೂಪಿಸುವ ಗುರುತರವಾದ ಹೊಣೆಗಾರಿಕೆ ನಮ್ಮದಾಗಿದೆ ಎಂದು ಪ್ರತಿಪಾದಿಸಿದರು. ಜೀವನವೇ ಯಜ್ಞಮಯವಾಗಬೇಕು ಆಗಮಾತ್ರ ಈ ಕಾರ್ಯಕ್ರಮವು ಸಫಲವಾಗುವುದೆಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಏಮ್.ಕೆ.ಎಲ್.ಎನ್. ಶಾಸ್ತ್ರಿ ಅಧ್ಯಕ್ಷರು, ಮಿಥಿಕ್ ಸೊಸೈಟಿ, ಡಾ. ಆರ್. ನಾಗರತ್ನಾ ಎಸ್.ಸ್ವ್ಯಾಸ ವಿಶ್ವವಿದ್ಯಾಲಯ, ಪ್ರೋ. ಶ್ರೀನಿವಾಸ ವರಖೇಡಿ ಕುಲಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಃ ಈ ಎಲ್ಲ ಗಣ್ಯರು ವೇದಿಕೆಯನ್ನು ಅಲಂಕರಿಸಿದರು. ವಿಶೇಷವಾಗಿ ಉಲ್ಲೇಖನೀಯ ಅಂಶವೆಂದರೆ ಈ ಕಾರ್ಯಕ್ರಮದ ಮಂಗಲವು ಭಾರತೀಯವಾದ ಶುದ್ಧ ಗೋವುಗಳಿಗೆ ಗ್ರಾಸವನ್ನು ನೀಡುವುದರ ಮೂಲಕ ಸಂಪನ್ನಗೊಂಡಿತು. ಯಜ್ಞಕ್ಕೆ ಶಿಕ್ಷಣಕ್ಕೆ ಯೋಗಕ್ಕೆ ಸಂಬಂಧಿಸಿದ ಪ್ರದರ್ಶಿನಿಗಳು ಆಕರ್ಷಣೀಯಕೇಂದ್ರವಾಗಿತ್ತು. ಯಜ್ಞದಲ್ಲಿ ಉಪಯೋಗಿಸುವ ಪಾತ್ರೆಗಳು, ಸೋಮಯಾಗದ ಚಿತ್ರೀಕರಣದ ದರ್ಶನ ಇತ್ಯಾದಿಗಳು ಉಲ್ಲೇಖನೀಯ. ವೇದವಿಜ್ಞಾನಗುರುಕುಲೀಯ ಸಂಪ್ರದಾಯದಂತೆ ಶ್ರೌತ ಸ್ಮಾರ್ತ ಕರ್ಮಗಳಲ್ಲಿ ನಿಷ್ಣಾತರಾದ ನಿತ್ಯ ಅಧ್ಯಯನ-ಅಧ್ಯಾಪನಪರರಾದ ವಿದ್ವಾಂಸರಿಗೆ ’ಅಧ್ವರೀಂದ್ರ’ ಪುರಸ್ಕಾರವನ್ನು ವೇದಮೂರ್ತಿ ಯಜ್ಞಪತಿ ಭಟ್ಟ ಗೋಕರ್ಣ ಇವರಿಗೆ ಸಂದಾಯವಾಯಿತು.

ಸಮಗ್ರ ಜ್ಞಾನ ಸತ್ರದ ಪಥದರ್ಶಕ ಭಾಷಣವನ್ನು ಮೀಮಾಂಸಾ ಮತ್ತು ನ್ಯಾಯಶಾಸ್ತ್ರದಲ್ಲಿ ಪಂಡಿತರಾದ ವಿದ್ವಾನ್ ದೇವದತ್ತ ಪಾಟೀಲ ಪುಣೆ ಇವರು ನಡೆಸಿದರು. ಮೀಮಾಂಸಾ ಶಾಸ್ತ್ರವು ಯಜ್ಞನಿರ್ವಹಣೆಗೆ ಹೇಗೆ ಸಹಕರಿಸುತ್ತದೆ ಮತ್ತು ಜೈಮಿನೀಯ ಮೀಮಾಂಸಾ ಸೂತ್ರಗಳಲ್ಲಿ ೧೨ ಅಧ್ಯಾಯಗಳಲ್ಲಿರುವ ಸಾರವನ್ನು ನಿರೂಪಿಸಿದರು.

ಉದ್ಘಾಟನೆ ಮತ್ತು ಸಮಾರೋಪಗಳನ್ನು ಹೊರತುಪಡಿಸಿ ೯ ಅವಧಿಗಳು ಸಂಪನ್ನಗೊಂಡವು. ಸುಮಾರು ೩೫ ವಿದ್ವಾಂಸರು ತಮ್ಮ ಶೋಧಪ್ರಬಂಧವನ್ನು ಮಂಡಿಸಿದರು. ಎಲ್ಲ ಶೋಧಪ್ರಬಂಧಗಳೂ ಅತ್ಯಂತ ವೈಜ್ಞಾನಿಕವಾಗಿಯೂ ಆಕರ್ಷಕವಾಗಿಯೂ ಇತ್ತು ಎಂಬುದು ಉಲ್ಲೇಖನೀಯ. ಎರಡನೇ ದಿನ ದಿನಾಂಕ ೧/೩/೨೦೧೫ ರಂದು ಪ್ರಧಾನ ವಕ್ತಾರರಾಗಿ ಆಯ್.ಆಯ್.ಟಿ ಮುಂಬೈ ನಲ್ಲಿ ಉಪನ್ಯಾಸಕರಾದ ಶ್ರೀ ಕೆ. ರಾಮಸುಬ್ರಹ್ಮಣ್ಯ ಇವರು ಯಜ್ಞದ ಪರಿಕಲ್ಪನೆಯನ್ನು ಆರ್ಷ ಮತ್ತು ಆಧುನಿಕ ದೃಷ್ಟಿಯಿಂದ ಪ್ರತಿಪಾದಿಸಿದರು. ಸಮೂಹ ಚರ್ಚೆಯಲ್ಲಿ (panel discussion) ಶುದ್ಧ ಶ್ರೌತ ಸ್ಮಾರ್ತ ಕರ್ಮಗಳ ಸ್ವರೂಪ, ಆಯುರ್ವೇದ, ಜ್ಯೋತಿಷ್ಯ, ಮತ್ತು ವಿಜ್ಞಾನದ ಸ್ವರೂಪವನ್ನು ಅರಿತ ವಿದ್ವಾಂಸರು ಸೇರಿ, ಭಾಗಗ್ರಹಣೆ ಮಾಡಿದ ಜಿಜ್ಞಾಸುಗಳ ಪ್ರಶ್ನೆಗಳನ್ನು ಉತ್ತರಿಸಿದರು.

ಎರಡನೆ ದಿನ ೧/೩/೨೦೧೫ ರಂದು ಭಾನುವಾರ ಬೆಳಿಗ್ಗೆ ಸೋಮಯಾಜಿಗಳಾದ ಶ್ರೀ ನರಸಿಂಹ ಶಿವರಾಮ ಭಟ್ಟ ಇವರು ಪುನರ್ವಸೂ ನಕ್ಷತ್ರೇಷ್ಟಿಯನ್ನು ಮಾಡಿದರು. ಸಮ್ಮೇಳನದಲ್ಲಿ ಭಾಗವಹಿಸಿದ ಹೆಚ್ಚಿನ ಪ್ರತಿಭಾಗಿಗಳಿಗೆ ಇದು ವಿಶೇಷವಾಗಿತ್ತು. ಶ್ರೌತಕರ್ಮದ ಸ್ವರೂಪದ ಪ್ರಾತ್ಯಕ್ಷಿಕ ಅನುಭವವಾಯಿತು. ಯಜಮಾನ ದಂಪತಿಗಳು, ಋತ್ವಿಜರು ಮತ್ತು ಕೆಲ ಭಾಗಗ್ರಹೀತೃಗಳ ಆಕಲನವು ಉಆಗಿ ಯಂತ್ರಗಳಿಂದ ವೈಜ್ಞಾನಿಕವಾಗಿ ನಡೆಯಿತು. ಯಜ್ಞಕ್ಕಿಂತ ಮೊದಲು ತೆಗೆದುಕೊಂಡ ಆಕಲನಕ್ಕಿಂತ  ಯಜ್ಞದ ನಂತರ ಪಡೆದ ಆಕಲನವು ಉತ್ತಮವಾಗಿತ್ತೆಂಬುದು ಇಲ್ಲಿ ಉಲ್ಲೇಖನೀಯ.

ಮೂರನೇ ದಿನ ೨/೩/೨೦೧೫ ರಂದು ಬೆಳಿಗ್ಗೆ ಸ್ಮಾರ್ತಕರ್ಮವಾದ ಧನ್ವಂತರೀ ಹೋಮವು ಯಥಾ ವಿಧಿ ನಡೆಯಿತು. ಈ ಯಾಗಕ್ಕಿಂತ ಮೊದಲೂ ಕೂಡಾ ಋತ್ವಿಜರ ಆಕಲನವನ್ನು ಮಾಡಲಾಯಿತು. ನಾಲ್ಕು ದೇಶಗಳಿಂದ, ೯ ರಾಜ್ಯಗಳಿಂದ, ೪೦ ಸಂಸ್ಥೆಗಳಿಂದ ಸುಮಾರು ೧೫೦ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಪ್ರೋ ಕೃ. ನರಹರಿ, ಸದಸ್ಯರು ಜನಸೇವಾ ವಿಶ್ವಸ್ತ ಮಂಡಲಿ ಪ್ರೋ. ರಾಮಚಂದ್ರ ಜಿ ಭಟ್ಟ, ನಿದೇಶಕರು ವೇದವಿಜ್ಞಾನ ಶೋಧಸಂಸ್ಥಾನಮ್, ಪ್ರೋ. ಎಮ್. ಕೆ. ಶ್ರೀಧರ ಕುಲಸಚಿವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ , ಪ್ರೋ. ಸುಧೀರ ದೇಶಪಾಂಡೆ ಕುಲಸಚಿವರು ಎಸ್. ವ್ಯಾಸ ವಿಶ್ವವಿದ್ಯಾಲಯ, ಶ್ರೀ ವಿ. ನಾಗರಾಜ ಗೌರವ ನಿದೇಶಕರು ದಿ ಮಿಥಿಕ್ ಸೊಸೈಟಿ ಇವರು ವೇದಿಕೆಯಮೇಲಿದ್ದ ಹಿರಿಯರು. ಈ ಎಲ್ಲ ಹಿರಿಯರು ಯಜ್ಞದ ವೈಜ್ಞಾನಿಕ ಮಹತ್ವವನ್ನು ಅರಿಯಬೇಕಾದ ಔಚಿತ್ಯವನ್ನು ಅರುಹಿದರು. ಸಮಾರೋಪಕಾರ್ಯಕ್ರಮದಲ್ಲಿ ಪ್ರೋ. ರಾಮಚಂದ್ರ ಭಟ್ಟ ಇವರು ಬರೆದ ಸಂಸ್ಕೃತ ಸಂಸ್ಕೃತಿಗಾಗಿ ಸಂಕಲ್ಪ ಎಂಬ ಲಘು ಪುಸ್ತಕದ ಲೋಕಾರ್ಪಣವೂ ನಡೆಯಿತು. ಹೀಗೆ ಮೂರುದಿನಗಳ ಕಾಲ ಈ ಜ್ಞಾನಸತ್ರವು ಕಾಲೋಚಿತವೂ ಆಕರ್ಷಕವೂ ಮುಂದೆ ಮಾರ್ಗದರ್ಶಕವೂ ಆಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.