ಬೆಂಗಳೂರು, ಜು 16: ಜೆಡಿಎಸ್ ಪಕ್ಷಕ್ಕೆ ನಿಯತ್ತಿನಿಂದ ಕೆಲಸ ಮಾಡುವವರು ಬೇಕಾಗಿಲ್ಲ. ಕುಮಾರಸ್ವಾಮಿಗೆ ನನ್ನ ಏಳಿಗೆ ನೋಡಿ ಸಹಿಸಲಾಗುತ್ತಿಲ್ಲ. ಸುಮಾರು ಎಂಟು ಸಾವಿರ ಹಿಂದೂಗಳಿಗೆ ಮುಸ್ಲಿಂ ಟೋಪಿ ಹಾಕಿ ಸಮಾವೇಶಕ್ಕೆ ಕರೆತರಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ (ಜು 15) ನಡೆದಜಾತ್ಯಾತೀತ ಜನತಾದಳದ ಮುಸ್ಲಿಂ ಸಮಾವೇಶದ ಮುನ್ನ ಮಾಜಿ ಪ್ರಧಾನಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ದೇವೇಗೌಡ ಅವರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಸಲ್ಲಿಸಿ ಅಜೀಂ ಮಾತನಾಡುತ್ತಿದ್ದರು.  ಜೆಡಿಎಸ್ ಈ ಆಯೋಜಿಸಿದ್ದ ಮುಸ್ಲಿಂ ವಿಶೇಷ ಸಮಾವೇಶದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಲಕ್ಷಾಂತರ ಮಂದಿ ಭಾಗವಹಿಸಿದ್ದರು.

Source: http://kannada.oneindia.in/news/2012/07/16/districts-abdul-ajeem-resigns-jds-primary-membership-066626.html

Leave a Reply

Your email address will not be published.

This site uses Akismet to reduce spam. Learn how your comment data is processed.