ಕಾರವಾರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರವಾರ ಜಿಲ್ಲಾ ಕಾರ್ಯಾಲಯ ‘ಮಾಧವ ಕುಂಜ’ ಶುಕ್ರವಾರ ಲೋಕಾರ್ಪಣೆಗೊಂಡಿತು. ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಮಂಗೇಶ ಭೇಂಡೆ ಸಂಘ ಕಾರ್ಯದ ಮಹತ್ವ ಮತ್ತು ಉದ್ದೇಶದ ಕುರಿತು ತಿಳಿಸಿದರು.

ನಂತರ ನಡೆದ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಹಾಲಿ ಮತ್ತು ಮಾಜಿ ಪ್ರಚಾರಕರಿಗೆ ಗೌರವ ಸಲ್ಲಿಸಲಾಯಿತು. ಸಂಜೆ ಕಡತೋಕ ಶ್ರೀಪಾದ ಹೆಗಡೆ ತಂಡದಿಂದ ಗೀತಾ ರಾಮಾಯಣ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಪ್ರಾಂತ ಸಹ ಸಂಘಚಾಲಕರು ಅರವಿಂದ ರಾವ್ ದೇಶಪಾಂಡೆ, ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ, ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕರಾದ ನರೇಂದ್ರ, ವಿಭಾಗ ಸಂಘಚಾಲಕರಾದ ವೆಂಕಟರಮಣ ಹೆಗಡೆ, ಜಿಲ್ಲಾ ಸಂಘಚಾಲಕರಾದ ಹನುಮಂತ ಶಾನುಭಾಗ, ಸಿರ್ಸಿ ವಿಭಾಗ ಪ್ರಚಾರಕರಾದ ಗಣೇಶ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಸಂಘದ ಸ್ವಯಂಸೇವಕರು, ಹಿತೈಷಿಗಳು ಮತ್ತು ಮಾತಾ ಭಗಿನಿಯರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

