ಈ ವರ್ಷದ ಜೂನ್‌ನಿಂದ ಕಾಶ್ಮೀರದಲ್ಲಿ ಹೊಸ ರೀತಿಯ ಪ್ರತಿಭಟನೆಗಳು ಪ್ರಾರಂಭವಾಗಿವೆ. ಭಯೋತ್ಪಾದಕ ಸಂಘಟನೆಗಳ ಕುಯುಕ್ತಿಯಿಂದ ಸಾಮಾನ್ಯ ಜನರು (ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ) ಮಿಲಿಟರಿ ಮತ್ತು ಪೊಲೀಸರ ಮೇಲೆ ಕಲ್ಲೆಸೆದು ಗಲಭೆ ನಡೆಸುತ್ತಿದ್ದಾರೆ. ಸೈನ್ಯವು ಕಾಶ್ಮೀರದಿಂದ ಹೊರಗೆ ಹೋಗುವಂತೆ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡು ತಿಂಗಳ ಕಾಲ ಸತತವಾಗಿ ಕರ್ಫ಼್ಯೂ ಮುಂದುವರೆಯುವಂತಾಗಿದೆ. ಹೀಗಿದ್ದೂ ಜನರು ಮನೆಗಳಿಂದ ಹೊರಬಂದು ಕರ್ಫ಼್ಯೂ ಉಲ್ಲಂಘಿಸಿ ಕಲ್ಲೆಸೆತ ನಡೆಸಿದ ಘಟನೆಗಳೂ ವರದಿಯಾಗಿದೆ. ಜೂನ್‌ನಿಂದ ಆಗಸ್ಟ್‌ವರೆಗೆ ಸುಮಾರು ೬೪ ಜನ ಅಸುನೀಗಿದ್ದಾರೆ. ಕಲ್ಲೆಸತದಲ್ಲಿ ಪೊಲೀಸರಿಗೇ ಹೆಚ್ಚು ಹಾನಿಯಾಗಿರುವುದು ವರದಿಯಾಗಿದೆ.

ಕಾಶ್ಮೀರ ಭಾರತದೊಡನೆ ಉಳಿದಿರುವುದು ನಮ್ಮ ಸೈನ್ಯದ ಕಾರಣದಿಂದ ಮಾತ್ರ. ಹೀಗಾಗಿ ಭಾರತದ ಸೈನ್ಯವನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಬೇಕೆಂಬುದು ಜಿಹಾದಿಗಳ ಹಂಚಿಕೆ. ಸೈನ್ಯ ಅಲ್ಲಿಂದ ಕಾಲ್ತೆಗೆದ ಕೂಡಲೇ ಕಾಶ್ಮೀರ ಭಾರತದಿಂದ ಪ್ರತ್ಯೇಕವಾಗುತ್ತದೆ ಎಂಬುದು ಅವರ ಯೋಚನೆ. ಹಾಗಂತ ಕಾಶ್ಮೀರದಲ್ಲಿರುವ ಪ್ರತಿಯೊಬ್ಬರೂ ಪ್ರತ್ಯೇಕತಾವಾದಿಗಳೆಂದು ತಿಳಿಯುವುದು ತಪ್ಪಾಗುತ್ತದೆ. ಅಲ್ಲಿರುವ ಬಹುಸಂಖ್ಯಾತ ಜನ ಭಾರತದೊಡನೆ ಇರಲು ಇಚ್ಚೆ ಪಡುವವರೇ. ಆದರೆ, ಅವರ ಧ್ವನಿಗೆ ಬೆಲೆ ಸಿಗುತ್ತಿಲ್ಲ. ಸರಕಾರ ಇಂತಹವರ ಭಾವನೆಗಳನ್ನೂ ಗುರುತಿಸಿ, ಮಾತುಕತೆಯ ಪ್ರಕ್ರಿಯೆಯಲ್ಲಿ ಅವರನ್ನೂ ತೊಡಗಿಸುವುದರಿಂದ ದೇಶದ ಸಮಗ್ರತೆಯನ್ನು ಉಳಿಸಿಕೊಳ್ಳಲು ನೆರವಾದೀತು.

ಕಾಶ್ಮೀರಕ್ಕೆ ವಿಶೇಷ ಸ್ಥಾನ

ಕಾಶ್ಮೀರಿಗಳು ಪ್ರತ್ಯೇಕತಾ ಮನೋಭಾವ ಬೆಳೆಸಿಕೊಂಡಿರುವುದಕ್ಕೆ ಪ್ರಮುಖ ಕಾರಣ ಸಂವಿಧಾನದ 370ನೇ ವಿಧಿ. ದೇಶದ ಉಳಿದೆಡೆಯಿರುವ ಕಾನೂನಿನ ಕೆಲವು ಅಂಶಗಳು ಈ ವಿಧಿಯ ಪ್ರಕಾರ ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ. ಪ್ರತ್ಯೇಕತಾವಾದ ಕಡಿಮೆಯಾಗ ಮತ್ತು ಕಾಶ್ಮೀರದ ಸಮಸ್ಯೆ ಪರಿಹಾರವಾಗಲು ೩೭ಂನೇ ವಿಧಿಯನ್ನು ರದ್ದುಗೊಳಿಸಬೇಕು. ಈಗಾಗಲೇ ಕಾಶ್ಮೀರ ಕಣಿವೆ ಪ್ರದೇಶದಿಂದ ಹಿಂದುಗಳೆಲ್ಲರನ್ನೂ ಓಡಿಸಲಾಗಿದೆ. ಹಾಗೆ ಹೊರಹೋಗಿರುವ ಹಿಂದುಗಳು ಅಲ್ಲಿಗೆ ವಾಪಸ್ಸಾಗಲು ಹೆದರುತ್ತಾರೆ. ಈಗಿನ ಮುಸಲ್ಮಾನ ಬಾಹುಳ್ಯವೇ ಮುಂದುವರೆದರೆ ಸಮಸ್ಯೆ ಮತ್ತಷ್ಟು ಬೆಳೆಯುತ್ತದೆ. ಇದಕ್ಕೆ ಪರಿಹಾರವೆಂದರೆ, ನಿವೃತ್ತ ಸೈನಿಕರನ್ನು ಕಾಶ್ಮೀರದಲ್ಲಿ ನೆಲೆಸಲು ಅನುವು ಮಾಡಿಕೊಡುವುದು. ಜೊತೆಗೆ ಹೊರದೂಡಲ್ಪಟ್ಟ ಕಾಶ್ಮೀರಿ ಹಿಂದುಗಳು ಪುನ: ಅಲ್ಲಿ ನೆಲೆಸಲು ಅವಶ್ಯಕವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು. ಈಗಿರುವ 370ನೇ ವಿಧಿಯನ್ನು ರದ್ದುಗೊಳಿಸುವದರಿಂದ ಮಾತ್ರ ಇದು ಸಾಧ್ಯವಾಗುತ್ತದೆ.

ಸ್ವಾಯುತ್ತತೆಗೆ ಆಗ್ರಹ
೧೯೯೩ರಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಲೋಕಸಭೆ ಸರ್ವಾನುಮತದ ನಿರ್ಣಯ ಮಾಡಿತ್ತು. ಕಾಶ್ಮೀರಕ್ಕೆ ಸ್ವಾಯತ್ತತೆ ನೀಡುವ ಮಾತುಗಳು, ಆ ನಿರ್ಣಯಕ್ಕೆ ವಿರುದ್ಧವಲ್ಲವೆ? ಆಗಿನ ಸರಕಾರದಲ್ಲಿ ಈಗಿನ ಪ್ರಧಾನಿಗಳಾದ ಡಾ||ಮನಮೋಹನ ಸಿಂಗ್ ಅವರೇ ವಿತ್ತ ಮಂತ್ರಿಗಳಾಗಿದ್ದರು!
ಸ್ವಾಯತ್ತ ಪ್ರದೇಶ ಎಂದಾದರೆ ಅಲ್ಲಿ ಪ್ರತ್ಯೇಕ ಆಡಳಿತ ಸ್ಥಾಪಿತವಾಗುತ್ತದೆ. ಈ ವ್ಯವಸ್ಥೆ ೧೯೨೫ ರಿಂದ೧೯೬೫ ರವರೆಗೆ ಚಾಲ್ತಿಯಲ್ಲಿತ್ತು.  ಇದನ್ನೇ ವಿರೋಧಿಸಿಯೇ ಡಾ. ಶ್ಯಾಮಾಪ್ರಸಾದ ಮುಖರ್ಜಿ ತಮ್ಮ  ಜೀವದ ಬಲಿದಾನ ಮಾಡಿದ್ದು. ಮತ್ತಿಂದು ಅದೇ ಪರಿಸ್ಥಿತಿ. ಒಂದೊಮ್ಮೆ ಕಾಶ್ಮೀರ ಸ್ವಾಯತ್ತ ಪ್ರದೇಶವಾದರೆ ಅಲ್ಲಿ ಹಣಕಾಸು, ರಕ್ಷಣೆ, ವಿದೇಶಾಂಗ ಮತ್ತು ದೂರಸಂಪರ್ಕಕ್ಕೆ ಸಂಬಂಧಪಟ್ಟ ಕಾನೂನುಗಳು ಬಿಟ್ಟರೆ ಭಾರತದ ಬೇರೆ ಯಾವ ಕಾನೂನುಗಳು ಆ ಪ್ರದೇಶಕ್ಕೆ ಅನ್ವಯವಾಗುವುದಿಲ್ಲ. ಈಗಾಗಲೇ ಸಂವಿಧಾನ ೩೭ಂ ವಿಧಿಯ ಅನ್ವಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಆಗಬಾರದ ಅನುಹಾತ ಸಾಕಷ್ಟು ಆಗಿಹೋಗಿದೆ. ಆಲ್ಲಿಗೆ ಸಂಬಂಧಪಟ್ಟ ಯಾವುದೇ ಕಾನೂನು ರೂಪಿಸುವಾಗ ಅಲ್ಲಿನ ವಿಧಾನಸಭೆಯ ಅನುಮೋದನೆ ಅಗತ್ಯ ಭಾರತದ ರಾಷ್ಟ್ರಪತಿ ಸೇರಿದಂತೆ ದೇಶದ ಇತರ ಭಾಗದ ಯಾವುದೇ ಜನರು ಅಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆ ರಾಜ್ಯದ ಮಹಿಳೆಯೊಬ್ಬಳು ಬೇರೆ ರಾಜ್ಯದವನನ್ನು ಮದುವೆಯಾದಲ್ಲಿ ಆಕೆಗೂ ಅಲ್ಲಿ ಆಸ್ತಿ ಖರೀದಿಯ ಅವಕಾಶವಿಲ್ಲ. ಇದು ನಿರಾಶ್ರಿತ ಕಾಶ್ಮೀರಿ ಪಂಡಿತರ ಪಾಲಿಗೆ ಮಾರಕವಾಗಿ ಪರಿಣಮಿಸಲಿದೆ.

ಕಾಶ್ಮೀರಕ್ಕೆ ಸ್ವಾಯತ್ತತೆ ನೀಡಿದರೆ, ಮುಂದೆ ಉಳಿದ ರಾಜ್ಯಗಳೂ ಸ್ವಾಯತ್ತತೆಯ ಕೂಗನ್ನೆಬ್ಬಿಸುತ್ತವೆ. ಹೀಗಾಗಿ ಇದು ಭಾರತದ ಸಮಗ್ರತೆಗೇ ಸಂಚಕಾರ ತರುತ್ತದೆ.
ಪ್ರತ್ಯೇಕತೆಯ ಬೇಡಿಕೆಯನ್ನು ಮುಂದಿಟ್ಟಿರುವುದು ಕಾಶ್ಮೀರದ ಕೆಲವೇ ಮುಸಲ್ಮಾನರು. ಹೀಗಾಗಿ, ಪ್ರತ್ಯೇಕತೆಗೆ ಇಡೀ ಜಮ್ಮು-ಕಾಶ್ಮೀರ ರಾಜ್ಯದ ಬೆಂಬಲವಿದೆಯೆಂದು ತಿಳಿಯುವುದು ಸರಿಯಲ್ಲ. ಜಮ್ಮು ಕಾಶ್ಮೀರ ಪ್ರದೇಶ ಎಂದ ತಕ್ಷಣ  ಕೇವಲ ಕಾಶ್ಮೀರ ಕಣಿವೆ ಮಾತ್ರವಲ್ಲ. ಅದರಲ್ಲಿ ಹಿಂದು ಹಾಗೂ ಸಿಖ್ಖರ ಬಾಹುಳ್ಯವಿರುವ ಜಮ್ಮು ಪ್ರದೇಶ ಹಾಗೂ ಬೌದ್ಧ ಮತಾವಲಂಬಿಗಳ ಬಾಹುಳ್ಯವಿರುವ ಲಡಾಖ್ ಪ್ರದೇಶ. ಆ ಪ್ರದೇಶಗಳ ಜನರ ಭಾವನೆಗಳನ್ನು ತಿಳಿಯುವ ಪ್ರಯತ್ನ ಎಂದಾದರೂ ನಡೆದಿದೆಯೇ?
ಈ ಬೇಡಿಕೆಯ ಹಿಂದೆ ಅಮೆರಿಕದ ಹಿತಾಸಕ್ತಿ ಕೆಲಸ ಮಾಡುತ್ತಿರುವುದು ಗೋಚರವಾಗುತ್ತದೆ. ಯು.ಎನ್.ಓ ಮೂಲಕ ಅಥವಾ ಇನ್ನಾವುದಾದರೂ ರೀತಿಯಲ್ಲಿ ಈ ಭಾಗದಲ್ಲಿ ತನ್ನ ನೆಲೆಯನ್ನು ಸ್ಥಾಪಿಸುವುದು ಅದರ ಉದ್ದೇಶ. ಇದೇ ರೀತಿಯ ಉದ್ದೇಶಗಳು ಚೀನಾಕ್ಕೂ ಇದೆ. ಎಂದೇ ಈ ಸಮಸ್ಯೆ ಪರಿಹಾರ ಆಗದಂತೆ ಅಮೆರಿಕ ಮತ್ತು ಚೀನಾಗಳು ಪ್ರಯತ್ನ ನಡೆಸಿವೆ. ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನಗಳಲ್ಲಿ ಚೀನಾ ತನ್ನ ಸೈನ್ಯವನ್ನು ಜಮಾವಣೆ ಮಾಡಿರುವ ವರದಿಯು ಇದನ್ನೇ ದೃಢೀಕರಿಸುತ್ತದೆ.
ಸ್ವಾಯತ್ತ ಪ್ರದೇಶ ಎಂದಾದರೆ ಅಲ್ಲಿ ಪ್ರತ್ಯೇಕ ಆಡಳಿತ ಸ್ಥಾಪಿತವಾಗುತ್ತದೆ. ಈ ವ್ಯವಸ್ಥೆ ೧೯೨೫ ರಿಂದ೧೯೬೫ ರವರೆಗೆ ಚಾಲ್ತಿಯಲ್ಲಿತ್ತು.  ಇದನ್ನೇ ವಿರೋಧಿಸಿಯೇ ಡಾ. ಶ್ಯಾಮಾಪ್ರಸಾದ ಮುಖರ್ಜಿ ತಮ್ಮ  ಜೀವದ ಬಲಿದಾನ ಮಾಡಿದ್ದು. ಮತ್ತಿಂದು ಅದೇ ಪರಿಸ್ಥಿತಿ. ಒಂದೊಮ್ಮೆ ಕಾಶ್ಮೀರ ಸ್ವಾಯತ್ತ ಪ್ರದೇಶವಾದರೆ ಅಲ್ಲಿ ಹಣಕಾಸು, ರಕ್ಷಣೆ, ವಿದೇಶಾಂಗ ಮತ್ತು ದೂರಸಂಪರ್ಕಕ್ಕೆ ಸಂಬಂಧಪಟ್ಟ ಕಾನೂನುಗಳು ಬಿಟ್ಟರೆ ಭಾರತದ ಬೇರೆ ಯಾವ ಕಾನೂನುಗಳು ಆ ಪ್ರದೇಶಕ್ಕೆ ಅನ್ವಯವಾಗುವುದಿಲ್ಲ. ಈಗಾಗಲೇ ಸಂವಿಧಾನ ೩೭ಂ ವಿಧಿಯ ಅನ್ವಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಆಗಬಾರದ ಅನುಹಾತ ಸಾಕಷ್ಟು ಆಗಿಹೋಗಿದೆ. ಆಲ್ಲಿಗೆ ಸಂಬಂಧಪಟ್ಟ ಯಾವುದೇ ಕಾನೂನು ರೂಪಿಸುವಾಗ ಅಲ್ಲಿನ ವಿಧಾನಸಭೆಯ ಅನುಮೋದನೆ ಅಗತ್ಯ ಭಾರತದ ರಾಷ್ಟ್ರಪತಿ ಸೇರಿದಂತೆ ದೇಶದ ಇತರ ಭಾಗದ ಯಾವುದೇ ಜನರು ಅಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆ ರಾಜ್ಯದ ಮಹಿಳೆಯೊಬ್ಬಳು ಬೇರೆ ರಾಜ್ಯದವನನ್ನು ಮದುವೆಯಾದಲ್ಲಿ ಆಕೆಗೂ ಅಲ್ಲಿ ಆಸ್ತಿ ಖರೀದಿಯ ಅವಕಾಶವಿಲ್ಲ. ಇದು ನಿರಾಶ್ರಿತ ಕಾಶ್ಮೀರಿ ಪಂಡಿತರ ಪಾಲಿಗೆ ಮಾರಕವಾಗಿ ಪರಿಣಮಿಸಲಿದೆ.

ಕಣಿವೆಯಲ್ಲಿನ ಹಿಂದುಗಳು ಹಾಗು ಸಿಖ್ಖರನ್ನು  ಹಿಂಸೆಯ ತಾಂಡವ ರೂಪದಿಂದ ಹೊರದಬ್ಬಿದ್ದ ಧರ್ಮಾಂಧರು ಈಗ ಲಡಾಖ್ ಪ್ರದೇಶದಲ್ಲಿ ಹಿಂಸೆಯ ಮೂಲಕ ಮತಾಂತರಕ್ಕೆ ಕೈಹಾಕಿದ್ದಾರೆ. ಅಲ್ಲಿ ಬೌದ್ಧರ ಅದರಲ್ಲೂ ವಿಶೇಷವಾಗಿ ಯುವತಿಯರ ಮತಾಂತರ ಅವ್ಯಾಹತವಾಗಿ ನಡೆದಿದೆ. ಅವರ ಭಾವನೆಗಳನ್ನು ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಕೇಂದ್ರ ಎಂದಾದರೂ ಮಾಡಿದೆಯಾ? ೩ಂಂ ರೂಪಾಯಿಗೆ ಕಲ್ಲು ಹೊಡೆಯುವವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂಬ ಪಟ್ಟಿ ನೀಡಿ ಅವರ ಸಮಸ್ಯೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂದು ಸರ್ಕಾರಕ್ಕೆ ಉಪದೇಶ ನೀಡುವ ದೇಶದ ಬೌದ್ಧಿಕ ಆತಂಕವಾದಿಗಳು ಹಿಂದುಗಳು ಸಿಖ್ಖರು ಹಾಗೂ ಬೌದ್ಧರು ಅನುಭವಿಸುತ್ತಿರುವ ಯಾತನೆಗಳ ಬಗ್ಗೆ ಎಂದಾದರೂ ದ್ವನಿ ಎತ್ತಿದಾರೆಯೇ? ಈ ಹಿಂದೆ ಕೆಲವರು ಜಮ್ಮು ಕಾಶ್ಮೀರವನ್ನು ಮೂರು ಭಾಗಗಳಲ್ಲಿ ಅಂದರೆ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳಾಗಿ ವಿಂಗಡಿಸಬೇಕೆಂದು ಸಲಹೆ ನೀಡಿದಾಗ ಅದು ಈ ದೇಶದ ಬುದ್ದಿಜೀವಿಗಳಿಗೆ, ಡೋಂಗಿ ಸೆಕ್ಯೂಲರವಾದಿಗಳಿಗೆ ಭಾರಿ ದೊಡ್ದ ದೇಶದ್ರೋಹಿ ಚೆಂತನೆಯಂತೆ ಕಂಡಿತು. ಆದರೆ ಕಾಶ್ಮೀರದ ಇಂದಿನ ಪರಿಸ್ಥಿತಿ ನೋಡಿದಾಗ ಅದು ಸರಿಯಾದ ಮಾರ್ಗವಾಗಿತ್ತು  ಎಂದೆನಿಸದೇ ಇರದು.

ಧರ್ಮಾಂಧತೆ ಮತ್ತು ಸ್ವಾರ್ಥ ರಾಜಕಾರಣ
ಕಾಶ್ಮೀರದ ಇಂದಿನ ಸ್ಥಿತಿ ನೋಡಿದರೆ ಎರಡು ವಿಷಯಗಳು ಎದ್ದು ಕಾಣುತ್ತವೆ ಮೊದಲನೆಯದಾಗಿ ಧರ್ಮಾಂಧತೆಯ ಪರಿಣಾಮಗಳು ಯಾವ ಮಟ್ಟಕ್ಕೆ ಇರುತ್ತವೆ ಎಂಬುದು ಮತ್ತು ಸ್ವಯಂಕೃತ ಅಪರಾಧ ಹಾಗೂ ಸ್ವಾರ್ಥದ ಪರಿಣಾಮಗಳು. ಭಾರತದಲ್ಲಿ ಅಶಾಂತಿಯ ವಾತಾವರಣವನ್ನುಂಟು ಮಾಡಾಲು ಪಾಕಿಸ್ತಾನ ಹುಟ್ಟಿನಿಂದಲೂ ಪ್ರಯತ್ನಶೀಲವಾಗಿದೆ. ಇದಕ್ಕೆ ಅಂತರಾಷ್ಟ್ರೀಯ ಜಿಹಾದಿ ಶಕ್ತಿಗಳ ಬೆಂಬಲ ಕೂಡ ಮುಕ್ತವಾಗಿ ದೊರೆಯುತ್ತಿದೆ. ಪಾಕಿಸ್ತಾನ ಕಂಡು ಕೊಂಡ ಹೊಸ ರೀತಿಯ ಭಯೋತ್ಪಾದನೆಯೇ ಪ್ರತಿಭಟನಾತ್ಮಕ ಭಯೋತ್ಪಾದನೆ.(ಎಜಿಟೇಶನಲ್ ಟೆರರಿಸಂ). ಕಲ್ಲು ತೂರಾಟ ಇದರ ಒಂದು ಅಂಗ. ಕಳೆದ ವಿಧಾನಸಭಾ ಚುನಾವಣೇಯ ಸಂದರ್ಭದಲ್ಲಿ ಕಾಶ್ಮೀರದ ಜನತೆ ಪ್ರತ್ಯೇಕತಾವಾದಿಗಳ ಬೆದರಿಕೆಗೆ ಜಗ್ಗದೇ ಬಗ್ಗದೇ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸರ್ಕಾರದ ರಚನೆಯ ಮೂಲಕ ತಥಾಕಥಿತ ಸ್ವಾತಂತ್ರ್ಯ ಹೋರಾಟಗಾರರಿಗೆ ತಕ್ಕ ಉತ್ತರವನ್ನೇ ನೀಡಿದ್ದವು. ಭಾರತೀಯ ಯ ಸೇನೆಯ ಚಾಣಕ್ಷತನದ ಕಾರ್ಯವೈಖರಿಯಿಂದ  ಗಡಿಯಾಚೆಯಿಂದ ಅಕ್ರಮ ನುಸುಳುವಿಕೆ ಕೂಡ ತಗ್ಗಿತ್ತು. ರಾಜ್ಯದ ಆರ್ಥಿಕತೆಯ ಜೀವನಾಡಿಯಾಗಿರುವ ಪ್ರವಾಸೋದ್ಯಮ ಚಿಗುರತೊಡಗಿತ್ತು. ಈ ಎಲ್ಲಾ ಬೆಳವಣೆಗೆಗಳಿಂದ ಪ್ರತ್ಯೇಕತಾವಾದಿಗಳು ಹಾಗು ಗಡಿಯಾಚೆಗಿನ ಅವರ ನಾಯಕರು ಅಕ್ಷರಶಃ ಕೆಂಗೆಟ್ಟು ಹೋದರು. ಅದಕ್ಕೆ ಮತ್ತೆ ಜನರನ್ನು ಭಾವನಾತ್ಮಕವಾಗಿ ಉದ್ರೇಕಗೊಳಿಸುವ ಕಾರ್ಯಕ್ಕೆ  ಬಲೆಯನ್ನು ಬೀಸತೊಡಗಿದರು. ಇದು ಸುಲಭವೂ ಕೂಡ ಆಗಿತ್ತು. ಧರ್ಮದ ಹೆಸರಿನಲ್ಲಿ ಕೆಲ ಜನರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನ ಸೇರಿಸಿ ಅವರಿಗೆ ಸೇನಾ ಪಡೆ ಸೇರಿದಂತೆ ಇತರ ಸುರಕ್ಷಾಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲು ಸೂಚಿಸುವುದು. ಇನ್ನೊಂದೆಡೆ ಸರ್ಕಾರದ ವಿರುದ್ದ ಪ್ರತಿಬಟನೆಯ ಹೆಸರಿನಲ್ಲಿ ಜನರನ್ನು ಒಂದೆಡೆ ಸೇರಿಸುವುದು. ಜನರನ್ನು ಹಾಗೂ ಕಲ್ಲು ತೂರಾಟಗಾರರನ್ನು  ಸೇರಿಸಲು ಆಧುನಿಕ ತಂತ್ರಜ್ಞಾನದ ಸಾಧನಗಳಾದ ಟ್ವೀಟರ್, ಫೇಸ್ ಬುಕ್, ಎಸ್ ಎಮ್ ಎಸ್ ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ. ಪ್ರತಿಭಟನೆಗಾಗಿ  ಸೇರಿದ ಜನರ ಮಧ್ಯಯಿಂದ ಕಲ್ಲುತೂರಾಟದ ತಂಡ ಕಲ್ಲು ತೂರಾಟ ಪ್ರಾರಂಭಿಸುತ್ತದೆ. ಇದನ್ನೇ ಇಡೀ ಗುಂಪು ಅಂಧಾನುಕರಣೆ ಮಾಡುತ್ತದೆ.  ನೋಡುತ್ತಿದಂತೆಯೇ ಪರಿಸ್ಥಿತಿ ಬಿಗಾಡಿಸಿ ಗೋಲಿಬಾರ ಆಗುತ್ತದೆ. ಮುಗ್ದ ಜನರ ಹೆಣ ಬೀಳುತ್ತದೆ. ಕಲ್ಲುತೂರಾಟ ನಡೆಸಿದ ಬಗ್ಗೆ ಪುರಾವೆ ನೀಡಿದ ಮೇಲೆ ಆ ಕಲ್ಲು ತೂರಾಟ ಮಾಡಿದವರಿಗೆ ೩ಂಂ ರಿಂದ ೪ಂಂ ರೂಪಾಯಿ ಸಂದಾಯವಾಗುತ್ತದೆ. ಇದೊಂದು ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ. ಇದರ ಉದ್ದೇಶ ಸ್ಪಷ್ಟವಾಗಿಯೇ ಇದೆ. ಇಲ್ಲಿ ಇರುವುದು ಒಂದು ದಮನಕಾರಿ ಸರ್ಕಾರ, ಇಲ್ಲಿ ಮನವ ಜೀವಕ್ಕೆ ಬೆಲೆ ಇಲ್ಲ, ಕಲ್ಲುಗಳ ಪ್ರತಿಯಾಗಿ ಗುಂಡುಗಳು ಮಾತನಾಡುತ್ತವೆ ಎಂದು ಜಗತ್ತಿನ ಮುಂದೆ ತೋರ್ಪಡಿಸುವುದೆಯಾಗಿದೆ.  ಈ ಹಿಂದೆ ಮಕ್ಕಳ ಕೈಯಲ್ಲಿ ಸುರಕ್ಷಾ ಪಿನಗಳನ್ನು ತೆಗೆದಂತಹ ಗ್ರೆನೇಡಗಳನ್ನು ನೀಡಿ ಸುರಕ್ಷಾ ಪಡೆಗಳ ಮೇಲೆ ಎಸೆಯುವಂತೆ ಹೇಳಲಾಗುತ್ತಿತ್ತು. ಅನೇಕ ಬಾರಿ ಅವುಗಳಿಗೆ ಆ ಮಕ್ಕಳೇ ಬಲಿಯಾಗಿದ್ದು ದುರ್ದೈವ. ಮುಗ್ದ ಮಕ್ಕಳನ್ನು  ಅಸ್ತ್ರವನ್ನಾಗಿ ಬಳಿಸುವುದು ಯಾವ ರೀತಿಯ ಜಿಹಾದ ಆ ಭಗವಂತನೇ ಬಲ್ಲ.

ಸದ್ಯದ ಪರಿಸ್ಥಿತಿ ಅಲ್ಲಿನ ರಾಜಕೀಯ ನಾಯಕರ ಸ್ವಾರ್ಥಕ್ಕೂ ಹಿಡಿದ ಕೈಗನ್ನಡಿಯಾಗಿದೆ. ಮುಖ್ಯಮಂತ್ರಿ ಉಮರ ಅಬ್ದುಲ್ಲಾರ ವಿಫಲವಾಗುವುದನ್ನೇ ಕಾಯುತ್ತ ಕುಳಿತಿರುವ ಪಿಡಿಪಿ ಪಕ್ಷದ ಮೆಹಬೂಬಾ ಮುಫ್ತಿಗೆ ಇತಂಹ ಪ್ರತಿಯೊಂದು ಹಿಂಸೆಯ ಘಟನೆಯೂ ಅಧಿಕಾರದ ಅಂಗಳಕ್ಕೆ ಮೆಟ್ಟಲು. ಮುಫ್ತಿ ಪರಿವಾರದ ದೇಶಭಕ್ತಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ. ಇನ್ನು ಉಮರ್ ಹಾಗೂ ಆತನ ತಂದೆ ಒಂದೇ ಅಧಿಕಾರದಲ್ಲಿ ಹಾಯಾಗಿರಬೇಕು ಇಲ್ಲವೇ ಅಧಿಕಾರ ಹೋದಲ್ಲಿ ಇಂಗ್ಲೆಂಡಿನಲ್ಲೂ ಮತ್ತೆಲ್ಲೂ ವಿದೇಶದಲ್ಲಿ ಚುನಾವಣೆ ಬರುವವೆರೆಗೂ  ಆರಾಮಾಗಿ ಕಾಲಕಳೆಯುವುದೇ ಕಾಯಕವಾಗಿದೆ. ಇದಕ್ಕೆ ಗುಲಾಮ ನಬಿ ಆಜಾದರಂತಹ ಕಾಂಗೈ ನಾಯಕರು ಹೊರತಾಗಿಲ್ಲ. ಅಲ್ಲಿ ಮುಖ್ಯಮಂತ್ರಿ ಪದವಿ ಹೋದ ಕೂಡಲೇ ಕೇಂದ್ರದಲ್ಲಿ ಮತ್ತೊಂದು ಕೆಲಸ ಸಿದ್ದವಿರುತ್ತದೆ. ಇವರು ಸಹ ಸದಾ ದೆಹಲಿ ವಾಸಿ. ಅಲ್ಲಿ ಕಾಶ್ಮೀರದಲ್ಲಿ ಶಾಲೆಗಳು ನಡೆಯದಂತೆ ನೋಡಿಕೊಳ್ಳುವ ಎಲ್ಲ ಪ್ರತ್ಯೇಕವಾದಿ ನಾಯಕರು ತಮ್ಮ ಮಕ್ಕಳ್ಳನ್ನು ಮಾತ್ರ ಉತ್ತಮ ರೆಸಿಡೆನ್ಶಿಯಲ್ ಶಾಲೆಯಲ್ಲಿ ಇಟ್ಟು ಓದಿಸುತ್ತಾರೆ.

ಇಂತಹ ಸೋಗಲಾಡಿ ನಾಯಕರ ಪ್ರಚೋದನೆಗೆ ಒಳಗಾಗುವ ಕಾಶ್ಮೀರದ ಜನತೆ ಮತ್ತೊಮ್ಮೆ ಯೋಚನೆ ಮಾಡಬೇಕು. ತಮ್ಮ ಬೇಡಿಕೆಯಾದ ಸ್ವಾತಂತ್ರ್ಯವನ್ನು ಪಡೆದಿದ್ದೆಯಾದಲ್ಲಿ ಇನ್ನೊಂದು ತಾಲಿಬಾನಿ ಗುಲಾಮಗಿರಿಗೆ ಸಿದ್ದರಾಗಬೇಕು. ಪಕ್ಕದ ಪಿ.ಓ.ಕೆಯಲ್ಲಿನ ಸ್ಥಿತಿಗತಿಯಿಂದ ಪಾಠ ಕಲಿಯಬೇಕು. ಭಾರತದಲ್ಲಿ ಸಿಗುತ್ತಿರುವ ಸವಲತ್ತು ಸೌಲಭ್ಯ ಹಾಗೂ ಮುಖ್ಯವಾಗಿ ನೆಮ್ಮದಿ ಇದು ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.