ಬೆಂಗಳೂರು: ಭಾರತದ ನಾಗರಿಕತೆಯ ಕನಸು ಜ್ಞಾನದಲ್ಲಿ ಸಾರ್ವಭೌಮತ್ವವನ್ನು ಸಾಧಿಸುವುದಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ಗುರಿಯನ್ನು ತಲುಪುವುದಕ್ಕಾಗಿ ಭಾರತ ಮೊದಲು ತನ್ನ ಜ್ಞಾನವನ್ನು ಅರಿತುಕೊಳ್ಳುವ ಆಸಕ್ತಿಯನ್ನು, ಇಚ್ಛೆಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ನಂತರ ನಮ್ಮ ಜ್ಞಾನ ಪರಂಪರೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಈ ಎರಡೂ ಪ್ರಾಥಮಿಕವಾಗಿ ರೂಪುಗೊಂಡ ನಂತರ ಈ ಪ್ರಕ್ರಿಯೆಗೆ ಸಹಕಾರಿಯಾಗುವ ವ್ಯವಸ್ಥೆಯನ್ನು ರಚಿಸಬೇಕು. ಹಾಗೂ ನಮ್ಮ ಜ್ಞಾನಪರಂಪರೆಯ ಶ್ರೇಷ್ಠತೆಯ ಪ್ರತೀಕವಾಗಿ ಸಂಗ್ರಹಿಸಲ್ಪಟ್ಟ ವಸ್ತುಗಳ ಕುರಿತು ಮಾಹಿತಿ ಸಂಗ್ರಹ ಮಾಡಬೇಕು ಎಂದು ಕೊಲ್ಕತ್ತಾದ ರಿಶಿ ಹುಡ್ ವಿಶ್ವವಿದ್ಯಾನಿಲಯದ ಸಂಸ್ಥಾಪಕ ಹಾಗೂ ಸಿಇಒ ಸಹಿಲ್ ಅಗರ್ವಾಲ್ ನೀಡಿದರು.

ದಿಶಾಭಾರತ್ ಸಂಸ್ಥೆಯು ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾದ ತಜ್ಞರಿಂದ ಆನ್‌ಲೈನ್ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಐದನೇ ದಿನ ಮಾತನಾಡಿದ ಅವರು Knowledge Republic : Bharat’s Civilizational Dream ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ನಮ್ಮ ರಾಷ್ಟ್ರದ ಯುವಜನತೆ ನಮ್ಮ ಅತ್ಯಂತ ಪ್ರಬಲ ಶಕ್ತಿ. ಅವರನ್ನು ನಮ್ಮ ಜ್ಞಾನಪರಂಪರೆಯ ಕುರಿತು ಅರಿಯುವ ಅಧ್ಯಯನಶೀಲರನ್ನಾಗಿಸಿ ಕಾರ್ಯಪ್ರವೃತ್ತರಾಗುವಂತೆ ಮಾಡುವುದು ನಮ್ಮ ಮುಂದಿರುವ ಜವಾಬ್ದಾರಿ. ನಮ್ಮ ಜ್ಞಾನದ ರಕ್ಷಣೆಯಲ್ಲಿ ಆಸಕ್ತಿಯಿರುವಂತಹ ವ್ಯಕ್ತಿಗಳಿಗೆ ಸರಿಯಾದ ಪ್ರೋತ್ಸಾಹವನ್ನು, ಯುವಕರಿಗೆ ಆಸಕ್ತಿ ವಹಿಸುವಂತೆ ಪ್ರೇರಣೆಯನ್ನು ನೀಡಬೇಕಾಗಿದೆ. ನೀತಿ ರಚನೆಯನ್ನು ಮಾಡುವುದರಲ್ಲಿಯೂ ಮತ್ತು ಈ ವಿಷಯದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಸರ್ಕಾರಗಳು ಗಮನವಹಿಸಬೇಕು. ಜಾಗತಿಕ ಮಟ್ಟದಲ್ಲಿ ಇರುವ ಅವಕಾಶಗಳ ಬೆನ್ನತ್ತಿ ಹೊರಟ ಯುವ ಪ್ರತಿಭೆಗಳಿಗೆ ಪ್ರಾದೇಶಿಕವಾಗಿಯೇ ಅವಕಾಶಗಳ ಸೃಷ್ಟಿಗೆ ಮತ್ತು ನಮ್ಮ ವಿಚಾರಧಾರೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಂತೆ ಮುಂದಾಳತ್ವವನ್ನು ವಹಿಸಬೇಕು. ಕೊನೆಯದಾಗಿ ಭಾರತೀಯ ಸಮಸ್ಯೆಗಳಿಗೆ ಭಾರತೀಯ ನೆಲೆಗಟ್ಟಿನಲ್ಲಿ ಉತ್ತರವನ್ನು ಹುಡುಕುವ ಪ್ರಕ್ರಿಯೆ ಆರಂಭಗೊಂಡು ಅನುಷ್ಠಾನವಾಗಬೇಕು. ಜ್ಞಾನಾಧಾರಿತ ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ಸಮಾಜ ನಿರ್ಮಾಣದಿಂದ ಭಾರತ ಬೆಳಗುವಂತೆ ಆಗಬೇಕು ಎಂದು ನುಡಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.