ಕೋಲಾರದಲ್ಲಿನ ಕ್ಲಾಕ್ ಟವರ್‌‌ಅನ್ನು ನಗರದ ಅಂಜುಮನ್ ಸಮಿತಿ ನಗರಸಭೆಯ ಮೂಲಕ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿತ್ತು.ಈ ನಡುವೆ ಅದನ್ನು ಬಿಳಿ ಹಸಿರು ಬಣ್ಣದಲ್ಲಿ ಬಣ್ಣ ಬಳಿಯಲಾಗಿತ್ತು.

ಕೋಲಾರ ನಗರದ ಮಧ್ಯೆ ಇರುವ ಈ ಟವರ್‌ಗೆ ಹೊಂದಿಕೊಂಡಿರುವ ಕೆ.ಜಿ.ಮೊಹಲ್ಲಾ, ಮೊಹಲ್ಲಾ, ಇಜರತ್ತಾ ಮೊಹಲ್ಲಾ, ಶಾಹೀದ್ ನಗರ್, ಶಹಿಂಷಾ ನಗರಗಳಿವೆ, ಈ ಭಾಗಗಳಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದವರು ವಾಸ ಮಾಡುತ್ತಿದ್ದು, ವ್ಯಾಪಾರ ವಹಿವಾಟು ಕೇಂದ್ರದ ಜತೆಗೆ ಕೋಮು ಭಾವನೆಗಳನ್ನು ಕದಡುವ ಪ್ರದೇಶವಾಗಿಯೂ ಬದಲಾವಣೆಯಾಗುತ್ತಾ ಬಂದಿತ್ತು.

ಕಳೆದ ವರ್ಷ ಕೆಲ ಕಿಡಿಗೇಡಿಗಳು ಗಣೇಶನ ಮೆರವಣಿಗೆ ಹೋಗುವಾಗ ಹೆದರಿಸುವ ಘೋಷಣೆಗಳು ಕೂಗಿ ಕಲ್ಲು ಎಸೆದ ಘಟನೆಗಳು ಈ ಹಿಂದೆ ನಡೆದಿವೆ. ಅದಕ್ಕೆ ಪ್ರತಿಯಾಗಿ ಈದ್ ಮಿಲಾದ್ ವೇಳೆ ಕೋಲಾರದ ಕ್ಲಾಕ್ ಟವರ್‌ನಿಂದ ಡೂಂಲೈಟ್ ಸರ್ಕಲ್ ಮಾರ್ಗವಾಗಿ ಎಂ.ಜಿ.ರಸ್ತೆ ಮೂಲಕ ಹೋಗುವಾಗ ಮುಸ್ಲಿಂ ಸಮುದಾಯದವರು ಬೆದರಿಕೆಯ ಘೋಷಣೆ ಕೂಗುವುದು ನಡೆಯುತ್ತಿದ್ದವು. ಆ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಮನೋಜ್ ಕುಮಾರ್ ಮೀನಾ ಅವರು ಹಿಂದೂ ಮೆರವಣಿಗೆಗಳು ಕ್ಲಾಕ್ ಟವರ್‌ಗೆ ಹೋಗದಂತೆ ಹಾಗೂ ಮುಸ್ಲಿಮರ ಮೆರವಣಿಗೆಗಳು ಎಂ.ಜಿ.ರಸ್ತೆ ಭಾಗಕ್ಕೆ ಬರದಂತೆ ನಿರ್ಬಂಧ ವಿಧಿಸಿದ್ದರು. ಇದು ಕಾಲ ಕ್ರಮೇಣ ನೋಡುಗರಿಗೆ ಬೇರೆಯೇ ಅರ್ಥ ಕಲ್ಪಿಸುತ್ತಾ ಬಂದು ವಿವಾದದ ಕೇಂದ್ರವಾಗಿ ಮಾರ್ಪಾಡಾಗಿತ್ತು.

ಟವರ್ ನಗರಸಭೆಯ ಸ್ವತ್ತು: ನಗರದ ಎರಡು ಭಾಗಗಳಲ್ಲಿ ಮುಸ್ತಾಫ ಸಾಹೇಬ್ ಅವರು ನಿರ್ಮಿಸಿದ ಕ್ಲಾಕ್ ಟವರ್‌ಗಳನ್ನು ಕೋಲಾರ ನಗರಸಭೆಗೆ 1986ರಲ್ಲೇ ಹಸ್ತಾಂತರ ಮಾಡಿದ್ದು, ಅದು ಸರಕಾರದ ಸ್ವತ್ತಾಗಿದೆ. ಹೀಗಾಗಿ ಅಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೆ ಜಿಲ್ಲಾಡಳಿತವೇ ನಿರ್ಣಯ ಮಾಡಬೇಕಿದೆ. ಆದರೆ, ಟವರ್ ನಿರ್ವಹಣೆಯನ್ನು ನಗರಸಭೆಯು ಅಂಜುಮನ್ ಸಮಿತಿಗೆ ವಹಿಸಿದೆ. ಅಂಜುಮನ್ ಸಮಿತಿಯು ಅದನ್ನು ಬಿಳಿ ಹಸಿರು ಬಣ್ಣದಲ್ಲಿ ಅಲಂಕರಿಸಿದ್ದು, ಅಲ್ಲದೆ ಇಸ್ಲಾಮಿನ ಮೂನ್ ಕ್ರೆಸೆಂಟ್ ಧ್ವಜ ಹಾರಿಸಿದ್ದು ಅನೇಕ ವಿವಾದಗಳಿಗೆ ಎಡೆಮಾಡಿ ಕೊಟ್ಟಿದೆ‌.

ಈ ಕುರಿತಾಗಿ ಕೋಲಾರ ಜಿಲ್ಲೆಯ ಹಿಂದೂ ಜಾಗರಣ ಸಮಿತಿಯು ನಗರ ಸಭೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದು ಟವರ್ ಮೇಲಿನ ಧ್ವಜವನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು.ಅಲ್ಲದೆ  ಅದರ ಗೋಡೆ ಮೇಲಿನ ಬರಹಗಳನ್ನು ತೆಗೆಸಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸಲು ಆಗ್ರಹಿಸಿತ್ತು.

ಇದಾದನಂತರ ನಗರದ ಅ ಭಾಗದಲ್ಲಿ ನಿಷೇಧಾಜ್ಞೆಯೂ ಜಾರಿಯಾಗಿತ್ತು ಅಲ್ಲಿನ ಶಾಸಕ ಮುನಿಸ್ವಾಮಿಯವರೂ ಕೂಡ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು‌.ಅಲ್ಲದೆ ಅಲ್ಲಿತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದರು.

ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗು ಎಸ್‌ಪಿಯವರು ಶುಕ್ರವಾರ ಅಂಜುಮನ್ ಸಮಿತಿಯವರನ್ನು ಕರೆದು ಸಭೆ ನಡೆಸಿದ್ದು, ಈ ವೇಳೆ ಪ್ರತಿಕ್ರಿಯಿಸಿರುವ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್‌ ಮೆರವಣಿಗೆ ಅಹಮದ್‌, ನಾವು ಭಾರತೀಯರು,ಟವರ್ ನಲ್ಲಿ ರಾಷ್ಟ್ರಧ್ವಜ ಹಾರಿಸಲು ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.

ಈಗ ನಗರದ ಕ್ಲಾಕ್ ಟವರ್‌ಅನ್ನು ತ್ರಿವರ್ಣ ಧ್ವಜದ ಬಣ್ಣಗಳನ್ನು ಬಳಿಯಲಾಗಿದ್ದು, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಎನ್ನಲಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.